• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮಿತ್ ಶಾ ಮೇಲೆ ನೋಟು ವಿನಿಮಯ ಆರೋಪ ಹೊರೆಸಿದ ಪಾಟೀಲ್

|

ಬೆಂಗಳೂರು 13 ಏಪ್ರಿಲ್ 2019: ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ವಿದೇಶದಲ್ಲಿ 1 ಲಕ್ಷ ಕೋಟಿ ರೂಪಾಯಿಗಳ ಮೂರು ಸರಣಿ ನೋಟುಗಳ ಮುದ್ರಣ ಮಾಡಿ, ಶ್ರೀಮಂತರು ತಮ್ಮ ಬಳಿಯಿದ್ದ ಅಕ್ರಮ ಹಣವನ್ನು ಕಾನೂನು ಬದ್ದವಾಗಿ ಸಕ್ರಮ ಮಾಡಿಕೊಳ್ಳಲು ನೀಡಿದ ದುರ್ವವ್ಯವಹಾರ ನಡೆದಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಕೆ ಪಾಟೀಲ್ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ವಿ ಆರ್ ಸುದರ್ಶನ್, ಜೆ ನಂಜಯ್ಯಮಠ್ ಭಾಗವಹಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಕೇಂದ್ರ ಸರಕಾರದ ಅಧಿಕಾರಿಗಳನ್ನು ಬಳಸಿಕೊಂಡು ನಡೆಸಿದ್ದಾರೆ ಎನ್ನಲಾದ ಹಗರಣದ ಬಗ್ಗೆ ದಾಖಲಾತಿಗಳನ್ನು ಬಿಡುಗಡೆಗೊಳಿಸಿದರು.

ಡೀನೋಟಿಫಿಕೇಷನ್, ಡೀಮಾನಿಟೈಸೇಷನ್ ಬಿಜೆಪಿ ಫಲ : ಎಚ್.ಕೆ.ಪಾಟೀಲ್

10 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ ಖ್ಯಾತ ಆರ್ಥಿಕ ತಜ್ಞರಾದ ಮನಮೋಹನ ಸಿಂಗ್ ಅವರು ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸುವ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ಅಮೇರಿಕಾ ಆರ್ಥಿಕ ವ್ಯವಸ್ಥೆ ಬುಡಮೇಲು ಆಗುವ ಸಂಧರ್ಭದಲ್ಲಿ ಅದನ್ನು ಉಳಿಸಲು ಸಲಹೆ ನೀಡಿದ್ದು ಮನಮೋಹನ ಸಿಂಗ್ ಎಂದು ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಶ್ಲಾಘಿಸಿದ್ದರು. ಆದರೆ ಕಳೆದ 5 ವರ್ಷಗಳಲ್ಲಿ ನಮ್ಮ ದೇಶದ ಅರ್ಥಿಕ ವ್ಯವಸ್ಥೆ ಅರಾಜಕತೆಯತ್ತ ಸಾಗುವಂತೆ ಮಾಡಿರುವುದು ಪ್ರಧಾನಿ ಮೋದಿ ಅವರ ಮಹತ್ ಸಾಧನೆ ಎಂದು ಹೆಚ್ ಕೆ ಪಾಟೀಲ್ ವಿಷಾದ ವ್ಯಕ್ತಪಡಿಸಿದರು.

ಮೋದಿಯನ್ನು ತಕ್ಷಣ ಚುನಾವಣೆಯಿಂದ ಅನರ್ಹಗೊಳಿಸಿ : ಎಚ್ಕೆ ಪಾಟೀಲ್

ಮನಮೋಹನ ಸಿಂಗ್ ಅವರ ಅಧಿಕಾರಾವಧಿಯಲ್ಲಿ ದೇಶದಲ್ಲಿ ಇದ್ದ ಉದ್ಯೋಗದ ಸಂಖ್ಯೆ 40.79 ಕೋಟಿ. ಕಳೆದ 5 ವರ್ಷಗಳಲ್ಲಿ ಇದರ ಪ್ರಮಾಣ 39.9 ಕ್ಕೆ ಇಳಿದಿದೆ. ಈ ಅಂಕಿ ಸಂಖ್ಯೆಗಳನ್ನು ಗಮನಿಸಿದಲ್ಲಿ ದೇಶದಲ್ಲಿ ಉದ್ಯೋಗ ಪ್ರಮಾಣ 1.90 ಕೋಟಿಗಳಷ್ಟು ಇಳಿಮುಖ ವಾಗಿರುವುದನ್ನು ಕಾಣಬಹುದಾಗಿದೆ.

