ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಮತ್ತೆ ಪ್ರಧಾನಿಯಾಗುವುದಂತೂ ಸತ್ಯ, ರೇವಣ್ಣ ರಾಜಕೀಯ ನಿವೃತ್ತಿ?

|
Google Oneindia Kannada News

ಬೆಂಗಳೂರು, ಮೇ 23: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದಂತೂ ಗ್ಯಾರಂಟಿ ಹಾಗಾದರೆ ರೇವಣ್ಣ ಆವೇಶದಲ್ಲಿ ನೀಡಿದ್ದ ಹೇಳಿಕೆಯನ್ನು ಉಳಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಸಾಧ್ಯವೇ ಇಲ್ಲ ಒಂದೊಮ್ಮೆ ಗೆದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದರು, ಈಗ ಅವರ ಹೇಳಿಕೆ ಮೇಲೆಯೇ ಎಲ್ಲರ ಚಿತ್ತವಿದೆ.

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರುಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

ಎಚ್‌ಡಿ ರೇವಣ್ಣ ನೀಡಿದ್ದ ಹೇಳಿಕೆಯನ್ನು ಉಳಿಸಿಕೊಳ್ಳುತ್ತಾರೆಯೇ ಅಥವಾ ಅವರ ತಂದೆಯಂತೆ ಹೇಳಿಕೆಯಿಂದ ಜಾರಿಕೊಳ್ಳುತ್ತಾರೆಯೇ ಎನ್ನುವುದು ಎಲ್ಲರ ಕುತೂಹಲವಾಗಿದೆ.

ಬಿಜೆಪಿಯು ಕರ್ನಾಟಕದಲ್ಲಿ 24 ಸ್ಥಾನವನ್ನು ಗಳಿಸಿದ್ದು ಇನ್ನೂ ಒಂದು ಸ್ಥಾನದಲ್ಲಿ ಮುಂದಿದೆ, ಕಾಂಗ್ರೆಸ್ ಕರ್ನಾಟಕದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಸೋತಿದೆ. ಒಂದೆಡೆ ಪ್ರಜ್ವಲ್ ರೇವಣ್ಣ ಗೆಲುವಿನ ಸಂಭ್ರಮ ಮನೆ ಮಾಡಿದ್ದರೆ, ಇನ್ನೊಂದೆಡೆ ಎಚ್‌ಡಿ ದೇವೇಗೌಡರು ತುಮಕೂರಿನಲ್ಲಿ ಸೋತಿದ್ದಾರೆ, ಇನ್ನೊಂದೆಡೆ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಎದುರು ನಿಖಿಲ್ ಕೂಡ ಸೋಲು ಅನುಭವಿಸಿದ್ದಾರೆ.

2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಇದೇ ರೀತಿ ರೇವಣ್ಣ ಅವರ ತಂದೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಹೇಳಿಕೆ ನೀಡಿದ್ದರು. ಒಂದೊಮ್ಮೆ ಮೋದಿ ಪ್ರಧಾನಿಯಾದರೆ ನಾನು ರಾಜಕೀಯ ನಿವೃತ್ತಿ ಪಡೆದು ದೇಶಬಿಡುತ್ತೇನೆ ಎಂದು ದೇವೇಗೌಡರು ಘೋಷಿಸಿದ್ದರು. ಆದರೆ ಮೋದಿ ಭೇಟಿ ಸಂದರ್ಭದಲ್ಲಿ ಈ ವಿಚಾರವೂ ಕೂಡ ಚರ್ಚೆಗೆ ಬಂದಿತ್ತು ಎನ್ನಲಾಗಿದೆ.

ಮೋದಿ ಮತ್ತೆ ಪ್ರಧಾನಿಯಾದರೆ ರೇವಣ್ಣ ರಾಜಕೀಯ ನಿವೃತ್ತಿ ಪಡೆಯುತ್ತಾರಾ? ಮೋದಿ ಮತ್ತೆ ಪ್ರಧಾನಿಯಾದರೆ ರೇವಣ್ಣ ರಾಜಕೀಯ ನಿವೃತ್ತಿ ಪಡೆಯುತ್ತಾರಾ?

ನಿಮ್ಮಂಥ ಹಿರಿಯ ಸಂಸದೀಯರು ರಾಜಕೀಯ ನಿವೃತ್ತಿ ಪಡೆಯುವುದು ಸರಿಯಲ್ಲ, ಸಂತಸ್‌ನಲ್ಲಿ ನಿಮ್ಮಂಥ ಹಿರಿಯ ಸಂಸದರ ಅಗತ್ಯವಿದೆ ಎಂದು ಮೋದಿ ಹೇಳಿದ್ದ ಹಿನ್ನೆಲೆಯಲ್ಲಿ ನಿಲುವು ಬದಲಿಸಿದ್ದಾಗಿ ದೇವೇಗೌಡರು ಹೇಳಿಕೊಂಡಿದ್ದರು. ಈಗ ರೇವಣ್ಣ ಯಾವ ರೀತಿ ಸಬೂಬು ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರುಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು

ಮೋದಿ ಪ್ರಧಾನಿಯಾಗಿ ಆಯ್ಕೆಯಾದರೆ ಬಿಜೆಪಿ ನಾಯಕರು ಖಡಾಖಂಡಿತವಾಗಿ ರೇವಣ್ಣ ಅವರ ರಾಜಕೀಯ ನಿವೃತ್ತಿಯನ್ನು ಕೇಳಿ ಲೇವಡಿ ಮಾಡುವುದಂತೂ ಸತ್ಯವಾಗಿದೆ. ಅದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾರ್ವಜನಿಕರೂ ಕೂಡ ಈ ಬಗ್ಗೆ ಚರ್ಚೆ ನಡೆಸಬಹುದು. ರೇವಣ್ಣ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ನೋಡಬೇಕಿದೆ.

