• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಹೀಯಾಳಿಸಿದ ರಮ್ಯಾಗೆ ನೀತಿ ಪಾಠದ ಪೆಟ್ಟುಕೊಟ್ಟ ಜಗ್ಗೇಶ್

|

ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಅವರು ಪ್ರಧಾನಿ ಮೋದಿ ಹಾಗೂ ಬಿಜೆಪಿ ಸರ್ಕಾರವನ್ನು ಟಾರ್ಗೆಟ್ ಮಾಡಿ, ಟ್ವೀಟ್ ಮಾಡಿದಾಗೆಲ್ಲ ವಿಭಿನ್ನವಾಗಿ ಪ್ರತ್ಯುತ್ತರ ನೀಡಿ, ತಿರುಗೇಟು ನೀಡುವುದರಲ್ಲಿ ಬಿಜೆಪಿ ಮುಖಂಡ ಜಗ್ಗೇಶ್ ಅವರು ಸಿದ್ಧಹಸ್ತರು.

ಆದರೆ, ರಮ್ಯಾ ಅವರು ನಿನ್ನೆಯ ಟ್ವೀಟ್ ಗೆ ನಟ ಬುಲೆಟ್ ಪ್ರಕಾಶ್ ಅವರು ಹೆಚ್ಚಿನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಬುಲೆಟ್ ಟ್ವೀಟ್ ಗೆ 'ಚೌಕಿದಾರ್' ಜಗ್ಗೇಶ್ ಅವರು ಉತ್ತರ ರೂಪವಾಗಿ ಟ್ವೀಟ್ ಮಾಡಿ ರಮ್ಯಾ ಅವರಿಗೆ ನೀತಿ ಪಾಠದ ಮೂಲಕ ತಿರುಗೇಟು ನೀಡಿದ್ದಾರೆ.

ಹಿಟ್ಲರ್ ಜೊತೆ ಮೋದಿ ಹೋಲಿಕೆ ಚಿತ್ರ, ರಮ್ಯಾ ಕಿವಿಹಿಂಡಿದ ಟ್ವಿಟ್ಟಿಗರು

ಮಂಡ್ಯದ ಮಾಜಿ ಸಂಸದೆ ರಮ್ಯಾ, ಅಡಾಲ್ಫ್​ ಹಿಟ್ಲರ್​ ಹಾಗೂ ಪ್ರಧಾನಿ ಮೋದಿಯವರ ಫೋಟೋ ಕೊಲಾಜ್​ಮಾಡಿ ಹಾಕಿದ್ದರು. ಮಕ್ಕಳ ಕಿವಿ ಹಿಂಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ, ನಿಮಗೆ ಏನೆನ್ನಿಸುತ್ತದೆ, ಎರಡು ಚಿತ್ರಗಳಲ್ಲಿನ ಹೋಲಿಕೆ ಹೇಗಿದೆ ಎಂದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಹಾಸ್ಯ ನಟ, ಬಿಜೆಪಿ ಬೆಂಬಲಿಗ ಬುಲೆಟ್​ಪ್ರಕಾಶ್, ರಮ್ಯ ಮೇಡಂ, ನೀವು ಚಿಕ್ಕವರಿದ್ದಾಗ ನಿಮ್ಮ ತಂದೆ ಕಿವಿ ಹಿಂಡಿದ್ದರೆ ಇಂದು ನೀವು ಹೀಗಾಗುತ್ತಿರಲಿಲ್ಲ, ಮತ ಹಾಕದವರಿಗೆ ಮೋದಿಯವರ ಬಗ್ಗೆ ಮಾತನಾಡುವ ಹಕ್ಕು ಇಲ್ಲ ಎಂದಿದ್ದರು. ನಂತರ ವಿಡಿಯೋ ಸಂದೇಶ ಕೂಡಾ ಹಾಕಿದ್ದರು.

ಬುಲೆಟ್ ಪ್ರಕಾಶ್​ಅವರ ಟ್ವೀಟಿಗೆ ಪ್ರತಿಕ್ರಿಯೆ ನೀಡಿ, ಪರೋಕ್ಷವಾಗಿ ರಮ್ಯಾಗೆ ತಟ್ಟುವಂತೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಅಂಥವರೆಲ್ಲ ಮಾನಸಿಕ ವಿಕಲಚೇತನರು

ಅಂಥವರೆಲ್ಲ ಮಾನಸಿಕ ವಿಕಲಚೇತನರು

ಸಹೋದರ, ದಾರಿ ತಪ್ಪಿದ ಮಕ್ಕಳನ್ನು ತಿದ್ದಬಹುದು. ಆದರೆ ದಾರಿ ತಪ್ಪಲೆಂದೇ ಹುಟ್ಟಿದ ಮಕ್ಕಳ ತಿದ್ದಬಾರದು. ಹೀಗೆ ದಾರಿ ತಪ್ಪಲು ಹುಟ್ಟಿದ ಮಕ್ಕಳ ಇತಿಹಾಸವೇ ಯಕ್ಷಪ್ರಶ್ನೆ. ಜನನವು ಹೇಗೋ ಹಾಗೇ ಜೀವನ. ಅಂಥ ಮಕ್ಕಳ ಬಗ್ಗೆ ಅನುಕಂಪ ವಹಿಸಬೇಕು. ಅಂಥವರೆಲ್ಲ ಮಾನಸಿಕ ವಿಕಲಚೇತನರು. ಇಂತಹವರನ್ನು ನೋಡಿ ಕೂಡ ಸಂತೋಷ ಪಡುವ ಜನರು ಇರುವುದು ದೌರ್ಭಾಗ್ಯ ಎಂದು ವ್ಯಂಗ್ಯಭರಿತವಾಗಿ ಟ್ವೀಟ್​ ಮಾಡಿದ್ದಾರೆ. ಈ ಮುಂಚೆ ಕೂಡಾ ರಮ್ಯಾರನ್ನು ಮಾನಸಿಕ ಅಸ್ವಸ್ಥೆ ಎಂಬಂತೆ ಜಗ್ಗೇಶ್ ಟ್ವೀಟ್ ಮಾಡಿದ್ದರು.

