ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲೆಕ್ಟ್ರಿಕ್ ಆಟೋಗಳಿಗೆ 1ಲಕ್ಷ ರೂ. ಸಬ್ಸಿಡಿ

|
Google Oneindia Kannada News

ಬೆಂಗಳೂರು, ಮಾರ್ಚ್ 29: ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಎಲೆಕ್ಟ್ರಿಕ್ ಆಟೋ ಖರೀದಿಗೆ ಸಹಾಯ ಧನ ನೀಡಲು ನಿರ್ಧರಿಸಿದೆ.

ಎಲೆಕ್ಟ್ರಿಕ್ ಆಟೋ ಖರೀದಿಸುವವರಿಗೆ 1ಲಕ್ಷದ ವರೆಗೆ ಸಹಾಯಧನ ನೀಡಲು ಹೊಸ ಪ್ರಸ್ತಾವನೆಯೊಂದನ್ನು ಹಣಕಾಸು ಇಲಾಖೆ ಮುಂದೆ ಸಾರಿಗೆ ಇಲಾಖೆ ಇರಿಸಿದೆ. ಹಣಕಾಸು ಇಲಾಖೆ ಪ್ರಸ್ತಾವಣೆಯನ್ನು ಪರಿಶೀಲಿಸುತ್ತಿದ್ದು, ವರ್ಷಾಂತ್ಯಕ್ಕೆ ಈ ಸೌಲಭ್ಯ ದೊರಕುವ ನಿರೀಕ್ಷೆ ಇದೆ.

2 ಸ್ಟ್ರೋಕ್ ಆಟೋಗಳಲ್ಲಿ ಎಲೆಕ್ಟ್ರಿಕ್ ಬ್ಯಾಟರಿ ಅಳವಡಿಕೆಗೆ ಪ್ರಸ್ತಾವ 2 ಸ್ಟ್ರೋಕ್ ಆಟೋಗಳಲ್ಲಿ ಎಲೆಕ್ಟ್ರಿಕ್ ಬ್ಯಾಟರಿ ಅಳವಡಿಕೆಗೆ ಪ್ರಸ್ತಾವ

ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಆಟೋ ಬೆಲೆ 3.10ಲಕ್ಷ ರೂ ಇದೆ. ಹೀಗಾಗಿ ಹೆಚ್ಚಿನ ಸಬ್ಸಿಡಿ ದೊರೆತಲ್ಲಿ ಚಾಲಕರೂ ಎಲೆಕ್ಟ್ರಿಕ್ ಆಟೋ ಖರೀದಿಗೆ ಮುಂದಾಗಲಿದ್ದಾರೆ. ಎಲೆಕ್ಟ್ರಿಕ್ ಚಾಲಿತ ಸಾರಿಗೇತರ ಮತ್ತು ಸಾರಿಗೆ ವಾಹನಗಳಿಗೆ ರಸ್ತೆ ತೆರಿಗೆ ಪಾವತಿಯಿಂದ ವಿನಾಯಿತಿಯನ್ನು ಸಾರಿಗೆ ಇಲಾಖೆ ನೀಡಿದೆ.

Electric Auto rickshaws will get Rs.1 lakh subsidy

ಪ್ರಸ್ತುತ ರಾಜ್ಯದಲ್ಲಿ ವಿದ್ಯುತ್ ಚಾಲಿತ 7,185 ದ್ವಿಚಕ್ರ ವಾಹನ, 4364 ಲಘು ಮೋಟಾರು ವಾಹನ ಮತ್ತು 135 ಲಘು ಸರಕು ವಾಹನ ಸೇರಿ ಒಟ್ಟು 11,684 ವಾಹನಗಳಿವೆ. ಜತೆಯಲ್ಲಿ 17 ಇ-ರಿಕ್ಷಾ, 57 ಇ-ಕಾರ್ಟ್ ರಾಜ್ಯದಲ್ಲಿದೆ. 11,684 ಇ-ವಾಹನಗಳಲ್ಲಿ 6,275 ವಾಹನಗಳು ಬೆಂಗಳೂರಿನಲ್ಲಿವೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿರ್ವಹಣೆ ವೆಚ್ಚ ಕಡಿಮೆ: ಎಲ್‌ಪಿಜಿ ಅಥವಾ ಪೆಟ್ರೋಲ್ ಆಟೋಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಆಟೋ ಇಂಧನ ವೆಚ್ಚ ಮತ್ತು ನಿರ್ವಹಣಾ ವೆಚ್ಚ ತೀರಾ ಕಡಿಮೆ ಎನ್ನುತ್ತಾರೆ ಪೀಸ್ ಇವಿ ಮೋಟಾರ್ಸ್ ಸಿಬ್ಬಂದಿ. ಎಲ್‌ಪಿಜಿ ಆಟೋದಲ್ಲಿ ನಿತ್ಯ 100 ಕಿ.ಮೀ ಎಂದರೂ ತಿಂಗಳಿಗೆ 5727ರೂ ಎಲ್‌ಪಿಜಿಗೆ ಖರ್ಚಾಗುತ್ತದೆ. ಅದೇ ಎಲೆಕ್ಟ್ರಿಕ್ ಆಟೋದಲ್ಲಿ ತಿಂಗಳಿಗೆ 1446 ರೂ ವಿದ್ಯುತ್ ಖರ್ಚಾಗಲಿದೆ.

ಮೆಟ್ರೋ ನಿಲ್ದಾಣದಿಂದ ಬಸ್ ನಿಲ್ದಾಣಗಳಿಗೆ ಇ-ಆಟೋ ಸಂಪರ್ಕ ಮೆಟ್ರೋ ನಿಲ್ದಾಣದಿಂದ ಬಸ್ ನಿಲ್ದಾಣಗಳಿಗೆ ಇ-ಆಟೋ ಸಂಪರ್ಕ

English summary
To promote the environmental friendly electrical vehicles in Bengaluru. Department of Transport has sent a proposal to the government seeking Rs.1 lakh subsidy on electrical auto rickshaws.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X