ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಆಸ್ತಿ ಜಪ್ತಿ?

|
Google Oneindia Kannada News

Recommended Video

ಐಶ್ವರ್ಯ ಆಸ್ತಿ ಜಪ್ತಿ ಮಾಡಿದ ED ಅಧಿಕಾರಿಗಳು..? | DK Shivakumar daughter | Oneindia Kannada

ಬೆಂಗಳೂರು, ಸೆಪ್ಟೆಂಬರ್ 18: ಮಾಜಿ ಸಚಿವ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಅವರ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸೋಲ್ ಆಂಡ್ ಸೇಲ್ಸ್ ಸೋಲಾರ್ ಕಂಪನಿಯಲ್ಲಿ 78 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿ ಐಶ್ವರ್ಯ ವ್ಯವಹಾರ ಆರಂಭಿಸಿದ್ದರು. ಡಿಕೆಶಿ ಸ್ನೇಹಿತರ ಮೂಲಕ ಹಣವನ್ನು ಉಡುಗೊರೆಯಾಗಿ ಸ್ವೀಕರಿಸಿ ಐಶ್ವರ್ಯ ಈ ವ್ಯವಹಾರ ಮಾಡಿದ್ದಾರೆ ಎನ್ನುವ ಆರೋಪ ಈಗ ಕೇಳಿ ಬಂದಿದೆ.

ಇ.ಡಿಯಿಂದ ಮತ್ತೊಂದು ಬಾಂಬ್: ಡಿಕೆ ಶಿವಕುಮಾರ್ ಮಾವನಿಗೆ ಸಮನ್ಸ್‌ಇ.ಡಿಯಿಂದ ಮತ್ತೊಂದು ಬಾಂಬ್: ಡಿಕೆ ಶಿವಕುಮಾರ್ ಮಾವನಿಗೆ ಸಮನ್ಸ್‌

ದಾಖಲೆಗಳನ್ನು ವಶಕ್ಕೆ ಪಡೆದು ಇಡಿ ವಿಚಾರಣೆ ಮುಂದುವರಿಸಿದ್ದು ತನಿಖೆಯ ವೇಳೆ ಇದು ಅಕ್ರಮ ಎನ್ನುವುದು ಸಾಬೀತಾದರೆ ಈ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ.

40 ಕೋಟಿ ರೂ. ಹಣವನ್ನು ಶಿವಕುಮಾರ್ ಸ್ನೇಹಿತರು ಗಿಫ್ಟ್ ಡೀಡ್ ಮಾಡಿದ್ದಾರೆ. ಗಿಫ್ಟ್ ಡೀಡ್ ಮಾಡಿದ ಹಣ ಬೇನಾಮಿಯಾಗಿದ್ದು ಇದು ಶಿವಕುಮಾರ್ ಅವರದ್ದೇ. ಬೇನಾಮಿ ಹಣದ ಮೂಲಕ ವ್ಯವಹಾರ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಐಶ್ವರ್ಯ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ.

ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಮೈಸೂರಿನಲ್ಲಿರುವ ಡಿಕೆಶಿ ಮಾವ ತಿಮ್ಮಯ್ಯಗೆ ಮಾತ್ರವಲ್ಲದೇ ಸ್ನೇಹಿತ ಶಶಿಕುಮಾರ್, ಆಡಿಟರ್ ಚಂದ್ರಶೇಖರ್ ತಿಮ್ಮಯ್ಯ, ಸಿಂಗಾಪುರದ ಗೆಳೆಯ ರಜನೀಶ್ ಗೋಪಿನಾಥ್ ಹಾಗೂ ವ್ಯವಹಾರಿಕ ಸಂಬಂಧಿ ಅನಿಲ್ ಜೈನ್ ಗೂ ಇಡಿ ಸಮನ್ಸ್ ಜಾರಿ ಮಾಡಿದೆ. ಮತ್ತೊಂದೆಡೆ ಪುತ್ರಿ ಐಶ್ವರ್ಯಾ ಹೆಸರಿನಲ್ಲಿದ್ದ ಆಸ್ತಿಯನ್ನೂ ಜಪ್ತಿ ಮಾಡಲಾಗಿದೆ.

