ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಎಡಿಫೈ ಶಾಲೆ

By Mahesh
|
Google Oneindia Kannada News

ಬೆಂಗಳೂರು, ಅ.10: ಎಂಡಿಎನ್ ಎಡಿಫೈ ಎಜುಕೇಷನ್ ಪ್ರೈ.ಲಿನ ಸಹಭಾಗಿತ್ವದ ಎಡಿಫೈ ಶಾಲೆ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ತನ್ನ ಶಾಖೆ ಆರಂಭಿಸಿದೆ. ಶಾಲೆ ಆರಂಭದೊಂದಿಗೆ ಕೆ12 ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪನೆಯಾಗಲಿದೆ ಎಂದು ಎಡಿಫೈ ಸಂಸ್ಥೆ ಹೇಳಿದೆ.

ಎಡಿಫೈ ಶಾಲೆಗಳು ಶೈಕ್ಷಣಿಕ ಉತ್ಕೃಷ್ಟತೆ, ಕ್ರೀಡಾ ಸೌಲಭ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಎಡಿಫೈ ಶಾಲೆಗಳು ವಿಶಾಲವಾದ ಗ್ರಂಥಾಲಯ, ಸಂಗೀತ ಶಾಲೆ, ಇಂಗ್ಲೀಷ್ ಪ್ರಯೋಗಾಲಯ, ವಂಡರ್ ರೂಮ್, ಮ್ಯಾಥ್ ಲ್ಯಾಬ್, ಇವಿಎಸ್ ಲ್ಯಾಬ್ ಹಾಗೂ ವಿಜ್ಞಾನ ಪ್ರಯೋಗಾಲಯಗಳನ್ನು ಹೊಂದಿದೆ.

ಜೀವನದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ತುಂಬುವುದು ಮುಖ್ಯ ಎಂದು ಎಡಿಫೈ ಶಾಲೆ ತಿಳಿದಿದೆ. ಶಿಕ್ಷಣದ ಮೂಲಕ ಜೀವನ ಕಲೆ ಕಲಿಸುವುದು, ಉತ್ತಮ ನಾಗರಿಕ ಗುಣಗಳನ್ನು ಬೆಳೆಸುವುದು, ಸಮಾಜದಲ್ಲಿ ಬದಲಾವಣೆ ತರುವುದು ಮುಖ್ಯ ಎಂದು ನಂಬಲಾಗಿದೆ. ಪದವಿ ಸಂಪಾದನೆ, ಹಣ ಹಾಗೂ ಆರ್ಥಿಕ ಗುಣಮಟ್ಟ ಹೆಚ್ಚಳಕ್ಕೆ ಮಹತ್ವ ನೀಡುವುದಕ್ಕಿಂತ ಸಾರ್ಥಕ ಬದುಕು ಕಾಣುವ ನಾಗರಿಕರನ್ನು ಬೆಳೆಸಲು ಬದ್ಧರಾಗಿದ್ದೇವೆಎಂದು ಶಾಲಾ ಆಡಳಿತ ಮಂಡಳಿ ಪ್ರಕಟಿಸಿದೆ.

