ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮೆರಿಕದಲ್ಲಿ ಓದುವ ಆಸಕ್ತಿಯಿದ್ದವರಿಗೆ ಎಜುಕೇಷನ್ ಯುಎಸ್ಎ ವರ್ಚುಯಲ್ ಶೋಕೇಸ್

|
Google Oneindia Kannada News

ಬೆಂಗಳೂರು, ಜುಲೈ 16: ಯಷ್ನಾ ಟ್ರಸ್ಟ್-ಎಜುಕೇಷನ್ ಯುಎಸ್ಎ ಬೆಂಗಳೂರು ಸಂಸ್ಥೆಯು ಜುಲೈ 23ರಂದು ಅಂಡರ್‌ ಗ್ರಾಜುಯೇಟ್ ವರ್ಚುಯಲ್ ಶೋಕೇಸ್ ಆಯೋಜಿಸಿದ್ದು, ಅಮೆರಿಕದ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳೊಂದಿಗೆ ನೇರ ಸಂವಹನ ನಡೆಸುವ ಮತ್ತು ಅಮೆರಿಕ ಶೈಕ್ಷಣಿಕ ಸಲಹೆಗಾರರೊಂದಿಗೆ, ಅಮೆರಿಕದಲ್ಲಿ ಲಭ್ಯವಿರುವ ಶೈಕ್ಷಣಿಕ ಅವಕಾಶಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಕಲ್ಪಿಸಿದೆ.

ಅಮೆರಿಕಾದ ಹೆಸರಾಂತ ಶಿಕ್ಷಣ ಸಂಸ್ಥೆಗಳಾದ ಯೂನಿವರ್ಸಿಟಿ ಆಫ್ ರೊಚೆಸ್ಟರ್, ಇಂಡಿಯಾನಾ ಯೂನಿವರ್ಸಿಟಿ-ಪರ್ಡ್ಯೂ ಯೂನಿವರ್ಸಿಟಿ ಇಂಡಿಯಾನಾಪೊಲಿಸ್, ಗ್ರಿನ್ನೆಲ್ ಕಾಲೇಜ್, ಮಿಷಿಗನ್ ಸ್ಟೇಟ್ ಯೂನಿವರ್ಸಿಟಿ, ಯೂನಿವರ್ಸಿಟಿ ಆಫ್ ವಿಸ್ಕೋನ್ಸಿನ್-ಮ್ಯಾಡಿಸನ್, ಸ್ವಾಥ್ಮೋರ್ ಕಾಲೇಜ್, ಯೂನಿವರ್ಸಿಟಿ ಆಫ್ ವಾಷಿಂಗ್ಟನ್, ಸಿಯಾಟಲ್ ಅಂಡ್ ಫ್ಲೋರಿಡಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.

ಬ್ರಿಟೀಷ್‌ ಕೌನ್ಸಿಲ್ ಜತೆ ದುಂಡುಮೇಜಿನ ಸಭೆ ನಡೆಸಿದ ಡಿಸಿಎಂ ಡಾ. ಅಶ್ವಥ್ ನಾರಾಯಣಬ್ರಿಟೀಷ್‌ ಕೌನ್ಸಿಲ್ ಜತೆ ದುಂಡುಮೇಜಿನ ಸಭೆ ನಡೆಸಿದ ಡಿಸಿಎಂ ಡಾ. ಅಶ್ವಥ್ ನಾರಾಯಣ

ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮತ್ತು ಪೋಷಕರು ಶೈಕ್ಷಣಿಕ ಕಾರ್ಯಕ್ರಮಗಳು, ಕ್ಯಾಂಪಸ್ ಜೀವನ, ಹಣಕಾಸು ನೆರವಿನ ಆಯ್ಕೆಗಳು, ಅರ್ಜಿ ಪ್ರಕ್ರಿಯೆಗಳು ಮತ್ತು ಕೋವಿಡ್-19 ಸಾಂಕ್ರಾಮಿಕದ ಸಂದರ್ಭ ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿನ ಸುರಕ್ಷತೆ ಹಾಗೂ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ.

Education USA Undergraduate Virtual Showcase 2021 Held On July 23

"ಅಮೆರಿಕದಲ್ಲಿನ ಪದವಿಪೂರ್ವ ಅವಕಾಶಗಳಿಗೆ ವಿಶ್ವದಲ್ಲಿಯೇ ಸರಿಸಾಟಿ ಇಲ್ಲ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು, ಅನುಕೂಲಕರ ಪಠ್ಯಕ್ರಮ, ವಿಶಿಷ್ಟ ಸಂಶೋಧನೆ ಅವಕಾಶಗಳು, ಅತ್ಯಾಧುನಿಕ ಸೌಲಭ್ಯಗಳು ಮತ್ತು ವೈವಿಧ್ಯಮಯ ವಿದ್ಯಾರ್ಥಿ ಸಂಘಟನೆಗಳನ್ನು ಹೊಂದಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುಲು ಕಾರ್ಯಕ್ರಮದಲ್ಲಿ ಭಾಗವಹಿಸಿ" ಎಂದು ಚೆನ್ನೆನ ಅಮೆರಿಕದ ದೂತಾವಾಸ ಕಚೇರಿಯ ಸಾರ್ವಜನಿಕ ವ್ಯವಹಾರಗಳ ಅಧಿಕಾರಿ ಆನ್‌ ಲೀ ಶೇಷಾದ್ರಿ ತಿಳಿಸಿದ್ದಾರೆ.

ಅಮೆರಿಕದಲ್ಲಿ ಪದವಿ ಕಾರ್ಯಕ್ರಮಗಳಲ್ಲಿ ಕಲಿಯಲು ಬಯಸುವ ಪ್ರೌಢಶಾಲಾ ವಿದ್ಯಾರ್ಥಿಗಳು bit.ly/UG21Oth ನಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಲಾಗುವುದಿಲ್ಲ ಹಾಗಾಗಿ ಕಾರ್ಯಕ್ರಮ ಮುಗಿದ ಬಳಿಕ ವೀಕ್ಷಿಸಲು ಲಭ್ಯವಿರುವುದಿಲ್ಲ.

ಈ ಕಾರ್ಯಕ್ರಮದ ಬಗ್ಗೆ ಅಥವಾ ಅಮೆರಿಕದಲ್ಲಿ ಉನ್ನತ ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 98800-41115(ವಾಟ್ಸಾಪ್‌ನಲ್ಲಿ) ಸಂಪರ್ಕಿಸಿ ಅಥವಾ [email protected] ಇಮೇಲ್ ಮಾಡಿ.

ಯಷ್ನಾ ಟ್ರಸ್ಟ್-ಎಜುಕೇಷನ್ ಯುಎಸ್ಎ ಬೆಂಗಳೂರು (https://www.yashnatrust.org/) ಕರ್ನಾಟಕದಲ್ಲಿ ಶಿಕ್ಷಣ-ಸಲಹೆ ನೀಡುವ ಏಕೈಕ ಅಧಿಕೃತ ಯು.ಎಸ್.ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಆಗಿದೆ.

Recommended Video

ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮೇಕ್ ಇನ್ ಇಂಡಿಯಾ ಕಲರವ | Make in India at Olympics | Oneindia Kannada

English summary
The Undergraduate Virtual Showcase is organised by EducationUSA Bangalore on july 23, friday to meet your interests of studying in the U.S,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X