ದೇವೇಗೌಡ, ನಿಖಿಲ್ ಕುಮಾರಸ್ವಾಮಿ ಸೋಲು

ದೇವೇಗೌಡ, ನಿಖಿಲ್ ಕುಮಾರಸ್ವಾಮಿ ಸೋಲು

ಹಾಸನದಲ್ಲಿ ತಮ್ಮ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್‌ಗೆ ಬಿಟ್ಟುಕೊಂಡು ತುಮಕೂರಿನಿಂದ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು ಹೀನಾಯ ಸೋಲು ಕಂಡಿದ್ದಾರೆ. ಇನ್ನು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಎದುರು ತೀವ್ರ ಪೈಪೋಟಿ ನೀಡಿದ್ದರೂ 70 ಸಾವಿರ ಅಂತರದಿಂದ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದಾರೆ.

ಪ್ರಜ್ವಲ್ ರೇವಣ್ಣ ಸಂಸತ್‌ಗೆ ರೇವಣ್ಣ ನಿವೃತ್ತಿ?

ಪ್ರಜ್ವಲ್ ರೇವಣ್ಣ ಸಂಸತ್‌ಗೆ ರೇವಣ್ಣ ನಿವೃತ್ತಿ?

ಪ್ರಜ್ವಲ್ ರೇವಣ್ಣ ರಾಜಕೀಯ ಪ್ರವೇಶಿಸಿದ ಮೊದಲ ಬಾರಿಯೇ ಜಯ ಸಾಧಿಸಿದ್ದಾರೆ. ಪ್ರಜ್ವಲ್ ಗೆದ್ದಿರುವ ಕುರಿತು ಹರ್ಷ ವ್ಯಕ್ತಪಡಿಸಬೇಕೋ ಅಥವಾ ತನ್ನ ಸ್ಥಾನ ಉಳಿಸಿಕೊಳ್ಳಬೇಕೋ ಅಥವಾ ತಮ್ಮನ ಮಗ ಹಾಗೂ ತಂದೆ ಸೋತಿರುವುದಕ್ಕೆ ಬೇಸರ ವ್ಯಕ್ತಪಡಿಸಬೇಕೋ ಎನ್ನುವ ಗೊಂದಲದಲ್ಲಿ ರೇವಣ್ಣ ಇದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 22 ಸೀಟು ಎಂದಿದ್ರು, ಸಿಕ್ಕಿದ್ದು ಬಿಜೆಪಿಗೆ

ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 22 ಸೀಟು ಎಂದಿದ್ರು, ಸಿಕ್ಕಿದ್ದು ಬಿಜೆಪಿಗೆ

ಲೋಕೋಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ 22 ಕ್ಷೇತ್ರಗಳನ್ನು ಗೆದ್ದೆ ಗೆಲ್ಲುತ್ತೆ ಎಂದು ಹೇಳಿದ್ದರು ಆದರೆ ಬಿಜೆಪಿಗೆ ಅದೆಲ್ಲಾ ಸೋಟುಗಳು ಒಲಿದಿವೆ. 24 ಸೀಟುಗಳು ಲಭ್ಯವಾಗಿವೆ. ಮೈತ್ರಿ ಪಕ್ಷದ ಆಲೋಚನೆಯೆಲ್ಲವೂ ತಲೆಕೆಳಗಾಗಿದೆ.

ರೇವಣ್ಣ ಮುಖ್ಯಮಂತ್ರಿಯಾಗುವುದು ದೇವರ ಇಚ್ಛೆ

ರೇವಣ್ಣ ಮುಖ್ಯಮಂತ್ರಿಯಾಗುವುದು ದೇವರ ಇಚ್ಛೆ

ಎಚ್‌ಡಿ ರೇವಣ್ಣ ಮುಖ್ಯಮಂತ್ರಿ ಹುದ್ದೆಗೇರುವುದು ಭಗವಂತನ ಇಚ್ಛೆ, ಈಗ ನಮ್ಮ ಕುಟುಂಬದವರೇ ಮುಖ್ಯಮಂತ್ರಿ ಆಗಿದ್ದಾರೆ. ಅವರನ್ನು ಪಕ್ಕಕ್ಕೆ ಸರಿಸಿ ರೇವಣ್ಣ ಅವರು ಮುಖ್ಯಮಂತ್ರಿ ಆಗಬೇಕು ಎಂಬ ಇಚ್ಛೆ ನಮ್ಮದಲ್ಲ. ಇವತ್ತಿನ ಸಂದರ್ಭದಲ್ಲಿ ಕುಮಾರಸ್ವಾಮಿ ಅವರೇ ಸಿಎಂ. ಕುಮಾರಸ್ವಾಮಿ ಅವರೇ ಸಿಎಂ ಆಗಿದ್ದರೆ ಒಳ್ಳೆಯದು. ನಮ್ಮ ಮನೆಯವರೇ ಸಿಎಂ ಆಗಿರುವುದರಿಂದ ಅವರೇ ಇರಲಿ ಎನ್ನುವುದು ಬಯಕೆ ಎಂದು ರೇವಣ್ಣ ಪತ್ನಿ ಭವಾನಿ ರೇವಣ್ಣ ಹೇಳಿದ್ದರು.

English summary
Lok sabha election results 2019: Election results shows Modis BJP returning to power, Is revanna will take retirement from the politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X