ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜ್ಞಾನ ವೆಬ್ ಪ್ರಪಂಚದಲ್ಲಿ ಕನ್ನಡದ 'ಶ್ರೀ' ಕಂಪು

By ಮಲೆನಾಡಿಗ
|
Google Oneindia Kannada News

ವಿಜ್ಞಾನ-ತಂತ್ರಜ್ಞಾನ ವಿಷಯಗಳಿಗಾಗಿ ಮೀಸಲಾಗಿರುವ ಕನ್ನಡ ಜಾಲತಾಣ 'ಇಜ್ಞಾನ ಡಾಟ್ ಕಾಮ್' ಇದೀಗ ಏಳು ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಕನ್ನಡ ಓದುಗರಿಗೆ ವಿಶೇಷವಾದ ಸಪ್ತವರ್ಣ ಹೆಸರಿನಲ್ಲಿ ಒಂದು ಆನ್ ಲೈನ್ ಮ್ಯಾಗಜೀನ್ ಅನ್ನು ಶ್ರೀನಿಧಿ ಹೊರ ತಂದಿದ್ದಾರೆ.

ಹೆಸರು ಟಿ. ಜಿ. ಶ್ರೀನಿಧಿ, ಬೆಂಗಳೂರಿನ ಸಾವಿರಾರು ಸಾಫ್ಟ್ ‌ವೇರಿಗರಲ್ಲಿ ಒಬ್ಬ. ಕನ್ನಡದಲ್ಲಿ ಬರೆಯುವುದು ಹವ್ಯಾಸ. ಈವರೆಗೂ ಪ್ರಕಟವಾಗಿರುವ ಪುಸ್ತಕಗಳು ಹತ್ತು, ಬರಹಗಳು ಆರುನೂರಕ್ಕಿಂತ ಹೆಚ್ಚು. ಒಂದಷ್ಟು ಕಾಲ ವಿಜಯ ಕರ್ನಾಟಕ, ಉಷಾಕಿರಣ, ಸೂರ್ಯೋದಯ ಪತ್ರಿಕೆಗಳಿಗೆ ಅಂಕಣಕಾರನಾಗಿದ್ದೆ. ವಿಜ್ಞಾನ ವಿಷಯಗಳಿಗೆ ಮೀಸಲಾದ ಇ-ಜ್ಞಾನ ಡಾಟ್ ಕಾಮ್ ಕೂಡ ನನ್ನದೇ ತಾಣ ಹೀಗೆ ಸಾಗುತ್ತದೆ ಶ್ರೀನಿಧಿ ಅವರ ಸ್ವಗತ ಪರಿಚಯ. ಇಜ್ಞಾನ ಸಪ್ತ ಸಂಭ್ರಮ, ಶ್ರೀನಿಧಿ ಪರಿಚಯಾತ್ಮಕ ಲೇಖನ ಇದಾಗಿದೆ.

ವಿಜ್ಞಾನದ ವಿಷಯಗಳನ್ನು ಸುಲಭ ಭಾಷೆಯಲ್ಲಿ ಎಲ್ಲರಿಗೂ ತಲುಪಿಸುವ ಮಹತ್ವಾಕಾಂಕ್ಷೆಯ ಈ ತಾಣ ಈವರೆಗೆ 350ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದು, ಅನೇಕ ವಿಭಿನ್ನ ಪ್ರಯತ್ನಗಳ ಮೂಲಕ ಗಮನಸೆಳೆದಿದೆ.[ಕನ್ನಡದಲ್ಲಿ ವಿಜ್ಞಾನ ಬರವಣಿಗೆಯ ಶೈಲಿ]

ಈ ಹಿಂದೆ ಪ್ರಾಯೋಗಿಕವಾಗಿ ವಿದ್ಯುನ್ಮಾನ ಪತ್ರಿಕೆಯೊಂದನ್ನು ಪ್ರಕಟಿಸಿದ್ದ ಇಜ್ಞಾನ ಡಾಟ್ ಕಾಮ್, ತನ್ನ ಏಳನೆಯ ಹುಟ್ಟುಹಬ್ಬದಂದು 'ಸಪ್ತವರ್ಣ' ಎಂಬ ಇ-ಪುಸ್ತಕವನ್ನು ಪ್ರಕಟಿಸಿದೆ. ಏಳು ಲೇಖನಗಳ ಈ ಸಂಕಲನವನ್ನು ಆಸಕ್ತರು ಇಜ್ಞಾನ ತಾಣದಲ್ಲಿ ಉಚಿತವಾಗಿ ಓದಬಹುದು. [ಇಜ್ಞಾನ ತಾಣದ ವಿಳಾಸ]

