ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳು ಪರಿಸರಕ್ಕೆ ಓಕೆ: ಖಜಾನೆಗೆ ಹೊಗೆ

|
Google Oneindia Kannada News

ಬೆಂಗಳೂರು, ಮೇ 4: ಬಿಎಂಟಿಸಿ ನಷ್ಟದ ಸುಳಿಯಲ್ಲಿರುವುದು ಗೊತ್ತಿರದ ವಿಚಾರವೇನಲ್ಲ. ಬಿಎಂಟಿಸಿಯ ಇವತ್ತಿನ ಸ್ಥಿತಿಗೆ ವೋಲ್ವೋ, ಮಾರ್ಕೋಪೋಲೋ ಬಸ್‌ಗಳ ಕೊಡುಗೆ ಬಹಳ ದೊಡ್ಡದಿದೆ. ಇದರ ಲೀಸ್ಟ್ ಗೆ ಈಗ ಎಲೆಕ್ಟ್ರಿಕ್ ಬಸ್ ಸೇರಿಕೊಂಡಿದೆ. ಎಲೆಕ್ಟ್ರಿಕ್ ಬಸ್ ಇದೇ ರೀತಿ ಇನ್ನೊಂದು ಸ್ವಲ್ಪ ದಿನ ಓಡಾಡಿದರೇ ಬಿಎಂಟಿಸಿಗೆ ತುಂಬಲಾರದ ನಷ್ಟ ಉಂಟಾಗಲಿದೆ.

ಸಾಲದ ಸುಳಿಯಲ್ಲಿ ಬಿಎಂಟಿಸಿ: ಶಾಂತಿನಗರ ಬಸ್ ನಿಲ್ದಾಣ ಅಡಮಾನಸಾಲದ ಸುಳಿಯಲ್ಲಿ ಬಿಎಂಟಿಸಿ: ಶಾಂತಿನಗರ ಬಸ್ ನಿಲ್ದಾಣ ಅಡಮಾನ

ಹಗರಣದ ಮೂಲವಾಯ್ತಾ ಬಿಎಂಟಿಸಿ ಎಲೆಕ್ಟ್ರಿಕ್ ಬಸ್..?

ಹಗರಣದ ಮೂಲವಾಯ್ತಾ ಬಿಎಂಟಿಸಿ ಎಲೆಕ್ಟ್ರಿಕ್ ಬಸ್..?

ಇಕೋ ಫ್ರೆಂಡ್ಲಿ ಬಸ್ ರಸ್ತೆಗಿಳಿಸ್ತಿವಿ. ಮಾಲಿನ್ಯವನ್ನು ಝೀರೋ ಮಾಡ್ತಿವಿ ಅಂತ ಬಿಎಂಟಿಸಿ ಕೋಟಿ ಕೋಟಿ ಸುರಿದು ಎಲೆಕ್ಟ್ರಿಕ್ ಬಸ್ ರಸ್ತೆಗಿಳಿಸಿದೆ. ಖಾಸಗಿ ಕಂಪನಿ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಬಸ್ ನಿರ್ವಹಣೆಯನ್ನು ಆ ಕಂಪನಿಗೆ ವಹಿಸಿಕೊಟ್ಟಿದೆ. ಹೇಳೋಕೆ ಎಲೆಕ್ಟ್ರಿಕ್ ಬಸ್, ಮೆಂಟೇನೆನ್ಸ್ ಖಾಸಗಿ ಕಂಪನಿಯದ್ದು ಅವರಿಗೆ ಕಿಲೋಮೀಟರ್ ಲೆಕ್ಕದಲ್ಲಿ ಕಾಸು ಕೊಟ್ಟರಾಯ್ತು ಬಂದ ಕಲೆಕ್ಷನ್ ಎಣಿಸಿ ಖಾಜಾನೆ ತುಂಬಿಸಿಕೊಂಡರಾಯ್ತು ಅಂತ ನಿಗಮದ ಅಧಿಕಾರಿಗಳು ಲೆಕ್ಕಾಚಾರ ಹಾಕಿದ್ದರು. ಅಲ್ಲದೇ ಈ ಖಾಸಗಿ ಕಂಪನಿಗಳ ಜೊತೆಗಿನ ಗುತ್ತಿಗೆ ಬಗ್ಗೆ ಬಣ್ಣ ಬಣ್ಣದ ಕತೆಯನ್ನು ಹೇಳ್ತಿದ್ದರು. ಆದರೆ ಈ ಗುತ್ತಿಗೆ ಬಸ್ ಗಳ ನಿಜ ಬಣ್ಣ ಆಗಲೇ ಬಯಲಾಗಿದೆ.

