ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬನ್ನೇರುಘಟ್ಟ ಉದ್ಯಾನಕ್ಕೆ 'ಆ ಲ್ಯಾಂಡ್‌ನಿಂದ ಬರಲಿದೆ ಈಲ್ಯಾಂಡ್‌'

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 20: ಬನ್ನೇರುಘಟ್ಟ ಜೈವಿಕ ಉದ್ಯಾನದ ಕಳೆಯನ್ನು ಮತ್ತಷ್ಟು ಹೆಚ್ಚಿಸಲು ಈ ಲ್ಯಾಂಡ್‌ ಪ್ರಾಣಿಗಳನ್ನು ದಕ್ಷಿಣ ಆಫ್ರಿಕಾದಿಂದ ಕರೆತರಲಾಗುತ್ತಿದೆ.

ಈಗಾಗಲೇ ಲಂಡನ್‌ನಿಂದ ಎರಡು ಬಿಳಿ ಹುಲಿ, ಇಸ್ರೇಲ್‌ ಟೆಲ್‌ ಆವೀವ್‌ನಿಂದ 4 ಝೀಬ್ರಾಗಳನ್ನು ವಿಮಾನದ ಮೂಲಕ ತರಿಸಿಕೊಳ್ಳಲಾಗಿದೆ. ಇದೀಗ ನೀಲಗಾಯ್‌ನಂತೆ ಕಾಣುವ ಈ ಲ್ಯಾಂಡ್‌ನ್ನು ತರಿಸಿಕೊಳ್ಳಲು ಆಲೋಚನೆ ನಡೆಸಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಜಿರಾಫೆ ಆಗಮನಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಜಿರಾಫೆ ಆಗಮನ

ಈಗ ಸದ್ಯ 2 ಗಂಡು ಮತ್ತು 3 ಹೆಣ್ಣು ಸೇರಿ ಒಟ್ಟು 5 ಈ ಲ್ಯಾಂಡ್‌ಗಳನ್ನು ತರಲು ಸಿದ್ಧತೆ ನಡೆಯುತ್ತಿದೆ.ಯೂರೋಪಿಯನ್‌ ದೇಶಗಳಲ್ಲಿ ಇವುಗಳ ಸಂತತಿ ಹೆಚ್ಚಾಗಿದ್ದು, ಈ ಹಿಂದೆ ಅಲ್ಲಿಂದ ತರಲು ಸಿದ್ಧತೆ ನಡೆದಿತ್ತು. ಆದರೆ ಆ ಪ್ರಯತ್ನ ಫಲಿಸಿರಲಿಲ್ಲ, ದಕ್ಷಿಣ ಆಫ್ರಿಕಾದಲ್ಲೂ ಇವುಗಳ ಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿನ ಮೃಗಾಲಯವನ್ನು ಸಂಪರ್ಕಿಸಿ, ಮಾತುಕತೆ ನಡೆಸಲಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರ ಅರಣ್ಯ ಮತ್ತು ಪರಿಸರ ಇಲಾಖೆಯೂ ಪ್ರಾಣಿ ಆಮದಿಗೆ ಒಪ್ಪಿಗೆ ನೀಡಿದೆ.

Eeland black buck is the new guest of Bannerughatta park

ಬನ್ನೇರುಘಟ್ಟ ಜೈವಿಕ ಉದ್ಯಾನ ಸುತ್ತ ಕಲ್ಲು ಗಣಿಗಾರಿಕೆ ರದ್ದು!ಬನ್ನೇರುಘಟ್ಟ ಜೈವಿಕ ಉದ್ಯಾನ ಸುತ್ತ ಕಲ್ಲು ಗಣಿಗಾರಿಕೆ ರದ್ದು!

ವಿದೇಶದಿಂದ ಪ್ರಾಣಿಗಳನ್ನು ತರುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಅವುಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ರೋಗಾಣು ಅಥವಾ ವೈರಾಣುಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಬಳಿಕ ಕರೆತರಬೇಕಿದೆ. ಎರಡು ಬಾರಿ ರಕ್ತ ಪರೀಕ್ಷೆಯಲ್ಲಿ ನೆಗೆಟೀವ್‌ ಬಂದರೆ ಮಾತ್ರ ಇಲ್ಲಿಗೆ ಕರೆತರಲಾಗುತ್ತದೆ.

English summary
Eeland, a black buck from South Africa will arrive by air carrier to Bannerughatta geological national park soon as the forest department waiting nod from Director General of Foreign Trade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X