ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೋಲ್ ಸಂಕಟ: ಎಲೆಕ್ಟ್ರಾನಿಕ್ಸ್ ಸಿಟಿ ಪ್ರಯಾಣ ದುಬಾರಿ

By Srinath
|
Google Oneindia Kannada News

ಬೆಂಗಳೂರು, ಜೂನ್ 23: ರಾಜಧಾನಿ ಬೆಂಗಳೂರಿಗೆ ಈ ಬಾರಿ ಪೂರ್ವ ದಿಕ್ಕಿನಿಂದ ಟೋಲ್ ಸಂಕಟ ಶುರುವಾಗಲಿದೆ. ಹೌದು ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ಸ್ ಸಿಟಿ ಪ್ರಯಾಣ ಇದೇ ಜುಲೈನಿಂದ ದುಬಾರಿಯಾಗಲಿದೆ.

ಸಮಯ ಉಳಿತಾಯ ಮತ್ತು ಸುಗಮ ಸಂಚಾರ ಬಯಸಿ ಎಲೆಕ್ಟ್ರಾನಿಕ್ಸ್ ಸಿಟಿ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಜುಲೈ 1 ರಿಂದ ಈ ಭಾಗದಲ್ಲಿ ಸಂಚರಿಸುವವರಿಗೆ ಇದು ದುಬಾರಿಯಾಗಲಿದೆ. Bangalore Elevated Tollway Limited (BETL) ಈ ದರ ಹೆಚ್ಚಳ ಮಾಡಿದೆ.

electronics-city-flyover-toll-rate-to-be-hiked-from-july-1-betl

ಒಂದು ಬಾರಿ ಪ್ರಯಾಣಕ್ಕೆ ಮತ್ತು ದೈನಂದಿನ ಪಾಸ್ ದರದಲ್ಲಿ 5 ರೂ ಹೆಚ್ಚಳ ಮಾಡಲಾಗಿದೆ. ಇದೀಗ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈ ಓವರ್ ಮೇಲೆ ಪ್ರಯಾಣಿಸಲು ದ್ವಿಚಕ್ರ ವಾಹನದವರು ಮಾಸಿಕ 535 ರೂ. ನಾಲ್ಕು ಚಕ್ರದ ವಾಹನ ಸವಾರರು 1,335 ರೂ ಮತ್ತು ಮಿನಿ ಬಸ್ಸಿಗೆ 1,865 ರೂ ಮಾಸಿಕ ದರ ನಿಗದಿಪಡಿಸಲಾಗಿದೆ. (ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ)

ಇನ್ನು ಸಿಂಗಲ್ ಟ್ರಿಪ್ ಗೆ ದ್ವಿಚಕ್ರ ವಾಹನದವರು 20 ರೂ. ನಾಲ್ಕು ಚಕ್ರದ ವಾಹನ ಸವಾರರು 45 ರೂ ದರ ನಿಗದಿಪಡಿಸಲಾಗಿದೆ. ಇನ್ನು ದೈನಂದಿನ ಪಾಸ್- ದ್ವಿಚಕ್ರ ವಾಹನದವರು 30 ರೂ. ನಾಲ್ಕು ಚಕ್ರದ ವಾಹನ ಸವಾರರು 75 ರೂ ನೀಡಬೇಕಾಗುತ್ತದೆ. (ಬೆಂಗಳೂರು : ಟೋಲ್ ದರ 20 ರೂ ಕಡಿಮೆ ಆಗುತ್ತಾ?)

ಆದರೆ ಎಲೆಕ್ಟ್ರಾನಿಕ್ಸ್ ಸಿಟಿ ಮೇಲ್ಸೇತುವೆಯಿಂದ ಸಂಚಾರ ದಟ್ಟಣೆ ಕಡಿಮೆಯಾಗಿ ಸುಗಮ ಸಂಚಾರ ಕೈಗೊಳ್ಳಬಹುದು ಎಂದು ಭಾವಿಸಿದ್ದವರಿಗೆ ಈಗ ನಿರಾಶೆಯಾಗಿದೆ. ಏಕೆಂದರೆ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಮಾತ್ರವೇ ಸಲೀಸಾಗಿದೆ. ಹಾಗಾಗಿ ಈಗ ಟೋಲ್ ದರ ಏರಿಕೆ ವಾಹನ ಸವಾರರಿಗೆ ಬಿಸಿತುಪ್ಪವಾಗಿದೆ. ನಾಲ್ಕು ವರ್ಷಗಳ ಹಿಂದೆ ಈ ಫ್ಲೈ ಓವರ್ ಪ್ರಾರಂಭಾವಾದಾಗ ಪ್ರತಿ ವರ್ಷ ಅಲ್ಪ ಪ್ರಮಾಣದಲ್ಲಿ ಟೋಲ್ ದರ ಹೆಚ್ಚಿಸುವ ಮಾತಿತ್ತು. ಆದರೆ ಇದೀಗ ಅದು ದುಬಾರಿಯಾಗಿ ಪರಿಣಮಿಸುತ್ತಿದೆ ಎಂದು Electronics City Industries Association ಸಿಇಒ ರಮಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

English summary
Bangalore Electronics City flyover toll rate to be hiked from july 1 by Bangalore Elevated Tollway Limited (BETL). There will be an increase of Rs. 5 in fares for a single trip and a daily pass. The proposed rates of a monthly pass for two-wheelers is Rs. 535, Rs. 1,335 for four-wheelers and Rs. 1,865 for mini-buses. Though the elevated highway helps commuters avoid the congestion in areas around Silk Board, the proposed fare hike has not gone down well with many.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X