ಪ್ರತಿವರ್ಷ 2 ಕೋಟಿ ಉದ್ಯೋಗ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಮೋದಿ ಅವರ ಭರವಸೆ ಈಡೇರಿಸುವುದು ಇದೆಯೇ ಎಂದು ಪ್ರಶ್ನಿಸಿದರು.

ಸ್ವತಂತ್ರ ಭಾರತದ ಅತಿದೊಡ್ಡ ಹಗರಣವಾಗಿದೆ

ಸ್ವತಂತ್ರ ಭಾರತದ ಅತಿದೊಡ್ಡ ಹಗರಣವಾಗಿದೆ

ಈ ಮೇಲಿನ ಅಂಕಿ ಸಂಖ್ಯೆಗಳು ಯಾವುದೋ ಖಾಸಗಿ ಸಂಸ್ಥೆಗಳ ನೀಡಿರುವುದಲ್ಲ. ಕೇಂದ್ರ ಸರಕಾರದ ಅಧೀನದಲ್ಲಿರುವ ಇಲಾಖೆಗಳೇ ಇವುಗಳನ್ನು ಬಹಿರಂಗಪಡಿಸಿವೆ. ಇವುಗಳ ಬಗ್ಗೆ ಚಕಾರವನ್ನು ಎತ್ತದೇ ಇರುವ ಮೋದಿ, ಇಲಾಖೆಗಳು ಸಂಶೋದನೆ ನಡೆಸುವ ಪ್ಯಾರಾ ಮೀಟರ್‍ಗಳನ್ನೇ ಬದಲಾಯಿಸುವ ಮಟ್ಟಕ್ಕೂ ಇಳಿದಿರುವುದು ದುರಾದೃಷ್ಟಕರ ಎಂದರು.

ನೋಟು ಅಮಾನ್ಯೀಕರಣದಿಂದ ದೇಶಧ ಆರ್ಥಿಕ ವ್ಯವಸ್ಥೆಯ ಮೇಲೆ ಆಗುತ್ತಿರುವ ನಕಾರಾತ್ಮಕ ಪರಿಣಾಮಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ನಾವು ವರದಿಗಳನ್ನು ನೋಡುತ್ತಿದ್ದೇವೆ. ಗರಿಷ್ಠ ಮುಖಬೆಲೆಯ ನೋಟು ಅಮಾನ್ಯೀಕರಣ ಸ್ವತಂತ್ರ ಭಾರತದ ಅತಿದೊಡ್ಡ ಹಗರಣವಾಗಿದೆ.

ಶ್ರೀಮಂತರಿಗೆ ಅಕ್ರಮ- ಸಕ್ರಮ ಅವಕಾಶ

ಶ್ರೀಮಂತರಿಗೆ ಅಕ್ರಮ- ಸಕ್ರಮ ಅವಕಾಶ

500 ಮತ್ತು 1000 ರೂಪಾಯಿ ಮುಖಬೆಲೆಯ ನೋಟು ನಿಷೇಧದ ಹೆಸರಿನಲ್ಲಿ ದೇಶದ ಅರ್ಥವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಜೊತೆಗೆ ಆರ್ಥಿಕ ಅಪರಾಧೀಕರಣದ ಮೂಲಕ ಬಡವರ ಮೇಲೆ ದಾಳಿ ನಡೆಸಲಾಗಿದೆ. ನೋಟು ನಿಷೇಧವು ಶ್ರೀಮಂತರು ತಮ್ಮ ಬಳಿಯಿದ್ದ ಅಕ್ರಮ ಹಣವನ್ನು ಕಾನೂನುಬದ್ದವಾಗಿ ಸಕ್ರಮ ಮಾಡಿಕೊಳ್ಳಲು ನೀಡಿದ ಅವಕಾಶವಾಯಿತು ಎಂಬಂತೆ ದುರ್ ವ್ಯವಹಾರ ನಡೆದಿದೆ ಎಂದರು.

