ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಣ್ವ ಗ್ರೂಪ್‌ನ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಇಡಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25 : ಕಣ್ವ ಗ್ರೂಪ್‌ನಲ್ಲಿ 650 ಕೋಟಿಗೂ ಅಧಿಕ ಹೂಡಿಕೆ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಕಣ್ವ ಗ್ರೂಪ್‌ಗೆ ಸೇರಿದ 255.17 ಕೋಟಿ ರೂ. ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.

ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಕಣ್ವ ಗ್ರೂಪ್‌ನ ಎಂಡಿ ನಂಜುಂಡಯ್ಯ ಹಾಗೂ ಇತರ ನಿರ್ದೇಶಕರ ಹೆಸರಿನಲ್ಲಿದ್ದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಡಿಎಂಕೆ ಸಂಸದ ಜಗತ್ ರಕ್ಷಕನ್ ಆಸ್ತಿ ಜಪ್ತಿ ಮಾಡಿದ ಇಡಿ ಡಿಎಂಕೆ ಸಂಸದ ಜಗತ್ ರಕ್ಷಕನ್ ಆಸ್ತಿ ಜಪ್ತಿ ಮಾಡಿದ ಇಡಿ

ಅಧಿಕ ಬಡ್ಡಿ ನೀಡುವುದಾಗಿ 650 ಕೋಟಿಗೂ ಅಧಿಕ ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದ ಕಣ್ವ ಗ್ರೂಪ್ ಬಡ್ಡಿ ನೀಡಲು ವಿಫಲವಾಗಿತ್ತು. ಈ ಕುರಿತು ಮೊದಲು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಯಿತು.

ಐಸಿಐಸಿಐ -ವಿಡಿಯೋಕಾನ್ ಕೇಸ್: ದೀಪಕ್ ಬಂಧಿಸಿದ ಇಡಿ ಐಸಿಐಸಿಐ -ವಿಡಿಯೋಕಾನ್ ಕೇಸ್: ದೀಪಕ್ ಬಂಧಿಸಿದ ಇಡಿ

ED Attaches Assets Worth Rs 225 Crore Of Kanva Group

ಬಳಿಕ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಜಾರಿ ನಿರ್ದೇಶನಾಲಯ ಸಹ ಈ ಕುರಿತು ತನಿಖೆಯನ್ನು ಕೈಗೊಂಡಿತ್ತು. ಈಗ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

 ಅಕ್ರಮ ಹಣ ವರ್ಗಾವಣೆ: ಚೀನಾದ ಪ್ರಜೆ ಮೇಲೆ ಇಡಿ ತನಿಖೆ ಅಕ್ರಮ ಹಣ ವರ್ಗಾವಣೆ: ಚೀನಾದ ಪ್ರಜೆ ಮೇಲೆ ಇಡಿ ತನಿಖೆ

ಹೂಡಿಕೆದಾರರರಿಗೆ 10,000 ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ಕಣ್ವ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ನಂಜುಂಡಯ್ಯನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದರು.

Recommended Video

Whatsapp ಹಳೆಯ ಸಂದೇಶಗಳು ಅಷ್ಟು ಸುಲಭವಾಗಿ ಸಿಗುತ್ತಾ ? | Oneindia Kannada

ಕಣ್ವ ಕೋ ಆಪರೇಟಿವ್ ಸಂಸ್ಥೆ ಗ್ರಾಹಕರಿಗೆ ನೀಡಿದ್ದ ಚೆಕ್‌ಗಳು ಬೌನ್ಸ್ ಆಗಿದ್ದವು. ಗ್ರಾಹಕರು ಹೂಡಿಕೆ ಮಾಡಿದ ಹಣಕ್ಕೆ ಸರಿಯಾದ ಬಡ್ಡಿಯನ್ನು ನೀಡಿರಲಿಲ್ಲ. ಕಣ್ವ ಗಾರ್ಡನ್ ಸಿಟಿ ಎಂಬ ಹೆಸರಿನಲ್ಲಿಯೂ ಜನರಿಗೆ ವಂಚನೆ ಮಾಡಲಾಗಿದೆ.

English summary
The Enforcement Directorate has attached assets worth Rs 255.17 crore of the Kanva Group. ED investigating 650 crore investment case in group.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X