• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚುನಾವಣಾ ಆಯೋಗದಿಂದ ವಿದ್ಯಾರ್ಥಿಗಳಿಗೆ ಚುನಾವಣಾ ರಸಪ್ರಶ್ನೆ ಕಾರ್ಯಕ್ರಮ

|

ಬೆಂಗಳೂರು, ಜನವರಿ 18: ಭಾರತದ ಪ್ರಜಾಪ್ರಭುತ್ವ ಮತ್ತಷ್ಟು ಬಲಿಷ್ಠಗೊಳಿಸಲು ಮತದಾನದ ಕುರಿತು ಭವಿಷ್ಯದ ಮತದಾರರಾಗಿರುವ ಮಕ್ಕಳಲ್ಲಿ ಜಾಗೃತಿ ಮೂಡಿಸುವ ದೃಷ್ಠಿಯಿಂದ ಜನವರಿ 25ರಂದು ಆಚರಿಸುವ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಚುನಾವಣಾ ಆಯೋಗದ ವತಿಯಿಂದ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಚುನಾವಣಾ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಕೊಂಡಜ್ಜಿ ಬಸ್ಸಪ್ಪ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಚುನಾವಣೆ ವಿಶೇಷ ರಸಪ್ರಶ್ನೆ ಕಾರ್ಯಕ್ರಮ "ಥಟ್ ಅಂತ ಹೇಳಿ!" ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಮಾರ್ಚ್‌ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆ ದಿನಾಂಕ ಪ್ರಕಟ?

ರಾಜ್ಯ ಚುನಾವಣಾ ಆಯುಕ್ತ ಸಂಜಯ್ ಕುಮಾರ್‌ ಅವರು ಮಾತನಾಡಿ ಪ್ರಜಾಭುತ್ವದ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸುವುದರ ಅಗತ್ಯವಿದೆ ಎಂದು ಹೇಳಿದರು.

ಚುನಾವಣಾ ರಸಪ್ರಶ್ನೆ ಕಾರ್ಯಕ್ರಮವು ಜನವರಿ 25ರಂದು ಆಚರಿಸುವ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ದೂರದರ್ಶನ ಚಂದನ ವಾಹಿನಿಯ "ಥಟ್ ಅಂತ ಹೇಳಿ!" ಕಾರ್ಯಕ್ರಮದಲ್ಲಿ ಐದು ಕಂತುಗಳಲ್ಲಿ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಪ್ರಸಾರವಾಗಲಿದೆ.

ರಾಜ್ಯ ಮಟ್ಟದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲ ಹಂತದ ರಸಪ್ರಶ್ನೆ ಸ್ಪರ್ಧೆಗಳಲ್ಲಿ 7345 ಪ್ರೌಢಶಾಲೆಗಳ 54765 ವಿದ್ಯಾರ್ಥಿಗಳು, 3509 ಪಿಯು ಕಾಲೇಜುಗಳಿಂದ 38645 ವಿದ್ಯಾರ್ಥಿಗಳು ಹಾಗೂ 404 ಪದವಿ ಕಾಲೇಜುಗಳಿಂದ 9479 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 11258 ಶಾಲಾ-ಕಾಲೇಜುಗಳಿಂದ 102889 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಚುನಾವಣೆ ದಿನಾಂಕ ಕುರಿತ ಸುಳ್ಳು ಸುದ್ದಿ: ಕ್ರಮಕ್ಕೆ ಆಯೋಗ ಸೂಚನೆ

ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡದ ಇಬ್ಬರು ವಿದ್ಯಾರ್ಥಿಗಳಂತೆ ವಿವಿಧ ಜಿಲ್ಲೆಗಳಿಂದ ಒಟ್ಟು 58 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮೊದಲನೇ ದಿನ ಪ್ರಥಮ ಹಂತದಲ್ಲಿ ವಿದ್ಯಾರ್ಥಿಗಳಿಗೆ ವಿಭಾಗವಾರು ಲಿಖಿತ ಪರಿಕ್ಷೆಯನ್ನು ಮಹಾರಾಣಿ ಮಹಿಳಾ ವಿಜ್ಞಾನ ಪದವಿ ಕಾಲೇಜಿನಲ್ಲಿ ನಡೆಸಲಾಯಿತು. ಇದರಲ್ಲಿ ಪ್ರತಿ ವಿಭಾಗದಿಂದ 6 ತಂಡಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಯಿತು.

ಮತದಾರರ ಪಟ್ಟಿಯಲ್ಲಿ 5 ಕೋಟಿ ಹೆಸರು: ಚುನಾವಣಾ ಆಯೋಗ

ಎರಡನೇ ಹಂತದಲ್ಲಿ ಮೌಖಿಕ ರಸಪ್ರಶ್ನೆಯನ್ನು ನಡೆಸಿ ಪ್ರತಿ ವಿಭಾಗದಿಂದ ಒಂದು ತಂಡವನ್ನು ಮೂರನೇ ಹಂತಕ್ಕೆ ಆಯ್ಕೆ ಮಾಡಲಾಯಿತು. ಅಂತಿಮ ಹಂತದಲ್ಲಿ ಬೆಳಗಾವಿ ವಿಭಾಗದ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಾದ ಸುಜಯ್ ಭಟ್ ಮತ್ತು ಸುಮುಖ್ ಭಟ್ ಅವರು ಪ್ರಥಮ ಸ್ಥಾನ ಪಡೆದರು, ಕಲಬುರಗಿ ವಿಭಾಗದಿಂದ ಬೀದರ್ ಜಿಲ್ಲೆಯ ರಾಘವೇಂದ್ರ ದೇವಿದಾಸ್ ಹಾಗೂ ಸೋಮೇಶ್ ಶಿವಶರಣಪ್ಪ ಅವರು ದ್ವೀತಿಯ, ಬೆಂಗಳೂರು ವಿಭಾಗದಿಂದ ಶಿವಮೊಗ್ಗ ಜಿಲ್ಲೆಯ ಗಾನವಿ ಎಸ್ ಪ್ರಸಾದ್ ಮತ್ತು ಮೀಷ್ನಾ ಆರ್ ಅವರು ತೃತೀಯ ಸ್ಥಾನ ಪಡೆದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಆಗಮಿಸಿದ್ದ ಮಕ್ಕಳನ್ನು ವಿಧಾನಸೌಧ ಹಾಗೂ ನೆಹರು ತಾರಾಲಯ ವೀಕ್ಷಣೆಗಾಗಿ ಚುನಾವಣೆ ಆಯೋಗದಿಂದ ವ್ಯವಸ್ಥೆ ಮಾಡಲಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Election quiz for students organized by Karnataka election commission today in Bengaluru. Hundreds of students participated in the quiz. program will be air on Dooradarshan chanel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more