• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಲೆಕ್ಟ್ರಾನಿಕ್ ಸಿಟಿಯ ಮೊಟ್ಟ ಮೊದಲ ಸಾಂಸ್ಕೃತಿಕ ಹಬ್ಬ ಯಶಸ್ವಿ

By Mahesh
|

ಬೆಂಗಳೂರು, ಸೆಪ್ಟೆಂಬರ್ 02: ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‍ಶಿಪ್‍ ಅಥಾರಿಟಿ (ಎಲ್ಸಿಟಾ) ವು ಏರ್ಪಡಿಸಿದ್ದ ಎಲೆಕ್ಟ್ರಾನಿಕ್‍ ಸಿಟಿಯ ಮೊತ್ತ ಮೊದಲ ಪರಿಸರಪ್ರಿಯ ಸಾಂಸ್ಕೃತಿಕ ಹಬ್ಬ ಇ-ಸಿಟಿ ಹಬ್ಬ ಸಡಗರ-ಸಂಭ್ರಮದಿಂದ ನಡೆಯಿತು.

ಎಲೆಕ್ಟ್ರಾನಿಕ್ ಸಿಟಿಯ ಇನ್ಫೋಸಿಸ್ ಮೈದಾನದಲ್ಲಿ ಕಳೆದ ವಾರಾಂತ್ಯ ಕಾರ್ಯಕ್ರಮವನ್ನು ಎಲ್ಸಿಟಾ ಚೇರ್ಮನ್ ಹರಿ ಹೆಗ್ಡೆ ಉದ್ಘಾಟಿಸಿದರು.

ಇ-ಸಿಟಿ ಹಬ್ಬದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಹರಿ ಹೆಗ್ಡೆ, ಎಲೆಕ್ಟ್ರಾನಿಕ್ ಸಿಟಿಯು ಬೆಂಗಳೂರನ್ನು ಪ್ರತಿನಿಧಿಸುವ ಹಾಗೆಯೇ ಇ-ಸಿಟಿ ಹಬ್ಬವೂ ಬೆಂಗಳೂರಿನ ಹಬ್ಬ ಆಗಬೇಕು, ಎಂದರು.

ಇದು ಕೇವಲ ಎಲ್ಸಿಟಾದ ಹಬ್ಬವಲ್ಲ, ನಿಮ್ಮ ಹಬ್ಬ. ಇಡೀ ಬೆಂಗಳೂರು ನಗರದ ಹಬ್ಬ. ಈ ಹಬ್ಬವನ್ನು ಇನ್ನಷ್ಟು ಎತ್ತರಕ್ಕೇರಿಸಲು ಎಲ್ಲರೂ ಸಹಕಾರ ನೀಡಬೇಕೆಂದು, ಹರಿ ಹೆಗ್ಡೆ ಅವರು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಎಲ್ಸಿಯಾ ಉಪಾಧ್ಯಕ್ಷರಾದ ವೀರಪ್ಪನ್ ಅವರು ಕಳೆದ ಆರು ತಿಂಗಳಿನಿಂದ ಇ-ಸಿಟಿ ಹಬ್ಬಕ್ಕಾಗಿ ತಯಾರಿ ನಡೆಯುತ್ತಾ ಬಂದಿದೆ. ಪ್ರತಿಯೊಂದು ಸಭೆಯಲ್ಲಿ ಕೂಡ ಇ-ಸಿಟಿ ಹಬ್ಬದ ಕುರಿತು ಹಲವು ರೀತಿಯ ಚರ್ಚೆಗಳು ನಡೆದಿವೆ. ಈ ಕಾರ್ಯಕ್ರಮದ ಹಿಂದೆ ಹಲವು ಜನರ ಪರಿಶ್ರಮ ಅಡಗಿದೆ, ಎಂದು ಹೇಳಿದರು.