ಎಲೆಕ್ಟ್ರಿಕ್ ಬಸ್‌ನಿಂದ ಆಗುತ್ತಿರವ ನಷ್ಟ ಎಷ್ಟು..?

ಎಲೆಕ್ಟ್ರಿಕ್ ಬಸ್‌ನಿಂದ ಆಗುತ್ತಿರವ ನಷ್ಟ ಎಷ್ಟು..?

*ಒಟ್ಟು ಎಲೆಕ್ಟ್ರಿಕ್ ಬಸ್ - 90

*ಪ್ರತೀ ಕಿ.ಮೀಗೆ ಬಿಎಂಟಿಸಿ ಪಾವತಿಸೋ ಹಣ 51.ರೂ 60 ಪೈಸೆ

*ಒಂದು ಬಸ್‌ ಮಿನಿಮಮ್ ಕಿ.ಮೀ ಒಪ್ಪಂದ- 180 ಕಿ.ಮೀ.

*ಒಂದು ದಿನಕ್ಕೆ ಒಂದು ಎಲೆಕ್ಟ್ರಿಕ್ ಬಸ್ಗೆ ಪಾವತಿಸಬೇಕಾದ ಹಣ 9,288 ರೂ.

*ಒಂದು ಎಲೆಕ್ಟ್ರಿಕ್ ಬಸ್‌ನಿಂದ ಬರುತ್ತಿರುವ ಆದಾಯ 5,868 ರೂ.

*ಒಂದು ಎಲೆಕ್ಟ್ರಿಕ್ ಬಸ್‌ನಿಂದ ದಿನಕ್ಕಾಗೋ ನಷ್ಟ - 3,420 ರೂ.

*ಪ್ರತೀ ಕಿ.ಮೀಗೆ ಆಗ್ತಿರೋ ನಷ್ಟ 19 ರೂ.

ಎನ್‌ಟಿಪಿಸಿ ಜೊತೆ ಒಪ್ಪಂದವೇ ಮುಳುವು

ಎನ್‌ಟಿಪಿಸಿ ಜೊತೆ ಒಪ್ಪಂದವೇ ಮುಳುವು

ಸದ್ಯ ಬಿಎಂಟಿಸಿ NTPC ಕಂಪನಿ ಜೊತೆಗೆ ಸೇರಿಕೊಂಡು 90 ಎಲೆಕ್ಟ್ರಿಕ್ ಬಸ್ ರಸ್ತೆಗಿಳಿಸಿದೆ. ಆದರೆ ಎನ್ಟಿಪಿಸಿ ಕಂಪನಿ ಜೊತೆಗೆ ಬಿಎಂಟಿಸಿ ಮಾಡಿಕೊಂಡಿರೋ ಕರಾರು ಈಗ ನಿಗಮಕ್ಕೆ ಮುಳುವಾಗೋ ಎಲ್ಲಾ ಲಕ್ಷಣ ಕಾಣಿಸ್ತಿದೆ. ಕಾರಣ ಏನೆಂದರೆ ಬಸ್‌ಗಳಿಗೆ ಜನ ಬರಲಿ ಬಾರದಿರಲಿ ಪ್ರತೀ ಕಿಲೋಮೀಟರ್‌ಗೆ 51 ರೂ 60 ಪೈಸೆ ಯಂತೆ 180 ಕಿಲೋಮೀಟರ್‌ಗೆ 9,288 ರೂ. ಗಳನ್ನ ನಿತ್ಯ ಎನ್ಟಿಪಿಸಿ ಕಂಪನಿಗೆ ಪಾವತಿ ಮಾಡಬೇಕು. ಆದರೆ, ಒಂದು ಎಲೆಕ್ಟ್ರಿಕ್ ಬಸ್‌ನಿಂದ ಪ್ರತಿನಿತ್ಯ ಟಿಕೆಟ್ ಪೇರ್ ಕಲೆಕ್ಷನ್ ಆಗುತ್ತಿರುವುದು 5,868 ರೂ ಮಾತ್ರ. ಹೀಗಾಗಿ ಪ್ರತಿನಿತ್ಯ ಒಂದು ಎಲೆಕ್ಟ್ರಿಕ್ ಬಸ್ ರಸ್ತೆಗಿಳಿದರೆ ನಿಗಮಕ್ಕೆ 3,420 ರೂ. ನಷ್ಟವಾಗುತ್ತಿದೆ.

ಅಶೋಕ್ ಲೇಲೆಂಡ್ ಕಂಪನಿ ಜೊತೆಗೆ 300 ಬಸ್ ಒಪ್ಪಂದ..!

ಅಶೋಕ್ ಲೇಲೆಂಡ್ ಕಂಪನಿ ಜೊತೆಗೆ 300 ಬಸ್ ಒಪ್ಪಂದ..!

