ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಷರತ್ತಿನ ಮೇಲೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ಸೇರಿದ್ದೇನೆ'

|
Google Oneindia Kannada News

ಬೆಂಗಳೂರು, ಅ. 18: ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡಿರುವ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೊರೊನಾ ವೈರಸ್‌ ಸೋಂಕಿಗೆ ತುತ್ತಾದ ಬಳಿಕೆ ಏನೇನಾಯ್ತು ಎಂಬುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಅವರ ಅನುಭವದಲ್ಲಿಯೇ ಕೇಳಿ.

ನಿನ್ನೆ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ಸೇರಿದ್ದೇನೆ. ಸೋಮವಾರ, ಅಕ್ಟೋಬರ್ 5 ರಂದು ನನಗೆ ಕೊರೋನಾ ಸೋಂಕು ತಗುಲಿದೆ ಎಂದು ತಿಳಿದ ನಂತರ ಬಿಬಿಎಂಪಿ ವೈದ್ಯರ ತಂಡದ ಸಲಹೆಯಂತೆ ನಾನು ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿದ್ದೆ. ವೈದ್ಯರು ಸೂಚಿಸಿದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದೆ. ನನಗೆ ಕೊರೋನಾ ಸೋಂಕು ತಗುಲಿದೆ ಎಂದು ತಿಳಿದ ನಂತರ ಬಿಬಿಎಂಪಿ ವೈದ್ಯರ ತಂಡದ ಸಲಹೆಯಂತೆ ನಾನು ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿದ್ದೆ. ವೈದ್ಯರು ಸೂಚಿಸಿದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದೆ. ಎಂದು ಹೇಳಿದ್ದಾರೆ. ಆದರೆ ಏಕಾಏಕಿ ಆಸ್ಪತ್ರೆ ಸೇರಿದ್ದು ಯಾಕೆ ಎಂಬುದನ್ನು ಅವರು ವಿವರಿಸಿದ್ದಾರೆ. ಮುಂದೆ ಓದಿ!‌

ಉಸಿರಾಟದಲ್ಲಿ ತೊಂದರೆ

ಉಸಿರಾಟದಲ್ಲಿ ತೊಂದರೆ

ಅಕ್ಟೋಬರ್ 10 ರಂದು ನನ್ನ ಮನೆಗೆ ಬಂದ ವೈದ್ಯರೊಬ್ಬರು ನನ್ನ ಉಸಿರಾಟದಲ್ಲಿ ವ್ಯತ್ಯಾಸವನ್ನು ಗಮನಿಸಿ ತಕ್ಷಣ ಪರೀಕ್ಷೆಗೆ ಒಳಗಾಗ ಬೇಕೆಂದು ಆಗ್ರಹಿಸಿದರು. ಅವರ ಸೂಚನೆ ಮೇರೆಗೆ ನಾನು ಅವರೊಡನೇ ಹೋಗಿ ಶ್ವಾಸಕೋಶದ ಸಿಟಿ ಸ್ಕ್ಯಾನ್ (CT- Scan) ಪರೀಕ್ಷೆಗೆ ಒಳಗಾದೆ. ಆಗಲೇ ಗೊತ್ತಾಗಿದ್ದು ನನಗೆ ಏನಾಗಿದೆ ಎಂದು.

ಧರಣಿ ನಿರತ ಉಪನ್ಯಾಸಕರಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭಾವನಾತ್ಮಕ ಮನವಿ!ಧರಣಿ ನಿರತ ಉಪನ್ಯಾಸಕರಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭಾವನಾತ್ಮಕ ಮನವಿ!

ಶ್ವಾಸಕೋಶಕ್ಕೆ ಹೆಚ್ಚಿನ ಸೋಂಕು

ಶ್ವಾಸಕೋಶಕ್ಕೆ ಹೆಚ್ಚಿನ ಸೋಂಕು

ಹೀಗೆ ಉಸಿರಾಟದಲ್ಲಿನ ಏರುಪೇರು ಹಾಗೂ ಸಿಟಿ ಸ್ಕ್ಯಾನ್ ಪರೀಕ್ಷೆಯಿಂದ ನನ್ನ ಶ್ವಾಸಕೋಶಕ್ಕೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ಸೋಂಕು ಹರಡಿದೆ ಎಂಬುದು ತಿಳಿದುಬಂತು. ಹೀಗಾಗಿ ವೈದ್ಯರ ಕಟ್ಟುನಿಟ್ಟಿನ ಸಲಹೆಯಂತೆ ಸ್ನೇಹಿತರ ಆಸ್ಪತ್ರೆಗೆ ದಾಖಲಾದೆ. ಅದಾದ ಬಳಿಕ ಮತ್ತೊಂದು ಹಂತದ ಚಿಕಿತ್ಸೆ ಶುರುವಾಯ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಸೋಂಕು ಕಡಿಮೆಯಾಯ್ತು. ಹೀಗಾಗಿ ಮನೆಗೆ ತೆರಳುವುದಾಗಿ ಮನವಿ ಮಾಡಿಕೊಂಡು ಬದಿದ್ದೇನೆ.

ವೈದ್ಯರಿಗೆ ಧನ್ಯವಾದಗಳು

ವೈದ್ಯರಿಗೆ ಧನ್ಯವಾದಗಳು

ಕಳೆದ ಎಂಟು ದಿನಗಳಿಂದ ನನಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಿ, ಶುಶ್ರೂಷೆ ಮಾಡಿ ನನ್ನನ್ನು ಗುಣಮುಖನಾಗುವ ಹಾದಿಗೆ ತಂದ ಡಾ. ಶಶಾಂಕ್, ಡಾ. ಶ್ರೀನಾಥ್, ಡಾ. ಪೂರ್ಣ ಪ್ರಸಾದ್, ಡಾ. ಕೃಪೇಶ್ ಮತ್ತು ಎಲ್ಲಾ ದಾದಿಯರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇನೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಧನ್ಯವಾದ ಹೇಳಿದ್ದಾರೆ.

Recommended Video

Royals ಗಳ ಕದನದಲ್ಲಿ RCB ಗೆಲ್ಲಲು ಮುಖ್ಯ ಕಾರಣ ಇಲ್ಲಿದೆ | Oneindia Kannada
ಶರತ್ತಿನ ಮೇಲೆ ಬಿಡುಗಡೆ

ಶರತ್ತಿನ ಮೇಲೆ ಬಿಡುಗಡೆ

ಇನ್ನೂ ಎರಡು ವಾರಗಳ ಕಾಲ ಮನೆಯಿಂದ ಹೊರಗೆ ಹೋಗಬಾರದು ಎಂಬ ಷರತ್ತಿನ ಮೇಲೆ ವೈದ್ಯರು ನನ್ನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ.

ನಾನು ವೈದ್ಯರ ಸೂಚನೆಯನ್ನು ಪಾಲಿಸುತ್ತೇನೆ ಎಂದು ಮಾತು ಕೊಟ್ಟು ಮನೆ ಸೇರಿದ್ದೇನೆ. ಮನೆಯಲ್ಲಿಯೇ ಇನ್ನಷ್ಟು ಕಾಲ ಚಿಕಿತ್ಸೆ‌ ಮುಂದುವರೆಯಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

English summary
Primary and Secondary Education Minister S. Suresh Kumar recovered from the coronavirus. And also Suresh Kumar has been discharged from hospital. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X