ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ: ರಾಜೀವ್ ಪ್ರತಾಪ್

By Mahesh
|
Google Oneindia Kannada News

ಬೆಂಗಳೂರು ಏಪ್ರಿಲ್ 24: ರಾಜ್ಯದಲ್ಲಿ ಬಿಜೆಪಿ ಸರಕಾರ ರಚಿಸುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಕೋರ್ ಟೀಂ ಸದಸ್ಯ ಹಾಗೂ ಸಂಸದ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.

ನಗರದಲ್ಲಿಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬೂತ್ ಪ್ರಮುಖ ರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ನಿನ್ನೆ ಬಂದ ಚುನಾವಣಾ ಪೂರ್ವ ಫಲಿತಾಂಶದಲ್ಲೂ ಬಿಜೆಪಿ ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಪ್ರಧಾನಿ ಮೋದಿ ಬರಲು ಕ್ಷಣಗಣನೆ ಪ್ರಾರಂಭವಾಗಿದ್ದು ಇನ್ನೂ ಕೆಲವೇ ದಿನಗಳಲ್ಲಿ ರಾಜ್ಯ ರಾಜಕೀಯದ ಚಿತ್ರಣವೇ ಬದಲಾಗಲಿದೆ ಎಂದರು.

Karnataka Assembly Elections 2018 : BJP will win in Karnataka : Rajeev Pratap Roodi

ಶಕ್ತಿ ಕೇಂದ್ರದ ಪ್ರಮುಖ ವರದಿ, ಬೂತ್ ಸಮಿತಿಗಳ ಕಾರ್ಯವೈಖರಿ, ನವಶಕ್ತಿ ಕೇಂದ್ರಗಳ ವರದಿ ಸೇರಿದಂತೆ ನಮಗೆ ಬಂದ ಎಲ್ಲಾ ವರದಿಗಳಲ್ಲೂ ಹೆಬ್ಬಾಳ ಒಂದನೇ ಸ್ಥಾನದಲ್ಲಿತ್ತು. ಹಾಗಾಗಿಯೇ ಡಾ ವೈ ಎ ನಾರಾಯಣಸ್ವಾಮಿ ಅವರಿಗೆ ಮತ್ತೆ ಟಿಕೆಟ್ ನೀಡಿದ್ದೇವೆ ಎಂದರು.

ಹೆ<span class=ಬ್ಬಾಳ ಕ್ಷೇತ್ರದಲ್ಲಿ ಸಮಸ್ಯೆಗಳೇ ಚುನಾವಣಾ ವಸ್ತು" title="ಹೆಬ್ಬಾಳ ಕ್ಷೇತ್ರದಲ್ಲಿ ಸಮಸ್ಯೆಗಳೇ ಚುನಾವಣಾ ವಸ್ತು" />ಹೆಬ್ಬಾಳ ಕ್ಷೇತ್ರದಲ್ಲಿ ಸಮಸ್ಯೆಗಳೇ ಚುನಾವಣಾ ವಸ್ತು

ಬಿಜೆಪಿ ಕಾರ್ಯಕರ್ತರು ಮತದಾನದ ದಿನ ಬೆಳಿಗ್ಗೆ ಹತ್ತು ಹನ್ನೊಂದು ಗಂಟೆಯೊಳಗೆ ಮತಗಟ್ಟೆ ತಲುಪಬೇಕು. ಮೊದಲ ಎರಡು ಗಂಟೆಗಳ ಕಾಲ ಬೀಳುವ ಮತಗಳೇ ನಿರ್ಣಾಯಕವಾಗುತ್ತವೆ. ಇದರ ಬಗ್ಗೆ ಬೂತ್ ಮಟ್ಟದ ಪ್ರಮುಖರು ಗಮನ ಹರಿಸುವಂತೆ ಸಲಹೆ ನೀಡಿದರು.

Elections 2018 : BJP will win in Karnataka : Rajeev Pratap Roodi
ಹೆಬ್ಬಾಳ ವಿಧಾಸಭಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಡಾ ವೈ ಎ ನಾರಾಯಣಸ್ವಾಮಿ ಮಾತನಾಡಿ, ಚುನಾವಣೆ ಘೋಷಣೆಗೆ 6 ತಿಂಗಳಿನಿಂದಲೇ ನಾವು ಚುನಾವಣಾ ಪ್ರಚಾರವನ್ನು ಆರಂಭಿಸಿದ್ದೇವು. ಈ ಚುನಾವಣೆಯಲ್ಲಿ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲ್ಲುವುದು ನಮ್ಮ ಗುರಿಯಾಗಿದೆ.

ಹೆಬ್ಬಾಳದಲ್ಲಿ ಮತದಾರರ ಆಶೀರ್ವಾದ ನನ್ನ ಮೇಲಿದೆ: ನಾರಾಯಣಸ್ವಾಮಿಹೆಬ್ಬಾಳದಲ್ಲಿ ಮತದಾರರ ಆಶೀರ್ವಾದ ನನ್ನ ಮೇಲಿದೆ: ನಾರಾಯಣಸ್ವಾಮಿ

ನಮ್ಮ ವಿರೋಧಿ ಅಭ್ಯರ್ಥಿ ಬಿಲಿಯನೇರ್, 417 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಚುನಾವಣೆಯಲ್ಲಿ ಹಣದ ಪ್ರಭಾವ ನಿಲ್ಲಬೇಕು. ಹೆಬ್ಬಾಳದಲ್ಲಿ ಮನಿ ಮುಖ್ಯವಲ್ಲ ಮೋದಿ ಮುಖ್ಯ ಎಂದು ಮತದಾರರು ಸಾಬೀತು ಪಡಿಸಲಿದ್ದಾರೆ ಎಂದರು. ಕ್ಷೇತ್ರದ ನೂರಕ್ಕೂ ಹೆಚ್ಚು ಬೂತ್ ಮಟ್ಟದ ಕಾರ್ಯಕರ್ತರು ಸಂವಾದದಲ್ಲಿ ಭಾಗವಹಿಸಿದ್ದರು.

English summary
Karnataka Assembly Elections 2018 : BJP will win in Karnataka ,latest survey shows BJP will cross magic number said MP Rajeev Pratap Roodi while campaigning for Hebbal candidate Y Narayanaswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X