ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹದೇವಪುರ: ಸ್ಥಳೀಯರಿಗೆ ಟಿಕೆಟ್ ಕೊಡದಿದ್ದರೆ, ಗೆಲುವು ಕಷ್ಟ!

By Mahesh
|
Google Oneindia Kannada News

ಬೆಂಗಳೂರು ಮಾರ್ಚ್ 19: ಕಾಂಗ್ರೆಸ್ ಕ್ಷೇತ್ರವಾಗಿರುವ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳೀಯ ಹಾಗೂ ಸುಶಿಕ್ಷಿತ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎನ್ನುವ ಕೂಗು ಮತ್ತೆ ಎದ್ದಿದೆ.

ಮಹದೇವಪುರ ಕ್ಷೇತ್ರದಲ್ಲಿ ಹೊರಗಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಎರಡು ಬಾರಿ ಕಾಂಗ್ರೆಸ್ ಸೋಲನ್ನ ಅನುಭವಿಸಿದ್ದು, ಇದೀಗ ಸ್ಥಳೀಯ ಹಾಗೂ ಸುಶಿಕ್ಷಿತ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಲೇ ಬೇಕು ಎಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಮುಖಂಡರುಗಳು ಒತ್ತಾಯಿಸಿದ್ದಾರೆ.

ನಕಲಿ ಮತಚೀಟಿ ಹಾವಳಿ ತಡೆಗೆ ಎಎಪಿ ಹೆಲ್ಪ್ ಲೈನ್ನಕಲಿ ಮತಚೀಟಿ ಹಾವಳಿ ತಡೆಗೆ ಎಎಪಿ ಹೆಲ್ಪ್ ಲೈನ್

ನಗರದಲ್ಲಿಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವರ್ತೂರು ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದ ಮಹದೇವಪುರ ಕ್ಷೇತ್ರ ಮರುವಿಂಗಡಣೆಯ ನಂತರ ಮೀಸಲು ಕ್ಷೇತ್ರವಾಗಿದೆ.

ಮಹದೇವಪುರ ವಿಧಾನಸಭಾ ಕ್ಷೇತ್ರದ ಪರಿಚಯಮಹದೇವಪುರ ವಿಧಾನಸಭಾ ಕ್ಷೇತ್ರದ ಪರಿಚಯ

ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಪ್ರಾಬಲ್ಯವಿತ್ತು. ಆದರೆ, ಕಳೆದ ಕೆಲವು ಚುನಾವಣೆಗಳಲ್ಲಿ ಪಕ್ಷದ ನಾಯಕರುಗಳು ಹೊರಗಿನ ಕ್ಷೇತ್ರದವರಿಗೆ ಮಾನ್ಯತೆ ನೀಡುವ ಮೂಲಕ ಕೇತ್ರವು ನಮ್ಮ ಕೈತಪ್ಪಿ ಹೋಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿ ವರ್ಗದವರ ಮತ, ನಿರ್ಣಾಯಕ

ಪರಿಶಿಷ್ಟ ಜಾತಿ ವರ್ಗದವರ ಮತ, ನಿರ್ಣಾಯಕ

ಎ ಕೃಷ್ಣಪ್ಪ ಅವರ ನೇತೃತ್ವದಲ್ಲಿ ಈ ಕ್ಷೇತ್ರ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವಂತೆ ಮಾಡಿದೆ. ನಾಲ್ಕು ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ದೊಡ್ಡ ವಿಧಾನಸಭಾ ಕ್ಷೇತ್ರ ಇದಾಗಿದ್ದು, ಇದರಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿ ವರ್ಗಗಳಿಂದ ಕೂಡಿರುವ ಮತದಾರರಿರುವ ಮೀಸಲು ಕ್ಷೇತ್ರವಾಗಿರುತ್ತದೆ.
2008 ರ ವಿಧಾನಸಭಾ ಚುನಾವಣೆಯಲ್ಲಿ ಆನೇಕಲ್ ಕ್ಷೇತ್ರದ ನಿವಾಸಿಯಾಗಿರುವ ಬಿ ಶಿವಣ್ಣನವರಿಗೆ ಮಹದೇವಪುರ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಮಾಡಿ ಕೊಟ್ಟಾಗ ಸ್ಥಳೀಯರ ವಿರೋಧದಿಂದಾಗಿ ಸೋಲು ಉಂಟಾಯಿತು.
2013 ರಲ್ಲಿ ಮತ್ತೊಮ್ಮೆ ಬ್ಯಾಟರಾಯನಪುರ ಕ್ಷೇತ್ರದ ಎ.ಸಿ ಶ್ರೀನಿವಾಸ್ ರವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದ ಪರಿಣಾಮ ಸ್ಥಳೀಯರ ಆಕ್ರೋಶ ಮತ್ತು ವಿರೋಧದಿಂದ ಮತ್ತೇ ಸೋಲು ಉಂಟಾಗಿರುತ್ತದೆ.