ಭಾರತದ ಶ್ರೀಮಂತ ಕಲಾ ವೈವಿಧ್ಯ

ಭಾರತದ ಶ್ರೀಮಂತ ಕಲಾ ವೈವಿಧ್ಯ

ಭಾರತದ ಶ್ರೀಮಂತ ಕಲಾ ವೈವಿಧ್ಯವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ರಂಜಿಸಿದವು. ಕಲೆ, ಸಂಗೀತ, ನೃತ್ಯ ಹಾಗೂ ದೇಸೀ ಆಹಾರ ಖಾದ್ಯಗಳು ಇ-ಸಿಟಿ ಹಬ್ಬದ ಆಕರ್ಷಣೆಯ ಕೇಂದ್ರವಾಗಿತ್ತು. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸಂಸ್ಥೆಗಳಾದ ಇನ್ಫೋಸಿಸ್, ವಿಪ್ರೊ, ಟೆಕ್ ಮಹೀಂದ್ರಾ, ಹಿಕಾಲ್, ಟೆಸಾಲ್ವ್, ಹೆಚ್‍ಪಿವಿ ಹಾಗೂ ಇತರ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ನರೆದಿದ್ದ ಸಭಿಕರೆದುರು ಅನಾವರಣಗೊಳಿಸಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರದರ್ಶನವನ್ನು ನೀಡಿದಂತಹ ಯಶವಂತ್ ಹಾಗೂ ಸ್ತುತಿ ಅವರು ಪ್ರಸ್ತುತ ಪಡಿಸಿದ ಜು಼ಂಬಾ ನೃತ್ಯ ನೋಡಗರ ಗಮನ ಸೆಳೆಯಿತು. ನಂತರ ಎಲೆಕ್ಟ್ರಾನಿಕ್‍ ಸಿಟಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದರು.

ಪರಿಸರ ಸ್ನೇಹಿ ಇ ಸಿಟಿ ಹಬ್ಬ

ಪರಿಸರ ಸ್ನೇಹಿ ಇ ಸಿಟಿ ಹಬ್ಬ

ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಅವಿರತ ಶ್ರಮ ಪಡುತ್ತಿರುವ ಎಲ್ಸಿಟಾ ಸಂಸ್ಥೆಯು ಇ-ಸಿಟಿ ಹಬ್ಬದಲ್ಲಿ ಕೂಡ ಪ್ಲಾಸ್ಟಿಕ್‍ ಮತ್ತು ಇತರ ಪರಿಸರ ಮಾಲಿನ್ಯಕಾರಕ ವಸ್ತುಗಳನ್ನು ಬದಿಗಿಟ್ಟು, ಸಂಪೂರ್ಣವಾಗಿ ಪರಿಸರಪ್ರಿಯ ಹಬ್ಬವನ್ನು ಆಚರಿಸುವಲ್ಲಿ ಸಫಲವಾಯಿತು. ಪರಿಸರದ ಕಾಳಜಿಯನ್ನು ಗಮದಲ್ಲಿಟ್ಟುಕೊಂಡು ಜೀವಭೂಮಿ ಅಗ್ರಿ ಟೆಕ್, ಕ್ವಾಂಟಮ್ ಲೀಪ್ ಗುರು ಮುಂತಾದ ಸಂಸ್ಥೆಗಳಿಂದ ತಯಾರಿಸಲಾದ ಉತ್ಪನ್ನಗಳನ್ನು ಇ-ಸಿಟಿ ಹಬ್ಬಕ್ಕಾಗಿ ಆಗಮಿಸಿದವರ ಪ್ರದರ್ಶನಕ್ಕಾಗಿ ಇಡಲಾಗಿತ್ತು.

