ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯುತ್ ಸರಿಪಡಿಸುವ ನೆಪದಲ್ಲಿ ಬಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17: ವಿದ್ಯುತ್ ಸರಿಪಡಿಸುವ ನೆಪದಲ್ಲಿ ಬಂದು ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವಿದ್ಯುತ್ ಫ್ಯೂಸ್ ಸರಿಪಡಿಸುವ ನೆಪದಲ್ಲಿ ಮನೆಗೆ ನುಗ್ಗಿದ ಎಲೆಕ್ಟ್ರಿಷಿಯನ್ ಒಂಟಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಇದೀಗ ಪರಪ್ಪನ ಅಗ್ರಹಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಸಾಮೂಹಿಕ ಅತ್ಯಾಚಾರ ನಡೆಸಿ ಹಲ್ಲೆ: ಬೆತ್ತಲಾಗಿ ಓಡಿದ ಯುವತಿಸಾಮೂಹಿಕ ಅತ್ಯಾಚಾರ ನಡೆಸಿ ಹಲ್ಲೆ: ಬೆತ್ತಲಾಗಿ ಓಡಿದ ಯುವತಿ

ಮಹಿಳೆ ನೀಡಿದ ದೂರಿನ ಮೇರೆಗೆ ಕೂಡ್ಲು ಗ್ರಾಮದ ರಾಮ್‌ಕುಮಾರ್ ಯಾದವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ವಿವಾಹಿತನಾಗಿದ್ದು, ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ, ಮಹಿಳೆ ಕುಟುಂಬ ಕೂಡ್ಲು ಗ್ರಾಮದಲ್ಲಿ ನೆಲೆಸಿತ್ತು. ಕಟ್ಟಡದ ನಿರ್ವಹಣೆಯನ್ನು ಆರೋಪಿಯೇ ನೋಡಿಕೊಳ್ಳುತ್ತಿದ್ದ. ಸಂತ್ರಸ್ತೆ ಮನೆಯಲ್ಲಿ ಸೆ.14ರಂದು ರಾತ್ರಿ ಕರೆಂಟ್ ಹೋಗಿತ್ತು.ಫ್ಯೂಸ್ ಚೆಕ್ ಮಾಡಲು ಆರೋಪಿಗೆ ಮಹಿಳೆ ಕರೆ ಮಾಡಿ ಹೇಳಿದ್ದಳು.

Electrician Arrested For Attempt To Rape Woman In Bengaluru

ರಾತ್ರಿ 10.30ರ ಸುಮಾರಿಗೆ ಮಹಿಳೆ ಮನೆಗೆ ಬಂದ ಆರೋಪಿ ಫ್ಯೂಸ್ ತಪಾಸಣೆ ನಡೆಸಿದ್ದ. ಫ್ಯೂಸ್ ಹಾಳಾಗಿದೆ. ಬೆಳಗ್ಗೆ ರಿಪೇರಿ ಮಾಡುವುದಾಗಿ ಹೇಳಿದ್ದ.

ಬಿಜೆಪಿ ಮುಖಂಡನ ವಿರುದ್ಧ ಅತ್ಯಾಚಾರ ಆರೋಪ: ಪೊಲೀಸ್ ವಿಚಾರಣೆಬಿಜೆಪಿ ಮುಖಂಡನ ವಿರುದ್ಧ ಅತ್ಯಾಚಾರ ಆರೋಪ: ಪೊಲೀಸ್ ವಿಚಾರಣೆ

ಹೊರಗೆ ಹೋಗುವ ಸಮಯದಲ್ಲಿ ಏಕಾಏಕಿ ಆರೋಪಿ, ಮಹಿಳೆಯನ್ನು ಹಿಡಿದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ಆರೋಪಿಯಿಂದ ತಪ್ಪಿಸಿಕೊಂಡು , ಜೋರಾಗಿ ಚೀರಾಡುತ್ತಾ ಓಡಿದ್ದಳು.ಈ ಸಂಬಂಧ ಠಾಣೆಗೆ ದೂರು ನೀಡಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

English summary
A 35 year old Electrician arrested by Parappana agrahara police for Allegedly attempting to assault Woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X