ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೊರೊನಾ: ಗೊಂದಲ ಮೂಡಿಸಿದ 'ಧ್ವನಿವರ್ಧಕ' ಘೋಷಣೆ, ಸ್ಪಷ್ಟನೆ ಇಲ್ಲಿದೆ

|
Google Oneindia Kannada News

ಬೆಂಗಳೂರು, ಮಾರ್ಚ್ 20: ರಾಜ್ಯದಲ್ಲಿ ಕೊರೊನಾ ಭೀತಿ ಅಧಿಕವಾಗಿದ್ದು, ಬೆಂಗಳೂರಿನಲ್ಲಿ ಇದುವರೆಗೂ 11 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಹನ್ನೊಂದರ ಜನರ ಪೈಕಿ ಬಹುತೇಕರು ವಿದೇಶದಿಂದ ಬಂದ ಟೆಕ್ಕಿಗಳು ಎನ್ನುವುದು ಗಮನಾರ್ಹ.

ಇದೀಗ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಾಲ್ಕು ಜನರಿಗೆ ಕೊರೊನಾ ಕಾಣಿಸಿಕೊಂಡಿದೆ ಎಂಬ ಸುದ್ದಿ ಸಿಲಿಕಾನ್ ಸಿಟಿ ಜನರನ್ನು ಆತಂಕಕ್ಕೆ ಒಳಗಾಗಿಸಿದೆ. ದೊಡ್ಡ ತೋಗೂರು ಪಂಚಾಯಿತಿ ಪ್ಯಾಪ್ತಿಯಲ್ಲಿ ಬರುವ ಲೇಔಟ್‌ನಲ್ಲಿ ಒಟ್ಟು ನಾಲ್ಕು ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಸುದ್ದಿ ಹರಡಿಸುತ್ತಿರುವ ವಿಡಿಯೋ ಈಗ ಸ್ಥಳೀಯರನ್ನು ಗಾಬರಿಪಡಿಸುತ್ತಿದೆ.

ನಿಲ್ಲದ ಜಗತ್ತಿನ ತಲ್ಲಣ: 10 ಸಾವಿರ ದಾಟಿದ ಕೊರೊನಾ ಸಾವಿನ ಪ್ರಮಾಣನಿಲ್ಲದ ಜಗತ್ತಿನ ತಲ್ಲಣ: 10 ಸಾವಿರ ದಾಟಿದ ಕೊರೊನಾ ಸಾವಿನ ಪ್ರಮಾಣ

ದೊಡ್ಡ ತೋಗೂರು ಪಂಚಾಯಿತಿ ಪ್ಯಾಪ್ತಿಯ ಎಲ್ಲಾ ಪುಟ್‌ಪಾಟ್‌ ವ್ಯಾಪಾರಿಗಳು, ಬಾರ್, ರೆಸ್ಟೋರೆಂಟ್, ಬೀದಿ ವ್ಯಾಪಾರಿಗಳನ್ನು ಅಂಗಡಿ ಮುಚ್ಚುವಂತೆ ವ್ಯಕ್ತಿಯೊಬ್ಬ ಧ್ವನಿವರ್ಧಕ ಬಳಸಿ ಘೋಷಣೆ ಮಾಡಿದ್ದಾನೆ. ಈ ವಿಡಿಯೋದಲ್ಲಿ ಹೇಳುತ್ತಿರುವುದು ಎಷ್ಟು ಸತ್ಯ? ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೊರೊನಾ ಬಂದಿರುವ ನಿಜನಾ? ಮುಂದೆ ಓದಿ...

ಇದು ತಪ್ಪು ಪ್ರಚಾರ

ವಿದೇಶದಿಂದ ಬಂದಿರುವ ನಾಲ್ಕು ಜನಕ್ಕೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೊರೊನಾ ಬಂದಿದೆ. ಆ ಕಾರಣದಿಂದ ಬೀದಿ ವ್ಯಾಪಾರಿಗಳು, ಬಾರ್, ಹೋಟೆಲ್, ರೆಸ್ಟೋರೆಂಟ್ ಮುಚ್ಚಬೇಕಾಗಿ ಸಾರ್ವಜನರಿಕರಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ವ್ಯಕ್ತಿಯೊಬ್ಬ ಧ್ವನಿವರ್ಧಕ ಮೂಲಕ ಸಾರ್ವಜನಿಕವಾಗಿ ಘೋಷಣೆ ಮಾಡಿದ್ದಾನೆ. ಆದರೆ, ಈ ಮಾಹಿತಿ ತಪ್ಪು ಎಂದು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಪ್ರಾಧಿಕಾರ ತಿಳಿಸಿದೆ.

