ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಎಲೆಕ್ಟ್ರಾನಿಕ್‌ಸಿಟಿ-ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ

|
Google Oneindia Kannada News

ಬೆಂಗಳೂರು, ಜೂನ್ 24: ಬೆಂಗಳೂರಿನ ಎಲೆಕ್ಟ್ರಾನಿಕ್‌ಸಿಟಿ-ಅತ್ತಿಬೆಲೆ ನಡುವಿನ ರಸ್ತೆ ಬಳಕೆ ಶುಲ್ಕವನ್ನು ಹೆಚ್ಚಿಸಲಾಗಿದೆ, ಈ ಪರಿಷ್ಕೃತ ದರವು ಜುಲೈ 1 ರಿಂದ ಜಾರಿಗೆ ಬರಲಿದೆ.

ಟೋಲ್ ಇರುವ ಸುತ್ತಮುತ್ತಲೂ ಐಟಿ ಕಂಪನಿಗಳು, ಹಳವು ಕಾರ್ಖಾನೆಗಳು ಇವೆ, ಕೆಆರ್ ಮಾರುಕಟ್ಟೆಯನ್ನು ಸಿಂಗಸಂಧ್ರಕ್ಕೆ ಸ್ಥಳಾಂತರಿಸಲಾಗಿದೆ, ತರಕಾರಿ ವ್ಯಾಪಾರಿಗಳಿಗೆ ಟೋಲ್ ರಸ್ತೆಯನ್ನೇ ಬಳಸಿ ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಟೋಲ್‌ಪ್ಲಾಜಾಗಳಲ್ಲಿ 100 ಮೀಟರ್‌ಗಿಂತ ಹೆಚ್ಚು ಸರತಿಯಿದ್ದರೆ ತೆರಿಗೆ ಪಾವತಿಸಬೇಕಿಲ್ಲ ಟೋಲ್‌ಪ್ಲಾಜಾಗಳಲ್ಲಿ 100 ಮೀಟರ್‌ಗಿಂತ ಹೆಚ್ಚು ಸರತಿಯಿದ್ದರೆ ತೆರಿಗೆ ಪಾವತಿಸಬೇಕಿಲ್ಲ

ಮಾಸಿಕ ಪಾಸ್ ದರವನ್ನು 45 ರೂ. ಹೆಚ್ಚಿಸಲಾಗಿದೆ. ದ್ವಿಚಕ್ರ ವಾಹನ ಸವಾರರು ತಿಂಗಳಿಗೆ 625 ರೂ. ಪಾವತಿಸಬೇಕಾಗುತ್ತದೆ. ಜೀಪು, ಕಾರು, ವ್ಯಾನ್, ವಾಹನಗಳ ಬಳಕೆದಾರರು ತಿಂಗಳಿಗೆ 115 ರೂ. ಪಾವತಿಸಬೇಕು. ಅಂದರೆ ಈ ವಾಹನಗಳ ಬಳಕೆ ಶುಲ್ಕವನ್ನು 75ರೂ.ನಿಂದ 80ರೂ.ನಷ್ಟು ಹೆಚ್ಚಿಸಲಾಗಿದ್ದು, ಮಾಸಿಕ ಪಾಸ್‌ಗೆ 1570ರೂ. ಪಾವತಿಸಬೇಕು.

 ಲಘು ವಾಣಿಜ್ಯ ವಾಹನಗಳು

ಲಘು ವಾಣಿಜ್ಯ ವಾಹನಗಳು

ಲಘು ವಾಣಿಜ್ಯ ವಾಹನಗಳು ಒಂದು ಸದರದಿಗೆ 75ರೂ. ಪಾವತಿಸಬೇಕು, ಈ ದರದಲ್ಲಿ 5 ರೂ ಹೆಚ್ಚಿಸಲಾಗಿದೆ. ಹಿಂದಿರುಗಲು 110 ರೂ. ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಭಾರಿ ವಾಹನಕ್ಕೆ ಶುಲ್ಕವೆಷ್ಟು

ಭಾರಿ ವಾಹನಕ್ಕೆ ಶುಲ್ಕವೆಷ್ಟು

ದ್ವಿಚಕ್ರ ವಾಹನಕ್ಕೆ 20 ರೂ. ನಿಗದಿಯಾಗಿದ್ದು, ಹಿಂತಿರುಗಿ ಬರುವುದಕ್ಕೆ (ಟು ಸೈಡ್) 30 ರೂ. ಶುಲ್ಕ ನಿಗದಿಯಾಗಿದೆ. ಕಾರು, ಜೀಪ್, ವ್ಯಾನ್​ಗಳಿಗೆ 50 ರೂ. ಮತ್ತು ಹಿಂತಿರುಗಿ ಬರುವುದಕ್ಕೆ 80 ರೂ. ಶುಲ್ಕ ನಿಗದಿಯಾಗಿದೆ. ಮಿನಿ ಬಸ್, ಲುಘು ವಾಹನಕ್ಕೆ 80 ರೂ. ವಾಪಸ್ ಬಂದರೆ 110 ರೂ. ಚಾರ್ಜ್ ಮಾಡಲಾಗುತ್ತದೆ. ಬಸ್, ಗೂಡ್ಸ್​ಗೆ 145 ರೂ. ಹಿಂತಿರುಗಿ ಬಂದರೆ 220 ರೂ. ಟೋಲ್ ದರ ಫಿಕ್ಸ್ ಆಗಿದೆ.

