ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಹಂಚಿಕೊಂಡ ಮನಕಲಕುವ ಪ್ರಸಂಗ!

|
Google Oneindia Kannada News

ಬೆಂಗಳೂರು, ಜ. 24: ರಾಜಕಾರಣಿಗಳು ಅಂದರೆ ಅದೇನೋ ಹಮ್ಮು ಬಿಮ್ಮು ಇರುತ್ತದೆ. ಆದರೆ ಅದಕ್ಕೆ ಕೆಲವು ರಾಜಕಾರಣಿಗಳು ಅದಕ್ಕೆ ಹೊರತಾಗಿರುತ್ತಾರೆ, ಅಂಥವರಲ್ಲೊಬ್ಬರು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್.

ಅದೇನ್ ಮಹಾ ಎಂದು ನಿರ್ಲಕ್ಷ ಮಾಡುವಂತಹ ಸಣ್ಣ ಸಣ್ಣ ವಿಷಯಗಳಿಗೂ ಮಹತ್ವ ಕೊಡುವುದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ ಅವರ ಗುಣ. ಆದರೆ ಅದೇ ಸಣ್ಣ ಸಣ್ಣ ಸಂಗತಿಗಳು ಅವರಷ್ಟೇ ಅಲ್ಲ, ಇಡೀ ನಾಡಿನ ಜನತೆಯ ಚಿಂತನೆಯನ್ನೇ ಬದಲಿಸಿದ್ದು ಕೂಡ ಇದೆ. ತಮ್ಮ ಸುತ್ತ ನಡೆಯುವ ಪ್ರತಿಯೊಂದು ಸಂಗತಿಗೂ ಕಿವಿಗೊಡುವುದು ಸಚಿವ ಸುರೇಶ್ ಕುಮಾರ್‌ ಅವರ ವಿಶೇಷತೆ.

ಜೆಒಸಿ ಉಪನ್ಯಾಸಕರ ಕುರಿತು ಸುರೇಶ್ ಕುಮಾರ್ ಮಹತ್ವದ ತೀರ್ಮಾನ!ಜೆಒಸಿ ಉಪನ್ಯಾಸಕರ ಕುರಿತು ಸುರೇಶ್ ಕುಮಾರ್ ಮಹತ್ವದ ತೀರ್ಮಾನ!

ರ್ಯಾಂಕ್ ಬಂದಿದ್ದ ಸ್ಲಂನಲ್ಲಿ ವಾಸವಾಗಿದ್ದ ವಿದ್ಯಾರ್ಥಿಯ ಮನೆಗೆ ತೆರಳಿದ್ದು, ವಿಧಾನಸೌಧದ ಆವರಣದಲ್ಲಿ ಹರಟುತ್ತ ಚೌಕ ಬಾರ ಆಡಿ ಕಾಲ ಕಳೆಯುತ್ತಿದ್ದ ಸರ್ಕಾರಿ ವಾಹನ ಚಾಲಕರಿಗೆ ಸುದ್ದಿ ಪತ್ರಿಕೆಗಳನ್ನು ಒದಗಿಸಿ, ಅವರು ಪೇಪರ್‌ ಓದುವಂತೆ ಮಾಡಿದ್ದು ಇರಬಹುದು ಅಥವಾ ಪ್ರಯಾಣ ಮಾಡುವಾಗ ಮಾರ್ಗ ಮಧ್ಯದಲ್ಲಿ ಮಕ್ಕಳನ್ನು ನೋಡಿದಾಗ ಕಾರು ನಿಲ್ಲಿಸಿ ಕೆಲಹೊತ್ತು ಅವರೊಂದಿಗೆ ಬೆರೆತು ಅವರ ಅನಿಸಿಕೆ, ಸಮಸ್ಯೆ ಅಥವಾ ಇನ್ಯಾವುದೇ ವಿಷಯಗಳನ್ನು ಅವರಿಂದ ಆಲಿಸುವುದು, ಇವೆಲ್ಲವೂ ಸುರೇಶ್ ಕುಮಾರ್ ಅವರಿಂದ ಮಾತ್ರ ಎಂಬಷ್ಟರ ಮಟ್ಟಿಗೆ ಅವರು ನಡೆದುಕೊಳ್ಳುತ್ತಾರೆ.

1 ರಿಂದ 5ನೇ ತರಗತಿ ಆರಂಭಿಸುವುದಿಲ್ಲ; ಸಚಿವ ಸುರೇಶ್ ಕುಮಾರ್1 ರಿಂದ 5ನೇ ತರಗತಿ ಆರಂಭಿಸುವುದಿಲ್ಲ; ಸಚಿವ ಸುರೇಶ್ ಕುಮಾರ್

ಇವತ್ತು ಕೂಡ ಅಂತಹ ಮನಮಿಡಿಯುವ ಘಟನೆಯೊಂದನ್ನು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಹಂಚಿಕೊಂಡಿದ್ದಾರೆ.

