ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಒಂದೇ ವರ್ಷದಲ್ಲಿ ಎಂಟು ಉಗ್ರರ ಬಂಧನ: ಇಲ್ಲಿದೆ ವಿವರ..

|
Google Oneindia Kannada News

ಬೆಂಗಳೂರು, ಜೂನ್ 08: ಕರ್ನಾಟಕ ಭಯೋತ್ಪಾದಕರ ಆಶ್ರಯ ತಾಣವಾಗುತ್ತಿದ್ಯಾ ಎಂಬ ಅನುಮಾನ ಮೂಡುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಸಿಕ್ಕಿಬಿದ್ದಿರುವ ಉಗ್ರರ ಅಂಕಿ ಅಂಶಗಳೇ ರಾಜ್ಯ ಉಗ್ರರ ಆಶ್ರಯ ತಾಣವಾಗ್ತಿದೆ ಅನ್ನೋ ಮಾಹಿತಿಯನ್ನು ಬಿಚ್ಚಿಡ್ತಿದೆ. ಅಷ್ಟಕ್ಕೂ ಉಗ್ರಗಾಮಿಗಳು ಕರ್ನಾಟಕದ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಹೆಚ್ಚು ಆಶ್ರಯವನ್ನು ಪಡೆಯುತ್ತಿದ್ದಾರೆ ಎಂಬುದು ರಾಜ್ಯಕ್ಕೆ ಆತಂಕಕಾರಿ ವಿಚಾರವಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಸದ್ದಿಲ್ಲದೇ ಕಳೆದ ಎಂಟು ವರ್ಷಗಳಿಂದ ಉಗ್ರ ತಾಲೀಬ್ ಹುಸೇನ್ ಆಶ್ರಯವನ್ನು ಪಡೆದುಕೊಂಡಿದ್ದ. ಆತನನ್ನು ಮೊಬೈಲ್‌ ಸಿಮ್ ಆಧಾರದಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಬೆಂಗಳೂರಿಗೆ ಬಂದು ಶ್ರೀರಾಮ ಪುರ ಪೊಲೀಸರ ಸಹಾಯದೊಂದಿಗೆ ಓಕಳಿಪುರ ಮಸೀದಿ ಸಮೀಪದಲ್ಲಿ ಬಂಧಿಸಿದ್ದರು. ಪಾಕಿಸ್ತಾನ ಮೂಲದ ಹಿಜಬುಲ್ ಮುಜಾಹಿದ್ದೀನ್ ಸಂಘಟನೆಯ ಜೊತೆಯಲ್ಲಿ ಗುರುತಿಸಿಕೊಂಡಿದ್ದ ಉಗ್ರಗಾಮಿ ಬೆಂಗಳೂರಿನಲ್ಲಿ ಆಶ್ರಯವನ್ನು ಪಡೆದಕೊಂಡಿದ್ದ ಅನ್ನೋ ಸಂಗತಿ ನಿಜಕ್ಕೂ ಗಾಬರಿಯಾಗುವಂತೆ ಮಾಡುತ್ತದೆ.

Breaking: ಕುಪ್ವಾರದಲ್ಲಿ ಎನ್‌ಕೌಂಟರ್‌, ಇಬ್ಬರು ಉಗ್ರರ ಹತ್ಯೆ Breaking: ಕುಪ್ವಾರದಲ್ಲಿ ಎನ್‌ಕೌಂಟರ್‌, ಇಬ್ಬರು ಉಗ್ರರ ಹತ್ಯೆ

ಜೂನ್ 2020ರಿಂದ ಇಲ್ಲಿಯವರೆಗೂ ರಾಜ್ಯದಲ್ಲಿ ಸರಿಸುಮಾರು ಎಂಟು ಉಗ್ರರನ್ನು ರಾಜ್ಯದಲ್ಲಿ ಬಂಧಿಸಲಾಗಿದೆ. ರಾಜ್ಯದಲ್ಲಿ ಬಂಧನಕ್ಕೆ ಒಳಗಾಗಿರುವ ಬಹುತೇಕ ಉಗ್ರರು ಸಿಕ್ಕಿಬಿದ್ದಿರೋದು ಬೆಂಗಳೂರು ಮತ್ತು ಮಂಗಳೂರಿನಲ್ಲಿ ಅನ್ನೋದು ಗಮನಿಸಬೇಕಾದ ಅಂಶವಾಗಿದೆ.

ಉಗ್ರರ ಗುಂಡೇಟಿಗೆ ಬೆದರಿದ ಕಾಶ್ಮೀರಿ ಪಂಡಿತರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಉಗ್ರರ ಗುಂಡೇಟಿಗೆ ಬೆದರಿದ ಕಾಶ್ಮೀರಿ ಪಂಡಿತರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ

ಇಬ್ಬರು ಉಗ್ರರ ಬಂಧನ

ಇಬ್ಬರು ಉಗ್ರರ ಬಂಧನ

ಕೇರಳದ ಐಸಿಸ್ ನೇಮಕಾತಿಗಾಗಿ ಕೆಲಸ ಮಾಡುತ್ತಿದ್ದ ಅಮರ್ ಅಬ್ದುಲ್ ರೆಹಮಾನ್‌ನನ್ನು ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇರಳ ಎನ್ಐಎ ಕೇರಳ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಇನ್ನು ಫ್ರೇಜರ್ ಟೌನ್‌ನಲ್ಲಿ ಅಡಗಿಕುಳಿತಿದ್ದ ಶಂಕರ್ ವೆಂಕಟೇಶ್ ಪೆರುಮಾಳ್‌ರನ್ನು ಎನ್‌ಐಎ ನೇಮಿಸಿತ್ತು.

