ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಲಿಕಾನ್ ವ್ಯಾಲಿಯಲ್ಲಿ ಹಾರ್ಡ್‌‌ವೇರ್‍ ಉದ್ಯಮ ಬೆಳವಣಿಗೆಗೆ ಎಲ್ಸಿಯಾ ನೆರವು

|
Google Oneindia Kannada News

ಸಾಫ್ಟ್‌ವೇರ್‍ ಉದ್ಯಮದ ಗಣನೀಯ ಕೊಡುಗೆಗಾಗಿ ಜಗತ್ತಿನಾದ್ಯಂತ ಚಿರಪರಿಚಿತ ಇರುವ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯು ಹಾರ್ಡ್‌ವೇರ್‍ ತಯಾರಿಕೆಯಲ್ಲಿಯೂ ಉಲ್ಲೇಖಾರ್ಹ ಸಾಧನೆಗೆ ಸಜ್ಜಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಉದ್ಯಮಿಗಳ ಸಂಸ್ಥೆಯು (ಇಎಲ್‌ಸಿಐಎ-ಎಲ್ಸಿಯಾ) ಹಾರ್ಡ್‌‌ವೇರ್‍ ಉತ್ಪಾದನೆಗೆ ನೆರವು ಒದಗಿಸುವ ಉದ್ದೇಶದಿಂದ ಭಾರತದಲ್ಲಿಯೇ ಮೊದಲ 'ಎಲ್ಸಿಯಾ ಸಮೂಹ ಕೇಂದ್ರ' ಆರಂಭಿಸಿದೆ. ಈ ಕೇಂದ್ರವು ಎಲ್ಸಿಯಾದ ಸದಸ್ಯ ಮತ್ತು ಸದಸ್ಯೇತರ ಉದ್ಯಮ ಸಂಸ್ಥೆಗಳ ಹಾರ್ಡ್‌‌ವೇರ್‍ ಗಳ ತಯಾರಿಕೆಗೆ ಸಹಕರಿಸುತ್ತಿದೆ.

ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಗೆ ನೆರವು ನೀಡುವ ಮೂಲಕ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್, ವಿನ್ಯಾಸ ಮತ್ತು ತಯಾರಿಕಾ ವಲಯ (ಇಎಸ್‌ಡಿಎಂ) ಮಹತ್ವದ ಸಾಧನೆ ಮಾಡಲು ಮತ್ತು ತೀವ್ರಗತಿಯಲ್ಲಿ ಬೆಳೆಯುವಂತೆ ಮಾಡಿದೆ. ಮುಂಬರುವ ಕೆಲವೇ ವರ್ಷಗಳಲ್ಲಿ ಈ ವಲಯವು ಅಪ್ರತಿಮ ಸಾಧನೆ ಮಾಡುವ ಸಾಧ್ಯತೆಗಳು ನಿಚ್ಚಳವಾಗಿ ಕಾಣಿಸುತ್ತಿವೆ.

ಕಾಂಪೀಟ್ ವಿತ್ ಚೈನಾ ಯೋಜನೆ: ಈ ವರ್ಷ 500 ಕೋಟಿ ಅನುದಾನಕಾಂಪೀಟ್ ವಿತ್ ಚೈನಾ ಯೋಜನೆ: ಈ ವರ್ಷ 500 ಕೋಟಿ ಅನುದಾನ

ಅತಿಸಣ್ಣ, ಸಣ್ಣ, ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಎಲ್ಸಿಯಾದ ಸಾಮಾನ್ಯ ಸೌಲಭ್ಯ ಕೇಂದ್ರ (ಸಿಎಫ್‌ಸಿ) ಬಳಸಿಕೊಳ್ಳುತ್ತಿರುವುದರಿಂದ ಬಂಡವಾಳ ಹೂಡಿಕೆ ಮತ್ತು ವೆಚ್ಚದಲ್ಲಿ ಗಣನೀಯ ಪ್ರಮಾಣದಲ್ಲಿ ಉಳಿಕೆ ಆಗುತ್ತಿದೆ. ಎಂಎಸ್‌ಎಂಇಗಳಿಗೆ ದೊರೆತಿರುವ ಪ್ರೇರಣೆಯು ತಯಾರಿಕಾ ವಲಯದಲ್ಲಿ ನೆರವು ನೀಡುವುದಕ್ಕಾಗಿ ಬೇರೆ ರಾಜ್ಯ ಸರ್ಕಾರಗಳಿಗೂ ಇದು ಮಾದರಿಯಾಗಿದೆ.

