ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಂದ್ರ ಸಚಿವೆ ನಿರ್ಮಲಾ ನಡವಳಿಕೆಗೆ ಸಚಿವ ಮಹೇಶ್‌ ಹೇಳಿದ್ದೇನು?

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 25: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವರ್ತನೆಗೆ ಪ್ರಾಥಮಿಕ ಹಾಗು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅಸಮಧಾನ ವ್ಯಕ್ತಪಡಿಸಿದ್ದು,ಅವರ ವರ್ತನೆ ಸರಿಯಲ್ಲ ಒಬ್ಬ ಕೇಂದ್ರ ಸಚಿವರಾಗಿ ಇನ್ನೊಬ್ಬ ಸಚಿವರಿಗೆ ಈ ರೀತಿ ಮಾಡಬಾರದು ಎಂದರು.

ನಗದ ಖಾಸಗಿ ಹೋಟೆಲ್ ನಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಕೇಂದ್ರ ಸಚಿವರ ಬಗ್ಗೆ ನಮಗೆ ಅಪಾರ ಗೌರವ ಇದೆ.ಆದರೆ ಅವರ ವರ್ತನೆ ಸರಿಯಲ್ಲ ಜೊತೆಗೆ ಕೊಡಗು ವಿಚಾರದಲ್ಲಿ ಕೇಂದ್ರದ ಸ್ಪಂದನೆ ಸ್ವಲ್ಪವೂ ಸರಿಯಿಲ್ಲ.3 ಸಾವಿರ ಕೋಟಿ ನಷ್ಟ ಉಂಟಾಗಿರುವ ಕಡೆ ಕೇವಲ 8 ಕೋಟಿ ಕೊಟ್ಟರೆ ಹೇಗೆ?ಕೊಡಗಿನಲ್ಲಿ ನಷ್ಟ ಉಂಟಾಗಿರುವ ಶಾಲೆಗಳ ದುರಸ್ಥಿಗೇ 4 ಕೋಟಿಗೂ ಹೆಚ್ಚು ಹಣ ಬೇಕು ಎಂದರು.

ನಿರ್ಮಲಾ ಸೀತಾರಾಮನ್ ವರ್ತನೆಗೆ ಸಿದ್ದರಾಮಯ್ಯ ಕೆಂಗಣ್ಣು ನಿರ್ಮಲಾ ಸೀತಾರಾಮನ್ ವರ್ತನೆಗೆ ಸಿದ್ದರಾಮಯ್ಯ ಕೆಂಗಣ್ಣು

ನನ್ನ ಒಂದು ತಿಂಗಳ ವೇತನ ಹಾಗು ನಮ್ಮ ಇಲಾಖೆಯ ಸಿಬ್ಬಂದಿಯ ಒಂದು ದನದ ವೇತನವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದೇವೆ. ಮುಖ್ಯಮಂತ್ರಿಗಳ ಪರಿಹಾರ‌ ನಿಧಿಯಲ್ಲಿ ಶಾಲೆಗಳ ದುರಸ್ಥಿಗೆ 4 ಕೋಟಿ ಕೇಳಿದ್ದೇವೆ.ಅಲ್ಲಿನ ಸ್ಥಿತಿ ನೋಡಿದರೆ ಬಹಳ ನೋವಾಗತ್ತದೆ ಇಂಥ ಸಂದರ್ಭದಲ್ಲಿ ಕೇಂದ್ರ ಕೇವಲ 8 ಕೋಟಿ ಹಣ ಕೊಟ್ಟರೆ ಹೇಗೆ ಎಂದರು.

Education minister N Mahesh says Nirmala Sitharaman should behave properly

ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದಾಗಿ ಹೇಳಿಕೆ ನೀಡಿರಬಹುದು ಆದರೆ ಈಗ ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರೆ.ಒಮ್ಮೆಗೆ ಒಬ್ಬರು ಮಾತ್ರ ಮುಖ್ಯಮಂತ್ರಿ ಆಗಬೇಕು,ಒಬ್ಬರು ಇರುವಾಗಲೇ ಮತ್ತೊಬ್ಬರು ಸಿಎಂ ಆಗಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಕಾಲೆಳೆದರು.

ನಿರ್ಮಲಾ ಸೀತಾರಾಮನ್ ವಿರುದ್ಧ ಪರಮೇಶ್ವರ್ ಟ್ವೀಟ್ ಟೀಕೆ ನಿರ್ಮಲಾ ಸೀತಾರಾಮನ್ ವಿರುದ್ಧ ಪರಮೇಶ್ವರ್ ಟ್ವೀಟ್ ಟೀಕೆ

ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುವ ಕುರಿತು ನಮ್ಮ ಇಲಾಖೆ ಎಲ್ಲಾ ರೀತಿಯ ಕೆಲಸ ಮುಗಿಸಿದೆ.ಇನ್ನು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ನಿರ್ಧಾರ ಕೈಗೊಳ್ಳಬೇಕು ಎನ್ನುವ ಮೂಲಕ ಬಸ್ ಪಾಸ್ ವಿತರಣೆ ಮತ್ತಷ್ಟು ವಿಳಂಬವಾಗುವ ಸುಳಿವು ನೀಡಿದರು.

English summary
Education minister N. Mahesh has said he has great respect towards defense minister Nirmala Sitharaman as public representative and as individual but she should behave properly as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X