ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ವಂಚನೆ: ಮನ್ಸೂರ್‌ಗೆ ಸೇರಿದ 206 ಕೋಟಿ ಆಸ್ತಿ ವಶ

|
Google Oneindia Kannada News

ಬೆಂಗಳೂರು, ಜೂನ್ 28: ಐಎಂಎ ವಂಚನೆ ಪ್ರಕರಣದ ಬೆನ್ನು ಬಿದ್ದಿರುವ ಜಾರಿ ನಿರ್ದೇಶನಾಲಯ (ಇಡಿ)ಯು ಮನ್ಸೂರ್‌ ಖಾನ್‌ಗೆ ಸೇರಿದ 206 ಕೋಟಿ ಆಸ್ತಿ ವಶಪಡಿಸಿಕೊಂಡಿದೆ.

ಪಿಎಂಎಲ್‌ಎ (ಪ್ರಿಯೆವೆನ್‌ಶನ್ ಆಫ್ ಮನಿ ಲಾಂಡ್ರಿಂಗ್) ಅಡಿಯಲ್ಲಿ ಇಡಿಯು ಐಎಂಎ ಮಾಲೀಕ ಮನ್ಸೂರ್ ಖಾನ್‌ ಮೇಲೆ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದೆ.

ಐಎಂಎ ವಂಚನೆ ಪ್ರಕರಣ: ಜಮೀರ್‌ ಅಹ್ಮದ್‌ಗೆ ಮನೆಗೆ ಇಡಿ ಅಧಿಕಾರಿಗಳು ಐಎಂಎ ವಂಚನೆ ಪ್ರಕರಣ: ಜಮೀರ್‌ ಅಹ್ಮದ್‌ಗೆ ಮನೆಗೆ ಇಡಿ ಅಧಿಕಾರಿಗಳು

40,000 ಕ್ಕೂ ಹೆಚ್ಚು ಮಂದಿಗೆ ಮನ್ಸೂರ್ ಖಾನ್ ಮೋಸ ಮಾಡಿದ್ದಾನೆಂದು ಇಡಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, ಆತನ ವಿರುದ್ಧ ಎಫ್‌ಐಆರ್ ದಾಖಲಾಗಲು ಪ್ರಾರಂಭವಾದ ದಿನವೇ ಆತ ದೇಶ ಬಿಟ್ಟು ಓಡಿಹೋಗಿದ್ದಾನೆ ಎಂದು ಹೇಳಿದೆ.

ED attaches 206 crore worth property in IMA scam case

ಐಎಂಎಗೆ ಸಂಭಂದಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಜನರಿಂದ ಹಣ ಹಾಕಿಸಿಕೊಂಡು ಸುಮಾರು 4000 ಕೋಟಿ ರೂಪಾಯಿಯನ್ನು ವಂಚನೆ ಮಾಡಿದ್ದಾರೆ ಎಂದು ಇಡಿ ತನಿಖೆಯಿಂದ ಗೊತ್ತಾಗಿದೆ.

ಐಎಂಎ ಸಮೂಹದ 209 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ EDಐಎಂಎ ಸಮೂಹದ 209 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ED

ಮನ್ಸೂರ್‌ ಖಾನ್‌ಗೆ ಸೇರಿದ ಎಲ್ಲ ಆಸ್ತಿಗಳನ್ನು, ಬ್ಯಾಂಕ್ ಖಾತೆಗಳನ್ನು ತನಿಖೆಗೆ ಒಳಪಡಿಸಿರುವ ಇಡಿ, ವಿವಿಧ ಬ್ಯಾಂಕ್ ಖಾತೆಗಳಿಂದ 44 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಐಎಂಎಗೆ ಸೇರಿದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಶಿವಾಜಿನಗರದ ಐಎಂಎ ಮಳಿಗೆ, ಜಯನಗರದ ಮಳಿಗೆ, ಫ್ರೇಜರ್‌ಟೌನ್‌ನ ಮನೆ, ಬನ್ನೇರ್‌ಘಟ್ಟ ರಸ್ತೆಯಲ್ಲಿನ ಅಪಾರ್ಟ್‌ಮೆಂಟ್, ಜಯನಗರದ ಮನೆ, ಅಲೆಕ್ಸಾಂಡ್ರಿಯಾ ಸ್ಟ್ರೀಟ್‌ನಲ್ಲಿದ್ದ ಮಳಿಗೆ, ಟಸ್ಕರ್‌ ಟೌನ್‌ನಲ್ಲಿದ್ದ ಅಪಾರ್ಟ್‌ಮೆಂಟ್, ಪೊಟೇರಿ ಟೌನ್‌ನಲ್ಲಿನ ಮನೆ, ಎಚ್‌ಬಿಆರ್‌ ಬಡಾವಣೆಯ ಮನೆ, ಬೆನ್ಸನ್‌ ಟೌನ್‌ನಲ್ಲಿನ ಮನೆ, ಸೇಂಟ್ ಜೋನಸ್‌ ಚರ್ಚ್‌ ರಸ್ತೆಯ ಶಾಲೆ, ರಿಚರ್ಡ್‌ ಟೌನ್ ಬಳಿಯ ಜಾಗ, ಚಿಕ್ಕಬಳ್ಳಾಪುರದಲ್ಲಿನ ಬಡಾವಣೆ, ಮಾರುತಿ ಸೇವಾ ನಗರದಲ್ಲಿನ ಕಾಂಪ್ಲೆಕ್ಸ್‌, ದಾವಣಗೆರೆಯ ಐದು ಎಕರೆ ಜಾಗ, ಹಾಸನದಲ್ಲಿ ಜಮೀನು, ಹಾಸನದಲ್ಲಿನ ಸೈಟು, ದಾವಣೆಗೆರೆಯ ಇಪ್ಪತ್ತು ಗುಂಟೆ ಜಮೀನು, ಸೆರ್ಪಂಟೈನ್ ರಸ್ತೆಯಲ್ಲಿ ಜಮೀನು ಗಳನ್ನು ಇಡಿ ಗುರುತಿಸಿದ್ದು ಇವುಗಳೆಲ್ಲವುದರ ಒಟ್ಟು ಮೌಲ್ಯ 197 ಕೋಟಿ ಎನ್ನಲಾಗಿದೆ.

English summary
Enforcment department investigation IMA scam case. it attached 206 crore worth property of IMA and its owner Mansoor Khan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X