ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲಿವೇಟೆಡ್ ಕಾರಿಡಾರ್‌ನಿಂದ ಮರಗಳಿಗಷ್ಟೇ ಅಲ್ಲ ಬಫರ್‌ ವಲಯಕ್ಕೂ ಅಪಾಯ

|
Google Oneindia Kannada News

ಬೆಂಗಳೂರು, ಮಾರ್ಚ್ 15: ನಗರದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ಸರ್ಕಾರ ತುದಿಗಾಲಿನಲ್ಲಿ ನಿಂತಿದೆ. ಇನ್ನೊಂದೆಡೆ ಎಲಿವೇಟೆಡ್ ಕಾರಿಡಾರ್ ಬೇಡ ಎನ್ನುವ ಕೂಗು ಮೊಳಗುತ್ತಿದೆ.

ಈ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಕುತೂಹಲದ ವಿಷಯವಾಗಿದ್ದರೂ ಕೂಡ ಕಾರಿಡಾರ್ ನಿರ್ಮಾಣವಾದರೆ 3 ಸಾವಿರಕ್ಕೂ ಹೆಚ್ಚು ಮರಗಳು ನಾಶವಾಗಿ 10ಕ್ಕೂ ಹೆಚ್ಚು ಕೆರೆಗಳಿಗೆ ಹಾನಿಯಾಗುವುದಂತೂ ಸತ್ಯ. ಅಷ್ಟೇ ಅಲ್ಲದೆ ಬಫರ್ ವಲಯಕ್ಕೂ ಕೂಡ ತೊಂದರೆಯಾಗಲಿದೆ.

ಎಲಿವೇಟೆಡ್ ಕಾರಿಡಾರ್‌ಗೆ ಸಿಕ್ಕಿದೆ ಅನುಮತಿ ಆದರೆ ಮುಂದಿರುವ ಸವಾಲುಗಳೇನು? ಎಲಿವೇಟೆಡ್ ಕಾರಿಡಾರ್‌ಗೆ ಸಿಕ್ಕಿದೆ ಅನುಮತಿ ಆದರೆ ಮುಂದಿರುವ ಸವಾಲುಗಳೇನು?

ಮೌಲ್ಯಾಂಕನ ಪ್ರಾಧಿಕಾರ ವರದಿ ಪ್ರಕಾರ ಕಾರಿಡಾರ್ ಹಾದು ಹೋಗುವ ಮಾರ್ಗದಲ್ಲಿನ ಜಲ ತಾಣವು 1 ಮೀ.ನಿಂದ 30 ಮೀ ಬಫರ್ ವ್ಯಾಪ್ತಿಯೊಳಗೆ ಬರುತ್ತದೆ ಇದರಿಂದ ಪರಿಸರದ ಮೇಲೆ ಅಡ್ಡ ಪರಿಣಾಮ ಬೀರಲಿದೆ. ಕಾರಿಡಾರ್ ಕಾಮಗಾರಿ ವೇಳೆ, ಕೆರೆ, ರಾಜಕಾಲುವೆಯಲ್ಲಿ ತ್ಯಾಜ್ಯ ಸೃಷ್ಟಿಯಾಗುವ ಆತಂಕವೂ ಇದೆ.

Elevated corridor will harm the buffer zone

 ಎಲಿವೇಟೆಡ್ ಕಾರಿಡಾರ್ ಸುತ್ತ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ ಎಲಿವೇಟೆಡ್ ಕಾರಿಡಾರ್ ಸುತ್ತ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ

ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶದ ಅನ್ವಯ ಕೆರೆಗಳ ಬಫರ್ ವಲಯದ ನಿಗದಿ ವಿಚಾರವಾಗಿ ಎನ್‌ಜಿಟಿ ನಿಗದಿ ಮಾಡಿದ್ದ 75 ಮೀ ಬಫರ್ ಮಿತಿಯನ್ನು ರದ್ದುಪಡಿಸಿದೆ. ಹೀಗಾಗಿ ಹಿಂದೆ ಜಾರಿಯಲ್ಲಿದ್ದ 30 ಮೀ ಮಿತಿಯು ಮುಂದುವರೆದಿದೆ. ಅಷ್ಟ ಮಟ್ಟಿಗೆ ಕಾರಿಡಾರ್ ಕಾಮಗಾರಿಯಿಂದ ಸಂಭವಿಸಬಹುದಾದ ಅನಾಹುತ ತಪ್ಪಿದ್ದರೂ ಕೆರೆ-ರಾಜಕಾಲಿವೆ ಮೇಲಾಗುವ ಆತಂಕ ಇನ್ನೂ ಹಸಿಯಾಗಿಯೇ ಇದೆ.

English summary
Environment authority has warned the state government that Elevated corridor will harm the buffer zone of Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X