ಡಿಜಿಟಲ್ ಛಾಯಾಗ್ರಹಣ - ಪ್ರೋಗ್ರಾಮಿಂಗ್ ಮುಂತಾದ ವಿಷಯಗಳನ್ನು ಕುರಿತ ಲೇಖನಸರಣಿಗಳು, ಹೊಸ ಪುಸ್ತಕಗಳ ಪರಿಚಯ, ಕಿರಿಯರಿಗಾಗಿ ವಿಶೇಷ ಬರಹಗಳು - ಹೀಗೆ ವೈವಿಧ್ಯಮಯ ಮಾಹಿತಿಯನ್ನು ಓದುಗರಿಗೆ ತಲುಪಿಸುತ್ತಿರುವ ಈ ತಾಣ ಈಗಾಗಲೇ 85, 000ಕ್ಕೂ ಹೆಚ್ಚು ಪೇಜ್ ವ್ಯೂಗಳನ್ನು ದಾಖಲಿಸಿದೆ. ತಾಣದ ಫೇಸ್ ಬುಕ್ ಪುಟವನ್ನು 500ಕ್ಕೂ ಹೆಚ್ಚು ಸದಸ್ಯರು ಈಗಾಗಲೇ ಮೆಚ್ಚಿದ್ದಾರೆ. ಏಳು ವರ್ಷದ ಸಂಭ್ರಮದ ಬಗ್ಗೆ ಶ್ರೀನಿಧಿ ಹೇಳಿಕೊಂಡಿದ್ದೇನು? ಇಜ್ಞಾನದ ಹಿಂದೆ ಯಾರು ಯಾರಿದ್ದಾರೆ? ಕನ್ನಡದಲ್ಲಿ ವಿಜ್ಞಾನ ಲೇಖನ ಪ್ರಕಟಣೆ ಬಗ್ಗೆ ವಿವರಕ್ಕೆ ಮುಂದೆ ಓದಿ... [ಫೇಸ್ ‌ಬುಕ್ ಪುಟ]

ಇಜ್ಞಾನ ಡಾಟ್ ಕಾಮ್ ಕತೆ ಶುರುವಾದದ್ದು

ಇಜ್ಞಾನ ಡಾಟ್ ಕಾಮ್ ಕತೆ ಶುರುವಾದದ್ದು

ಇಜ್ಞಾನ ಡಾಟ್ ಕಾಮ್ ಕತೆ ಶುರುವಾದದ್ದು ಏಳು ವರ್ಷಗಳ ಹಿಂದೆ, 2007ರ ಏಪ್ರಿಲ್ ‌ನಲ್ಲಿ. ಒಮ್ಮೆ ಹೀಗೆಯೇ ಮಾತನಾಡುತ್ತಿದ್ದಾಗ ವಿಜ್ಞಾನದ ಬರಹಗಳಿಗೇ ಒಂದು ಬ್ಲಾಗ್ ಮಾಡಬಹುದಲ್ಲ ಎಂದು ಐಡಿಯಾ ಕೊಟ್ಟವರು ಲೇಖಕ ಶ್ರೀ ಕೊಳ್ಳೇಗಾಲ ಶರ್ಮ. ಈ ಐಡಿಯಾ ಕುರಿತು ಯೋಚಿಸುತ್ತ ಬ್ಲಾಗಿನ ಹೆಸರೇನಿರಬೇಕು ಎಂದು ಕೇಳಿದಾಗ 'ಇಜ್ಞಾನ'ವೆಂಬ ನಾಮಕರಣ ಮಾಡಿದ್ದು ಗೆಳೆಯ ನಂದಕಿಶೋರ್.