ಸಹೋದರ ದಾರಿ ತಪ್ಪಿದ ಮಕ್ಕಳ ತಿದ್ದಬಹುದು!

ಸಹೋದರ ದಾರಿ ತಪ್ಪಿದ ಮಕ್ಕಳ ತಿದ್ದಬಹುದು!

ದಾರಿ ತಪ್ಪಲೆ ಹುಟ್ಟಿದ ಮಕ್ಕಳ ತಿದ್ದಬಾರದು!

ಕಾರಣ ದಾರಿ ತಪ್ಪಲು ಹುಟ್ಟಿದ ಮಕ್ಕಳ ಇತಿಹಾಸ ಯಕ್ಷಪ್ರಶ್ನೆ!

ಯತಃ ಜನನ ತಥಃ ಜೀವನ!

ಅನುಕಂಪವಿರಲಿ ಅಂಥ ಮಕ್ಕಳಿಗೆ!

ಕಾರಣ ಮಾನಸಿಕ ವಿಕಲಚೇತರು ಅಂಥ ಮಕ್ಕಳು!

ಇಂತ ಮಕ್ಕಳನ್ನು ನೋಡಿ ಸಂತೋಷಪಡುವ ಒಂದು ವರ್ಗವಿದೆ ದೌರ್ಭಾಗ್ಯ

ಪಾಕಿಸ್ತಾನ ಸ್ವರ್ಗ ಎನ್ನುವ ರಮ್ಯಾ

ಪಾಕಿಸ್ತಾನ ಸ್ವರ್ಗ ಎನ್ನುವ ರಮ್ಯಾ

ವಿಡಿಯೋದಲ್ಲಿ ರಮ್ಯಾ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದ ಬುಲೆಟ್ ಪ್ರಕಾಶ್‍, ರಮ್ಯಾ ಮನಃಸ್ಥಿತಿ ಹೇಗಿದೆ ಅಂದ್ರೆ, ಪಾಕಿಸ್ತಾನ ಸ್ವರ್ಗ ಅಂತಾರೆ. ಇಂತಹವರಿಂದ ನಾವು ಏನು ನಿರೀಕ್ಷಿಸಲು ಸಾಧ್ಯವಿಲ್ಲ. ಇನ್ನು ಮುಂದೆಯಾದ್ರೂ ರಮ್ಯಾ ಮೇಡಂ ರಾಜಕಾರಣದಲ್ಲಿ ಪ್ರಬುದ್ಧತೆ ಬೆಳೆಸಿಕೊಳ್ಳಲಿ ಎಂದಿದ್ದರು.

ನನ್ನ ಮನೆಯ ಮೆಚ್ಚಿನ ಹೆಣ್ಣುಕುಲ

ಈ ಅದ್ಭುತ ಜೀವನ ದೇವರು ನಿಮಗು ದಯಪಾಲಿಸಲಿ!3ಮಾಸ್ಟರ್ ಡಿಗ್ರಿ scientist ಅಪ್ಪ ಅಮ್ಮ ದೇಶ ಬಿಟ್ಟು ನನ್ನ ಮನೆಯ ಮೆಚ್ಚಿನ ಹೆಣ್ಣುಕುಲ!13ಲಕ್ಷ ಸಂಬಳ ತ್ಯಜಿಸಿ ಮಗನ ಪ್ರೀತಿಗಾಗಿ 2ಲಕ್ಷ ಸಂಬಳಕ್ಕೆ ಬಂದು ಅದ್ಭುತ ಮೊಮ್ಮಗನ ನೀಡಿ ಮಾವನ ಜೊತೆ ಭಾರತ್ ಮಾತಾ ಕೀ ಜೈ ಅನ್ನುತ್ತಾಳೆ! ಎಂದು ತಮ್ಮ ಮಗನ ಸಂಸಾರದ ಉದಾಹರಣೆ ಕೊಟ್ಟ ಜಗ್ಗೇಶ್

ಬಿಜೆಪಿ ಬೆಂಬಲಿಗರಿಂದ ಟ್ವೀಟ್

ವಿಧಾನಸಭೆ ಚುನಾವಣೆಗೂ ಮತ ಹಾಕೋಕೆ ಬರಲಿಲ್ಲ , ಆಕೆಯ ರಾಜಕೀಯ ಗುರು ಅಂಬಿ ಅಣ್ಣ ತೀರಿಕೊಂಡಾಗಲು ಬರಲಿಲ್ಲ ,ಈಗ ಲೋಕಸಭಾ ಚುನಾವಣೆಯಲ್ಲು ಮತ ಹಾಕೋಕೆ ಬರಲಿಲ್ಲ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Actor cum BJP leader Jaggesh reacts to AICC social media chief Ramya alias Divya Spanadana's tweet on PM Narendra Modi. Ramya had shared a collage picture of Hitler and Modi with a caption Speaking of similarities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more