ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

RR ನಗರ ಕ್ಷೇತ್ರ: 9746 ವೋಟರ್ ಐಡಿ ಪತ್ತೆ, ಆಯೋಗದಿಂದ ತುರ್ತು ಸುದ್ದಿಗೋಷ್ಠಿ

By Mahesh
|
Google Oneindia Kannada News

Recommended Video

Karnataka Elections 2018 : ಬೆಂಗಳೂರಿನ ಆರ್ ಆರ್ ನಗರದಲ್ಲಿ 9,746 ನಕಲಿ ವೋಟರ್ ಐ ಡಿ ಪತ್ತೆ

ಬೆಂಗಳೂರು, ಮೇ 08: 'ಜಾಲಹಳ್ಳಿಯ ಮನೆಯೊಂದರಲ್ಲಿ ಸಾವಿರಾರು ವೋಟರ್ ಐಡಿ ಕಾರ್ಡ್ ಪತ್ತೆಯಾಗಿರುವುದು ಗಂಭೀರ ಪ್ರಕರಣವಾಗಿದ್ದು, ಇದರ ಹಿಂದೆ ಇರುವ ವ್ಯಕ್ತಿಯನ್ನು ಪತ್ತೆ ಹಚ್ಚುತ್ತೇವೆ. ಚುನಾವಣೆ ಮುಂದೂಡಿಕೆ ಬಗ್ಗೆ ತಕ್ಷಣಕ್ಕೆ ನಿರ್ಧಾರ ಸಾಧ್ಯವಿಲ್ಲ' ಎಂದು ರಾಜ್ಯ ಚುನಾವಣಾ ಆಯೋಗದ ಆಧ್ಯಕ್ಷ ಸಂಜೀವ್ ಕುಮಾರ್ ಅವರು ಮಧ್ಯರಾತ್ರಿ ನಡೆಸಿದ ತುರ್ತು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಾಚರಣೆ ನಡೆಸಿರುವ ಚುನಾವಣಾ ವಿಚಕ್ಷಣ ದಳದ ಅಧಿಕಾರಿಗಳು, ಇಂದು ಸುಮಾರು ಸಾವಿರಾರು ಮತದಾರರ ನಕಲಿ ಗುರುತಿನ ಚೀಟಿ ವಶಪಡಿಸಿಕೊಂಡಿದ್ದಾರೆ.


ಈ ಪೈಕಿ 9746 ಐಡಿಗಳು, ಸಣ್ಣ ಸಣ್ಣ ಬಂಡಲ್ ಗಳಲ್ಲಿ ಸಿಕ್ಕಿವೆ. ಇವೆಲ್ಲವೂ ಅಸಲಿ ಮತದಾನ ಗುರುತಿನ ಚೀಟಿಗಳಾಗಿವೆ. ಹಾಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಈ ಮತದಾರರ ಗುರುತಿನ ಚೀಟಿಗಳನ್ನು ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸಂಜೀವ್ ಕುಮಾರ್ ಸೇರಿದಂತೆ ಮೂವರು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಒನ್ಇಂಡಿಯಾ ಫೇಸ್ಬುಕ್ ಸಮೀಕ್ಷೆ: ಆರ್ ಆರ್ ನಗರದಲ್ಲಿ ಜೆಡಿಎಸ್ ಗೆ ಜಯಒನ್ಇಂಡಿಯಾ ಫೇಸ್ಬುಕ್ ಸಮೀಕ್ಷೆ: ಆರ್ ಆರ್ ನಗರದಲ್ಲಿ ಜೆಡಿಎಸ್ ಗೆ ಜಯ

ಮತದಾರರಿಗೆ ಹಂಚಲು ತಂದಿದ್ದ ಟೀಶರ್ಟ್, ಪ್ಯಾಂಟ್, 5 ಲ್ಯಾಪ್ ಟಾಪ್, ಪ್ರಿಂಟರ್, ಮತದಾರರ ಪಟ್ಟಿಗೆ ಸೇರಿಸಲು ಬೇಕಾದ ಫಾರ್ಮ್ ನಂಬರ್ 6ಗಳು(ಲಕ್ಷ ಸಂಖ್ಯೆಗಳಲ್ಲಿ) ಲಭ್ಯವಾಗಿದೆ. ಅಸಲಿ ಮತದಾರರ ಗುರುತಿನ ಚೀಟಿಗಳನ್ನು ಬಳಸಿಕೊಂಡು ನಕಲಿ ಐಡಿ ವಿನ್ಯಾಸಗೊಳಿಸುವ ಸೆಟ್ ಅಪ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಫ್ಲಾಟ್ ನಲ್ಲಿದ್ದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

Tens of thousands of fake voter ID found Rajarajeshwari Nagara Constituency

ರಾಜರಾಜೇಶ್ವರಿ ನಗರಕ್ಕೆ ಸೇರಿದ ಆರೋಪಿಗಳು ಸಾರ್ವಜನಿಕರಿಗೆ ನಕಲಿ ಗುರುತಿನ ಚೀಟಿ ಮಾಡಿಕೊಡುತ್ತಿದ್ದರು. ಕೆಲವರನ್ನು ಬೆದರಿಸಿ ಗುರುತಿನ ಚೀಟಿ ಪಡೆದುಕೊಂಡಿದ್ದರು. ಮತದಾರರನ್ನು ಬೆದರಿಸಿ ನಕಲಿ ಗುರುತಿನ ಚೀಟಿ ಮೂಲಕ ಮತ ಹಾಕಿಸುವ ಸಂಚು ರೂಪಿಸಿದ್ದರು ಎನ್ನಲಾಗಿದೆ.

ಜಾಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ಎಸ್ಎಲ್ ವಿ ಪಾರ್ಕ್ ವ್ಯೂ ಅಪಾರ್ಟ್ಮೆಂಟ್ ನಲ್ಲಿ ಮಂಜುಳಾ ನಂಜಾಮರಿ ಎಂಬುವರಿಗೆ ಸೇರಿರುವ ಮನೆಯಲ್ಲಿ ಈ ಅಕ್ರಮ ನಡೆದಿದೆ.

ರಾಜರಾಜೇಶ್ವರಿ ನಗರ : ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಪರಿಚಯರಾಜರಾಜೇಶ್ವರಿ ನಗರ : ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಪರಿಚಯ

ಮನೆಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಮತದಾರರ ನಕಲಿ ಗುರುತಿನ ಚೀಟಿ ಪತ್ತೆಯಾದ ಹಿನ್ನಲೆಯಲ್ಲಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಿ.ಜೆ.ಪಿ ಹಾಗೂ ಜೆಡಿಎಸ್ ಆಗ್ರಹಿಸಿದೆ.

English summary
Tens of thousands of fake voter ID found Rajarajeshwari Nagara Constituency, Election commission is probing it said CEC of Karnataka Sanjeev Kumar. BJP demands countermanding of elections in AC 154 Raj Rajeshwari Nagar in light of latest revelations of tens of thousands of fake voter ID and empty packets of hard currency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X