ಶ್ರೀನಿಧಿ ಇ ಪ್ರಪಂಚ ಹಿಂತಿರುಗಿ ನೋಡಿದಾಗ

ಶ್ರೀನಿಧಿ ಇ ಪ್ರಪಂಚ ಹಿಂತಿರುಗಿ ನೋಡಿದಾಗ

ಅಲ್ಲಿಂದ ಇಲ್ಲಿಯವರೆಗೆ, ಕಳೆದ ಏಳು ವರ್ಷಗಳ ಇಜ್ಞಾನದ ಹಾದಿಯಲ್ಲಿ ಹಲವು ಮೈಲಿಗಲ್ಲುಗಳು ಹಾದುಹೋಗಿವೆ: ಇಜ್ಞಾನ 'ಡಾಟ್ ಕಾಮ್' ಆದದ್ದು, ವಿದ್ಯುನ್ಮಾನ ಪತ್ರಿಕೆಯೊಂದನ್ನು ಪ್ರಾಯೋಗಿಕವಾಗಿ ಪ್ರಕಟಿಸಿದ್ದು, 'ತಿನ್ನಲಾಗದ ಬಿಸ್ಕತ್ತು...' ಕೃತಿಯ ಮೂಲಕ ಪ್ರಕಾಶನವನ್ನೂ ಪ್ರಯತ್ನಿಸಿದ್ದು, ಓದುಗರಿಗಾಗಿ ಒಂದೆರಡು ಸ್ಪರ್ಧೆ ಏರ್ಪಡಿಸಿದ್ದು, 'ಶಾಪಿಂಗ್ ಸಂಗಾತಿ' ಪ್ರಾರಂಭಿಸಿದ್ದು... ಹೀಗೆ.

ಡಾಟ್ ಕಾಮ್ ಜೊತೆಯಲ್ಲಿ ನಿಂತವರು

ಡಾಟ್ ಕಾಮ್ ಜೊತೆಯಲ್ಲಿ ನಿಂತವರು

ಇಷ್ಟೆಲ್ಲ ಪ್ರಯತ್ನಗಳಲ್ಲಿ ಇಜ್ಞಾನ ಡಾಟ್ ಕಾಮ್ ಜೊತೆಯಲ್ಲಿ ನಿಂತವರು ಅನೇಕ ಮಂದಿ. ಈ ಅವಧಿಯಲ್ಲಿ ಡಾ. ಪಿ. ಎಸ್. ಶಂಕರ್, ನಾಗೇಶ ಹೆಗಡೆ, ಟಿ. ಆರ್. ಅನಂತರಾಮು, ಡಾ. ಯು. ಬಿ. ಪವನಜ, ಶ್ರೀವತ್ಸ ಜೋಶಿ, ಬೇಳೂರು ಸುದರ್ಶನ, ಕೊಳ್ಳೇಗಾಲ ಶರ್ಮ, ಟಿ. ಎಸ್. ಗೋಪಾಲ್ ಸೇರಿದಂತೆ ಅನೇಕ ಮಹನೀಯರ ಲೇಖನಗಳನ್ನು ಪ್ರಕಟಿಸುವ - ಹಲವು ಲೇಖಕರ ಪುಸ್ತಕಗಳನ್ನು ಪರಿಚಯಿಸುವ ಅವಕಾಶ ಇಜ್ಞಾನಕ್ಕೆ ದೊರಕಿತು. ಇಜ್ಞಾನದ ಪ್ರಯೋಗಗಳಿಗೆ ಓದುಗರ - ಪತ್ರಿಕೆಗಳ - ಒನ್ ಇಂಡಿಯಾ ಕನ್ನಡ ಸೇರಿದಂತೆ ಅನೇಕ ಜಾಲತಾಣಗಳ ಬೆಂಬಲವೂ ಒದಗಿ ಬಂತು.

ಸಪ್ತವರ್ಣ' ಎಂಬ ಇ-ಪುಸ್ತಕ

ಸಪ್ತವರ್ಣ' ಎಂಬ ಇ-ಪುಸ್ತಕ

ಹುಟ್ಟುಹಬ್ಬದ ಈ ಖುಷಿಯಲ್ಲಿ ನಿಮಗೆ ನಮ್ಮ ಉಡುಗೊರೆಯಾಗಿ 'ಸಪ್ತವರ್ಣ' ಎಂಬ ಇ-ಪುಸ್ತಕವನ್ನು ಉಚಿತವಾಗಿ ನೀಡುತ್ತಿದ್ದೇವೆ. ಕಳೆದ ಏಳು ವರ್ಷಗಳಲ್ಲಿ ಹೆಚ್ಚು ಜನರನ್ನು ತಲುಪಿದ ಏಳು ಲೇಖನಗಳ ಈ ಸಂಕಲನವನ್ನು ಇಂದು ಪ್ರಕಟಿಸಲು ನಾವು ಹರ್ಷಿಸುತ್ತೇವೆ.

