• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಬ್ಯಾಕ್ ವರ್ಡ್ ಅಲ್ಲ ಸೂಪರ್ ಕ್ಲಾಸ್ ವ್ಯಕ್ತಿ: ಬಿ ಕೆ ಹರಿಪ್ರಸಾದ್

|

ಬೆಂಗಳೂರು, ಏಪ್ರಿಲ್ 15: 10 ಲಕ್ಷದ ಸೂಟ್ ತೊಡುವ ಪ್ರಧಾನಿ ನರೇಂದ್ರ ಮೋದಿ ಬ್ಯಾಕ್ ವರ್ಡ್ ಕ್ಲಾಸ್ ಅಲ್ಲ ಅವರು ಸುಪರ್ ಕ್ಲಾಸ್ ಎಂದು ಬೆಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರೆಸ್ ಕ್ಲಬ್ ನಲ್ಲಿಂದು ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರ ನಗರದ ಅಭಿವೃದ್ದಿಯ ಬಗ್ಗೆ ಚಕಾರವೆತ್ತದ ಮೋದಿ ಬಾಂಬ್ ಬ್ಲಾಸ್ಟ್ ಗಳನ್ನು ತಡೆದಿದ್ದೇವೆ ಎಂದು ಹೇಳುವುದು ಮೂರ್ಖತನದ ಪರಮಾವಧಿ. ಆದರೆ, ದೇಶದ ಸೇನಾ ನೆಲೆಗಳ ಮೇಲೆ ನಡೆದ ದಾಳಿಗಳ ಬಗ್ಗೆ ಮಾತ್ರ ಮೌನವಹಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಬಿಕೆ ಹರಿಪ್ರಸಾದ್ ಬೆಂಬಲಿಸಲು ನಿರ್ಧರಿಸಿದ ಬ್ರಾಹ್ಮಣರು

ಬೆಂಗಳೂರು ಅದರಲ್ಲೂ ಬೆಂಗಳೂರು ದಕ್ಷಿಣ ಭಾಗ ದೇಶ ಅಷ್ಟೇ ಅಲ್ಲ ಜಗತ್ತಿನಲ್ಲೆ ಹೆಸರುವಾಸಿಯಾಗಿರುವ ಕ್ಷೇತ್ರವಾಗಿದೆ. ಐಟಿ ಬಿಟಿ ಕೇಂದ್ರವಾಗಿರುವ ಈ ಪ್ರದೇಶವನ್ನು ಪ್ರಾಮುಖ್ಯತೆಗೆ ತರಲು ಆಗಿನ ಪ್ರಧಾನಿ ರಾಜೀವ್ ಗಾಂಧಿಯವರು. ಟಿಪ್ಪೂಸುಲ್ತಾನ್ ಹಾಗೂ ಕೆಂಪೇಗೌಡರ ಕಾಲದಲ್ಲಿ ಸಿಲ್ಕ್ ಸಿಟಿಯಾಗಿದ್ದ ಬೆಂಗಳೂರು ನಗರ ಇಂದು ಸಿಲಿಕಾನ್ ಸಿಟಿ ಎಂದು ಹೆಸರುಪಡೆದುಕೊಂಡಿದೆ. ಬೆಂಗಳೂರು ನಗರದ ಅಭಿವೃದ್ದಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಕೊಡುಗೆ ಅಪಾರ ಎಂದರು.

ಬೆಂಗಳೂರು ಇನ್ನೂ ಸ್ಮಾರ್ಟೆಸ್ಟ್ ಸಿಟಿ

ಬೆಂಗಳೂರು ಇನ್ನೂ ಸ್ಮಾರ್ಟೆಸ್ಟ್ ಸಿಟಿ

ದೇಶದಲ್ಲೇ ಅತ್ಯಂತ ಸ್ಮಾರ್ಟೆಸ್ಟ್ ಸಿಟಿ ಬೆಂಗಳೂರು ಬೇರೆ ರಾಜ್ಯದ ನಗರಗಳಿಗೆ ಹೋಲಿಸಿದರೆ ನೂರು ವರ್ಷಗಳಷ್ಟು ಮುಂದಿದೆ. ಇದರ ಅಭಿವೃದ್ದಿಗೆ ಬಿಜೆಪಿ ಪಕ್ಷದ ಕೊಡುಗೆ ಶೂನ್ಯ ಎಂದರು. ಮೋದಿಯವರು ಗುಜರಾತ್ ಮಾದರಿ, ಗುಜರಾತ್ ಮಾದರಿ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ ಇದುವರೆಗೂ ಆ ಮಾದರಿ ಏನು ಎನ್ನುವುದನ್ನು ಮಾತ್ರ ಹೇಳುವುದಿಲ್ಲ. ಸಂಸತ್ತಿನಲ್ಲೂ ಈ ಪ್ರಶ್ನೆಗೆ ಉತ್ತರಿಸುವುದೇ ಇಲ್ಲ ಎಂದರು.

