ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾ ಅಕ್ರಮ : ಶಾಸಕ ಮುನಿರತ್ನಗೆ ಬಂಧನ ಭೀತಿ!

By Mahesh
|
Google Oneindia Kannada News

ಬೆಂಗಳೂರು, ಮೇ 13: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮದ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಮುನಿರತ್ನ ನಾಯ್ಡು ಅವರಿಗೆ ಬಂಧನ ಭೀತಿ ಎದುರಾಗಿದೆ.

ಜಾಲಹಳ್ಳಿಯ ಎಸ್ಎಲ್ ವಿ ಅಪಾರ್ಟ್‌ವೆುಂಟ್‌‌‌ನಲ್ಲಿ ನಕಲಿ ವೋಟರ್‌ ಕಾರ್ಡ್ ಪತ್ತೆ ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರು ಪ್ರಮುಖ ಆರೋಪಿಯಾಗಿಲ್ಲ. ಆದರೆ, ಮುನಿರತ್ನ ಅವರ ವಿರುದ್ಧ ವಂಚನೆ ಪ್ರಕರಣದಡಿಯಲ್ಲಿ ತನಿಖೆ ಕೈಗೊಳ್ಳುವಂತೆ 7ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ಇದಲ್ಲದೆ, ಕಾರ್ಯಕರ್ತರ ನಡುವಿನ ಗಲಭೆ, ಹಲ್ಲೆ ಪ್ರಕರಣದಲ್ಲೂ ಮುನಿರತ್ನ ಅವರ ಹೆಸರು ಸೇರಿಕೊಂಡಿದೆ.

RR ನಗರ ಚುನಾವಣೆ ಮುಂದೂಡಿಕೆ, ನನ್ನ ವಿರುದ್ಧ ಷಡ್ಯಂತ್ರ: ಮುನಿರತ್ನRR ನಗರ ಚುನಾವಣೆ ಮುಂದೂಡಿಕೆ, ನನ್ನ ವಿರುದ್ಧ ಷಡ್ಯಂತ್ರ: ಮುನಿರತ್ನ

ಆದರೆ, ಇದೆಲ್ಲವೂ ಪ್ರಕರಣದ ತನಿಖಾಧಿಕಾರಿಯ ಮೇಲೆ ಅವಲಂಬಿತವಾಗಿದೆ. ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಬೇಕೆಂದೆನಿಲ್ಲ. ನಿರೀಕ್ಷಣಾ ಜಾಮೀನು ಪಡೆಯಲು ಅವಕಾಶ ಕೂಡ ಇದೆ.

Elections 2018 : Rajarajeshwari Nagar Poll Deferred : MLA Munirathna fears detention

ಘಟನೆ ಹಿನ್ನಲೆ : ಮೇ 8ರಂದು ಜಾಲಹಳ್ಳಿ ಅಪಾರ್ಟ್‌ವೆುಂಟ್‌‌‌ನಲ್ಲಿ ಅಕ್ರಮ ಪತ್ತೆಹಚ್ಚಲು ಹೋಗಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿತ್ತು. ಈ ಸಂಬಂಧ ಬಿಜೆಪಿ ಮುಖಂಡ ರಾಕೇಶ್, ಕೊಟ್ಟ ದೂರಿನ ಮೇರೆಗೆ ಜಾಲಹಳ್ಳಿ ಪೊಲೀಸರು, ಯಶವಂತಪುರ ಪಾಲಿಕೆ ಕಾಂಗ್ರೆಸ್ ಸದಸ್ಯ ವೆಂಕಟೇಶ್ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಿ, ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

ಆರ್.ಆರ್.ನಗರ ಚುನಾವಣೆ ಮುಂದೂಡಲು ಕಾರಣಗಳುಆರ್.ಆರ್.ನಗರ ಚುನಾವಣೆ ಮುಂದೂಡಲು ಕಾರಣಗಳು

ಇದನ್ನು ಪ್ರಶ್ನಿಸಿ ದೂರುದಾರ ರಾಕೇಶ್, ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿ, ಶಾಸಕ ಮುನಿರತ್ನರನ್ನು ಆರೋಪಿ ಮಾಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಹಲ್ಲೆ ಪ್ರಕರಣದಲ್ಲಿ ಮುನಿರತ್ನರನ್ನು ಆರೋಪಿ ಮಾಡುವಂತೆ ಸೂಚಿಸಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರ ಚುನಾವಣೆ ಮುಂದೂಡಿಕೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಚುನಾವಣೆ ಮುಂದೂಡಿಕೆ

ನಾಳೆ ಮೇ 12ರಂದು ನಡೆಯಬೇಕಿದ್ದ ಮತದಾನ ರದ್ದಾಗಿದ್ದು, ಮೇ 28ರಂದು ಮತದಾನ ನಡೆಯಲಿದೆ. ಮೇ 31ರಂದು ಫಲಿತಾಂಶ ಹೊರ ಬರಲಿದೆ.ಜಾಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ಎಸ್ಎಲ್ ವಿ ಪಾರ್ಕ್ ವ್ಯೂ ಅಪಾರ್ಟ್ಮೆಂಟ್ ನಲ್ಲಿ 9,746 ಮತದಾರರ ಗುರುತಿನ ಚೀಟಿ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ಜಾರಿಯಲ್ಲಿದೆ.

English summary
Rajarajeshwari Nagar Poll Deferred : MLA Munirathna fears detention in connection with Voter ID seize case.Elections for the Rajarajeshwari Nagar seat in Bengaluru deferred to May 28 with counting to take place on May 31.s
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X