ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಆಪ್ತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ರಘು ಆಸ್ತಿ ಜಪ್ತಿ

|
Google Oneindia Kannada News

ಬೆಂಗಳೂರು, ಜನವರಿ 12: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಎಲ್‌ ರಘು ಗೆ ಸೇರಿದ 11 ಆಸ್ತಿಳನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

ಅದರ ಒಟ್ಟು ಮೌಲ್ಯ 1.92 ಕೋಟಿ ರೂಪಾಯಿಗಳಾಗಿದೆ. ಮಂಡ್ಯ ಹಾಗೂ ಬೆಂಗಳೂರಲ್ಲಿ ಈ ಆಸ್ತಿಗಳಿವೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ದಾಳಿಯಾಗಿತ್ತು. ಇವರ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪವೂ ಕೂಡ ಇದೆ.

ED attaches, 11 immovable properties of Egineer Raghu

ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಭಾಗದಲ್ಲಿ ಕಾರ್ಯ ನಿರ್ವಾಹಕ ಎಂಜಿನಿಯರ್‌ ಆಗಿರುವ ಎಲ್‌.ರಘು ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು 2012ರ ಅ.8ರಂದು ದಾಳಿ ನಡೆಸಿದ್ದರು.

ಈ ವೇಳೆ 1.92 ಕೋಟಿ ರೂ.ಗೂ ಹೆಚ್ಚು ಆಸ್ತಿ ಪತ್ತೆಯಾಗಿತ್ತು. ರಘು ತಮ್ಮ ಆದಾಯಕ್ಕೂ ಮೀರಿ ಶೇ.102.97ರಷ್ಟು ಅಧಿಕ ಆಸ್ತಿ ಹೊಂದಿರುವುದು ಬಯಲಾಗಿತ್ತು. ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸರಕಾರಕ್ಕೆ ಪತ್ರ ಬರೆದಿದ್ದರು.

2014ರ ನಂತರ ಒಟ್ಟು ನಾಲ್ಕು ಬಾರಿ ಎಲ್‌.ರಘು ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಎಡಿಜಿಪಿ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಉಪ ಲೋಕಾಯುಕ್ತರು ಕೂಡಾ ಎಲ್‌.ರಘು ವಿರುದ್ಧ ಶಿಸ್ತು ಕ್ರಮಕ್ಕೆ ಪತ್ರ ಬರೆದಿದ್ದರು.

English summary
Enforcement Directorate (ED) attaches, 11 immovable properties, under PMLA, located in Bengaluru and Mandya worth Rs 1.92 crore of L Raghu, executive engineer, National Highways, Bengaluru in a corruption case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X