ನಾಲ್ಕೂ ಕಡೆಯಲ್ಲೂ ಉದ್ಯಾನವನಗಳನ್ನು ನಿರ್ಮಿಸುವುದು

ನಾಲ್ಕೂ ಕಡೆಯಲ್ಲೂ ಉದ್ಯಾನವನಗಳನ್ನು ನಿರ್ಮಿಸುವುದು

ಕಳೆದ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರು ನಗರವನ್ನು ಗಾರ್ಬೇಜ್ ಸಿಟಿ, ರೇಪ್ ಸಿಟಿ ಎಂದು ಬಿಂಬಿಸಲು ಅನೇಕ ರಾಜಕಾರಣಿಗಳು ಮುಂದಾಗಿದ್ದರು. ಆದರೆ, ಇಂತಹ ಸುಂದರ ನಗರವನ್ನು ಈ ರೀತಿ ಕೆಟ್ಟ ಹೆಸರು ತರಲು ಮಾಡಿದವರು ದ್ರೋಹಿಗಳು. ನಗರದ ಗತಕಾಲದ ವೈಭವವನ್ನು ವಾಪಾಸ್ಸು ತರುವುದು ನನ್ನ ಮೊದಲ ಗುರಿಯಾಗಿದೆ. ಈ ನಿಟ್ಟಿನಲ್ಲಿ ಲಾಲ್‍ ಬಾಗ್, ಕಬ್ಬನ್ ಪಾರ್ಕ್ ಹೊರತಾಗಿ ನಗರದ ನಾಲ್ಕೂ ಕಡೆಯಲ್ಲೂ ಉದ್ಯಾನವನಗಳನ್ನು ನಿರ್ಮಿಸುವುದು ನಮ್ಮ ಕನಸಾಗಿದೆ. ಬೊಮ್ಮನಹಳ್ಳಿಯಲ್ಲಿ ಇದಕ್ಕೆ ಸಾಕಷ್ಟು ಜಾಗಲಭ್ಯವಿದ್ದು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದೇನೆ ಎಂದರು.

ಕುಡಿಯುವ ನೀರು, ಕಸದ ಸಮಸ್ಯೆ

ಕುಡಿಯುವ ನೀರು, ಕಸದ ಸಮಸ್ಯೆ

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದರ ಪರಿಹಾರಕ್ಕಾಗಿ ಮೇಕೇದಾಟು ಬಳಿ ನಿರ್ಮಿಸಲು ಚಿಂತಿಸಲಾಗಿರುವ ಅಣೆಕಟ್ಟಿನಿಂದ ನೀರು ತರುವುದು ಸೂಕ್ತ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮಟ್ಟದಲ್ಲಿ ಪ್ರಯತ್ನ ಪಡುವುದಾಗಿ ಭರವಸೆ ನೀಡಿದರು.

ಅಲ್ಲದೆ, ದಿನೇ ದಿನೇ ಬೆಳೆಯತ್ತಿರುವ ಬೆಂಗಳೂರು ನಗರದ ಕಸದ ನಿರ್ವಹಣೆಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಬೆಂಗಳೂರು ನಗರ ಈಗ ಅವಕಾಶಗಳ ನಗರವಾಗಿದೆ. ಇದರ ಸೌಂದರ್ಯೀಕರಣಕ್ಕೆ ಮೊದಲ ಆದ್ಯತೆ ನೀಡಬೇಕಾಗಿದೆ. ಜಿಎಸ್ ಟಿ ಹಾಗೂ ನೋಟು ಅಮಾನ್ಯೀಕರಣದಿಂದಾಗಿ ಹೆಚ್ಚು ತೊಂದರೆ ಆಗಿರುವದು ದಕ್ಷಿಣ ಕ್ಷೇತ್ರದಲ್ಲೇ. ಇದರ ಸುಧಾರಣೆಗೂ ಒತ್ತು ನೀಡಲಿದ್ದೇನೆ ಎಂದರು.

