ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೋಟ್ ಮಾಡಲು ಅವಕಾಶ ಕೊಡದ ಅಧಿಕಾರಿಗಳಿಗೆ ಧಿಕ್ಕಾರ

|
Google Oneindia Kannada News

ಮತದಾನ ನಿಮ್ಮ ಹಕ್ಕು, ದಾನದಲ್ಲಿ ಶ್ರೇಷ್ಠ ದಾನ ಮತದಾನ, ನಿಮ್ಮ ಒಂದು ಮತ ದೇಶದ ದಿಕ್ಕನ್ನೇ ಬದಲಿಸಬಲ್ಲದು ಮರೆಯದೇ ಮತ ಚಲಾಯಿಸಿ ಹೀಗೆ ಉದ್ದುದ್ದಾ ಭಾಷಣ ಮಾಡುತ್ತಾರೆ ರಾಜಕಾರಣಿಗಳು, ಚುನಾವಣಾ ಅಧಿಕಾರಿಗಳು, ಸೆಲೆಬ್ರಿಟಿಗಳು. ಮುಂತಾದವರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮತಗಟ್ಟೆ ವಿಳಾಸ "ಫುಲಿನ್ ಫಾವ್ಸ್ ಕಾಲೇಜ್ ನಲ್ಲಿರುವ (ಮತಗಟ್ಟೆ 247, ಕ್ರಮ ಸಂಖ್ಯೆ 1123, epic number YER0403816) ಈ ಉರಿ ಬಿಸಿಲಲ್ಲಿ ಸುಮಾರು 2 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು, ವೋಟಿಂಗ್ ಬೂತ್ ಒಳಗೆ ಹೋದರೆ, ಅಲ್ಲಿ ನಡೆಯುವ ಕಥೆಯೇ ಬೇರೆಯಿರುತ್ತದೆ, ಅಲ್ಲಿನ ಅಕ್ರಮಗಳೇ ಬೇರೆಯಿರುತ್ತದೆ.

ಚುನಾವಣಾ ಅಕ್ರಮ ವರದಿ : ಸಿ-ವಿಜಿಲ್ ಆಪ್ ಬಳಸುವುದು ಹೇಗೆ? ಚುನಾವಣಾ ಅಕ್ರಮ ವರದಿ : ಸಿ-ವಿಜಿಲ್ ಆಪ್ ಬಳಸುವುದು ಹೇಗೆ?

ಅಲ್ಲಿನ ಅಧಿಕಾರಿಗಳು ನಿಮ್ಮ ಮತ ಬೆಳಿಗ್ಗೆನೇ ಚಲಾವಣೆಯಾಗಿದೆ. ನಿಮ್ಮದೇ ಹೆಸರಿನ ಇನ್ನೊಬ್ಬರು ಬಂದು ವೋಟ್ ಮಾಡಿದ್ದಾರೆ. ಈಗ ನಿಮಗೆ ವೋಟ್ ಮಾಡುವ ಅವಕಾಶವಿಲ್ಲವೆಂದು ಹೇಳಿದರು. ಅಯ್ಯೋ ಸರ್, ನಾನು ಬರುತ್ತಿರುವುದೇ ಈಗ ಇಷ್ಟ್ಹೊತ್ತು ಕ್ಯೂ ನಲ್ಲಿ ನಿಂತು ಬಂದಿದ್ದೀನಿ. ಅದ್ಹೇಗೆ ಬೇರೆಯವರು ವೋಟ್ ಮಾಡುತ್ತಾರೆ ಅದೂ ಅಲ್ಲದೆ ಮತದಾನದ ಪಟ್ಟಿಯಲ್ಲಿ ಹೆಸರು, ಫೋಟೋ , ಇತ್ಯಾದಿ ದಾಖಲೆಗಳು ಸರಿಯಾಗಿರುವಾಗ. ನನ್ನ ಹಕ್ಕನ್ನು ಕಿತ್ತುಕ್ಕೊಳ್ಳಲು ನೀವ್ಯಾರು ಎಂದು ಪ್ರಶ್ನಿಸಿದರೆ ಅಧಿಕಾರಿಗಳು ಕೊಡುವ ಉತ್ತರ ಹೀಗಿದೆ.

ಈ ಪ್ರಣಾಳಿಕೆಗಳಲ್ಲಿ ಯಾವುದು ನಿಮ್ಮ ಗಮನ ಸೆಳೆದಿದೆ?

