ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ರಗ್ಸ್ ಪ್ರಕರಣದಲ್ಲಿ 50 ಲಕ್ಷ ವಹಿವಾಟು; ತನಿಖೆ ಆರಂಭಿಸಿದ ಇಡಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 25 : ಬೆಂಗಳೂರಿನಲ್ಲಿ ಕಳೆದ ವಾರ ಬಂಧಿಸಿದ ಡ್ರಗ್ ಪೆಡ್ಲರ್ 50 ಲಕ್ಷ ರೂ. ಬ್ಯಾಂಕ್ ವಹಿವಾಟು ನಡೆಸಿದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಪೆಡ್ಲರ್ ಹಣಕಾಸು ವ್ಯವಹಾರ ನಡೆಸಿರುವುದು ಬಿನೇಶ್‌ ಕೊಡಿಯೇರಿ ಜೊತೆ.

ಬಿನೇಶ್‌ ಕೊಡಿಯೇರಿ ಕೇರಳದ ಮಾಜಿ ಗೃಹ ಸಚಿವ, ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ ಪುತ್ರ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈಗಾಗಲೇ ಅಕ್ಟೋಬರ್ 17ರಂದು ಬಿನೇಶ್ ಕೋಡಿಯೇರಿ ವಿಚಾರಣೆ ನಡೆಸಿದ್ದರು.

ಡ್ರಗ್ಸ್ ಪ್ರಕರಣ; ಕನ್ನಡ ಬಿಗ್‌ ಬಾಸ್‌ ಸ್ಪರ್ಧಿ ಬಂಧನ ಡ್ರಗ್ಸ್ ಪ್ರಕರಣ; ಕನ್ನಡ ಬಿಗ್‌ ಬಾಸ್‌ ಸ್ಪರ್ಧಿ ಬಂಧನ

ಕಳೆದ ವಾರ ಬೆಂಗಳೂರಿನಲ್ಲಿ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ ಮೊಹಮದ್ ಅನೂಪ್ ಬಿನೇಶ್‌ ಕೊಡಿಯೇರಿ ಜೊತೆ 50 ಲಕ್ಷ ರೂ. ಹಣವ ವ್ಯವಹಾರವನ್ನು ನಡೆಸಿರುವುದ ಬೆಳಕಿಗೆ ಬಂದಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಅನಿಕಾ ಡಿ., ರವೀಂದ್ರನ್ ಆರ್. ಎ. ಜೊತೆ ಅನೂಪ್ ಸಂಪರ್ಕ ಹೊಂದಿದ್ದ.

ಡ್ರಗ್ಸ್ ಪ್ರಕರಣ: ವಿವೇಕ್ ಒಬೆರಾಯ್ ಮನೆ ಮೇಲೆ ಸಿಸಿಬಿ ದಾಳಿ ಡ್ರಗ್ಸ್ ಪ್ರಕರಣ: ವಿವೇಕ್ ಒಬೆರಾಯ್ ಮನೆ ಮೇಲೆ ಸಿಸಿಬಿ ದಾಳಿ

ED Questions Drug Peddler For Bank Transactions With Bineesh Kodiyeri

ಮೊಹಮದ್ ಅನೂಪ್‌ನನ್ನು ಇಡಿ ಅಧಿಕಾರಿಗಳು ಕಚೇರಿಯಲ್ಲಿ ವಿಚಾರಣೆ ನಡೆಸಿದರು. ಆದರೆ, ಆತ ವಿಚಾರಣೆಗೆ ಸಹಕಾರ ನೀಡದ ಕಾರಣ ವಶಕ್ಕೆ ಪಡೆದು ವಿಚಾರಣೆಯನ್ನು ಮುಂದುವರೆಸಿದ್ದಾರೆ. ಅನಿಕಾ ಡಿ. ಡ್ರಗ್ಸ್‌ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಮೊದಲು ಬಂಧಿತಳಾದ ಆರೋಪಿ.

ಡ್ರಗ್ಸ್ ಕೇಸ್: ''ಇಡಿ'' ಮುಂದೆ ಕೈಕಟ್ಟಿ ನಿಂತ ಕೇರಳದ ಪ್ರಭಾವಿ ಬಿನೀಶ್ ಡ್ರಗ್ಸ್ ಕೇಸ್: ''ಇಡಿ'' ಮುಂದೆ ಕೈಕಟ್ಟಿ ನಿಂತ ಕೇರಳದ ಪ್ರಭಾವಿ ಬಿನೀಶ್

ಬಿನೇಶ್‌ ಕೊಡಿಯೇರಿ ಮತ್ತು ಅನೂಪ್ ಸಂಬಂಧದ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡಲಿದ್ದಾರೆ. 50 ಲಕ್ಷದಷ್ಟು ಹಣ ವರ್ಗಾವಣೆ ಆಗಿದ್ದು ಏಕೆ? ಎಂಬುದು ಕುತೂಹಲ ಮೂಡಿಸಿರುವ ಅಂಶವಾಗಿದೆ.

ಮೊಹಮದ್ ಅನೂಪ್‌ 2015ರಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ದ. ಈ ಇದರಲ್ಲಿ ಬಿನೇಶ್ ಕೊಡಿಯೇರಿ ಪಾಲುದಾರಿಕೆ ಹೊಂದಿದ್ದಾರೆ ಎಂಬ ಆರೋಪವೂ ಇದೆ. ಆದರೆ, ಕೊಡಿಯೇರಿ ಕುಟುಂಬ ಸದಸ್ಯರು ಇದನ್ನು ನಿರಾಕರಿಸಿದ್ದಾರೆ.

Recommended Video

Corona ಓಡಿಸೋ ಸಮಯ ದೂರ ಇಲ್ಲಾ | Corona Vaccine | Oneindia Kannada

ಇನ್ನು ಕೇರಳದಲ್ಲಿ ಪತ್ತೆಯಾದ ಚಿನ್ನ ಸಾಗಣೆ ಪ್ರಕರಣದಲ್ಲಿಯೂ ಬಿನೇಶ್ ಕೊಡಿಯೇರಿ ಹೆಸರು ಹೇಳಿ ಬರುತ್ತಿದೆ. ಮತ್ತೊಂದು ಕಡೆ ಬೆಂಗಳೂರಿನಲ್ಲಿ ಪತ್ತೆಯಾದ ಡ್ರಗ್ಸ್ ಪ್ರಕರಣದಲ್ಲಿಯೂ ಹೆಸರು ಕೇಳಿ ಬರುತ್ತಿದೆ. ಅಗತ್ಯವಿದ್ದರೆ ಪುನಃ ವಿಚಾರಣೆಗೆ ಹಾಜರಾಗಬೇಕು ಎಂದು ಇಡಿ ಬಿನೇಶ್ ಕೊಡಿಯೇರಿಗೆ ಸೂಚನೆ ನೀಡಿದೆ.

English summary
ED questioned drug peddler Muhammad Anoop after found Rs 50 lakh worth of bank transactions with Bineesh Kodiyeri the son of CPI(M) leader Kodiyeri Balakrishnan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X