ವಿದೇಶಿಯರಿಗೆ ನೆಗಿಟಿವ್ ಬಂದಿದೆ

ವಿದೇಶಿಯರಿಗೆ ನೆಗಿಟಿವ್ ಬಂದಿದೆ

ಇತ್ತೀಚಿಗೆ ವಿದೇಶಿದಿಂದ ಬಂದ ಬಂದಿರುವ ವ್ಯಕ್ತಿಗಳನ್ನು ಪರೀಕ್ಷೆ ಮಾಡಲಾಗಿದೆ. ಅವರಲ್ಲಿ ಕೊರೊನಾ ನೆಗಿಟಿವ್ ಬಂದಿದೆ. ಅವರನ್ನು ಗೃಹಬಂಧನಲ್ಲಿ ಇಡಲಾಗಿಲ್ಲ. ಆದರೂ ಅವರನ್ನು ಮನೆಯಲ್ಲಿ ಉಳಿಯುವಂತೆ ಸಲಹೆ ನೀಡಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.

Breaking: ದೇಶದಲ್ಲಿ ಮುಂದುವರೆದ ಕೊರೊನಾ ಸಾವು: ಸಂಖ್ಯೆ 5ಕ್ಕೆ ಏರಿಕೆBreaking: ದೇಶದಲ್ಲಿ ಮುಂದುವರೆದ ಕೊರೊನಾ ಸಾವು: ಸಂಖ್ಯೆ 5ಕ್ಕೆ ಏರಿಕೆ

ಐಟಿ ಕಂಪನಿಗಳು ಹೆಚ್ಚಿರುವುದರಿಂದ ಅನುಮಾನ!

ಐಟಿ ಕಂಪನಿಗಳು ಹೆಚ್ಚಿರುವುದರಿಂದ ಅನುಮಾನ!

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇನ್ಫೋಸಿಸ್ ಸೇರಿದಂತೆ ಹಲವು ಐಟಿ ಕಂಪನಿಗಳು ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ವಿದೇಶಿಗರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಎಲೆಕ್ಟ್ರಾನಿಕ್ ಸಿಟಿ ಸುತ್ತಾಮುತ್ತ ಕೊರೊನಾ ಬಂದಿರಬಹುದು ಎಂಬ ಗಾಳಿ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಇದಕ್ಕೆ ಸಾರ್ವಜನಿಕರು ಕಿವಿಕೊಡಬೇಡಿ. ಅಂತಹ ಯಾವುದೇ ಕೇಸ್‌ಗಳು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪತ್ತೆಯಾಗಿಲ್ಲ.

ಸರ್ಕಾರ ಅಧಿಕೃತ ಮಾಡಿದ್ರೆ ಮಾತ್ರ ನಂಬಿ

ಸರ್ಕಾರ ಅಧಿಕೃತ ಮಾಡಿದ್ರೆ ಮಾತ್ರ ನಂಬಿ

ಕೊರೊನಾ ವಿಚಾರದಲ್ಲಿ ಸಾರ್ವಜನಿಕರು ಎಚ್ಚರದಿಂದ ಇದ್ದರೆ ಒಳ್ಳೆಯದು. ರೋಗದ ಲಕ್ಷಣಗಳು ಕಾಣಿಸಿಕೊಂಡರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ. ಫೇಸ್‌ಬುಕ್, ವಾಟ್ಸಾಪ್ ಇನ್ನಿತರ ಸೋಶಿಯಲ್ ಮೀಡಿಯಾದಲ್ಲಿ ಬರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಮತ್ತು ಅದನ್ನ ಶೇರ್ ಮಾಡುವುದು ಉತ್ತಮವಲ್ಲ. ಈ ಬಗ್ಗೆ ಸರ್ಕಾರವೇ ಅಧಿಕೃತ ಮಾಹಿತಿ ನೀಡುತ್ತಿದೆ.

English summary
Fact Check: Electronics City Industrial Township Authority gave clarification on viral video of corona infected in e city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X