ಇ-ಸಿಟಿ ಹಬ್ಬದ ಹಿರಿಮೆಗೆ ಇನ್ನೊಂದು ಗರಿ

ಇ-ಸಿಟಿ ಹಬ್ಬದ ಹಿರಿಮೆಗೆ ಇನ್ನೊಂದು ಗರಿ

ಇ-ಸಿಟಿ ಹಬ್ಬದ ಹಿರಿಮೆಗೆ ಇನ್ನೊಂದು ಗರಿ ಎಂಬಂತೆ, ಕನ್ನಡದ ಖ್ಯಾತ ಗಾಯಕಿಯಾದ ಎಂ. ಡಿ. ಪಲ್ಲವಿ ಅವರ ಗಾನಸುಧೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಎಲೆಕ್ಟ್ರಾನಿಕ್‍ ಸಿಟಿಯ ಜನಪ್ರಿಯ ಮೇಘಧ್ವನಿ ತಂಡದ ಸಂಗೀತ ಕಾರ್ಯಕ್ರಮ ಹಬ್ಬದ ವಾತಾವರಣವನ್ನು ಇಮ್ಮಡಿಗೊಳಿಸಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಪ್ರೇಕ್ಷಕರ ಮೊಗದಲ್ಲಿ ಹರ್ಷ ಮನೆ ಮಾಡಿತ್ತು. ಇಂತಹ ಕಾರ್ಯಕ್ರಮವನ್ನು ಆಯೋಜಿಸಿದಕ್ಕಾಗಿ ಎಲ್ಸಿಟಾ ಸಂಸ್ಥೆಗೆ ಧನ್ಯವಾದ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವವರಿಗೆ ಪರಿಸರದ ಕುರಿತು ಕಾಳಜಿ ಮೂಡಿಸುವಲ್ಲಿ ಹಾಗೂ ದೇಶದ ಸಂಸ್ಕೃತಿ, ಸಂಪ್ರದಾಯವನ್ನು ಪರಿಚಯಿಸುವಲ್ಲಿ ಇಂತಹ ಕಾರ್ಯಕ್ರಮ ಬಹಳ ಸಹಾಯಕಾರಿ, ಎಂದು ಸಭಿಕರೊಬ್ಬರು ಅಭಿಪ್ರಾಯಪಟ್ಟರು.

ಎಲ್ಸಿಟಾ ಸಂಸ್ಥೆ ಆಯೋಜನೆ

ಎಲ್ಸಿಟಾ ಸಂಸ್ಥೆ ಆಯೋಜನೆ

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮೊತ್ತಮೊದಲ ಬಾರಿಗೆ ನಡೆದಂತಹ ಬೃಹತ್ ಇ-ಸಿಟಿ ಹಬ್ಬಕ್ಕೆ ಎಲ್ಲರಿಂದಲೂ ಉತ್ತಮ ಬೆಂಬಲ ದೊರಕಿದ್ದು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸಭಿಕರು ಸೇರಿದ್ದರು. ಒಟ್ಟಿನಲ್ಲಿ, ಇನ್ಫೋಸಿಸ್ ಮೈದಾನದ ತುಂಬಾ ಸಡಗರ ಸಂಭ್ರಮ ಮನೆ ಮಾಡಿತ್ತು. ಈ ಬಾರಿ ಯಶಸ್ವಿಯಾಗಿ ಜರುಗಿದ ಇ-ಸಿಟಿ ಹಬ್ಬವನ್ನು ಮುಂದೆಯೂ ನಡೆಸುವ ಉದ್ದೇಶವನ್ನು ಎಲ್ಸಿಟಾ ಸಂಸ್ಥೆ ಹೊಂದಿದೆ.

ಎಲ್ಸಿಟಾ (ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‍ಶಿಪ್ ಅಥಾರಿಟಿ)

2013ರಲ್ಲಿ ಸ್ಥಾಪಿಸಲಾದ ಎಲ್ಸಿಟಾ ಸಂಸ್ಥೆಯು ಇಲೆಕ್ಟ್ರಾನಿಕ್ ಸಿಟಿಯ ನಿರ್ವಹಣೆ ಮಾಡುತ್ತಿದೆ. ಕರ್ನಾಟಕ ಸರಕಾರವು 2013ರಲ್ಲಿ ಇಲೆಕ್ಟ್ರಾನಿಕ್ ಸಿಟಿಯನ್ನು ಕೈಗಾರಿಕಾ ಪ್ರದೇಶ ಎಂದು ಪರಿಗಣಿಸಿ ಇದರ ನಿರ್ವಹಣೆಗಾಗಿ ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಆಕ್ಟ್ ಅಡಿಯಲ್ಲಿ ಎಲ್ಸಿಟಾ ಸಂಸ್ಥೆಯನ್ನು ಸ್ಥಾಪಿಸಿದೆ.

English summary
ELCITA hosted an eco-friendly cultural festival, E-City Habba at Infosys leisure Grounds, Electronics City, Bengaluru. This event witnessed the performance of talented artists from different workspaces like Infosys, Wipro, Tech Mahindra, Hical, Tessolve, HPE etc., all under one single roof.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X