• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚುನಾವಣೆ ಬಿಸಿಯಲ್ಲಿ ಬೆಂಗಳೂರು ಕರಗ

By Mahesh
|
Google Oneindia Kannada News

ಬೆಂಗಳೂರು, ಏ.7: ನಗರದ ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇಗುಲದಲ್ಲಿ ಏ.7 ರಿಂದ ಏ.17ರ ವರಗೆ 'ಬೆಂಗಳೂರು ಕರಗ' ಮಹೋತ್ಸವ ನಡೆಯಲಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಬಿ.ಎನ್.ಕೃಷ್ಣಯ್ಯ ತಿಳಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಜರಾಯಿ ಇಲಾಖೆ ಹಾಗೂ ಧರ್ಮರಾಯಸ್ವಾಮಿ ದೇವಾಲಯ ಸಮಿತಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಬೆಂಗಳೂರು ಕರಗ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಏ.7ರಂದು ಧ್ವಜಾರೋಹಣದಿಂದ ಪ್ರಾರಂಭಗೊಂಡ ಕರಗ ಮಹೋತ್ಸವದ ಪ್ರತಿದಿನ ವಿಶೇಷ ಪೂಜೆಗಳು ನಡೆಯಲಿದೆ. ಏ.15ರಂದು ಕರಗ ಮಹೋತ್ಸವ ಹಾಗೂ ಧರ್ಮರಾಯಸ್ವಾಮಿ ಮಹಾ ರಥೋತ್ಸವ ಜರುಗಲಿದೆ. ಏ.17 ರಂದು ಧ್ವಜಾವರೋಹಣದೊಂದಿಗೆ ಮಹೋತ್ಸವಕ್ಕೆ ತೆರೆ ಎಳೆಯಲಾಗುವುದು ಎಂದು ಬಿ.ಎನ್.ಕೃಷ್ಣಯ್ಯ ತಿಳಿಸಿದರು.

ಸುಮಾರು 800 ಮಂದಿ ಪೊಲೀಸ್ ಸಿಬ್ಬಂದಿಯನ್ನು ಕರಗ ಮಹೋತ್ಸವದ ಭದ್ರತೆಗೆ ಆಯೋಜಿಸಲಾಗಿದೆ. ಇದರ ಜೊತೆಗೆ ಸ್ಕೌಟ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಈ ವರ್ಷ ಹೆಚ್ಚಿನ ವಿಜೃಂಭಣೆಯಿಲ್ಲದೆ, ಸರಳವಾಗಿ ನಡೆಸಲಾಗುವುದೆಂದು ಅವರು ತಿಳಿಸಿದರು.

ಕರಗ ಮಹೋತ್ಸವದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಚುನಾವಣೆ ಆಯೋಗದಿಂದ ಅನುಮತಿ ಪಡೆದ ನಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಭಕ್ತಾದಿಗಳು ಯಾವುದೇ ಗೊಂದಲವಿಲ್ಲದೆ ದೇಗುಲಕ್ಕೆ ಭೇಟಿ ನೀಡಿ ಉತ್ಸಾಹದಿಂದ ಕರಗ ಮಹೋತ್ಸವದಲ್ಲಿ ಪಾಲ್ಗೊಳ್ಳಬಹುದು ಎಂದು ಕರಗ ಮಹೋತ್ಸವ ಆಯೋಜನಾ ಸಮಿತಿ ಅಧ್ಯಕ್ಷೆ ಇಂದಿರಾ ಎಸ್ ಎನ್ ಹೇಳಿದ್ದಾರೆ.

ಮಹಾಭಾರತದ ಸಂದರ್ಭದಲ್ಲಿ ತ್ರಿಪುರಾಸುರನ ಸಂಹಾರಕ್ಕೆ ದ್ರೌಪದಿ ಮಾನಸ ಪುತ್ರರಾಗಿ ಜನಿಸಿದ ವೀರಕುಮಾರರು ದೈತ್ಯ ಸಂಹಾರ ಮಾಡುತ್ತಾರೆ. ಪ್ರತಿ ವರ್ಷ ಚೈತ್ರ ಮಾಸದಲ್ಲಿ ತನ್ನ ಮಕ್ಕಳನ್ನು ನೋಡಲು ದ್ರೌಪದಿ ಆಗಮಿಸುವುದನ್ನು ಸಂಭ್ರಮದಿಂದ ಹಬ್ಬದಂತೆ ಆಚರಿಸಲಾಗುತ್ತದೆ. ಪಂಚಾಂಗ ನೋಡಿ

ಬಸವನಗುಡಿಯಲ್ಲಿ ಕಳೆದ ಫೆಬ್ರವರಿ ತಿಂಗಳಿನಲ್ಲಿ ನಡೆದ ಕರ್ನಾಟಕ ರಾಜ್ಯ ತಿಗಳ ಕ್ಷತ್ರಿಯ ಜನಾಂಗದ ಬೃಹತ್ ಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಗಳ ಸಮುದಾಯಕ್ಕೆ ಈ ಅಭಯ ನೀಡಿದ್ದರು. ಕರಗ ಆಚರಣೆಗೆ ಸರ್ಕಾರದ ವತಿಯಿಂದ 1 ಕೋಟಿ ರೂ ಅನುದಾನ ಘೋಷಿಸಿದ್ದರು.

English summary
Bengaluru Karaga, one of the oldest festivals celebrated in the city, from April 7-17. A tradition of the Thigala community, the annual festival is observed in areas around the Sri Dharmarayaswamy temple in Chickpet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X