ಮೋದಿ ಅನುದಾನದ ಅಗತ್ಯ

ಮೋದಿ ಅನುದಾನದ ಅಗತ್ಯ

ಬೆಂಗಳೂರು ನಗರದಲ್ಲಿ ಮತ್ತಷ್ಟು ಮೂಲಭೂತಸೌಕರ್ಯಗಳನ್ನು ಅಳವಡಿಸಲು ಕೇಂದ್ರ ಸರಕಾರದ ಅನುದಾನದ ಅಗತ್ಯವಿದೆ. ಆದರೆ ಪ್ರಧಾನಿ ಮೋದಿ ಇಂತಹ ವಿಷಯಗಳಲ್ಲಿ ಮೌನವನ್ನು ವಹಿಸುತ್ತಾರೆ. ನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸಮಾವೇಶ ಸ್ಥಳಗಳನ್ನು ನಿರ್ಮಿಸಬೇಕಾಗಿದೆ ಎಂದರು.

ತಮ್ಮ ಅಧಿಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಒಂದೂ ಬಾಂಬ್ ಸ್ಪೋಟಗೊಳ್ಳಲು ಬಿಟ್ಟಿಲ್ಲಾ ಎನ್ನುವ ಹೇಳಿಕೆ ನೀಡುವುದು ಮೂರ್ಖತನದ ಪರಮಾವಧಿ. ದೇಶದ ಸೈನಿಕ ನೆಲೆಗಳ ಮೇಲೆ ಆದ ದಾಳಿಯನ್ನು ಮರೆತಿದ್ದಾರಾ ಎಂದು ಪ್ರಶ್ನಿಸಿದರು.

ಮೇಕೇದಾಟು ಅಣೆಕಟ್ಟು ಯೋಜನೆಯ ಬಗ್ಗೆ ಈಗಾಗಲೇ ಡಿಪಿಆರ್

ಮೇಕೇದಾಟು ಅಣೆಕಟ್ಟು ಯೋಜನೆಯ ಬಗ್ಗೆ ಈಗಾಗಲೇ ಡಿಪಿಆರ್

ನರೇಂದ್ರ ಮೋದಿ ಅವರು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿಗಳು. ಅವರ ಹಿಂದಿರುವ ಕೆಲವು ಸಂಸ್ಥೆಗಳು ಸ್ವಾತಂತ್ರಕ್ಕೂ ಮುನ್ನ ಸಾಧಿಸಲು ಆಗದೇ ಇರುವುದನ್ನು ಮೋದಿಯವರ ಆಡಳಿತಾವಧಿಯಲ್ಲಿ ನೆರವೇರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ ನದಿ ಹಾಗೂ ನೆಲದ ಬಗ್ಗೆ ಪ್ರಶ್ನೆಗಳು ಎದ್ದ ಸಮಯದಲ್ಲಿ ನಾನು ಸಂಸತ್ತಿನಲ್ಲಿ ರಾಜ್ಯದ ಪರವಾಗಿ ವಕಾಲತ್ತು ವಹಿಸಿದ್ದೇನೆ. ಮೇಕೇದಾಟು ಅಣೆಕಟ್ಟು ಯೋಜನೆಯ ಬಗ್ಗೆ ಈಗಾಗಲೇ ಡಿಪಿಆರ್ ಆಗಿದೆ. ಅದರ ಅನುಷ್ಠಾನದ ಬಗ್ಗೆ ಯಾವುದೇ ಪಕ್ಷಗಳು ನಿರ್ಧಾರ ತಗೆದುಕೊಳ್ಳುವುದಿಲ್ಲ. ಜನರು ಅದರ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

10 ಲಕ್ಷ ರೂಪಾಯಿ ಮೌಲ್ಯದ ಸೂಟು ತೊಡುವ ಮೋದಿ

10 ಲಕ್ಷ ರೂಪಾಯಿ ಮೌಲ್ಯದ ಸೂಟು ತೊಡುವ ಮೋದಿ

ದಲಿತರೊಬ್ಬರು ಪ್ರಧಾನಿ ಆಗಿರುವುದನ್ನು ಕಾಂಗ್ರೆಸ್ ಸಹಿಸುತ್ತಿಲ್ಲ ಎನ್ನುವ ಇವರು ಯಾವ ರೀತಿಯಲ್ಲಿ ಬ್ಯಾಕ್ ವರ್ಡ್, 10 ಲಕ್ಷ ರೂಪಾಯಿ ಮೌಲ್ಯದ ಸೂಟು ತೊಡುವ ಇವರು ಸೂಪರ್ ಕ್ಲಾಸಿನವರು ಎಂದು ವ್ಯಂಗ್ಯವಾಡಿದರು.

