ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಎಂಟು ವಾರ್ಡ್‌ಗಳಲ್ಲಿ ಕಳೆದ 10 ದಿನಗಳಿಂದ ಶೂನ್ಯ ಕೊರೊನಾ ಪ್ರಕರಣ

|
Google Oneindia Kannada News

ಬೆಂಗಳೂರು,ಜನವರಿ 25: ನಗರದ 8 ವಾರ್ಡ್‌ಗಳಲ್ಲಿ ಕಳೆದ 10ದಿನಗಳಿಂದ ಶೂಣ್ಯ ಕೊರೊನಾ ಪ್ರಕರಣಗಳು ದಾಖಲಾಗಿವೆ.

ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಆರಂಭದಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿದ್ದ ಪಶ್ಚಿಮ ವಲಯದಲ್ಲಿ ನಾಲ್ಕು ಹಾಗೂ ದಕ್ಷಿಣ ವಲಯದಲ್ಲಿ ನಾಲ್ಕು ವಾರ್ಡ್ ಗಳಲ್ಲಿ ಸೋಂಕು ತೀವ್ರ ರೀತಿಯಲ್ಲಿ ಇಳಿಮುಖಗೊಂಡಿದೆ.

ಕೊರೊನಾ ಲಸಿಕೆ ಅಭಿಯಾನ: ಬಿಬಿಎಂಪಿ ಹೊರವಲಯದಲ್ಲಿ ಕಳಪೆ ಸಾಧನೆಕೊರೊನಾ ಲಸಿಕೆ ಅಭಿಯಾನ: ಬಿಬಿಎಂಪಿ ಹೊರವಲಯದಲ್ಲಿ ಕಳಪೆ ಸಾಧನೆ

ಕಳೆದ 10 ದಿನಗಳಲ್ಲಿ ಬೆಳ್ಳಂದೂರು, ಸುದ್ದಗುಂಟೆ ಪಾಳ್ಯ, ವರ್ತೂರು, ದೊಡ್ಡನೆಕುಂದಿ, ಹೊರಮಾವು, ಜ್ಞಾನಭಾರತಿ, ಹೆಚ್ ಬಿಆರ್ ಲೇಔಟ್ , ಬ್ಯಾಟರಾಯನಪುರ, ಉತ್ತರಹಳ್ಳಿ ಮತ್ತು ವಸಂತಪುರದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಕಂಡುಬಂದಿವೆ.

Eight Wards In Bengaluru Have Zero COVID-19 Cases In 10 Days

ದಕ್ಷಿಣ ವಲಯದ ಗುರಪ್ಪನಪಾಳ್ಯ (ವಾರ್ಡ್ 171) ಬನಶಂಕರಿ ದೇವಾಲಯ ವಾರ್ಡ್ (180) ಕೆಂಪಾಪುರ ಅಗ್ರಹಾರ (ವಾರ್ಡ್ 122) ವಿಜಯನಗರ (ವಾರ್ಡ್ 123) ಹಾಗೂ ಪಶ್ಚಿಮ ವಲಯದ ಬಿನ್ನಿಪೇಟೆ ( ವಾರ್ಡ್ 121) ಜಗಜೀವನರಾಂ ನಗರ ( ವಾರ್ಡ್ 136) ಪ್ರಕಾಶ್ ನಗರ ( ವಾರ್ಡ್ 98) ಗಳಲ್ಲಿ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಅಧಿಕಾರಿಗಳು ಆರಂಭಿಕ ಹಂತದಲ್ಲಿಯೇ ಸೋಂಕು ಪತ್ತೆ ಹಚ್ಚಿ, ಮುಂಜಾಗ್ರತೆ ವಹಿಸಿದ್ದರಿಂದ ಸೋಂಕು ಕಡಿಮೆಯಾಗಲು ಕಾರಣ ಎನ್ನಲಾಗುತ್ತಿದೆ.

Recommended Video

ಗಣರಾಜ್ಯೋತ್ಸವಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಬ್ರೇಕ್- ರಾಜಧಾನಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ | Oneinda Kannada

68 ಸಾವಿರ ಜನಸಂಖ್ಯೆ ಹೊಂದಿರುವ ಗುರಪ್ಪನ ಪಾಳ್ಯ ವಾರ್ಡ್ ನಲ್ಲಿ ಹೆಚ್ಚಿನ ಕೋವಿಡ್ ಸಾವುಗಳು ಸಂಭವಿಸಿತ್ತು. ಆದರೆ, ಆರಂಭಿಕ ಹಂತದಲ್ಲಿ ಸೋಂಕು ಪತ್ತೆ ಹಚ್ಚಿ ಮುಂಜಾಗ್ರತೆ ವಹಿಸಿದ್ದರಿಂದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ ತಾವರೆಕೆರೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರವೀಣ್ ಕುಮಾರ್.

English summary
While Bengaluru has been witnessing a drop in COVID-19 cases over the past 10 days, eight wards in the city have reported no cases at all.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X