ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಸರ ಸ್ನೇಹಿ ಇ-ಸಿಟಿ ಹಬ್ಬಕ್ಕೆ ಪಲ್ಲವಿ ಗಾಯನದ ಮೆರಗು

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 28: ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‍ಶಿಪ್‍ ಅಥಾರಿಟಿ (ಎಲ್ಸಿಟಾ) ಯು ಆಗಸ್ಟ್ 31ರಂದು ಎಲೆಕ್ಟ್ರಾನಿಕ್ ಸಿಟಿಯ ಇನ್ಫೋಸಿಸ್ ಮೈದಾನದಲ್ಲಿ ಇ-ಸಿಟಿ ಹಬ್ಬವನ್ನು ಆಯೋಜಿಸಿದೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸಂಸ್ಥೆಗಳಾದ ಇನ್ಫೋಸಿಸ್, ವಿಪ್ರೊ, ಟೆಕ್ ಮಹೀಂದ್ರಾ, ಹಿಕಾಲ್, ಟೆಸಾಲ್ವ್, ಹೆಚ್‍ಪಿವಿ ಹಾಗೂ ಇತರ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ಒದಗಿಸುವ ವೇದಿಕೆ ಇದಾಗಿದೆ.

ಸಂಗೀತ, ರಂಗ, ನೃತ್ಯ ಹಾಗೂ ಇತರ ಸಾಂಸ್ಕೃತಿಕ ಮತ್ತು ಕಲಾ ವಿಭಾಗಗಳಲ್ಲಿ ತಮ್ಮ ಪ್ರತಿಭೆಯನ್ನು ಇ-ಸಿಟಿ ಉದ್ಯೋಗಿಗಳು ಸಾದರಪಡಿಸಲಿದ್ದಾರೆ.

ಕನ್ನಡದ ಖ್ಯಾತ ಗಾಯಕಿ ಎಂ. ಡಿ. ಪಲ್ಲವಿ ಹಾಗೂ ಇ-ಸಿಟಿಯ ಜನಪ್ರಿಯ ಮೇಘಧ್ವನಿ ತಂಡದವರು ಈ ಕಾರ್ಯಕ್ರಮದಲ್ಲಿ ಗಾಯನ - ಸಂಗೀತ ಪ್ರಸ್ತುತ ಪಡಿಸಲಿದ್ದಾರೆ. ಇ-ಸಿಟಿ ಹಬ್ಬವು, ಜೀವಭೂಮಿ, ಕ್ವಾಂಟಮ್ ಲೀಪ್ ಗುರು ಹಾಗೂ ಇತರ ಸಂಸ್ಥೆಗಳ ಉತ್ಪನ್ನಗಳ ಪ್ರದರ್ಶನ ಮಳಿಗೆಗಳನ್ನು ಹೊಂದಿರಲಿದೆ.

Electronics city is all set to celebrate eco friendly E- city Habba

ವೈವಿಧ್ಯ ಸಾರಲು ಹಾಗೂ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆ ಗುರುತಿಸುವ ಸಲುವಾಗಿ ಎಲ್ಸಿಟಾ ಸಂಸ್ಥೆಯು ಇ-ಸಿಟಿಯ ಉದ್ಯೋಗಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸುವ ವೇದಿಕೆ ಕಲ್ಪಿಸಿದೆ. ಪರಿಸರದ ಹಿತವನ್ನು ಕಾಪಾಡುವ ಉದ್ದೇಶದಿಂದ ಈ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ.

ಉತ್ತಮ ಗುಣಮಟ್ಟದ ಜೀವನ ನಡೆಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿ ಎಂಬುದು ಎಲ್ಸಿಟಾ ಸಂಸ್ಥೆಯ ಅಭಿಪ್ರಾಯ. ಕಲಾ ಪ್ರಕಾರಗಳ ಉಳಿವಿಗೆ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ. ಸಮಾಜ ಮತ್ತು ಕಲೆಯ ನಡುವೆ ಅವಿನಾಭಾವ ಸಂಬಂಧವಿದೆ. ಸಂಸ್ಕೃತಿಯು ಕೇವಲ ವ್ಯಕ್ತಿಕೇಂದ್ರಿತವಲ್ಲ. ಬದಲಿಗೆ ಅದು ಸಮಾಜದ ಬದಲಾವಣೆ- ಬೆಳವಣಿಗೆಗಳ ವಿಕಸಿತ ರೂಪ.

ಇ-ಸಿಟಿಯೊಂದಿಗೆ ಸ್ನೇಹ- ಬಾಂಧವ್ಯ ಬೆಸೆಯುವ ಹಾಗೂ ಒಗ್ಗಟ್ಟಿನ ಮನೋಭಾವ ಬೆಳೆಸುವುದಕ್ಕೆ ಈ ಕಾರ್ಯಕ್ರಮವು ಅವಕಾಶ ಕಲ್ಪಿಸಲಿದೆ. ಇ-ಸಿಟಿಯು ಕೇವಲ ಉದ್ಯೋಗಕ್ಕಾಗಿ ಮೀಸಲಿರುವಂತಹ ಪ್ರದೇಶವಾಗಿ ಮಾತ್ರ ಉಳಿದಿಲ್ಲ. ಹಲವರ ವಾಸಕ್ಕೆ ನೆಲೆ ಒದಗಿಸಿರುವ ಸ್ಥಳವೂ ಹೌದು. ಆದ್ದರಿಂದ ಸಾಂಸ್ಕೃತಿಕ ಹಬ್ಬದ ವಾತಾವರಣ ರೂಪಿಸುವ ಅಗತ್ಯವಿದೆ.

ಇ-ಸಿಟಿ ಹಬ್ಬದ ಸಾಂಸ್ಕೃತಿಕ ಹಾಗೂ ಕಲಾ ವೈಭವವನ್ನು ಸವಿಯಲು ಇಂದೇ ತಮ್ಮ ಹೆಸರನ್ನು ಇಸಿಟಿಹಬ್ಬ.ಇನ್ ನಲ್ಲಿ ನೋಂದಾಯಿಸಬಹುದು.

ಎಲ್ಸಿಟಾ (ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‍ಶಿಪ್ ಅಥಾರಿಟಿ)
2013ರಲ್ಲಿ ಸ್ಥಾಪಿಸಲಾದ ಎಲ್ಸಿಟಾ ಸಂಸ್ಥೆಯು ಇಲೆಕ್ಟ್ರಾನಿಕ್ ಸಿಟಿಯ ನಿರ್ವಹಣೆ ಮಾಡುತ್ತಿದೆ. ಕರ್ನಾಟಕ ಸರಕಾರವು 2013ರಲ್ಲಿ ಇಲೆಕ್ಟ್ರಾನಿಕ್ ಸಿಟಿಯನ್ನು ಕೈಗಾರಿಕಾ ಪ್ರದೇಶ ಎಂದು ಪರಿಗಣಿಸಿ ಇದರ ನಿರ್ವಹಣೆಗಾಗಿ ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಆಕ್ಟ್ ಅಡಿಯಲ್ಲಿ ಎಲ್ಸಿಟಾ ಸಂಸ್ಥೆಯನ್ನು ಸ್ಥಾಪಿಸಿದೆ.

English summary
Electronics city is all set to celebrate eco friendly E- city Habba. The event will also be graced by celebrities like MD Pallavi, a renowned award-winning Kannada musician and the members of Megh Dhwani, a popular band from E-City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X