ಹಾರ್ಡ್‌‌ವೇರ್‍ ತಯಾರಿಕೆಗೆ ಮೂಲ ಸೌಕರ್ಯ

ಹಾರ್ಡ್‌‌ವೇರ್‍ ತಯಾರಿಕೆಗೆ ಮೂಲ ಸೌಕರ್ಯ

ಎಲ್ಸಿಯಾ ಸಮೂಹ ಕೇಂದ್ರವು ಎಂಎಸ್‌ಎಂಇ ಕಂಪೆನಿಗಳಿಗೆ ಎಲೆಕ್ಟ್ರಾನಿಕ್ಸ್, ಸಿಸ್ಟಮ್ ವಿನ್ಯಾಸ ಮತ್ತು ಹಾರ್ಡ್‌‌ವೇರ್‍ ತಯಾರಿಕೆಗೆ ಪೂರಕವಾಗಿರುವ ಮೂಲಸೌಕರ್ಯ ಒದಗಿಸುತ್ತಿದೆ. ಇದರಿಂದಾಗಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸುವ ಪ್ರಕ್ರಿಯೆಯಲ್ಲಿ ಹಾಗೂ ತೀವ್ರತರವಾದ ವೇಗ ಕಂಡುಕೊಳ್ಳುವುದು ಸಾಧ್ಯವಾಗಲಿದೆ.

ಸಿಲಿಕಾನ್ ವ್ಯಾಲಿಯಲ್ಲಿ ಹಾರ್ಡ್ ವೇರ್ ಬೆಳವಣಿಗೆ

ಸಿಲಿಕಾನ್ ವ್ಯಾಲಿಯಲ್ಲಿ ಹಾರ್ಡ್ ವೇರ್ ಬೆಳವಣಿಗೆ

ಮಾಹಿತಿ ತಂತ್ರಜ್ಞಾನ ಸೇವಾ ಕ್ಷೇತ್ರದ ಬೃಹತ್ ಕಂಪೆನಿಗಳಾದ ಎಚ್‌ಸಿಎಲ್, ಇನ್‌ಫೋಸಿಸ್, ಎಚ್‌ಪಿ, ಸೀಮನ್ಸ್ ಮತ್ತು ಟಿಮ್ಕೆನ್ ಸಂಸ್ಥೆಗಳು ಬೆಂಗಳೂರನ್ನು ಸಿಲಿಕಾನ್ ವ್ಯಾಲಿಯಾಗಿ ಬೆಳೆಸಲು ನೀಡಿದ ಕೊಡುಗೆ ಅಸಾಧಾರಣ. ಎಲೆಕ್ಟ್ರಾನಿಕ್ ಸಿಟಿಯು ಸಾಫ್ಟೇವರ್‍ ಉದ್ಯಮಕ್ಕೆ ಮಾತ್ರವಲ್ಲದೆ ಎಲೆಕ್ಟ್ರಾನಿಕ್ಸ್, ಸಿಸ್ಟಮ್ ವಿನ್ಯಾಸ, ಮತ್ತು ಹಾರ್ಡ್‌ವೇರ್‍ ತಯಾರಿಕಾ ಕಂಪೆನಿಗಳಿಗೆ ಪೂರಕವಾದ ವ್ಯವಸ್ಥೆಯನ್ನೂ ಕಲ್ಪಿಸಿದೆ.