ಕಸಿವಿಸಿ ಜೊತೆಗೆ ಎಚ್ಚರಿಕೆ ಕೊಟ್ಟ ಪ್ರಸಂಗ

ಕಸಿವಿಸಿ ಜೊತೆಗೆ ಎಚ್ಚರಿಕೆ ಕೊಟ್ಟ ಪ್ರಸಂಗ

ಸಾರ್ವಜನಿಕ ಬದುಕಿನಲ್ಲಿ ಆಗಾಗ ಜರುಗುವ ಈ ರೀತಿಯ ಪ್ರಸಂಗಗಳು ಕಸಿವಿಸಿ ಉಂಟು ಮಾಡುತ್ತವೆ. ಜೊತೆಗೆ ಎಚ್ಚರಿಕೆಯನ್ನೂ ಸಹ. ಇಂದು ಬೆಳಿಗ್ಗೆ ಬೆಂಗಳೂರಿಗೆ (ಬಾಗಲಕೋಟೆಯಿಂದ) ವಾಪಸ್ಸು ಬರುತ್ತಿದ್ದಾಗ, ಬೆಳಗಿನ ಜಾವದ ಆ ವಾತಾವರಣದಲ್ಲಿ ಸ್ವಲ್ಪ ದೂರ ನಡೆಯೋಣ ಎಂದೆನಿಸಿ ಹೈ ವೇ ನಲ್ಲಿ ನಡೆಯಲು ಪ್ರಾರಂಭಿಸಿದೆ. ಸ್ವಲ್ಪ ದೂರ ನಡೆದ ನಂತರ ನನ್ನ ಮುಂದೆ ಒಂದು ಟಿವಿಎಸ್ 50 ಗಾಡಿ ನಿಂತುಕೊಂಡಿತು. ಓರ್ವ ವ್ಯಕ್ತಿ ನನ್ನನ್ನು ಮಾತನಾಡಿಸಲು ಬಂದರು. ವಿಜಯಕುಮಾರ್ ಎಂದು ಅವರ ಹೆಸರು. ಹತ್ತಿರದ ಹಳ್ಳಿಯೊಂದರಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು ಸಣ್ಣ ವ್ಯಾಪಾರ ಮಾಡುತ್ತಿದ್ದಾರೆ.

ಎಷ್ಟೇ ಹೇಳಿದರೂ ಚಪ್ಪಲಿ ಹಾಕಿಕೊಳ್ಳಲಿಲ್ಲ

ಎಷ್ಟೇ ಹೇಳಿದರೂ ಚಪ್ಪಲಿ ಹಾಕಿಕೊಳ್ಳಲಿಲ್ಲ

ನನ್ನೊಡನೆ ಮಾತನಾಡುವಾಗ ತನ್ನ ಚಪ್ಪಲಿ ಬಿಟ್ಟೇ ಮಾತನಾಡತೊಡಗಿದ ವಿಜಯ ಕುಮಾರ್ ಅವರು, ನಾನು ಎಷ್ಟೇ ಹೇಳಿದರೂ ಚಪ್ಪಲಿ ಹಾಕಿಕೊಳ್ಳಲಿಲ್ಲ. ತನ್ನ ಮಕ್ಕಳ ಶಾಲೆ ತರಗತಿ (2 ಮತ್ತು 4ನೆ ತರಗತಿಗಳು) ಯಾವಾಗ ಪ್ರಾರಂಭವಾಗುತ್ತದೆ ಎಂದು ಕೇಳುವುದು ಅವರ ಉದ್ದೇಶವಾಗಿತ್ತು.

ಆ ವ್ಯಕ್ತಿಯ ಮುಗ್ಧತೆ ನನ್ನ ಮನಸ್ಸನ್ನು ಬಹಳಷ್ಟು ಸಮಯ ಕಾಡಿತು. ಇಂತಹ ಪ್ರಸಂಗಗಳು ಮುಜುಗರ ಉಂಟು ಮಾಡುವ ಜೊತೆಗೆ ಇಂತಹವರು ನನ್ನ ಮೇಲೆ ಇಟ್ಟಿರುವ ಭಾವನೆ ನನ್ನ ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಇವತ್ತಿನ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಸಣ್ಣ ಸಣ್ಣ ವಿಷಯಗಳು