ಮೋದಿ ಒಬ್ಬ ವಚನಭ್ರಷ್ಟ, ಪ್ರಣಾಳಿಕೆ ಸುಳ್ಳಿನ ಸರಮಾಲೆ : ಎಚ್ಕೆ ಪಾಟೀಲ್

ಕುಟುಕು ಕಾರ್ಯಾಚರಣೆಯಲ್ಲಿ ಎಲ್ಲಾ ಬಯಲು

ಕುಟುಕು ಕಾರ್ಯಾಚರಣೆಯಲ್ಲಿ ಎಲ್ಲಾ ಬಯಲು

ನೋಟು ನಿಷೇಧ ಪ್ರಕ್ರಿಯೆ ಉದ್ಯಮಪತಿಗಳ ಬಳಿಯಿದ್ದ ಅಕ್ರಮ ಸಂಪತ್ತನ್ನು ಸಕ್ರಮಗೊಳಿಸುವ ವ್ಯವಸ್ಥಿತ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಈ ಕುಕೃತ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲೇ ಸಿದ್ದಗೊಂಡಿತು ಎನ್ನುವ ಆಘಾತಕಾರಿಯಾದ ಅಂಶ ಈಗ ಬೆಳಕಿಗೆ ಬಂದಿದೆ. ದೇಶದ ಕೆಲವು ಹೆಸರಾಂತ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಉತ್ಸಾಹಿ, ಕ್ರೀಯಾಶೀಲ ತನಿಖಾ ವರದಿಗಾರರು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಇಡೀ ಕರ್ಮಕಾಂಡ ಅನಾವರಣಗೊಂಡಿದೆ. ಈ ಕರ್ಮಕಾಂಡದ 18 ವಿಡಿಯೋಗಳು ವೆಬ್ ನಲ್ಲಿ ಲಭ್ಯವಿವೆ.

ಮೂರು ಲಕ್ಷ ಕೋಟಿ ರೂಪಾಯಿ ನೋಟು ವಿನಿಮಯ

ಮೂರು ಲಕ್ಷ ಕೋಟಿ ರೂಪಾಯಿ ನೋಟು ವಿನಿಮಯ

ಮೊದಲ ವಿಡಿಯೋದಲ್ಲಿ ವಿವರಿಸಿರುವಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಉಸ್ತುವಾರಿಯಲ್ಲೇ, ಜಯ್ ಶಾ ಪಾಲ್ಗೊಳ್ಳುವಿಕೆಯ ಮೂಲಕ ವಹಿವಾಟು ನಡೆದಿರುವುದು ಸ್ಪಷ್ಟವಾಗಿದೆ. ಇದಕ್ಕಾಗಿ ಕೇಂದ್ರ ಗುಪ್ತಚರ ಸಂಸ್ಥೆ (RAW) ಮೊದಲಾದ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ದುರ್ಬಳಕೆ ಮಾಡಲಾಯಿತು. ರಾ ಅಧಿಕಾರಿ ರಾಹುಲ್ ರಥೇರ್ಕರ್ ಜೊತೆ ಟಿ ಎನ್ ಎನ್ ವರ್ಲ್ಡ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಮೂರು ಲಕ್ಷ ಕೋಟಿ ರೂಪಾಯಿ ನೋಟು ವಿನಿಮಯದ ಕರಾಳ ಚಿತ್ರಣ ಹೊರಬಿದ್ದಿದೆ. ಈ ಸಂಗತಿ ವಿಡಿಯೋದಲ್ಲಿ ದಾಖಲಾಗಿದೆ.

'ಮೈತ್ರಿ ಒಪ್ಪಂದ ಅರೇಂಜ್ಡ್ ಕಮ್ ಹಳ್ಳಿ ಲವ್ ಮ್ಯಾರೇಜು': ಎಚ್ಕೆ ಪಾಟೀಲ್

3 ಸರಣಿ ನೋಟುಗಳನ್ನು ವಿದೇಶದಲ್ಲಿ ಮುದ್ರಣ

3 ಸರಣಿ ನೋಟುಗಳನ್ನು ವಿದೇಶದಲ್ಲಿ ಮುದ್ರಣ

1 ಲಕ್ಷ ಕೋಟಿ ರೂಪಾಯಿಗಳ ಮೂರು ಸರಣೀ ನೋಟುಗಳನ್ನು ವಿದೇಶದಲ್ಲಿ ಮುದ್ರಣ ಮಾಡಲಾಯಿತು. ವಿದೇಶದಲ್ಲಿ ಮುದ್ರಣಗೊಂಡ ಮೂರು ಲಕ್ಷ ಕೋಟಿ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ವಾಯುಪಡೆಗೆ ಸೇರಿದ ಸರಕು ಸಾಗಣೆ ವಿಮಾನಗಳ ಮೂಲಕ ದೆಹಲಿಯ ಹಿಂಡನ್ ವಾಯುನೆಲೆಗೆ ತರಲಾಯಿತು ಎಂಬ ಸಂಗತಿ ವಿಡಿಯೋದಲ್ಲಿ ಸ್ಪಷ್ಟವಾಗಿದೆ.

