• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾನ್ ಸುಳ್ಳುಗಾರ ಮೋದಿ, ಸುಳ್ಳು ಹೇಳುವುದೇ ಸಾಧನೆ : ಸಿದ್ದರಾಮಯ್ಯ

|
   Lok Sabha Elections 2019: ನರೇಂದ್ರ ಮೋದಿ ವಿರುದ್ಧ ಗುಡುಗಿದ ಸಿದ್ದರಾಮಯ್ಯ

   ಬೆಂಗಳೂರು, ಏಪ್ರಿಲ್ 10: ಗೋವಿಂದ ರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಚುನಾವಣಾ ಪ್ರಚಾರ ಸಭೆ ನಡೆಸಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಾಯಕರು ಮೋದಿ ವಿರುದ್ಧ ಗುಡುಗಿದ್ದಾರೆ.

   ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ಪರ ಪ್ರಚಾರ ನಡೆಸಿದ ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದಿನಂತೆ ಅಂಕಿ ಅಂಶಗಳ ಲೆಕ್ಕ ನೀಡುತ್ತಾ, ಮೋದಿಗೆ ಸವಾಲು ಹಾಕಿದರು. 56 ಇಂಚಿನ ಎದೆ ಇದ್ದರೆ ಸಾಲದು, ಕಷ್ಟದಲ್ಲಿರುವವರ ಪರ ಸ್ಪಂದಿಸಿರುವ ಹೃದಯ ಇರಬೇಕು ಎಂದರು.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್, ಶಾಸಕ ಎಂ ಕೃಷ್ಣಪ್ಪ, ಮಾಜಿ ಶಾಸಕ ಪ್ರಿಯಾ ಕೃಷ್ಣ ಭಾಗಿಯಾಗಿದ್ದರು.

   ಚಿಂತಾಮಣಿ ಸಮೀಕ್ಷೆ: ದಕ್ಷಿಣದಲ್ಲಿ ಎನ್ಡಿಎ ವಿರುದ್ಧ ಯುಪಿಎಗೆ ಜಯ

   ಬೆಂಗಳೂರು ದಕ್ಷಿಣ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಬಿಜೆಪಿ ಪ್ರಣಾಳಿಕೆ ಹೊಸ ಬಾಟಲಿಯಲ್ಲಿ ಹಳೆಯ ಮದ್ಯ ಸುರಿದಂತಿದೆ ಎಂದು ಟೀಕಿಸಿದರು. ಬಿಜೆಪಿಯವರು ದಶಕಗಳಿಂದಲೂ ರಾಮಮಂದಿರ ಕಟ್ಟುತ್ತೇವೆ ಎಂದು ಭರವಸೆ ನೀಡುತ್ತಲೇ ಇದ್ದಾರೆ, ಆದರೆ ಈ ವರೆಗೆ ಒಂದು ಕಲ್ಲು ಸಹ ಕದಲಿಸಿಲ್ಲ ಎಂದರು.

   'ಕಾಪಿ ಕ್ಯಾಟ್ ಮೋದಿ' ಎಂದು ಬಿಜೆಪಿ ಪ್ರಣಾಳಿಕೆ ಲೇವಡಿ ಮಾಡಿದ ಸಿದ್ದರಾಮಯ್ಯ

   ಏಪ್ರಿಲ್ 11ರಿಂದ ಮೇ 19ರ ತನಕ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರ ಬರಲಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ಯುವ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಹಳೆ ಹುಲಿ ಬಿ.ಕೆ ಹರಿಪ್ರಸಾದ್ ಅವರು ಸೆಣಸುತ್ತಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖರಾಗಿರುವ ಹರಿಪ್ರಸಾದ್ ಅವರನ್ನು ಗೆಲ್ಲಿಸಿ, ಬೆಂಗಳೂರು ನಗರದ ಬಗ್ಗೆ ಇನ್ನೂ ಹಲವು ಕೊಡುಗೆಯನ್ನು ತರಲಿದ್ದಾರೆ ಎಂದರು.

   ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

   ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

   ಮೋದಿ ಅವರು 5 ವರ್ಷಗಳ ಕಾಲ ದೇಶವನ್ನು ಅಳಿದ್ದಾರೆ. ಬದಲಾವಣೆಯನ್ನು ಬಯಸಿ ಜನರು ಸ್ವಾಭಾವಿಕವಾಗಿ ಬಿಜೆಪಿಗೆ ಮತ ಚಲಾಯಿಸಿದ್ದರು. ಮನಮೋಹನ್ ಸಿಂಗ್ ಅವರು 10 ವರ್ಷ ಆಡಳಿತ ನಡೆಸಿದ ಪ್ರಾಮಾಣಿಕ ಪ್ರಧಾನಿ, ನರೇಂದ್ರಮೋದಿ ತರಹ ಡೊಂಗಿ ಪ್ರಧಾನಿ ಆಗಿರಲಿಲ್ಲ. ಸ್ವತಂತ್ರ ಭಾರತದಲ್ಲಿ ಅನೇಕ ಜನರು ಪ್ರಧಾನಿಗಳಾಗಿದ್ದಾರೆ. ನರೇಂದ್ರಮೋದಿ ತರಹ ಸುಳ್ಳು ಹೇಳುವ ಪ್ರಧಾನಿ ಎಂದು ನೋಡಿಲ್ಲಾ, ಅವರಿಗೆ ಸತ್ಯ ಹೇಳಿಯೇ ಗೊತ್ತಿಲ್ಲಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೇಲಿ ಮಾಡಿದರು.

   ಜಂಟಿ ಪ್ರಚಾರ ಸಮಾವೇಶ: ಬೆಂಗಳೂರಲ್ಲಿ ದೋಸ್ತಿಗಳ ಶಕ್ತಿ ಪ್ರದರ್ಶನ

   ಓಲ್ಡ್ ವೈನ್ ಇಂತೆ ನ್ಯೂ bottle

   ಓಲ್ಡ್ ವೈನ್ ಇಂತೆ ನ್ಯೂ bottle

   ಆರ್ಟಿಕಲ್ 370 ರದ್ದು ಮಾಡುವುದಾಗಿ ಹೇಳುತ್ತಾ ಇದ್ದಾರೆ. ಅಟಲ್ 6 ವರ್ಷ ನೀವು 5 ವರ್ಷ ಆಡಳಿತ ನಡೆಸಿದ್ದೀರಿ,ಆಗ ನಿಮ್ಮನ್ನು prevent ಮಾಡಿದವರು ಯಾರು? ಚುನಾವಣಾ issue ಮಾಡಿಕೊಂಡು ಜನರ ದಾರಿ ತಪ್ಪಿಸುತ್ತಿದ್ದೀರಿ. 1992 ನಲ್ಲಿ 27 ವರ್ಷಗಳ ಹಿಂದೆ ರಾಮಮಂದಿರ ಕಟ್ಟಲು ಆಗಲೇ ಇಲ್ಲಾ, ರಥ ಯಾತ್ರೆ ಮಾಡಿ ಸಂಗ್ರಹಿಸಿದ ಹಣಕ್ಕೆ ಲೆಕ್ಕಾ ಕೊಡಿ, ಮತ್ತೆ ಪ್ರಣಾಳಿಕೆಯಲ್ಲಿ ರಾಮಮಂದಿರ ಕಟ್ಟುವ ಬಗ್ಗೆ ಮತನಾಡಿದ್ದಿರಲ್ಲಾ ನಾಚಿಕೆ ಆಗುವುದಿಲ್ಲವಾ? ಎಂದು ಪ್ರಣಾಳಿಕೆ ಬಗ್ಗೆ ಕಿಡಿಕಾರಿದರು.

   ಎಚ್‌ಡಿಕೆ, ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಆಯೋಗಕ್ಕೆ ಐಟಿ ದೂರು

   ಸಂವಿಧಾನವನ್ನು ಸುಟ್ಟು ಹಾಕಲು ಕರೆ ನೀಡಿದರು.

   ಸಂವಿಧಾನವನ್ನು ಸುಟ್ಟು ಹಾಕಲು ಕರೆ ನೀಡಿದರು.