ಎನ್ಟಿಪಿಸಿ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ರಿಂದಾಗಿ ನಷ್ಟವಾಗ್ತಿದೆ. ನಿಗಮಕ್ಕೆ ಆರ್ಥಿಕ ಹೊರೆಯಾಗ್ತಿದೆ ಅನ್ನೋದು ಗೊತ್ತಿದ್ದರು ನಿಗಮ ಮತ್ತೆ 300 ಹೊಸ ಎಲೆಕ್ಟ್ರಿಕ್ ಬಸ್ ಖರೀದಿಗೆ ಮುಂದಾಗಿದೆ. ಈ ಬಾರಿ ಅಶೋಕ್ ಲೇಲ್ಯಾಂಡ್ ಕಂಪನಿ ಜೊತೆಗೆ ಒಪ್ಪಂದ ಏರ್ಪಡುತ್ತಿದ್ದು ಒಂದು ಕಿಮೀಗೆ 48 ರೂನಂತೆ ನಿತ್ಯ ಒಂದು ಬಸ್ಗೆ ಮಿನಿಮಮ್ 210 ಕಿಲೋಮೀಟರ್ ನಂತೆ ಒಡಂಬಡಿಕೆ ಮಾಡಿಕೊಳ್ಳಲಾಗ್ತಿದೆ. ""ಈ ಒಪ್ಪಂದದ ಪ್ರಕಾರ ಸದ್ಯದ ನಷ್ಟವೇ ಮುಂದುವೆರೆದರೇ ಪ್ರತೀ ಕಿಲೋಮೀಟರ್‌ಗೆ ಆಗುವ ನಷ್ಟ 21 ರೂ.ಗೆ ಏರಿಕೆಯಾಗೋ ಸಾಧ್ಯತೆ ಇದೆ. ಇನ್ನು ಈಗಿರೋ 90 ಹಾಗೂ ಹೊಸದಾಗಿ ಬರೋ 300 ಎಲೆಕ್ಟ್ರಿಕ್ ಬಸ್‌ಗಳಿಂದ ನಿಗಮಕ್ಕೆ ಪ್ರತಿತಿಂಗಳು ಕನಿಷ್ಟ 4 ಕೋಟಿ 89 ಲಕ್ಷದ 24 ಸಾವಿರ ರೂ ನಷ್ಟ ಸಂಭವಿಸಲಿದೆ'' ಎಂದು ಸಾರಿಗೆ ಸೌಕರ ಸಂಘದ ಮುಖಂಡ ಅನಂತ ಸುಬ್ಬರಾವ್ ಸ್ಪಷ್ಟಪಡಿಸಿದ್ದಾರೆ.

ಈ ಎರಡೂ ಕಂಪನಿಗಳ ಜೊತೆಗೆ 10 ವರ್ಷಕ್ಕೆ ಕರಾರು ಮಾಡಿಕೊಳ್ಳಲಾಗಿದೆ. ನಷ್ಟ ಎಷ್ಟೇ ಹೆಚ್ಚಾದರೂ ನಿಗಮ ಮಾತ್ರ ಪ್ರತಿನಿತ್ಯ ಹಣ ಎಣಿಸಲೇ ಬೇಕು. ಮಾರ್ಕೋಪೋಲೋ, ವೋಲ್ವೋ ಬಸ್‌ಗಳಿಂದ ಹೊಡೆತ ತಿಂದಿದ್ದ ನಿಗಮ ಎಚ್ಚೆತ್ತುಕೊಳ್ಳುತ್ತೆ. ಇನ್ಮುಂದೆ ಈ ತಪ್ಪು ಮಾಡೋದಿಲ್ಲ ಎಂದೇ ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ ಎಲೆಕ್ಟ್ರಿಕ್ ಬಸ್ ವಿಚಾರದಲ್ಲಿ ಅವಿವೇಕತನದಿಂದಲೋ ಅಥವಾ ಕಮಿಷನ್ ಆಸೆಯಿಂದಲೋ ಈ ಒಪ್ಪಂದ ಮಾಡಿಕೊಂಡಿದ್ದು ಈಗ ಈ ಒಪ್ಪಂದ ನಿಗಮಕ್ಕೆ ಮರಣ ಶಾಸನವಾಗಿ ಮಾರ್ಪಡುವ ಸಾಧ್ಯತೆಗಳಿವೆ.

Recommended Video

Glenn Maxwell CSK ವಿರುದ್ಧ ಔಟ್ ಆದದ್ದು ಹೀಗೆ | Oneindia Kannada

English summary
BMTC has purchased electric buses. They become burden for BMTC due to heavy losses. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X