ನೋಡಿ, ನಮಗಿರುವ ಸೂಚನೆಯಂತೆ ಮತದಾರರ ಪಟ್ಟಿಯಲ್ಲಿ ಫೋಟೋ ಮಿಸ್ ಮ್ಯಾಚ್ ಆಗಿದ್ದರೆ ಹೆಸರು, ಅಪ್ಪನ ಹೆಸರು ಮತ್ತು ಕ್ರಮ ಸಂಖ್ಯೆಯಷ್ಟೇ ನಾವು ಪರಿಗಣಿಸಿ ಮತದಾನ ಮಾಡಲು ಅವಕಾಶ ಕೊಡುತ್ತೇವೆ. ನೀವು ಬೇಗ ಬರ್ಬೇಕಿತ್ತು. ಬೆಳಿಗ್ಗೆಯಿಂದ ಮೂರ್ನಾಲ್ಕು ಜನಕ್ಕೆ ಈಥರ ಆಗಿದೆ. ನೀವು ಈಗ ಮತ ಮಾಡಲು ಬೇರೆದಾರಿಯೇ ಇಲ್ಲ. ಮುಂದಿನ ಸಲ ವೋಟ್ ಮಾಡಿ ಎಂದು ಉಡಾಫೆಯಿಂದ ಮಾತನಾಡುತ್ತಾರೆ.

Elections 2019 : Fake Voting reported at Bangalore Rural Constituency

ಇದು ಒಂದು ಬೂತಿನ ಕಥೆಯಾದರೆ ಉಳಿದ ಕಡೆಯ್ಲಲೂ ಇದೇರೀತಿ ಅದೆಷ್ಟು ಅಕ್ರಮಗಳು ನಡೆದಿರುತ್ತವೋ , ಅದೆಷ್ಟು ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುತ್ತಾರೋ ? ಇದಕ್ಕೆ ಚುನಾವಣಾ ಸಂಸ್ಥೆಯೇ ಉತ್ತರಿಸಬೇಕು.

ಕೇಂದ್ರ ಚುನಾವಣಾ ಆಯೋಗ ಮೊದಲ ಬಾರಿಗೆ ಸಿ.ವಿಜಿಲ್ (ಜಾಗೃತ ಮತದಾರ ) ಎಂಬ ಮೊಬೈಲ್ ಅಪ್ಲಿಕೇಷನ್ ಪೂರ್ಣಪ್ರಮಾಣವಾಗಿ ಬಳಸುತ್ತಿದೆ. ಚುನಾವಣಾ ಅಕ್ರಮ ಸಂಬಂಧ ಸಾರ್ವಜನಿಕರು ಘಟನೆಗೆ ಸಂಬಂಧಿಸಿದಂತೆ ಲೈವ ಫೋಟೋ/ವೀಡಿಯೋ ಅಪ್​ಲೋಡ್ ಮಾಡಿದರೆ ಸಾಕು, ತಕ್ಷಣವೇ ಮಾಹಿತಿ ಜಿಲ್ಲಾ ಚುನಾವಣಾ ಶಾಖೆಗೆ ರವಾನೆಯಾಗುತ್ತದೆ.

ಆಪ್​ನಲ್ಲಿ ಮಾಹಿತಿದಾರ ಹೆಸರು, ಊರು ಬಹಿರಂಗಪಡಿಸುವುದು ಐಚ್ಛಿಕ. ಯಾವ ಸ್ಥಳದಲ್ಲಿ ಇದನ್ನು ತೆಗೆಯಲಾಗಿದೆ ಎಂಬುದು ಗೂಗಲ್ ಮ್ಯಾಪ್​ನಿಂದ ತಿಳಿದುಬರಲಿದೆ. ಜಿಐಎಸ್ ತಂತ್ರಜ್ಞಾನ ಬಳಸುವ ಈ ಆಪ್ ನಿಂದ ದಾಖಲಾಗುವ ದೂರಿನ ಆಧಾರದ ಮೇಲೆ ಪೊಲೀಸರು ಎಫ್​ಐಆರ್ ದಾಖಲಿಸಿ, ನ್ಯಾಯಾಲಯದಲ್ಲಿ ಸಾಕ್ಷ್ಯ ಒದಗಿಸಬಹುದಾಗಿದೆ.

English summary
Elections 2019: Oneindia employee Raghavendra reports fake voting at Bangalore Rural Constituency today(April 18).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X