ಈ ಪುಸ್ತಕದಲ್ಲಿ ಪ್ರಕಟಿಸಲು ತಮ್ಮ ಅನಿಸಿಕೆಗಳನ್ನು ನೀಡಿರುವ ವಸುಧೇಂದ್ರ, ಬೇಳೂರು ಸುದರ್ಶನ, ನಂದಕಿಶೋರ್ ಹಾಗೂ ವಿಕಾಸ್ ಹೆಗಡೆಯವರಿಗೆ ನಮ್ಮ ವಿಶೇಷ ಕೃತಜ್ಞತೆಗಳು.

ಇಜ್ಞಾನ ಡಾಟ್ ಕಾಮ್ ಉಚಿತ ಆದರೆ...

ಇಜ್ಞಾನ ಡಾಟ್ ಕಾಮ್ ಉಚಿತ ಆದರೆ...

ಇಜ್ಞಾನ ಡಾಟ್ ಕಾಮ್ ‌ನಲ್ಲಿರುವ ಯಾವ ಮಾಹಿತಿಯನ್ನೂ ವಾಣಿಜ್ಯ ಉದ್ದೇಶಕ್ಕಾಗಿ ಬಳಸುವಂತಿಲ್ಲ. ಪೂರ್ವಾನುಮತಿಯಿಲ್ಲದೆ ಅಥವಾ ಮೂಲದ ಉಲ್ಲೇಖವಿಲ್ಲದೆ ಹಾಗೊಮ್ಮೆ ಬಳಸಿರುವುದು ಕಂಡುಬಂದರೆ ಅದನ್ನು ಕೃತಿಚೌರ್ಯವೆಂದು ಪರಿಗಣಿಸಲಾಗುವುದು. ಈ ತಾಣದಲ್ಲಿರುವ ಯಾವುದೇ ಮಾಹಿತಿಯನ್ನು ಬಳಸುವವರು ಈ ನಿಬಂಧನೆಗೆ ಒಪ್ಪಿದ್ದಾರೆ ಎಂದು ಭಾವಿಸಲಾಗುತ್ತದೆ.

ಟಿ.,ಜಿ ಶ್ರೀನಿಧಿ ಬಗ್ಗೆ ಒಂದಿಷ್ಟು

ಟಿ.,ಜಿ ಶ್ರೀನಿಧಿ ಬಗ್ಗೆ ಒಂದಿಷ್ಟು

ಟಿ,ಜಿ ಶ್ರೀನಿಧಿ ಹುಟ್ಟಿದ ದಿನ ಫೆಬ್ರುವರಿ 24, 1983ರಂದು. ಹುಟ್ಟಿದ್ದು ಅರಸೀಕೆರೆ ಬಳಿಯ ಬಾಣಾವರದಲ್ಲಿ. ಓದಿದ್ದು ನಾಗರಹೊಳೆ ಅರಣ್ಯಪ್ರದೇಶಕ್ಕೆ ಸಮೀಪವಿರುವ ವಿರಾಜಪೇಟೆ ತಾಲ್ಲೂಕಿನ ದಕ್ಷಿಣ ಕೊಡಗಿನ ಶ್ರೀಮಂಗಲದಲ್ಲಿ. BITS ಪಿಲಾನಿಯಿಂದ ಹೊರಬಂದಿರುವ ಪ್ರತಿಭೆ, ಕನ್ನಡದಲ್ಲಿ ವಿಜ್ಞಾನ ಬರಹಗಳನ್ನು ಬರೆದು, ಜಾಲತಾಣಗಳಲ್ಲಿ ಪ್ರಚಾರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇನ್ಫೋಸಿಸ್ ಉದ್ಯೋಗಿಯಾಗಿದ್ದ ಶ್ರೀನಿಧಿ ಈಗ ಟಿಇ ಕನೆಕ್ಟಿವಿಟಿಯಲ್ಲಿ ಉದ್ಯೋಗಿ.