ಎಡಿಫೈ ಶಾಲೆಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಠ ಪಠ್ಯಕ್ರಮ ಪದ್ಧತಿಯ ಮಿಶ್ರಣವನ್ನು ಕಾಣಬಹುದಾಗಿದೆ. ಸಿಬಿಎಸ್ ಇ, ಐಸಿಎಸ್ ಇ, ಐಜಿಸಿಎಎಸ್ ಇ ಹಾಗೂ ಐಬಿ ಹೀಗೆ ವಿವಿಧ ಮಾದರಿ ಪಠ್ಯಕ್ರಮಗಳನ್ನು ಎಡಿಎನ್ ಎಡಿಫೈ ಎಜುಕೇಷನ್ ವಿನ್ಯಾsಸಗೊಳಿಸಿ ಅಭಿವೃದ್ಧಿಪಡಿಸಿದೆ. ಕ್ರಮಬದ್ಧ ಅಧ್ಯಯನದ ಹೊರತಾಗಿ ವಿದ್ಯಾರ್ಥಿಗಳು ಈಜು, ಬಾಡ್ಮಿಂಟನ್, ಲಾನ್ ಟೆನಿಸ್, ಕರಾಟೆ, ಸ್ಕೇಟಿಂಗ್, ಕುದುರೆ ಸವಾರಿ, ಟ್ರಿನಿಟಿ ಸ್ಕೂಲ್ ಆಫ್ ಲಂಡನ್‍ನಿಂದ ಸಂಗೀತ ಪಾಠ, ಭಾಷಾ ಕಲಿಕೆ ಹಾಗೂ ಚರ್ಚಾ ಸ್ಪರ್ಧೆಗಳಲ್ಲಿ ತಜ್ಞರಾಗಬಹುದಾಗಿದೆ.

ಶಾಲೆಯ ಸಲಹಾ ಸಮಿತಿಯಲ್ಲಿ ಪ್ರೊ.ರಾಜೀವ್ ಗೌಡ, ನಿರ್ದೇಶಕ ಪವನ್ ಕುಮಾರ್, ಡಾ. ಜಗದೀಶ್ ಮುಂತಾದವರಿದ್ದಾರೆ. ಶಾಲೆಯ ಬಗ್ಗೆ ಇನ್ನಷ್ಟು ಮಾಹಿತಿ ಚಿತ್ರಸರಣಿಯಲ್ಲಿದೆ ತಪ್ಪದೇ ಓದಿ

ಪ್ರವೇಶಾತಿ ಆರಂಭ

ಪ್ರವೇಶಾತಿ ಆರಂಭ

ಶಾಲೆ ಆರಂಭದ ಮೊದಲ ಶೈಕ್ಷಣಿಕ ವರ್ಷದಲ್ಲಿ ಗ್ರೇಡ್ IK-I ನಿಂದ ಗ್ರೇಡ್ Vತನಕ ಪ್ರವೇಶ ದಾಖಲಾತಿ ಆಹ್ವಾನಿಸಲಾಗುತ್ತದೆ. ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು ಪೋಷಕರು ಶಾಲೆಗೆ ಭೇಟಿ ಕೊಟ್ಟು ಪ್ರಿನ್ಸಿಪಾಲ್ ಹಾಗೂ ಪ್ರವೇಶ ಸಲಹೆಗಾರ ಮತ್ತು ವಿದೇಶಿ ಶಿಕ್ಷಕರೊಡನೆ ಸಮಾಲೋಚನೆ ನಡೆಸಬಹುದು ಹಾಗೂ ಶಾಲೆಯ ವಾತಾವರಣ, ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬಹುದು. ಪೋಷಕರರಿಗೆ ಶಾಲೆ ಮುಕ್ತ ಆಹ್ವಾನ ನೀಡುತ್ತಿದೆ.

ಹೆಚ್ಚಿನ ಮಾಹಿತಿಗೆ ತಪ್ಪದೇ ಸಂಪರ್ಕಿಸಿ

ಹೆಚ್ಚಿನ ಮಾಹಿತಿಗೆ ತಪ್ಪದೇ ಸಂಪರ್ಕಿಸಿ

ವಂದನಾ ಸಂಜಯ್
ಪ್ರಿನ್ಸಿಪಾಲ್, ಎಡಿಫೈ ಸ್ಕೂಲ್ ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು.
ಹೆಚ್ಚಿನ ಮಾಹಿತಿಗೆ ಭೇಟಿಕೊಡಿ : ಎಡಿಫೈ ವೆಬ್ ತಾಣ
ದೂ: +9199000 77178, +9198454 59413

ಕಾರ್ಯದರ್ಶಿ ಅಶೋಕ್ ಕುಮಾರ್

ಕಾರ್ಯದರ್ಶಿ ಅಶೋಕ್ ಕುಮಾರ್

ಶಿಕ್ಷಣ, ಕ್ರೀಡೆ ಹಾಗೂ ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳತ್ತ ಗಮನ ಹರಿಸುತ್ತಾ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಒತ್ತು ಕೊಟ್ಟು ವಿಶ್ವಮಟ್ಟದಲ್ಲಿ ಯಶಸ್ವಿಯಾಗುವಂತೆ ಮಾಡಲು ಬೇಕಾದ ಸೌಲಭ್ಯ ಒದಗಿಸುವುದು ನಮ್ಮ ಗುರಿ.