ರಾಡೆಲ್, ಕೋನಾರ್‍ ಎಂಜಿನಿಯರಿಂಗ್, ಕಸ್ಟಮೈಸ್ಡ್ ಟೆಕ್ನಾಲಜೀಸ್, ಸಿಂಥೆಸಿಸ್ ವೈಂಡಿಂಗ್ ಟೆಕ್ನಾಲಜೀಸ್, ಎರ್ಕಾಡಿ ಸಿಸ್ಟಮ್ಸ್ ಮತ್ತಿತರ ಸಂಸ್ಥೆಗಳು ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ತಯಾರಿಕೆಯತ್ತ ಗಮನ ಹರಿಸಿ ಗಣನೀಯ ಪ್ರಮಾಣದಲ್ಲಿ ಬೆಳೆದಿವೆ.

ಸಾಮಾನ್ಯ ಸೌಲಭ್ಯ ಕೇಂದ್ರ

ಸಾಮಾನ್ಯ ಸೌಲಭ್ಯ ಕೇಂದ್ರ

ಎಲ್ಸಿಯಾ ಸಮೂಹ ಕೇಂದ್ರ ಬೃಹತ್ ಕಂಪೆನಿಗಳ ಬಳಿ ಇರುವ ಸಂಶೋಧನೆ ಮತ್ತು ಅಭಿವೃದ್ಧಿ, ಯಾಂತ್ರೀರಣ, ಮಾಪನ, ಪರೀಕ್ಷೆ ನಡೆಸುವುದಕ್ಕೆ ಅಗತ್ಯವಿರುವ ಮೂಲಸೌಕರ್ಯಗಳು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕಂಪೆನಿಗಳಿಗೆ ಸುಲಭವಾಗಿ ದೊರೆಯುವುದಿಲ್ಲ. ಈ ಕೊರತೆಯನ್ನು ಗಮನಿಸಿದ ಎಲ್ಸಿಯಾ ಸಂಸ್ಥೆಯು ಈ ಸಮಸ್ಯೆಗಳನ್ನು ನೀಗುವ ಉದ್ದೇಶದಿಂದ ಎಲ್ಸಿಯಾ ಸಮೂಹ ಕೇಂದ್ರ ಆರಂಭಿಸಿ ಅದರಿಂದ ಸಾಮಾನ್ಯ ಸೌಲಭ್ಯ ಕೇಂದ್ರ (ಸಿಎಫ್‌ಸಿ) ಪ್ರಾರಂಭಿಸಿದೆ.

ಮೂಲಮಾದರಿಗಳನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ

ಮೂಲಮಾದರಿಗಳನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ

ಈ ಕೇಂದ್ರದಲ್ಲಿ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದಕರಿಗೆ ನೆರವಾಗುವಂತಹ ಮೂಲಮಾದರಿಗಳನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಎಲ್ಸಿಯಾ ಸಮೂಹ ಕೇಂದ್ರವು ಕರ್ನಾಟಕ ರಾಜ್ಯ ಸರ್ಕಾರದ ಅನುದಾನ ಹಾಗೂ ಸದಸ್ಯ ಕಂಪೆನಿಗ ನೆರವಿನೊಂದಿಗೆ ಒಂದೇ ಸೂರಿನ ಅಡಿಯಲ್ಲಿ ವಿವಿಧ ಯಂತ್ರಗಳನ್ನು ಅಳವಡಿಸಿದೆ. ಸೌಲಭ್ಯಗಳ ಬಳಕೆಯ ವೆಚ್ಚ ನೀಡಿ ಈ ಕೇಂದ್ರವನ್ನು ಎಲ್ಸಿಯಾದ ಸದಸ್ಯ ಮತ್ತು ಸದಸ್ಯೇತರ ಸಂಸ್ಥೆಗಳು ಬಳಸಿಕೊಳ್ಳಬಹುದಾಗಿದೆ.

English summary
The Association addressed many core issues concerning the industries in common, foremost among them being the lack of infrastructure within the estate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X