ಸಣ್ಣ ಸಣ್ಣ ವಿಷಯಗಳು

ಇವು ಸಣ್ಣ ಪ್ರಸಂಗಗಳು ಅನ್ನಿಸಬಹುದು. ಆದರೆ ಎಷ್ಟೇ ಸಾಮಾನ್ಯ ವ್ಯಕ್ತಿಗಳಾಗಿದ್ದರೂ ಅವರಿಗೆ ಬೆಲೆಕೊಟ್ಟು ಮಾತನಾಡುವುದು ಎಲ್ಲರಿಂದಲೂ ಆಗದ ವಿಚಾರ. ಈ ವಿಚಾರದಲ್ಲಿ ಸುರೇಶ್ ಕುಮಾರ್ ಅವರಿಗೆ ಸುರೇಶ್ ಕುಮಾರ್ ಅವರೇ ಸಾಟಿ. ಬಹುತೇಕ ಸಚಿವರು ನಮಗೆ ಇಂಥದ್ದೆ ಖಾತೆ ಬೇಕು ಅಂತಾ ಖ್ಯಾತೆ ತೆಗೆದಿದ್ದು ಜಗಜ್ಜಾಹೀರಾಗಿದೆ. ಅಂಥದ್ದರಲ್ಲಿ ತಮಗೆ ಕೊಟ್ಟಿರುವ ಖಾತೆಯನ್ನು ಅತ್ಯಂತ ಖುಷಿಯುಂದ ನಿರ್ವಹಿಸುತ್ತಿರುವ ಸುರೇಶ್ ಕುಮಾರ್ ಅವರು ಇತರ ಸಚಿವರಿಗೂ ಮಾದರಿ ಎನ್ನಬಹುದು.

Recommended Video

'Parakram' ವೇದಿಕೆಯಲ್ಲಿ ಪ್ರಭಾವಿಗಳ ಮುಖಾಮುಖಿ-ನಾ ಅತ್ತ.. ನೀ ಇತ್ತ ಅಂತಿದ್ದಾರೆ ಮೋದಿ-ದೀದಿ | Oneindia Kannada
ಸಮಸ್ಯೆಗಳಿಗೆ ಸ್ಪಂದನೆ

ಸಮಸ್ಯೆಗಳಿಗೆ ಸ್ಪಂದನೆ

ತಮ್ಮ ಫೇಸ್‌ಬುಕ್‌ ಕೇವಲ ತಮ್ಮ ಅನುಭವಗಳನ್ನು ಮಾತ್ರ ಹಂಚಿಕೊಳ್ಳುವ ವೇದಿಕೆಯನ್ನಾಗಿ ಮಾತ್ರ ಉಪಯೋಗಿಸಿ ಕೊಳ್ಳುವುದಿಲ್ಲ. ಬದಲಿಗೆ ತಮ್ಮ ಫೇಸ್‌ಬುಕ್‌ ಪೋಸ್ಟ್‌ಗಳಿಗೆ ಬರುವ ಕಮೆಂಟ್‌ಗಳನ್ನು ಪರಿಶೀಲನೆ ಮಾಡಿ ಪ್ರತಿಕ್ರಿಯೆಯನ್ನು ಕೊಡುತ್ತಾರೆ. ಸ್ವತಃ ತಾವೇ ತಮ್ಮ ಫೇಸ್‌ಬುಕ್ ಖಾತೆ ನಿರ್ವಹಿಸಿಕೊಳ್ಳುವ ರಾಜಕಾರಣಿ ಸುರೇಶ್ ಕುಮಾರ್ ಮಾತ್ರ ಇರಬಹುದು.

ಶಾಲೆ, ಪಿಂಚಣಿ, ಸಮಸ್ತ್ರ ಅಥವಾ ತಾವು (ಸದ್ಯ) ಉಸ್ತುವಾರಿ ವಹಿಸಿಕೊಂಡಿರುವ ಚಾಮರಾಜಗನರ ಜಿಲ್ಲೆಯ ನೈಜ ಸಮಸ್ಯೆಗಳಿಗೆ ಪರಿಹಾರವನ್ನೂ ಕೂಡ ಮಾಡಿಕೊಟ್ಟಿರುವ ಉದಾಹರಣೆಗಳಿವೆ. ಸಾಮಾಜಿಕ ಜಾಲತಾಣವನ್ನು ಕ್ರೀಯಾತ್ಮಕವಾಗಿಯೂ ಬಳಸಿಕೊಳ್ಳಬಹುದು, ಸಾಮಾಜಿಕ ಜಾಲತಾಣದಿಂದ ಬರೀ ಸಮಸ್ಯೆಗಳು ಮಾತ್ರ ಉದ್ಭವಿಸುವುದಿಲ್ಲ. ಸಮಸ್ಯೆಗಳಿಗೆ ಪರಿಹಾರವೂ ಸಿಗುತ್ತದೆ ಎಂಬುದನ್ನು ಸಚಿವ ಸುರೇಶ್ ಕುಮಾರ್ ಅವರಿಂದ ಕಲಿಯಬಹುದಾಗಿದೆ.

English summary
Education Minister Suresh Kumar shared a memorable episode about school opening. Just read from from their words.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X