ನಮ್ಮ ಶಾಲೆಯಲ್ಲಿ ಬೆಳಗ್ಗೆ ಉಪಾಹಾರ, ಊಟ ಹಾಗೂ ಸಂಜೆ ತಿಂಡಿ ಕೂಡಾ ನೀಡಲಾಗುತ್ತದೆ ಹೀಗಾಗಿ ಅಮ್ಮಂದಿರು ನಿಶ್ಚಿಂತರಾಗಿರಬಹುದು. ಶಾಲಾ ಅವಧಿಯ ನಂತರ ಯಾವುದೇ ವಿದ್ಯಾರ್ಥಿಗೆ ಪ್ರತ್ಯೇಕ ಮನೆಪಾಠದ ಅಗತ್ಯ ಬೀಳುವುದಿಲ್ಲ. ಶಾಲಾ ಅವಧಿಯ ಕಲಿಕೆ ವಿನ್ಯಾಸ ವಿದ್ಯಾರ್ಥಿಸ್ನೇಹಿಯಾಗಿದ್ದು ವಿದ್ಯಾರ್ಥಿಗಳು ಆನಂದದಿಂದ ಕಲಿಕೆ ನಡೆಸಬಹುದು
ಎಂಡಿಎನ್ ಎಡಿಫೈ ಎಜುಕೇಷನ್ ಪ್ರೈ.ಲಿ ಬಗ್ಗೆ

ಎಂಡಿಎನ್ ಎಡಿಫೈ ಎಜುಕೇಷನ್ ಪ್ರೈ.ಲಿ ಬಗ್ಗೆ

ಎಂಡಿಎನ್ ಎಡಿಫೈ ಎಜುಕೇಷನ್ ಪ್ರೈ.ಲಿ ಭಾರತದ ಹೈದರಾಬಾದಿನಲ್ಲಿ ಕೇಂದ್ರ ಕಚೇರಿ ಹೊಂದಿದೆ. ಪ್ರೀ ಪ್ರೈಮರಿ ಪ್ರೈಮರಿ, ಸೆಕಂಡರಿ ಹಾಗೂ ಹೈಯರ್ ಸೆಕಂಡರಿ ಎಜುಕೇಷನ್ ನೀಡುತ್ತಿದೆ. ದೇಶದಾದ್ಯಂತ ಎಡಿಫೈ ಶಾಲೆಗಳಿದ್ದು, ಸುಮಾರು 160 ಪ್ರೀಸ್ಕೂಲ್ ಹಾಗೂ 52 ಕೆ12 ಶಾಲೆಗಳಿವೆ. ಅಂತಾರಾಷ್ಟ್ರೀಯ ಶಿಕ್ಷಣ ಮಾರುಕಟ್ಟೆಗೆ ತನ್ನ ಜಾಲವನ್ನು ಶೀಘ್ರದಲ್ಲೇ ವಿಸ್ತರಿಸಲಿದೆ.

