ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಈಜಿಪ್ಟ್‌ ಈರುಳ್ಳಿ; ಕೆಜಿಗೆ ಎರಡು ಮಾತ್ರ, ದರ ಎಷ್ಟು?

|
Google Oneindia Kannada News

ಬೆಂಗಳೂರು, ಡಿಸೆಂಬರ್ 8 : ಬೆಂಗಳೂರು ನಗರದಲ್ಲಿ ಈರುಳ್ಳಿ ದರ ದಾಖಲೆ ಬರೆದಿದೆ. ಈಜಿಪ್ಟ್ ಈರುಳ್ಳಿ ನಗರದ ಮಾರುಕಟ್ಟೆಗೆ ಪ್ರವೇಶ ಮಾಡಿದೆ. ಸೋಮವಾರದಿಂದ ಜನರು ಈಜಿಪ್ಟ್‌ನಿಂದ ಆಮದಾಗಿರುವ ಈರುಳ್ಳಿ ರುಚಿಯನ್ನು ಸವಿಯಬಹುದು.

ನಗರದಲ್ಲಿ ಈರುಳ್ಳಿ ದರ ಕೆ. ಜಿ.ಗೆ 190 ರಿಂದ 200 ರೂ. ಆಗಿದೆ. ಈರುಳ್ಳಿ ಖರೀದಿ ಮಾಡಲು ಮಾರುಕಟ್ಟೆಗೆ ಹೋದವರು ಬರಿಗೈಯಲ್ಲಿ ವಾಪಸ್ ಬರುತ್ತಿದ್ದಾರೆ. ನಗರದ ಯಶವಂತಪುರ ಮಾರುಕಟ್ಟೆಗೆ ಈಗ ಈಜಿಪ್ಟ್ ಈರುಳ್ಳಿ ಬಂದಿದೆ.

ತುಮಕೂರು; ಅಪಘಾತದ ಕಥೆ ಹೇಳಿ ಈರುಳ್ಳಿ ಕದ್ದ ಲಾರಿ ಚಾಲಕ!ತುಮಕೂರು; ಅಪಘಾತದ ಕಥೆ ಹೇಳಿ ಈರುಳ್ಳಿ ಕದ್ದ ಲಾರಿ ಚಾಲಕ!

ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಈಜಿಪ್ಟ್‌ ಈರುಳ್ಳಿ ಗಾತ್ರದಲ್ಲಿ ದೊಡ್ಡದು. ಸುಮಾರು 750 ಗ್ರಾಂ ತೂಕವಿರುವ ಈರುಳ್ಳಿ ಒಂದು ಕೆ. ಜಿ.ಗೆ ಎರಡು ಮಾತ್ರ ಬರುತ್ತದೆ. ನಗರದ ಮಾರುಕಟ್ಟೆಯಲ್ಲಿ ಸೋಮವಾರದಿಂದ ಇದು ಲಭ್ಯವಿದ್ದು ಕೆ. ಜಿ. ಗೆ 150 ರೂ..

ಈರುಳ್ಳಿ ಬೆಲೆ ಇಳಿಕೆಗೆ ಇನ್ನೊಂದು ವಾರವಷ್ಟೇ ಸಾಕು!ಈರುಳ್ಳಿ ಬೆಲೆ ಇಳಿಕೆಗೆ ಇನ್ನೊಂದು ವಾರವಷ್ಟೇ ಸಾಕು!

Egypt Onion In Bengaluru Market Price

ಯಶವಂತಪುರಕ್ಕೆ ಗುಜರಾತ್, ಪುಣೆಯಿಂದ ಈರುಳ್ಳಿ ಬರುತ್ತದೆ. ಆದರೆ, ಈಗ ಪೂರೈಕೆ ಸ್ಥಗಿತಗೊಂಡಿರುವುದರಿಂದ ಈರುಳ್ಳಿ ವರ್ತಕರು ಖಾಲಿ ಕೂತಿದ್ದಾರೆ. ಹುಬ್ಬಳ್ಳಿ, ಗದಗ ಭಾಗದಿಂದಲೂ ಈರುಳ್ಳಿ ಬರುತ್ತಿಲ್ಲ.

 ಹುಬ್ಬಳ್ಳಿಯಲ್ಲಿ ಬಿಸಿ ತುಪ್ಪದಂತೆ ಮಾರಾಟವಾಯ್ತು ಈಜಿಪ್ಟ್ ಈರುಳ್ಳಿ ಹುಬ್ಬಳ್ಳಿಯಲ್ಲಿ ಬಿಸಿ ತುಪ್ಪದಂತೆ ಮಾರಾಟವಾಯ್ತು ಈಜಿಪ್ಟ್ ಈರುಳ್ಳಿ

ಈಜಿಪ್ಟ್ ಈರುಳ್ಳಿ ಈಗಾಗಲೇ ಮಂಗಳೂರು, ಹುಬ್ಬಳ್ಳಿಯ ಮಾರುಕಟ್ಟೆಗೆ ಕಾಲಿಟ್ಟಿದೆ. ಕರಾವಳಿ ಭಾಗದಲ್ಲಿ ಜನರು ಈಜಿಪ್ಟ್‌ ಈರುಳ್ಳಿಗಿಂತ ಟರ್ಕಿಯ ಈರುಳ್ಳಿಯೇ ಹೆಚ್ಚು ರುಚಿ ಎಂದು ಹೇಳುತ್ತಿದ್ದಾರೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈರುಳ್ಳಿ ದರದಲ್ಲಿ ವ್ಯತ್ಯಾಸವಿದೆ. ಕೋಲಾರದಲ್ಲಿ 140 ರಿಂದ 150, ದಾವಣಗೆರೆಯಲ್ಲಿ 150, ಮೈಸೂರಿನಲ್ಲಿ 165 ರಿಂದ 170, ಕಲಬುರಗಿಯಲ್ಲಿ 100, ಚಿಕ್ಕಮಗಳೂರಿನಲ್ಲಿ ಕೆ. ಜಿ. ಗೆ 140 ರೂ. ದರವಿದೆ.

English summary
Onions price in Karnataka have been witnessing new record. Egypt onion come to Bengaluru market, Available for people from December 9, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X