ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇ-ಸಿಟಿ ಹಬ್ಬಕ್ಕಾಗಿ ಲೋಗೋ ವಿನ್ಯಾಸ ಮಾಡಿ, ಬಹುಮಾನ ಗೆಲ್ಲಿ!

By Mahesh
|
Google Oneindia Kannada News

ಬೆಂಗಳೂರು, ಜುಲೈ 12: ಲೋಗೋ ಡಿಸೈನ್ ಮಾಡುವಲ್ಲಿ ಆಸಕ್ತಿ ಇರುವಂತಹವರಿಗೆ ಸುವರ್ಣಾವಕಾಶ ಒದಗಿ ಬಂದಿದೆ. ಎಲೆಕ್ಟ್ರಾನಿಕ್ ಸಿಟಿಯ ಎಲ್ಸಿಟಾ ಸಂಸ್ಥೆ 24 ಆಗಸ್ಟ್ ರಂದು ಆಯೋಜಿಸಲಿರುವ ಇ-ಸಿಟಿ ಹಬ್ಬ ಕಾರ್ಯಕ್ರಮಕ್ಕೆ ಉತ್ತಮ ಲೋಗೋ ತಯಾರಿಸಿದವರಿಗೆ ರೂ. 10000 ಬಹುಮಾನ ನೀಡುವುದಾಗಿ ಘೋಷಿಸಿದೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೆಲೆಸಿರುವ ಮತ್ತು ಕಾರ್ಯ ನಿರ್ವಹಿಸುವ ನಾಗರಿಕರಿಗಾಗಿ ಆಯೋಜಿಸಲಾಗಿರುವ ಇ-ಸಿಟಿ ಹಬ್ಬದ ಸ್ಪರ್ಧೆಯಲ್ಲಿ ಭಾರತೀಯ ಪೌರತ್ವ ಹೊಂದಿರುವ ಯಾರು ಬೇಕಾದರೂ ಭಾಗವಹಿಸಬಹುದು.

ELCITA Electronic city Habba Design your Habba contest

ಜುಲೈ 11ರಂದು ಈ ಸ್ಪರ್ಧೆ ಆರಂಭವಾಗಿದ್ದು, ಜುಲೈ 15 ಸಂಜೆ 6ರವರೆಗೂ 18ವರ್ಷ ತುಂಬಿದ ಮತ್ತು ಮೇಲ್ಪಟ್ಟ ಆಸಕ್ತರಿಗೆ ನೋದಾಯಿಸಿಕೊಳ್ಳಲು ಅವಕಾಶವಿದೆ.

ಏನಿದು ಇ-ಸಿಟಿ ಹಬ್ಬ?: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವಂತಹ ಇ-ನಾಗರಿಕರಿಗಾಗಿ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮವಿದು. ಇಲ್ಲಿ ಸ್ಥಳೀಯ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಸಮಾಜದೊಂದಿಗೆ ಹಂಚಿಕೊಳ್ಳಲು ಉತ್ತಮ ವೇದಿಕೆ ಸಿಗುತ್ತದೆ.

ಭಾರತದ ಶ್ರೀಮಂತ ಸಂಸ್ಕೃತಿಯನ್ನು ಇ-ನಾಗರಿಕರೊಂದಿಗೆ ಹಂಚಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶ. ಇದರೊಂದಿಗೆ ಸದಾ ಕೆಲಸದ ಒತ್ತಡದಲ್ಲಿ ಮುಳುಗಿರುವ ಇಲ್ಲಿನ ಉದ್ಯೋಗಿಗಳಿಗೆ ಮನೋರಂಜನೆಯನ್ನು ಕೂಡ ಇ-ಸಿಟಿ ಹಬ್ಬ ನೀಡಲಿದೆ.

ಭಾಗವಹಿಸಲು ಇಚ್ಛಿಸುವ ಆಸಕ್ತರು ಎಲ್ಸಿಟಾ ಸಂಸ್ಥೆಯ ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳನ್ನು ಫಾಲೋ ಮಾಡಬೇಕು. ಆ ಖಾತೆಗಳಲ್ಲಿ ತಾವು ರಚಿಸಿದಂಥ ಲೋಗೋವನ್ನು ತಮ್ಮ ಹೆಸರಿನೊಂದಿಗೆ (ವಾಟರ್ ಮಾರ್ಕ್) ಅಪ್ಲೋಡ್ ಮಾಡಬೇಕು. ನಂತರ #DesignYourHabba ಮತ್ತು #ELCITA ಹ್ಯಾಶ್ ಟ್ಯಾಗ್‍ನೊಂದಿಗೆ ನಿಮ್ಮ ಲೋಗೋವನ್ನು ಟ್ಯಾಗ್ ಮಾಡಬೇಕು.

ಕೊನೆ ಹಂತದಲ್ಲಿ ನಿಮ್ಮ ಮೂರು ಸ್ನೇಹಿತರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಹ್ವಾನಿಸಿದ್ದಲ್ಲಿ ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆಯನ್ನು ಗಳಿಸುವಿರಿ. ಮೇಲಿನ ನಿಯಗಳನ್ನು ಪಾಲಿಸಿ ಸ್ಪರ್ಧೆಯಲ್ಲಿ ಗೆದ್ದಂತಹ ಡಿಸೈನರ್ ಗಳಿಗೆ ರೂ 10000 ನಗದು ಬಹುಮಾನವಿರುತ್ತದೆ.

English summary
ELCITA is conducting a cultural event on 24th August 2018, where local talent will get an opportunity to perform for ELCitizens.You may enter the #DesignYourHabba Contest beginning 11th July 2018 and ending on 15th July 2018 6:00 PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X