ನೋಟುಗಳ ಸಾಗಾಣಿಕೆ ಮತ್ತು ವಿನಿಮಯ ಪ್ರಕ್ರಿಯೆ ಅಮಿತ್ ಶಾ ಉಸ್ತುವಾರಿಯಲ್ಲೇ ನಡೆಯುತ್ತದೆ. ಇದಕ್ಕಾಗಿ ವಿನಿಮಯ ವ್ಯವಹಾರದ ಕಮಿಷನ್ ಶೇ 15 ರಿಂದ 40 ಕ್ಕೆ ಹೆಚ್ಚಳವಾಯಿತು ಎಂದು ವಿಡಿಯೋದಲ್ಲಿನ ವ್ಯಕ್ತಿ ವಿವರಿಸುತ್ತಾರೆ.

ಇದು ಅತ್ಯಂತ ದೊಡ್ಡ ಹಗರಣ

ಇದು ಅತ್ಯಂತ ದೊಡ್ಡ ಹಗರಣ

ವಿದೇಶದಲ್ಲಿ ಮುದ್ರಿಸಲ್ಪಟ್ಟ ಹಣವನ್ನು ವಾಯುಪಡೆ ವಿಮಾನಗಳ ಮೂಲಕ ಹಿಂಡೇನ್ ವಾಯುನೆಲೆಗೆ ತರಲಾಗುತ್ತದೆ. ಅಲ್ಲಿಂದ ವಿವಿಧ ಇಲಾಖೆಗಳ ಅಧಿಕಾರಿಗಳ ಮೂಲಕ ಮಹರಾಷ್ಟ್ರದ ಗೋದಾಮಿಗೆ ಸಾಗಿಸಲಾಗುತ್ತದೆ ಅಲ್ಲಿಂದ ವಿವಿಧ ಬ್ಯಾಂಕುಗಳಿಗೆ ಹಣ ವರ್ಗಾವಣೆಯಾಗುತ್ತದೆ ಎಂಬ ಸಂಗತಿ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಹಗರಣವೆಂದು ಕರೆಯಬೇಕಾಗುತ್ತದೆ. ಆಡಳಿತ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಕೃಪಾಶೀರ್ವಾದದಿಂದಲೇ ಈ ದುರ್ವವ್ಯಹಾರ ನಡೆದಿರುವುದು ವಿಡಿಯೋದ ಮಾಹಿತಿಯಲ್ಲಿ ಸ್ಪಷ್ಟವಾಗಿದೆ. ಇಂತಹ ದುಷ್ಕೃತ್ಯದ ಮೂಲಕ ದೇಶದ ಆರ್ಥವ್ಯವಸ್ಥೆಯ ಮೇಲೆ ಗಧಾಪ್ರಹಾರ ಮಾಡಲಾಗಿದೆ.

ತನಿಖೆಗೆ ಅಗ್ರಹ

ತನಿಖೆಗೆ ಅಗ್ರಹ

ಕುಟುಕು ಕಾರ್ಯಾಚರಣೆಯ ದೃಶ್ಯಗಳು, ಹಣಕಾಸಿನ ದುವ್ರ್ಯವಹಾರದ ವಿವರಗಳನ್ನು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಅವಗಾಹನೆಗೆ ಕಳುಹಿಸಿದ್ದೇವೆ. ಜೊತೆಗೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಸಹೋದ್ಯೋಗಿ ನ್ಯಾಯಮೂರ್ತಿಗಳಿಗೂ ಕಳುಹಿಸಿದ್ದೇವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪೂರ್ಣ ಪ್ರಮಾಣದ, ಅತ್ಯಂತ ಉನ್ನತಮಟ್ಟದ ತನಿಖೆ ನಡೆಸಿ, ಸತ್ಯವನ್ನು ಕಂಡುಹಿಡಿದು, ಸೂಕ್ತ ಕ್ರಮ ಜರುಗಿಸಬೇಕೆಂದು ಕೋರಿದ್ದೇವೆ.

