ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಜಮೀರ್‌ಗೆ ಸವಾಲು, ಚಾಮರಾಜಪೇಟೆ ಬಂದ್‌ ಕರೆ

|
Google Oneindia Kannada News

ಬೆಂಗಳೂರು, ಜುಲೈ 03; ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ನಾಗರಿಕರ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ.

ಭಾನುವಾರ ನಡೆದ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಸಭೆಯಲ್ಲಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಜುಲೈ 12ರಂದು ಚಾಮರಾಜಪೇಟೆ ಬಂದ್‌ಗೆ ಕರೆ ನೀಡಲಾಗಿದೆ.

ಈದ್ಗಾ ಮೈದಾನ, ವಕ್ಫ್ ಮಂಡಳಿಗೆ ಬಿಬಿಎಂಪಿ 2ನೇ ನೋಟಿಸ್ಈದ್ಗಾ ಮೈದಾನ, ವಕ್ಫ್ ಮಂಡಳಿಗೆ ಬಿಬಿಎಂಪಿ 2ನೇ ನೋಟಿಸ್

ಚಾಮರಾಜಪೇಟೆ ಈದ್ಗಾ ಮೈದಾನ ಬಿಟ್ಟುಕೊಡುವುದಿಲ್ಲ ಎಂದು ನಾಗರಿಕರ ಒಕ್ಕೂಟ ಹೇಳಿದೆ.
ರಕ್ತ ಬೇಕಾದರೂ ಕೊಡುತ್ತೇವೆ. ಆದರೆ ಮೈದಾನ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ನಾಗರಿಕರ ಒಕ್ಕೂಟ ಶಾಸಕರಿಗೆ ಸವಾಲು ಹಾಕಿದೆ.

ಈದ್ಗಾ ಮೈದಾನ ವಕ್ಫ್ ಮಂಡಳಿಯದ್ದು; ಬಿಬಿಎಂಪಿ ಮುಖ್ಯ ಆಯುಕ್ತಈದ್ಗಾ ಮೈದಾನ ವಕ್ಫ್ ಮಂಡಳಿಯದ್ದು; ಬಿಬಿಎಂಪಿ ಮುಖ್ಯ ಆಯುಕ್ತ

Edga Ground Controversy Chamarajpet Band Called On July 12

ಹಿಂದೂಗಳನ್ನು ಕೆಣಕಬೇಡಿ, ಎಲ್ಲೋ ಕೂತು ಆಪರೇಟ್ ಮಾಡಿ ಇಲ್ಲಿ ಆಟವಾಡಬೇಡಿ. ಜಮೀರ್ ಅಹ್ಮದ್ ಖಾನ್ ಅವರೇ ಹುಷಾರಾಗಿರಿ. ನಾವು ಅಲ್ಲಿಗೆ ಬರುವುದಿಲ್ಲ. ಬಂದರೆ ಏನಾಗುತ್ತದೆ? ಎನ್ನುವುದು ಗೊತ್ತಾಗುತ್ತದೆ ಎಂದು ಒಕ್ಕೂಟ ಹೇಳಿದೆ.

ಚಾಮರಾಜಪೇಟೆ ಈದ್ಗಾ ಮೈದಾನ ಬಿಬಿಎಂಪಿಯದ್ದೋ?, ವಕ್ಫ್ ಮಂಡಳಿಯದ್ದೋ?ಚಾಮರಾಜಪೇಟೆ ಈದ್ಗಾ ಮೈದಾನ ಬಿಬಿಎಂಪಿಯದ್ದೋ?, ವಕ್ಫ್ ಮಂಡಳಿಯದ್ದೋ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚಾಮರಾಜಪೇಟೆ ಈದ್ಗಾ ಮೈದಾನದ ವಿಚಾರದಲ್ಲಿ ಅನಗತ್ಯ ಗೊಂದಲ ಉಂಟು ಮಾಡುತ್ತಿದೆ ಎಂದು ಒಕ್ಕೂಟ ಆರೋಪಿಸಿದೆ. ಮೈದಾನ ಬಿಬಿಎಂಪಿ ಸ್ವತ್ತು, ಎಲ್ಲರೂ ಒಗ್ಗೂಡಿ ಆಟದ ಮೈದಾನ ಉಳಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಯಾರಿಗೆ ಸೇರಿದ ಆಸ್ತಿ?; ಚಾಮರಾಜಪೇಟೆ ಈದ್ಗಾ ಮೈದಾನದ ಯಾರಿಗೆ ಸೇರಿದ್ದು? ಎಂಬುದು ವಿವಾದಕ್ಕೆ ಕಾರಣವಾಗಿದೆ. ಆಟದ ಮೈದಾನವೂ ಆಗಿರುವ ಈದ್ಗಾ ಮೈದಾನ ಬಿಬಿಎಂಪಿಯದ್ದೋ ಅಥವ ವಕ್ಫ್ ಮಂಡಳಿಯದ್ದೋ? ಎಂಬುದು ಗೊಂದಲಕ್ಕೆ ಕಾರಣವಾಗಿದೆ.

ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಕೆಲವು ದಿನಗಳ ಹಿಂದೆ ಮೈದಾನಕ್ಕೆ ಭೇಟಿ ನೀಡಿದ್ದರು. ಈಗ ಶಾಸಕರ ವಿರುದ್ಧವೇ ನಾಗರಿಕರ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ.

ಜೂನ್‌ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಮೈದಾನದಲ್ಲಿ ಯೋಗ ದಿನಾಚರಣೆ ನಡೆಸಲು ಅನುಮತಿ ನೀಡಬೇಕು ಎಂದು ಹಿಂದೂ ಸಂಘಟನಗಳು ಮನವಿ ಮಾಡಿದ್ದವು. ಆದರೆ ಬಿಬಿಎಂಪಿ ಒಪ್ಪಿಗೆ ನೀಡಿರಲಿಲ್ಲ.

ವಕ್ಫ್ ಮಂಡಳಿ ಮೈದಾನ ತನಗೆ ಸೇರಿದ್ದು ಎಂದು ದಾಖಲೆಗಳನ್ನು ನೀಡಿದೆ. ಆದರೆ ಬಿಬಿಎಂಪಿ ಇನ್ನೂ ಕೆಲವು ದಾಖಲೆಯನ್ನು ನೀಡುವಂತೆ ಮಂಡಳಿಗೆ ನೋಟಿಸ್ ನೀಡಿದೆ.

Recommended Video

ಟೀಂ ಇಂಡಿಯಾ ನಾಯಕನಾಗಿದ್ದಕ್ಕೆ ರನ್ ಹೊಳೆ ಹರಿಸಿದ ಬುಮ್ರಾ | OneIndia Kannada

English summary
Chamarajpet Nagarika vedike okkuta called for Chamarajpet bandh on July 12th. Okkuta upset with MLA Zameer Ahmed Khan in the issue of Edga ground controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X