ತಂದೆ ನಿವೃತ್ತ ಕನ್ನಡ ಪ್ರಾಧ್ಯಾಪಕರೂ ಪ್ರಸಿದ್ಧ ಬರಹಗಾರರೂ ಆದ ಟಿ. ಎಸ್. ಗೋಪಾಲ್ ಮತ್ತು ತಾಯಿ ಗೀತ. ಪತ್ನಿ ಯಶಸ್ವಿನಿ ಯದುರಾಜನ್. ಕನ್ನಡದಲ್ಲಿ ವಿಜ್ಜಾನ ಬರಹಗಾರನಾಗಿ ಬೆಳೆಯರು ಕುಟುಂಬದ ನೆರವು ಕೂಡಾ ಕಾಲಕಾಲಕ್ಕೆ ಸಿಕ್ಕಿದ್ದು ನನಗೆ ಸಹಾಯಕವಾಗಿದೆ ಎಂದು ಶ್ರೀನಿಧಿ ಹೇಳಿದ್ದಾರೆ.

ಅಂಕಣಕಾರರಾಗಿ ಟಿ.ಜಿ ಶ್ರೀನಿಧಿ

ಅಂಕಣಕಾರರಾಗಿ ಟಿ.ಜಿ ಶ್ರೀನಿಧಿ

ಉದಯವಾಣಿ ಬೆಂಗಳೂರು ಆವೃತ್ತಿಯಲ್ಲಿ ನನ್ನ 'ವಿಜ್ಞಾಪನೆ' ಅಂಕಣ ಸತತ 122 ವಾರಗಳವರೆಗೆ ಪ್ರಕಟವಾಗಿತ್ತು. ಪ್ರಸ್ತುತ ಉದಯವಾಣಿ ಮಣಿಪಾಲ ಆವೃತ್ತಿಯ 'ಯುವ ಸಂಪದ' ಪುರವಣಿಯಲ್ಲಿ ನನ್ನ ಅಂಕಣ 'ಸ್ವ-ತಂತ್ರ' ಕಳೆದ 50+ ವಾರಗಳಿಂದ ಪ್ರಕಟವಾಗುತ್ತಿದೆ. ವಿಜಯವಾಣಿಯ ವಿತ್ತವಾಣಿ ಪುರವಣಿಯಲ್ಲಿ 'ಯಾವುದನ್ ಕೊಳ್ಳಲಿ?' ಎಂಬ ಲೇಖನಸರಣಿಯೂ ಪ್ರಕಟವಾಗುತ್ತಿದೆ.

2011ರಲ್ಲಿ ಹೊರಬಂದ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಪುಸ್ತಕಕ್ಕೆ ಪ್ರೊ. ಜೀವಿಯವರ ಕೈಯಿಂದ ಲೋಕಾರ್ಪಣೆಯಾಗುವ ಭಾಗ್ಯ ಸಿಕ್ಕಿತು. ಅದೇ ಪುಸ್ತಕಕ್ಕಾಗಿ ನನಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಲೇಖಕ' ಪ್ರಶಸ್ತಿಯೂ ಬಂತು.

2013ರ ಸೆಪ್ಟೆಂಬರ್ ತಿಂಗಳಲ್ಲಿ ನನ್ನ ಹತ್ತನೆಯ ಪುಸ್ತಕ 'ಕ್ಲಿಕ್ ಮಾಡಿ ನೋಡಿ!' ನವಕರ್ನಾಟಕ ಪ್ರಕಾಶನದಿಂದ ಹೊರಬಂತು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಇಜ್ಞಾನ ತಾಣದ ವಿಳಾಸ www.ejnana.com ಹಾಗೂ ಫೇಸ್ ‌ಬುಕ್ ಪುಟ www.facebook.com/ejnana

English summary
ejnana Kannada Science Website by Techie TG Srinidhi turned seven. TG Srinidhi is celebrating this event by releasing a free online magazine fo Kannada readers. TG Srinidhi is a software professional and science columnist in various daily magazines and newspapers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X