ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲೆಕ್ಟ್ರಾನಿಕ್ ಸಿಟಿ RTO ಕಚೇರಿಯಲ್ಲಿ ಕೊರೊನಾ, ಸಿಬ್ಬಂದಿ ಸಾವು

|
Google Oneindia Kannada News

ಬೆಂಗಳೂರು, ಜುಲೈ 2: ಕೊರೊನಾ ಸೋಂಕು ತಗುಲಿ ಆರ್ ಟಿ ಓ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ RTO ಕಚೇರಿಯಲ್ಲಿ ಸಂಭವಿಸಿದೆ.

Recommended Video

Bangalore No Longer Safe:ಬೆಂಗಳೂರಿನಲ್ಲಿ ಕೊರೊನಾ ಉಗ್ರ ತಾಂಡವ: ಭಯ ಹುಟ್ಟಿಸುವ ಅಂಕಿಅಂಶ! | Oneindia Kannada

ಎಲೆಕ್ಟ್ರಾನಿಕ್ ಸಿಟಿ RTO ಕಚೇರಿ ಡಿಎಲ್ ಕೇಸ್ ವರ್ಕರ್ ಆಗಿದ್ದ ಸಿಬ್ಬಂದಿಗೆ ಸೋಂಕಿನ ಲಕ್ಷಣಗಳು ಕಂಡು ಬಂದ ಕಾರಣ, ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾರೆ.

'ಕೋವಿಡ್-19: ಮೂರು ತಿಂಗಳುಗಳ ಸುವರ್ಣಾವಕಾಶ ಹಾಳು ಮಾಡಿದ ಸರ್ಕಾರ''ಕೋವಿಡ್-19: ಮೂರು ತಿಂಗಳುಗಳ ಸುವರ್ಣಾವಕಾಶ ಹಾಳು ಮಾಡಿದ ಸರ್ಕಾರ'

ಮೃತ ಪಟ್ಟ ವ್ಯಕ್ತಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಮರಣದ ನಂತರ ವರದಿ ಕೈ ಸೇರಿದ್ದು, ಅದರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಎಲೆಕ್ಟ್ರಾನಿಕ್ ಸಿಟಿ RTO ಕಚೇರಿ ಸೀಲ್‌ಡೌನ್ ಮಾಡಲಾಗಿದೆ.

Coronavirus Patient Died In Electronic City Rto Office

ಸಿಬ್ಬಂದಿಗೆ ಸೋಂಕು ದೃಢವಾಗುತ್ತಿದ್ದಂತೆ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಆತಂಕ ಸೃಷ್ಠಿಯಾಗಿದೆ. ಸಿಬ್ಬಂದಿ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಅದಾಗಲೇ ಕ್ವಾರಂಟೈನ್‌ಗೆ ಒಳಪಡಿಲಾಗಿದೆ ಎಂಬ ಮಾಹಿತಿ ಒನ್‌ಇಂಡಿಯಾಗೆ ಲಭ್ಯವಾಗಿದೆ.

ಮಾರ್ಚ್ ತಿಂಗಳಲ್ಲಿ ಲಾಕ್‌ಡೌನ್‌ ಆದ ಕಾರಣ ಆರ್ ಟಿ ಓ ಕಚೇರಿ ಬಂದ್ ಮಾಡಲಾಗಿತ್ತು. ಬಳಿಕ ಅನ್‌ಲಾಕ್‌ ಘೋಷಣೆಯಾದ ಬಳಿಕ ಆರ್ ಟಿ ಓ ಕಚೇರಿಯಲ್ಲಿ ಮತ್ತೆ ಕಾರ್ಯಾರಂಭ ಆಗಿತ್ತು. ಪ್ರತಿನಿತ್ಯವೂ ನೂರಾರು ಜನರು ಆರ್ ಟಿ ಓ ಕಚೇರಿಗೆ ಭೇಟಿ ನೀಡಿ ಎಲ್ ಎಲ್ ಹಾಗೂ ಡಿ ಎಲ್ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.

ಕಚೇರಿ ಸಿಬ್ಬಂದಿಗೆ ಕೊವಿಡ್ ದೃಢಪಟ್ಟ ವಿಚಾರ ಗೊತ್ತಾದ ಬಳಿಕ, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ.

English summary
RTO officer died from COVID19 in Electronic City RTO Office. now, RTO is completely sealed down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X