ವ್ಯಾಪಂ ಸಾಕ್ಷಿಗಳಿಗೆ ಬಂದ ಗತಿ

ವ್ಯಾಪಂ ಸಾಕ್ಷಿಗಳಿಗೆ ಬಂದ ಗತಿ

ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿಗಳು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸೂಕ್ತವೆನಿಸುವ ಕ್ರಮಕ್ಕೆ ಆದೇಶಿಸಬೇಕು. ಈ ಹಗರಣವನ್ನು ರಾಷ್ಟ್ರದ ಹಿತಾಸಕ್ತಿಯ ವಿಶೇಷ ಪ್ರಕರಣವೆಂದು ಪರಿಗಣಿಸಿ ಅಗತ್ಯವೆನ್ನಿಸುವ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದೇವೆ ಎಂದು ಹೆಚ್ ಕೆ ಪಾಟೀಲ್ ತಿಳಿಸಿದರು.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಲವು ಆತಂಕಗಳು ನಮ್ಮನ್ನು ಕಾಡುತ್ತಿವೆ. ನ್ಯಾಯಮೂರ್ತಿ ಲೋಯಾ ಪ್ರಕರಣದಲ್ಲಿ ಸಂಭವಿಸಿದ ಸಾವು ಮತ್ತು ಮಧ್ಯಪ್ರದೇಶದ ವ್ಯಾಪಂ ಹಗರಣದ ಸಾಕ್ಷಿಗಳಿಗೆ ಬಂದೊದಗಿದ ಗತಿಯೇ ಈ ಕುಟುಕು ಕಾರ್ಯಾಚರಣೆಯಲ್ಲಿರುವ ವ್ಯಕ್ತಿಗಳಿಗೆ ಬರಬಹುದೆಂಬ ಭಯ ಉಂಟಾಗಿದೆ.

ಎಚ್ಕೆ ಪಾಟೀಲ್ ಚಾಣಾಕ್ಷತನ, ಯಡಿಯೂರಪ್ಪ ಆಪ್ತ ಈಗ ಕಾಂಗ್ರೆಸ್ ಪಾಲು

ನ್ಯಾಯಾಲಯದ ನಿಗಾದಲ್ಲಿ ತನಿಖೆ

ನ್ಯಾಯಾಲಯದ ನಿಗಾದಲ್ಲಿ ತನಿಖೆ

ಆದ್ದರಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಗರಣದ ಯಾವುದೇ ದಾಖಲೆ ನಾಶವಾಗದಂತೆ ನ್ಯಾಯಾಲಯದ ನಿಗಾದಲ್ಲಿ ಅತ್ಯನ್ನತ ಮಟ್ಟದ ತನಿಖೆಗಾಗಿ ಆದೇಶಿಸುವಂತೆ ಪ್ರಾರ್ಥಿಸಿದ್ದೇನೆ. ಕಾರ್ಯಾಚರಣೆಯಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳೀಗೆ ಯಾವುದೇ ಹಾನಿಯಾಗದಂತೆ ಅತ್ಯನ್ನತ ಭದ್ರತೆ ಒದಗಿಸಲು ಆದೇಶ ನೀಡಬೇಕು. ಈ ಹಗರಣದ ಬಗ್ಗೆ ಸರ್ವೋಚ್ಚ ನ್ಯಾಯಾಲದ ಮೇಲುಸ್ತುವಾರಿಯಲ್ಲಿ ಕಾನೂನು ಪ್ರಕ್ರಿಯೆಯ ಮೂಲಕ ತ್ವರಿತ ಹಾಗೂ ಉನ್ನತ ಮಟ್ಟದ ಪಾರದರ್ಶಕ ತನಿಖೆಗೆ ಆದೇಶಿಸಬೇಕು ಎಂದು ಪ್ರಾರ್ಥಿಸಿದ್ದೇನೆ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Elections 2019: KPCC campaign Committee chairman HK Patil alleged that BJP President Amit Shah illegally transferred over Rs 1 Lakh Cr Indian currency via his son's shell companies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more