ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈಲೆಂಟ್ ಆಗಿರುವ ಪೋಷಕರ ಬಗ್ಗೆಯೂ ಆಲೋಚಿಸಿ: ಸುರೇಶ್ ಕುಮಾರ್ ಪ್ರತಿಕ್ರಿಯೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 23: ಬಹುದೊಡ್ಡ ಸಂಖ್ಯೆಯಲ್ಲಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಸೇರಿದ್ದೀರಿ. ಖಾಸಗಿ ಶಾಲೆ ಶಿಕ್ಷಕರು ತರಕಾರಿ ಮಾರಿದ್ದನ್ನು ನಾನು ನೋಡಿದ್ದೇನೆ. ಪೋಷಕರು ಬಂದು ಸೇರಿದ್ರೆ ಇನ್ನಷ್ಟು ಜನ ಆಗುತ್ತಿತ್ತು. ಪೋಷಕರ ಸೈಲೆಂಟ್ ಮೆಜಾರಿಟಿಯನ್ನು ಕೂಡ ನೀವು ಮನಸಿನಲ್ಲಿ ಇಟ್ಟುಕೊಳ್ಳಬೇಕು..!

ಖಾಸಗಿ ಶಾಲೆಗಳ ಬೋಧನಾ ಶುಲ್ಕ ಶೇ. 30 ರಷ್ಟು ಕಡಿಮೆ ಮಾಡಬೇಕೆಂಬ ಸರ್ಕಾರದ ತೀರ್ಮಾನ ವಿರೋಧಿಸಿ ಖಾಸಗಿ ಶಾಲೆ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಹಮ್ಮಿಕೊಂಡಿರುವ ಬೃಹತ್ ಹೋರಾಟ ಕುರಿತು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ನೀಡಿದ ಪ್ರತಿಕ್ರಿಯೆಯಿದು. ಬಹಳ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೀರಿ ಸಂತೋಷ. ಖಾಸಗಿ ಶಾಲಾ ಶಿಕ್ಷಕರ ಹೋರಾಟ ವಿರೋಧಿಸಿ ಪೋಷಕರು ಕೂಡ ಹೋರಾಟ ನಡೆಸಲು ತೀರ್ಮಾನಿಸಿದ್ದರು. ಇನ್ನು ಪೋಷಕರ ಸೈಲೆಂಟ್ ಮೆಜಾರಿಟಿಯನ್ನು ಕೂಡ ನೀವು ನೋಡಬೇಕು ಎಂದು ಸೂಕ್ಷ್ಮವಾಗಿ ಹೇಳಿದರು.

Education minister Suresh kumar redaction about Private schools and Teacher to stage protest

Recommended Video

ಪ್ರತಿಭಟನೆ ತೀವ್ರಗೊಳಿಸಲು ಮುಂದಾದ ರೈತರು-ಇಂದಿನಿಂದ 27ರವರೆಗೆ ರೈತರಿಂದ ಸಾಲು-ಸಾಲು ಕಾರ್ಯಕ್ರಮ | Oneindia Kannada

ನಿಮ್ಮ ಶಾಲೆಯ ಪೋಷಕರು ಅವರು. ಅವರು ಕೂಡ ಹೀನಾಯ ಸ್ಥಿತಿಯಲ್ಲಿದ್ದಾರೆ. ಎಷ್ಟೋ ಮಂದಿ ಶಾಲೆ ಶುಲ್ಕ ಕಟ್ಟಲಾಗದೇ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದ್ದು ಗಮನಿಸಿದ್ದೇವೆ. ಎರಡು ಕೋಟಿ ಪೋಷಕರ ಆಕ್ರಂದನ ನಾನು ಕೇಳಿದ್ದೇನೆ. ಶುಲ್ಕ ಕಡಿಮೆ ವಿಚಾರವಾಗಿ ಪೋಷಕರ ನೋವಿಗೆ ಸ್ಪಂದಿಸಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.

English summary
Education minister S.Suresh kumar redaction about Private schools and Teacher to stage protest know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X