ಸುಶಿಕ್ಷಿತ ಹಾಗೂ ಐಟಿ ಬಿಟಿ ಮತದಾರ ಕ್ಷೇತ್ರ

ಸುಶಿಕ್ಷಿತ ಹಾಗೂ ಐಟಿ ಬಿಟಿ ಮತದಾರ ಕ್ಷೇತ್ರ

ಶೇಕಡಾ 50 ರಷ್ಟು ಸುಶಿಕ್ಷಿತ ಹಾಗೂ ಐಟಿ ಬಿಟಿ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಸುಶಿಕ್ಷಿತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಪಕ್ಷ ಎರಡು ಬಾರಿಯೂ ತಂತ್ರಗಾರಿಕೆಯನ್ನು ಹೆಣೆದಿದೆ. ಆದರೆ, ಕಾಂಗ್ರೆಸ್ ಪಕ್ಷ ಸ್ಥಳಿಯರು ಹಾಗೂ ಸುಶಿಕ್ಷಿತ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರುವ ಮೂಲಕ ಐಟಿ ಬಿಟಿ ಮತದಾರರ ಕೆಂಗಣ್ಣಿಗೂ ಗುರಿಯಾಗಬೇಕಾಯಿತು.

ಕಳೆದ ಎರಡು ಬಾರಿಯೂ ಕಾಂಗ್ರೆಸ್ ಹೊರಗಿನವರಿಗೆ ಟಿಕೆಟ್ ನೀಡಿವೆ. ಆದರೆ, ಹೊರಗಿನವರಿಗೆ ಸ್ಥಳೀಯ ಮಟ್ಟದ ಸಮಸ್ಯೆಗಳಾಗಲೀ ಅಥವಾ ಸ್ಥಳೀಯ ಜನರ ಆಶೋತ್ತರಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ.

ಚುನಾವಣೆ ಇನ್ನೇನು ಕೆಲವೇ ದಿನಗಳು ಇದೆ ಎನ್ನುವಾಗ ಟಿಕೆಟ್ ಪಡೆದು ಬಂದು ನಮ್ಮ ಬಳಿ ಮತ ಕೇಳುತ್ತಾರೆ. ಅವರು ಚುನಾವಣೆಯ ಕಾರ್ಯಗಳಲ್ಲಿ ತಲ್ಲೀನರಾಗುತ್ತಾರೆ. ಅಲ್ಲದೇ, ಅವರಿಗೆ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಪ್ರಮುಖ ಗುರಿಯಾಗಿರುತ್ತದೆಯೇ ಹೊರತು ನಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಆಲಿಸುವಷ್ಟು ಸಮಯ, ವ್ಯವಧಾನ ಅವರಲ್ಲಿರುವುದಿಲ್ಲ ಎಂದರು.