ಡಾ. ಜಗದೀಶ್

ಡಾ. ಜಗದೀಶ್

ಅಭಯ ಚಟ ನಿರ್ಮೂಲನ ಕೇಂದ್ರದ ಮುಖ್ಯಸ್ಥ, ಮನೋವೈದ್ಯ ಡಾ. ಜಗದೀಶ್ ಅವರು ಮಾತನಾಡಿ "ವಿದ್ಯಾರ್ಥಿಗಳು ಬುದ್ಧಿವಂತ, ಜಾಗತಿಕ ಮಟ್ಟ ಸ್ಪರ್ಧಿಗಳಾಗುವಂತೆ ಮಾಡುವುದಷ್ಟೇ ಶಾಲೆ ಕೆಲಸವಲ್ಲ. ವೈಯಕ್ತಿಕವಾಗಿ ಪ್ರತಿಭೆಗಳನ್ನು ಬೆಳೆಸಿ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು"

ನಿರ್ದೇಶಕ ಪವನ್

ನಿರ್ದೇಶಕ ಪವನ್

ತಂತ್ರಜ್ಞಾನ ತ್ವರಿತವಾಗಿ ಬೆಳೆಯುತ್ತಿರುವಾಗ ನಾವು ಸೌಂದರ್ಯ ಭಾವನೆಗಳಿಗೆ ಒತ್ತು ಕೊಡುವುದನ್ನೆ ಮರೆತು ಬಿಡುತ್ತೇವೆ. ಚಿಕ್ಕಂದಿನಿಂದಲೆ ಭಾವನಾತ್ಮಕ ಬುದ್ಧಿವಂತಿಕೆ ಬೆಳೆಸುವುದರ ಮೂಲಕ ಗುರಿಯತ್ತ ಉತ್ತಮವಾಗಿ ಸಾಗುವಂತೆ ಮಾಡಬಹುದು. ಈ ಮೂಲಕ ಕ್ರಿಯಾಶೀಲ, ಸೃಜನಶೀಲ ವ್ಯಕ್ತಿಗಳನ್ನು ಬೆಳೆಸಬಹುದು ಎಡಿಫೈನಲ್ಲಿ ಪ್ರತಿ ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶ ಇರುತ್ತದೆ

ಶಾಲೆ ಪ್ರಿನ್ಸಿಪಾಲ್

ಶಾಲೆ ಪ್ರಿನ್ಸಿಪಾಲ್

ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಎಡಿಫೈ ಶಾಲೆಯ ಪ್ರಿನ್ಸಿಪಾಲ್ ವಂದನ್ ಸಂಜಯ್ ಅವರು ಸುದ್ದಿಗೋಷ್ಠಿಯಲ್ಲಿ

ಕವಿತಾ ಜೈನ್

ಕವಿತಾ ಜೈನ್

ಎಂಡಿಎನ್ ಎಡಿಫೈ ಪ್ರೈ ಲಿನ ಉಪಾಧ್ಯಕ್ಷೆ ಕವಿತಾ ಜೈನ್ ಅವರು 3C ಶಿಕ್ಷಣದ ಬಗ್ಗೆ ವಿವರಿಸುತ್ತಿದ್ದಾರೆ.

ಪುಣ್ಯ ಗೋಪಾಲ್ ಕೆಎಂಇಟಿ

ಪುಣ್ಯ ಗೋಪಾಲ್ ಕೆಎಂಇಟಿ

ಉಪಾಧ್ಯಕ್ಷೆ ಪುಣ್ಯ ಗೋಪಾಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾರೆ.

ಜೂಡ್ ಫೆಲಿಕ್ಸ್

ಜೂಡ್ ಫೆಲಿಕ್ಸ್

ಒಲಿಂಪಿಯನ್ ಹಾಗೂ ಭಾರತದ ಹಾಕಿ ತಂಡದ ಮಾಜಿ ನಾಯಕ ಜೂಡ್ ಫೆಲಿಕ್ಸ್ ಅವರು ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ.

3ಸಿ ತತ್ವ

3ಸಿ ತತ್ವ

3 ಸಿ ಆಧಾರದ ಶಿಕ್ಷಣದಲ್ಲಿ ಮಹತ್ವ ಸಾರುವ ಚಾರ್ಟ್ ಕವಿತಾ ಜೈನ್ ವಿವರಿಸಿದರು.

English summary
Edify School, an associate of MDN Edify Education Pvt. Ltd, unveiled its presence in Electronic City, Bengaluru marking another milestone in the field of K12 Education.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X