ಐಟಿ ದಾಳಿ ಬಳಿಕ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇನ್ನು ಹಲವು ಮಂದಿಯನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ವಿಶೇಷ ನ್ಯಾಯಾಲಯದಲ್ಲಿ ಮಂಗಳವಾರ ಇಡಿ ಹೇಳಿತ್ತು.

ಡಿಕೆ ಶಿವಕುಮಾರ್ ಜಾಮೀನು ವಿಚಾರಣೆ ಮುಂದೂಡಿದ ನ್ಯಾಯಾಲಯ

ಡಿಕೆ ಶಿವಕುಮಾರ್ ಜಾಮೀನು ವಿಚಾರಣೆ ಮುಂದೂಡಿದ ನ್ಯಾಯಾಲಯ

ಬುಧವಾರ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ಇಡಿ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು. ಇಡಿ ಪರ ಹಿರಿಯ ವಕೀಲರು ಸರಿಯಾದ ಸಮಯಕ್ಕೆ ನ್ಯಾಯಾಲಯಕ್ಕೆ ಆಗಮಿಸದ ಕಾರಣ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಲಾಯಿತು.

ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?

ಐಶ್ವರ್ಯಾ ಖಾತೆಯಿಂದ 108 ಕೋಟಿ ರೂ ವರ್ಗಾವಣೆ?

ಐಶ್ವರ್ಯಾ ಖಾತೆಯಿಂದ 108 ಕೋಟಿ ರೂ ವರ್ಗಾವಣೆ?

ಐಶ್ವರ್ಯ ಖಾತೆಯಿಂದ 108 ಕೋಟಿ ರೂ. ವರ್ಗಾವಣೆ ಆಗಿದೆ. ಪುತ್ರಿಗೆ 24-25 ವರ್ಷವಾಗಿದ್ದರಿಂದ ಇದು ನಂಬಲೂ ಸಾಧ್ಯವಿಲ್ಲ. ಆದರೂ ಈ ಸತ್ಯವನ್ನು ನಂಬಲೇಬೇಕು. ಚಿಕ್ಕ ವಯಸ್ಸಿನಲ್ಲಿ ಈ ಮಟ್ಟದ ಆರ್ಥಿಕ ವ್ಯವಹಾರ ಹೇಗೆ ಸಾಧ್ಯ? ಇದು ಕೇವಲ ಬರೀ 41 ಲಕ್ಷ ರೂ.ಗೆ ಸಂಬಂಧಿಸಿದಲ್ಲ ಸಾಕಷ್ಟು ಆಳವಾಗಿ ತನಿಖೆ ನಡೆಸಬೇಕಿದೆ. ಬೇರೆ ಬೇರೆ ಖಾತೆಯಿಂದ ಸಾಕಷ್ಟು ದೊಡ್ಡ ಪ್ರಮಾಣದ ಹಣ ವರ್ಗಾವಣೆ ಆಗಿದೆ. 800 ಕೋಟಿ ಅಕ್ರಮ ಹಣ ವರ್ಗಾವಣೆಯಾಗಿದೆ. ಇದು ಅಕ್ರಮ ಹಣ ವರ್ಗಾವಣೆಯ ಕರಾಳತೆಯನ್ನು ತೋರಿಸುತ್ತದೆ. ಹೀಗಾಗಿ ಜಾಮೀನು ಮಂಜೂರು ಮಾಡಬಾರದು ಎಂದು ನಟರಾಜ್ ವಾದಿಸಿದ್ದರು.