ಜನರ ಆಶೋತ್ತರಗಳಿಗೆ ಸ್ಪಂದಿಸುವವರು ಬೇಕು

ಜನರ ಆಶೋತ್ತರಗಳಿಗೆ ಸ್ಪಂದಿಸುವವರು ಬೇಕು

ಆದರೆ, ಸ್ಥಳೀಯ ನಾಯಕರು ಕ್ಷೇತ್ರದಲ್ಲಿಯೇ ವಾಸ್ತವ್ಯ ಇರುವುದರಿಂದ ಅವರ ಬಳಿ ತತ್‍ಕ್ಷಣಕ್ಕೆ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಆ ಕೂಡಲೇ ಪರಿಹಾರಗಳನ್ನೂ ಕಂಡುಕೊಳ್ಳಲು ಅವಕಾಶವಿರುತ್ತದೆ. ಅಲ್ಲದೇ, ಸ್ಥಳೀಯ ಮುಖಂಡರಿಗೆ ಕ್ಷೇತ್ರದ ಪ್ರತಿ ಬಡಾವಣೆಗಳ ಸಮಸ್ಯೆಗಳು, ಅಲ್ಲಿ ನೀಡಲಾಗಿರುವ ಸೌಲಭ್ಯಗಳು ಸೇರಿದಂತೆ ಮತ್ತಿತರೆ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಹೀಗಾಗಿ ಅವರು ಜನರ ಆಶೋತ್ತರಗಳಿಗೆ ತಕ್ಷಣಕ್ಕೆ ಸ್ಪಂದಿಸಬಲ್ಲವರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರಿಗೇ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ನಾವೆಲ್ಲಾ ಒಕ್ಕೊರಲ ಧ್ವನಿಯಿಂದ ಆಗ್ರಹ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಮುಖಂಡರೂ ಮತ್ತು ಟಿಕೆಟ್ ಆಕಾಂಕ್ಷಿಯಾಗಿರುವ ಎ.ಸಿ.ಶ್ರೀನಿವಾಸ್ ಅವರೂ ಸಹ ಹೊರಗಿನವರಾಗಿದ್ದಾರೆ. ಈ ಹಿಂದೆ ಸೋಲನುಭವಿಸಿರುವ ಇವರು ಸ್ಥಳೀಯ ಮಟ್ಟದಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಎ ಸಿ ಶ್ರೀನಿವಾಸ್ ಗೆ ಟಿಕೆಟ್ ನೀಡಿದ್ದಲ್ಲಿ, ಕಾಂಗ್ರೆಸ್ ನ ಸೋಲು ಖಚಿತವಾಗಿದ್ದು ಬಿಜೆಪಿಯ ಗೆಲುವಿನ ಹಾದಿ ಸುಗುಮವಾಗಲಿದೆ. ಪದೇ ಪದೇ ಹೊರಗಿನವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಅಭ್ಯರ್ಥಿ ಅರವಿಂದ ಲಿಂಬಾವಳಿಯ ಗೆಲುವಿನ ಹಾದಿಯನ್ನು ಸುಗುಮಗೊಳಿಸುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರು.

ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ

ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ

ಈ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರುಗಳು ಮಹದೇವಪುರ ಕ್ಷೇತ್ರಕ್ಕೆ ಅಭ್ಯರ್ಥಿಯ ಆಯ್ಕೆಯ ಸಂಧರ್ಭದಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಕ್ಷೇತ್ರದಲ್ಲಿ ಹಲವಾರು ಸಮಾಜ ಸೇವಕರು ಹಾಗೂ ಸರಕಾರದಲ್ಲಿ ಉನ್ನತ ಸ್ಥಾನವನ್ನು ಹೊಂದಿರುವ ಅಧಿಕಾರಿಗಳು ಸ್ಥಳೀಯರಿದ್ದು ಅವರಿಗೆ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದರು.


ಈಗಾಗಲೇ ಈ ಸಂಬಂಧ ಮುಖ್ಯಮಂತ್ರಿಗಳನ್ನು ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ ಯತ್ನಗಳು ಫಲ ನೀಡಿಲ್ಲ. ಅದಕ್ಕಾಗಿ ಮುಖ್ಯಮಂತ್ರಿಗಳನ್ನು ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.


ಪತ್ರಿಕಾಗೋಷ್ಟಿಯಲ್ಲಿ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಪಿ ಎಂ ನಾಗರಾಜ್, ಹಿರಿಯ ಕಾಂಗ್ರೆಸ್ ಮುಖಂಡರಾದ ಜಯಪ್ರಕಾಶ್, ಡಿಸಿಸಿ ಸದಸ್ಯರಾದ ಲಕ್ಷ್ಮಯ್ಯ ರೆಡ್ಡಿ, ವೆಂಕಟರಮಣಪ್ಪ ಹಿರಿಯ ಕಾಂಗ್ರೆಸ್ ಮುಖಂಡ, ಸಹಕಾರ ಸಂಘದ ನಿರ್ದೇಶಕರಾದ ಹೆಚ್ ಕೃಷ್ಣಪ್ಪ, ಬಿದರಹಳ್ಳಿ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಮಂಜುನಾಥರೆಡ್ಡಿ, ಕೆ ನಾರಾಯಣಪ್ಪ ಟಿ ಪಿ ಮಾಜಿ ಸದಸ್ಯರು, ಸೇರಿದಂತೆ ಹಲವರು ಭಾಗವಹಿಸಿದ್ದರು.

English summary
Elections 2018 : Mahadevapura constituency need local and efficient candidates, Congress is trying to field candidates who are not aware of the situation here. In 2013 B Shivanna lost to BJP candidate Arvind Limbavali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X