   - ಸಂವಿಧಾನ ಸುಟ್ಟು ಹಾಕಿ - ಅಂಬೇಡ್ಕರ್ ಪ್ರತಿಮೆಯನ್ನು ಬೀಳಿಸಿ ಎಂದು ಹೇಳಿದ್ದಾರೆ. ಈ ರೀತಿ ಹೇಳಿಕೆ ನೀಡುವ ನಿಮಗೆ ದೇಶದ ಪ್ರಜೆಗಳ ಆಗುವುದಕ್ಕೆ ಯೋಗ್ಯತೆ ಇದೆಯಾ? ಅನಂತ ಕುಮಾರ್ ಹೆಗಡೆ ನಾವು ಅಧಿಕಾರಕ್ಕೆ ಬಂದಿರುವುದು ಸಂವಿಧಾನದ ಬದಲಾವಣೆ ಮಾಡಲು, ಮೋದಿ ಅಮಿತ್ ಶಾ ಅನುಮತಿ ಇಲ್ಲದೆ ಈ ರೀತಿ ಹೇಳಿಕೆ ನೀಡಲು ಸಾಧ್ಯವೇ? ಮುಂದುವರಿದ ವರ್ಗದ ವರಿಗೆ ಮೀಸಲಾತಿ ನೀಡಿದ್ದೀರಿ, ಆದರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಬೇಡ ಅನ್ನುತ್ತೀರಿ? ಪ್ರಜ್ಞಾವಂತ ಜನರು ಯೋಚನೆ ಮಾಡಿ, ಮತ ಹಾಕಿ ಎಂದರು.

   ಮೋದಿ ಚೌಕಿದಾರ್ ಅಲ್ಲ, ಭ್ರಷ್ಟಾಚಾರದಲ್ಲಿ ಭಾಗಿದಾರ್ : ಸಿದ್ದರಾಮಯ್ಯ

   ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ನಮ್ಮದು

   ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ನಮ್ಮದು

   ಸಂವಿಧಾನ ಉಳಿಯಬೇಕಾದರೆ, ಸರ್ವರಿಗೂ ಸಮಪಾಲು ಸಮಬಾಳು ಸಿಗಬೇಕಾದರೆ ಬಿಜೆಪಿಯನ್ನು ತಿರಸ್ಕರಿಸಿ,ಮೋದಿ ಯವರು ಪ್ರಜಾಪ್ರಭುತ್ವ ವಿರೋಧಿ, ಮಾಧ್ಯಮ ಪ್ರತಿನಿಧಿಗಳು ಜೊತೆ ಮಾತನಾಡುವುದಿಲ್ಲ. ಶೇಕಡಾ 7 ರಷ್ಟು ಜನರು ನಿರುದ್ಯೋಗಿ ಗಳಾಗಿದ್ದಾರೆ. ರೈತರು ನಿರುದ್ಯೋಗಿ ಗಳು ಬಡತನದ ಬಗ್ಗೆ ಮೋದಿ ಯಾವತ್ತೂ ಮಾತನಾಡಿಲ್ಲ. 4 ಕೋಟಿ ಜನ ಅನ್ನ ಭಾಗ್ಯ ನೀಡಿದ್ದೇನೆ.

   5 ವರ್ಷದ ಅವಧಿಯಲ್ಲಿ ನಿಮ್ಮ ಆಡಳಿತ ದ ರಾಜ್ಯಗಳಲ್ಲಿ ಒಂದು ಕೆಜಿ ಅಕ್ಕಿಯನ್ನು ನೀಡಿದ್ದೀರಾ? ಯುವಕರಿಗೆ ಉದ್ಯೋಗ ಕೊಡಿ ಎಂದರೆ ಪಕೋಡ ಮಾರಿ ಅನ್ನುತ್ತಾರೆ. ಉದ್ಯೋಗ ಬೇಕು ಎನ್ನುವುದಾದರೆ ಮೋದಿಯನ್ನು ತಿರಸ್ಕರಿಸಿ ಎಂದು ಕಾಂಗ್ರೆಸ್ ಗೆ ಮತ ನೀಡಿ ಎಂದರು.

