ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲ್ಸಿಟಾದಿಂದ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಪಾದಚಾರಿ ಮೇಲ್ಸೇತುವೆ ಲೋಕಾರ್ಪಣೆ

|
Google Oneindia Kannada News

ಬೆಂಗಳೂರು, ಮೇ 09: ಎಲೆಕ್ಟ್ರಾನಿಕ್ಸ್ ಸಿಟಿ ಟೌನ್‍ಶಿಪ್ ಅಥಾರಿಟಿ (ಎಲ್ಸಿಟಾ) ಹಾಗೂ ಹೆಚ್ ಪಿ ಎಂಟಪ್ರೈಸಸ್ ವತಿಯಿಂದ ನಿರ್ಮಿಸಲಾದ ಎಲೆಕ್ಟ್ರಾನಿಕ್ಸ್ ಸಿಟಿಯ ಪೂರ್ವ ಮತ್ತು ಪಶ್ಚಿಮ ಭಾಗವನ್ನು ಸಂಪರ್ಕಿಸುವ ಪಾದಚಾರಿ ಮೇಲುಸೇತುವೆಯನ್ನು ಇಂದು ಎಲೆಕ್ಟ್ರಾನಿಕ್ಸ್ ಸಿಟಿ ಟೋಲ್‍ಗೇಟ್ ಬಳಿ ಉದ್ಘಾಟಿಸಲಾಯಿತು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಈ ವೇಳೆ ಮಾತನಾಡಿದ ಎಲ್ಸಿಟಾ ಛೇರ್‍ಮನ್, ಹರಿಪ್ರಸಾದ್ ಹೆಗ್ಡೆ ಅವರು, 'ವಾಹನ ಸಂಚಾರ ಅಧಿಕವಾಗಿರುವ ಸಮಯದಲ್ಲಿ ಪಾದಚಾರಿಗಳು ರಸ್ತೆ ದಾಟಲು ಹಲವು ರೀತಿಯ ಸಮಸ್ಯೆ ಎದುರಿಸಬೇಕಾಗಿತ್ತು. ಈ ಮೇಲ್ಸೇತುವೆಯು ಪಾದಾಚಾರಿಗಳಿಗೆ ಎಲೆಕ್ಟ್ರಾನಿಕ್ಸ್ ಸಿಟಿಯ ಪೂರ್ವ ಭಾಗದಿಂದ ಪಶ್ಚಿಮ ಭಾಗಕ್ಕೆ ಸುರಕ್ಷಿತವಾಗಿ ದಾಟಲು ಸಹಕಾರಿ. ಇದರಿಂದಾಗಿ ಯಾವುದೇ ವಾಹನಗಳು ತಡೆ ಇಲ್ಲದೇ ಸಂಚರಿಸಬಹುದು ಹಾಗೂ ವಾಯು ಮಾಲಿನ್ಯವೂ ಕಡಿಮೆಯಾಗುತ್ತದೆ' ಎಂದರು.

ELCITA Connects the East and West Phases of E-City

ಈ ಪಾದಚಾರಿ ಮೇಲ್ಸೇತುವೆಯಿಂದ ಪ್ರತಿದಿನ ಸುಮಾರು 30,000 ಜನರಿಗೆ ಪ್ರಯೋಜನವಾಗುತ್ತದೆ ಹಾಗೂ ರಸ್ತೆ ದಾಟುವಾಗ ಸಂಭವಿಸಬಹುದಾದ ಅಪಘಾತಗಳು ಕೂಡ ಇಲ್ಲವಾಗುತ್ತದೆ.

ಇ ಸಿಟಿಯಲ್ಲಿ ಯೂಲೂ ಬೈಕ್ ನಿಂದ ನಿಲ್ದಾಣರಹಿತ ಸೈಕಲ್ ಯೋಜನೆಇ ಸಿಟಿಯಲ್ಲಿ ಯೂಲೂ ಬೈಕ್ ನಿಂದ ನಿಲ್ದಾಣರಹಿತ ಸೈಕಲ್ ಯೋಜನೆ

ಎಲೆಕ್ಟ್ರಾನಿಕ್ಸ್ ಸಿಟಿಯನ್ನು ಪಾದಚಾರಿ ಸ್ನೇಹಿ ಪರಿಸರವಾಗಿಸುವ ಉದ್ದೇಶವನ್ನು ಎಲ್ಸಿಟಾ ಸಂಸ್ಥೆ ಹೊಂದಿದೆ. ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಈ ಪಾದಚಾರಿ ಮೇಲ್ಸೇತುವೆಯು ಒಂದು ಪ್ರಮುಖ ಯೋಜನೆ. ಇದರಿಂದಾಗಿ ಕೇವಲ ಪಾದಾಚಾರಿಗಳಷ್ಟೇ ಅಲ್ಲದೇ ಟ್ರಾಫಿಕ್ ಪೊಲೀಸರಿಗೆ ಕೂಡ ಸಂಚಾರವನ್ನು ಸುಗಮಗೊಳಿಸಲು ಸಹಕಾರಿಯಾಗುತ್ತದೆ, ಎಂದು ಹೇಳಿದ ಎಲ್ಸಿಟಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಮಾ ಎನ್. ಎಸ್. ಅವರು ಈ ಕಾರ್ಯದಲ್ಲಿ ಎಲ್ಸಿಟಾದೊಂದಿಗೆ ಕೈಜೋಡಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಬಿಇಟಿಪಿಎಲ್‍ಗೆ ಧನ್ಯವಾದಗಳನ್ನು ಸಮರ್ಪಿಸಿದರು.

ELCITA Connects the East and West Phases of E-City

ಎಲ್ಸಿಟಾ (ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‍ಶಿಪ್ ಅಥಾರಿಟಿ) : 2013ರಲ್ಲಿ ಸ್ಥಾಪಿಸಲಾದ ಎಲ್ಸಿಟಾ ಸಂಸ್ಥೆಯು ಇಲೆಕ್ಟ್ರಾನಿಕ್ಸ್ ಸಿಟಿಯ ನಿರ್ವಹಣೆ ಮಾಡುತ್ತಿದೆ. ಕರ್ನಾಟಕ ಸರಕಾರವು 2013ರಲ್ಲಿ ಇಲೆಕ್ಟ್ರಾನಿಕ್ ಸಿಟಿಯನ್ನು ಕೈಗಾರಿಕಾ ಪ್ರದೇಶ ಎಂದು ಪರಿಗಣಿಸಿ ಇದರ ನಿರ್ವಹಣೆಗಾಗಿ ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಆಕ್ಟ್ ಅಡಿಯಲ್ಲಿ ಎಲ್ಸಿಟಾ ಸಂಸ್ಥೆಯನ್ನು ಸ್ಥಾಪಿಸಿದೆ.

English summary
Electronics City Industrial Township Authority (ELCITA) in collaboration with Hewlett Packard Enterprise (HPE), inaugurated a foot over bridge connecting the East and West phases of Electronics City on Hosur Road near the toll plaza today to avoid accidents involving pedestrians crossing the road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X