ಮಾಜಿ ಪ್ರಧಾನಿ ದೇವೇಗೌಡರ ಜೊತೆಯಲ್ಲಿ ನನಗೆ ಬಹಳ ಒಳ್ಳೆಯ ಸಂಬಂಧüವಿದೆ. ಅವರ ಆಶೀರ್ವಾದ ಪಡೆದುಕೊಂಡೇ ನಾನು ಸ್ಪರ್ಧೇಗೆ ಇಳಿದಿದ್ದೇನೆ. ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈಗ ಇರುವ ಪರಿಸ್ಥಿತಿಗಳ ಆಧಾರದಲ್ಲಿ ಹೇಳುವುದಾದರೆ ನಾನು ಗೆಲ್ಲುವು ಸಾಧಿಸಲಿದ್ದೇನೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್‍ನ ಬಲ ಹೆಚ್ಚಾಗಿದೆ. ಜೆಡಿಎಸ್ ಜೊತೆಗೂಡು ಒಗ್ಗಟ್ಟಿನ ಹೋರಾಟದಲ್ಲಿ ನಾವು ಗೆಲ್ಲಲಿದ್ದೇವೆ ಎಂದರು.

ಪ್ರಧಾನಿ ಮೋದಿ 5 ವರ್ಷದಲ್ಲಿ ಏನು ಸಾಧನೆ ಮಾಡಿದ್ದಾರೆ

ಪ್ರಧಾನಿ ಮೋದಿ 5 ವರ್ಷದಲ್ಲಿ ಏನು ಸಾಧನೆ ಮಾಡಿದ್ದಾರೆ

ಪ್ರಧಾನಿ ಮೋದಿ 5 ವರ್ಷದಲ್ಲಿ ಏನು ಸಾಧನೆ ಮಾಡಿದ್ದಾರೆ ಎನ್ನುವುದರ ಬಗ್ಗೆ 15 ನಿಮಿಷಗಳ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಲಿ ಎಂದು ಸವಾಲ್ ಹಾಕಿದ್ದೆ. ಯಾವುದೇ ಭರವಸೆಗಳನ್ನೂ ಈಡೇರಿಸದ ಪ್ರಧಾನಿ ಮಾಧ್ಯಮದವರ ಮುಂದೆ ಬರಲು ಹೆದರುತ್ತಿದ್ದಾರೆ. 56 ಇಂಚಿನ ಎದೆ ಹೊಂದಿರುವ ಪ್ರಧಾನಿ ಪತ್ರಿಕಾಗೋಷ್ಠಿಯನ್ನು ನಡೆಸಿ ತಮ್ಮ ಸಾಧನೆಗಳನ್ನ ಹೇಳಿಕೊಂಡಲ್ಲಿ ಇನ್ನೊಮ್ಮೆ ಅಧಿಕಾರ ನೀಡಲು ಯಾವುದೇ ತಕರಾರಿಲ್ಲ ಎಂದರು.

ಮೋದಿಯವರು ಬೆಂಗಳೂರು ದಕ್ಷಿಣದಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಬಂದಾಗಿ ಅವರ ವಿರುದ್ದ ಹೋರಾಡಲು ನಾನು ಅಭ್ಯರ್ಥಿಯಾಗಿದ್ದೇನೆ. ನನ್ನ ಹೋರಾಟ ಸಂವಿಧಾನ ಹಾಗೂ ಮೀಸಲಾತಿ ತಿದ್ದುಪಡಿ ತರಲು ಹೊರಟಿರುವ ಮೋದಿಯ ವಿರುದ್ದ. ನಾನು ಕಾಂಗ್ರೆಸ್ ಪಕ್ಷದ ಪೀಸ್ ಸೋಡ್ಜರ್ ಅಲ್ಲ - ವಾರ್ ಕಮಾಂಡರ್ ಎಂದರು.

English summary
Bangalore South congress Candidate B.K Hariprasad participated in a media interaction and said Modi is not backward classs, he wears Rs 10 lakh worth suits so he is Super Class.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X