ಭಾರಿ ವಾಹನಕ್ಕೆ 295 ರೂ. ಹಾಗೂ ಹಿಂತಿರುಗಿ ಬಂದರೆ 440 ರೂ. ಟೋಲ್ ಚಾರ್ಜ್ ದರ ನಿಗದಿಯಾಗಿದೆ. ವಾಹನಗಳ ಮಾಸಿಕ ಪಾಸ್​ನಲ್ಲಿ ಟೋಲ್ ಶುಲ್ಕ ಭಾರಿ ಹೆಚ್ಚಳವಾಗಿದ್ದು, ಶೇಕಡಾ 75ರಿಂದ 80ರಷ್ಟು ಏರಿಕೆಯಾಗಿದೆ. ದ್ವಿಚಕ್ರ ವಾಹನಗಳಿಗೆ ತಿಂಗಳ ಪಾಸ್ ದರ 625 ರೂಪಾಯಿ, ಕಾರು, ಜೀಪ್, ವ್ಯಾನ್ಸ್​ಗೆ ಟೋಲ್​ನ ಮಾಸಿಕ ಪಾಸ್ ದರ 1,570 ರೂ. ಲಘು ವಾಹನಗಳಿಗೆ 4,390 ರೂ. ಟ್ರಕ್, ಬಸ್​ಗಳಿಗೆ ತಿಂಗಳ ಪಾಸ್ ದರ 4,390 ರೂ. ಭಾರಿ ವಾಹನಗಳ ತಿಂಗಳ ಪಾಸ್ ದರ 8,780 ರೂ. ಆಗಿದೆ.
 ಹಲವು ಐಟಿ ಕಂಪನಿಗಳಿವೆ

ಹಲವು ಐಟಿ ಕಂಪನಿಗಳಿವೆ

ಈ ಮಾರ್ಗದಲ್ಲಿ ಹಲವು ಐಟಿ ಕಂಪನಿಗಳಿದ್ದು, ರಸ್ತೆ ಬಳಕೆದಾರರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ, ಬೊಮ್ಮಸಂದ್ರದಲ್ಲಿಯೂ ನೂರಾರು ಕಂಪನಿಗಳು ಇವೆ. ಅಲ್ಲದೆ, ಕೆಆರ್ ಮಾರುಕಟ್ಟೆಯನ್ನು ಸಿಂಗಸಂದ್ರಕ್ಕೂ ಸ್ಥಳಾಂತರಿಸಲಾಗಿದ್ದು, ಸಾವಿರಾರು ಜನ ಈ ಮಾರ್ಗದ ಮೂಲಕವೇ ಮಾರುಕಟ್ಟೆಗೆ ಹೋಗಬೇಕಾಗಿದೆ.

 ಈ ರಸ್ತೆ ಮೂಲಕವೇ ಹೋಗಬೇಕು

ಈ ರಸ್ತೆ ಮೂಲಕವೇ ಹೋಗಬೇಕು

''ಕಚೇರಿ ಕೆಲಸಗಳಿಗೆ, ಸರ್ಕಾರಿ ಕಚೇರಿಗಳಿಗೆ ಇದೇ ಮಾರ್ಗದ ಮೂಲಕವೇ ಸಾಗಬೇಕು, ಈಗ ರಸ್ತೆ ಬಳಕೆ ಶುಲ್ಕ ಹೆಚ್ಚಿಸಿರುವುದು ನಮ್ಮ ಸಂಕಷ್ಟವನ್ನು ಹೆಚ್ಚಿಸಿದೆ'' ಎಂದು ಯೋಗರಾಜ್ ಎಂಬುವವರು ಅಸಾಮಾಧಾನ ಹೊರಹಾಕಿದ್ದಾರೆ.

ಸಿಂಗಸಂದ್ರ ಹೋಗಬೇಕೆಂದರೆ ಈ ರಸ್ತೆಯಲ್ಲಿ ಮೇಲ್ಸೇತುವೆಯನ್ನು ಬಳಸಿಕೊಂಡು ಹೋಗಬೇಕು. ಈಗ ಟೋಲ್ ಹೆಚ್ಚಿಸಿರುವುದು ನಮಗೆ ಮತ್ತಷ್ಟು ಹೊರೆ ಎನಿಸಿದೆ ಎಂದು ವ್ಯಾಪಾರಿ ಜಗದೀಶ್ ಹೇಳಿದ್ದಾರೆ.

Recommended Video

ಜಮೀರ್ ಅಹಮದ್ ಗೆ ಎಚ್ಚರಿಕೆ ಕೊಟ್ಟ ಡಿಕೆ ಸುರೇಶ್ | Oneindia Kannada

English summary
The toll at Electronics City and Attibele expressways will go up for regular commuters from July 1 onwards as the authorities have increased the charges for various vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X