ಇಡಿ ವಶದಲ್ಲಿ ಅನುಭವಿಸಿದ ಕಷ್ಟ ಹೇಳಿಕೊಂಡ ಡಿ.ಕೆ.ಶಿವಕುಮಾರ್ಇಡಿ ವಶದಲ್ಲಿ ಅನುಭವಿಸಿದ ಕಷ್ಟ ಹೇಳಿಕೊಂಡ ಡಿ.ಕೆ.ಶಿವಕುಮಾರ್

ಗಿಫ್ಟ್‌ಡೀಡ್ ಎಂದರೇನು?

ಗಿಫ್ಟ್‌ಡೀಡ್ ಎಂದರೇನು?

ಗಿಫ್ಟ್‌ಡೀಡ್ ಎಂದರೆ ಸ್ವಯಂ ಪ್ರೇರಿತವಾಗಿ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ತನ್ನಲ್ಲಿದ್ದ ಆಸ್ತಿ ಅಥವಾ ಹಣವನ್ನು ಯಾವುದೇ ಆಸ್ತಿ, ಹಣ ಪಡೆಯದೇ ಉಚಿತವಾಗಿ ದಾನ ನೀಡಲಾಗುತ್ತದೆ. ಒಮ್ಮೆ ಆಸ್ತಿ ಮೇಲೆ ಗಿಫ್ಟ್ ಡೀಡ್ ಸರಿಯಾಗಿ ಬರೆದು ನೋಂದಣಿ ಮಾಡಿಕೊಂಡರೆ ಆಗ ಆಸ್ತಿಯ ಮೇಲಿನ ಮೂಲ ಮಾಲೀಕನ ಎಲ್ಲಾ ಹಕ್ಕುಗಳು ದಾನ ಪಡೆದುಕೊಂಡವರಿಗೆ ವರ್ಗಾವಣೆಯಾಗುತ್ತದೆ. ಒಮ್ಮೆ ನೋಂದಣಿಯಾದ ಬಳಿಕ ಮೂಲ ಮಾಲೀಕ ಅಥವಾ ಆತನ ಸಂಬಂಧಿಕರು ಆ ಆಸ್ತಿಯ ಮೇಲೆ ಯಾವುದೇ ಹಕ್ಕನ್ನು ಹೊಂದಲು ಅವಕಾಶವಿಲ್ಲ.

ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಲು ಮಗಳು ಐಶ್ವರ್ಯಳೇ ಕಾರಣ?ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಲು ಮಗಳು ಐಶ್ವರ್ಯಳೇ ಕಾರಣ?

ಡಿಕೆಶಿ ಮಾವನಿಗೆ ಸಮನ್ಸ್

ಡಿಕೆಶಿ ಮಾವನಿಗೆ ಸಮನ್ಸ್

ಡಿಕೆ ಶಿವಕುಮಾರ್ ಮಾವನಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಮೈಸೂರಿನಲ್ಲಿರುವ ಡಿಕೆಶಿ ಮಾವ ತಿಮ್ಮಯ್ಯಗೆ ಮಾತ್ರವಲ್ಲದೇ ಸ್ನೇಹಿತ ಶಶಿಕುಮಾರ್, ಆಡಿಟರ್ ಚಂದ್ರಶೇಖರ್ ತಿಮ್ಮಯ್ಯ, ಸಿಂಗಾಪುರದ ಗೆಳೆಯ ರಜನೀಶ್ ಗೋಪಿನಾಥ್ ಹಾಗೂ ವ್ಯವಹಾರಿಕ ಸಂಬಂಧಿ ಅನಿಲ್ ಜೈನ್ ಗೂ ಇಡಿ ಸಮನ್ಸ್ ಜಾರಿ ಮಾಡಿದೆ. ಮತ್ತೊಂದೆಡೆ ಪುತ್ರಿ ಐಶ್ವರ್ಯಾ ಹೆಸರಿನಲ್ಲಿದ್ದ ಆಸ್ತಿಯನ್ನೂ ಜಪ್ತಿ ಮಾಡಲಾಗಿದೆ.

English summary
It is learned that the assets of Aishwarya, daughter of former minister DK Shivakumar, have been Seized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X