ಐಸಿಸ್ ನೇಮಕಾತಿ ನೋಡಿಕೊಳ್ಳುತ್ತಿದ್ದರು

ಐಸಿಸ್ ನೇಮಕಾತಿ ನೋಡಿಕೊಳ್ಳುತ್ತಿದ್ದರು

ಐಸಿಸ್ ಪರವಾಗಿ ಕೆಲಸ ಮಾಡುತ್ತಿದ್ದ ಅದರಲ್ಲೂ ನೇಮಕಾತಿಗಾಗಿ ರಾಜ್ಯದಲ್ಲಿ ಸೈಲೆಂಟಾಗಿ ವರ್ಕ್ ಮಾಡುತ್ತಿದ್ದ ನಾಲ್ವರನ್ನು ಎನ್ಐಎ ಬಂಧಿಸಿತ್ತು. ಜೋಯೆಬ್ ಮನ್ನಾ ಎಂಬಾತನನ್ನು ಮಂಗಳೂರಿನ ಭಟ್ಕಳದಲ್ಲಿ ಜೋಯೆಬ್ ಮನ್ನಾನನ್ನು ಬಂಧಿಸಲಾಯ್ತು. ಇನ್ನು ಇರ್ಫಾನ್ ನಾಸೀರ್, ಮಹಮ್ಮದ್ ತಕ್ವೀರ್ , ಅಹಮ್ಮದ್ ಖಾದರ್‌ರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.

ದೀಪ್ತಿ ಮಾರ್ಲಾಳ ಬಂಧನ

ದೀಪ್ತಿ ಮಾರ್ಲಾಳ ಬಂಧನ

ಬೆಂಗಳೂರಿನ ಕೆಂಗೇರಿ ಸಮೀಪದಲ್ಲಿ ಉಗ್ರರಿಗೆ ನರವಾಗುತ್ತಿದ್ದ ಆರೋಪದಲ್ಲಿ ದೀಪ್ತಿ ಮಾರ್ಲಾಳನ್ನು ಜನವರಿ 2022ರಲ್ಲಿ ಬಂಧಿಸಲಾಗಿತ್ತು. ದೀಪ್ತಿ ಮಾರ್ಲಾರ ವಿರುದ್ದ ಚಾರ್ಜ್ ಶೀಟ್ ಅನ್ನು ಸಹ ಹಾಕಲಾಗಿತ್ತು.


ಬೆಂಗಳೂರಿನಲ್ಲಿ ಸಾಕಷ್ಟು ಉಗ್ರರ ಸ್ಲೀಪರ್ ಸೆಲ್‌ ಸೆಲ್ ನಲ್ಲಿ ಕೆಲಸವನ್ನು ಮಾಡಿ ಸಿಕ್ಕಿಬೀಳುತ್ತಿದ್ದಾರೆ. ಆದರೂ ರಾಜ್ಯದ ಭದ್ರತೆ ಮತ್ತು ಸುರಕ್ಷತೆಯ ವಿಚಾರದಲ್ಲಿ ರಾಜ್ಯ ಗುಪ್ತಚರ ಇಲಾಖೆ ಮತ್ತು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮತ್ತಷ್ಟು ಬಿಗಿ ಭದ್ರತೆಯನ್ನು ಕೈಗೊಳ್ಳಬೇಕು. ಸ್ಲೀಪರ್ ಸೆಲ್‌ನಲ್ಲಿ ಕೆಲಸವನ್ನು ಮಾಡುತ್ತಿರುವ ಬಗ್ಗೆ ಸೂಕ್ಷ್ಮವಾಗಿ ಗಮನವನ್ನು ಕೇಂದ್ರೀಕರಿಸಬೇಕಿದೆ.

ತಾಲೀಬ್ ಹುಸೇನ್ ವಿಚಾರಣೆ ತೀವ್ರ

ತಾಲೀಬ್ ಹುಸೇನ್ ವಿಚಾರಣೆ ತೀವ್ರ

ತಾಲೀಬ್ ಹುಸೇನ್ ಬೆಂಗಳೂರಿ ಓಕಳಿಪುರದಲ್ಲಿ ಅಡಗಿದ್ದ. ಈತನನ್ನು ಕಾಶ್ಮೀರ ಪೊಲೀಸರು ಬಂಧಿಸಿ ಜಮ್ಮು ಕಾಶ್ಮೀರಕ್ಕೆ ಕರೆದುಕೊಂಡು ಹೋಗಿದ್ದಾರೆ. ಕಿಸ್ತವಾರ್ ಪೊಲಾಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖಾದಳಗಳು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ. ಆ ಮೂಲಕ ಕಾಶ್ಮೀರ ಉಗ್ರ ಬೆಂಗಳೂರಿನಲ್ಲಿ ಕೇವಲ ತಲೆಮರೆಸಿಕೊಂಡಿದ್ದನೇ ಅಥವಾ ಸಿಲಿಕಾನ್ ಸಿಟಿಯಲ್ಲಿದ್ದುಕೊಂಡು ಕಾಶ್ಮೀರ ಉಗ್ರರಿಗೆ ನೆರವಾಗುತ್ತಿದ್ದನೇ, ಸ್ಲೀಪರ್ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದನೇ ಎಂಬುದರ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ.

Recommended Video

ಉಗ್ರನನ್ನ ಅರೆಸ್ಟ್ ಮಾಡಿದ ಬೆಂಗಳೂರು ಪೊಲೀಸ್ | Oneindia Kannada

English summary
Eight Terror arrested arrest last one year in karnataka Here is the full details. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X