   ಅಮಿತ್ ಷಾ ಬೇಲ್ ನಲ್ಲಿ ಇರುವ ವ್ಯಕ್ತಿ

   ಅಮಿತ್ ಷಾ ಬೇಲ್ ನಲ್ಲಿ ಇರುವ ವ್ಯಕ್ತಿ

   ಅಮಿತ್ ಶಾ ಚೌಕಿದಾರ್ ಎಂದು ಅವರೇ ಬಿರುದುಕೊಂಡಿದ್ದಾರೆ. ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪ, ಕಟ್ಟಾಸುಬ್ರಹ್ಮಣ್ಯ ಚೌಕಿದಾರ್ ಎಂದು ವ್ಯಂಗ್ಯವಾಡಿದ್ದಾರೆ. ಯುವಕರಿಗೆ, ರೈತರು ಮಹಿಳೆಯರಿಗೆ ಚೌಕಿದಾರ್ ಅಗಲಿಲ್ಲಾ.

   ಅಂಬಾನಿ ಅದಾನಿಗೆ ಚೌಕಿದಾರ್ ಇವರು ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಿ ಎಂದು ಕಳಕಳಿಯ ಮನವಿ ಮಾಡಿದ್ದೆ. ಪ್ರತಿಪಕ್ಷಗಳ ನಾಯಕರು ತುಟಿಪಿಟಿಕ್ ಎನ್ನಲಿಲ್ಲಾ. 8530 ಕೋಟಿ ಸಾಲ ಮನ್ನಾ ಮಾಡಿದೆ. ಆದರೆ, ಮೋದಿ ಯಾವುದೇ ಕರುಣೆ ತೋರಲಿಲ್ಲಾ. ಯಡಿಯೂರಪ್ಪ ನಮ್ಮ ಸರಕಾರ ದಲ್ಲಿ ನೋಟ್ ಪ್ರಿಂಟ್ ಮಾಡುವ ಮಿಷನ್ ಇಲ್ಲಾ ಎಂದಿದ್ದರು. ಮಾತೆತ್ತಿದರೆ ಮೋದಿ ಮೋದಿ ಎನ್ನುತ್ತಾರೆ

   ಪ್ರಣಾಳಿಕೆಯಲ್ಲಿ ಹೊಸತೇನು ಇಲ್ಲಾ

   ಪ್ರಣಾಳಿಕೆಯಲ್ಲಿ ಹೊಸತೇನು ಇಲ್ಲಾ

   5 ವರ್ಷ ರೈತರ ಬಗ್ಗೆ ಏನು ಮಾಡಿಲ್ಲಾ, ಈಗ ಪ್ರಣಾಳಿಕೆಯಲ್ಲಿ ಅವರ ನೆನೆಪಾಗಿದೆ.ರಾಜ್ಯದಲ್ಲಿ ಬರಗಾಲ ಇದ್ದಾಗ ಎಂಪಿ ಗಳು ಸಂಸತ್ತಿನಲ್ಲಿ ಬಾಯಿ ಬಿಡಲಿಲ್ಲಾ ಈ ಬಿಜೆಪಿ ಸಂಸದರು, ಮೋದಿ ಅವರೇ ಮೈಸೂರಿಗೆ ಬೆಂಗಳೂರಿಗೆ ಏನು ಕೊಡುಗೆ ನೀಡಿದ್ದೀರಿ? 500 ಇಂದಿರಾ ಕ್ಯಾಂಟೀನ್ ಮಾಡಿದ್ದೀನಿ, ನೀವು ಎಲ್ಲಾದರೂ ಇಂತಹ ಕ್ಯಾಂಟೀನ್ ಮಾಡಿದ್ದೀರಾ? ಬಡವರ ಹೊಟ್ಟೆ ತುಂಬಿಸುವ ಕಾರಣ ಇಂತಹ ಕ್ರಮಕ್ಕೆ ಮುಂದಾಗಿದ್ದೇನೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Elections 2019: Former CM Siddaramaiah speech highlight at Govindarajanagar assembly segment while campaigning for Bangalore South candidate BK Hariprasad.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more