ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ಹಗರಣ: 'ಹಲಾಲ್ ಬ್ಯಾಂಕಿಂಗ್‌' ನಲ್ಲಿ ಹೂಡಿದ್ದ 10 ಕೋಟಿ ವಶ

|
Google Oneindia Kannada News

ಬೆಂಗಳೂರು, ಡಿಸೆಂಬರ್ 13: ಐಎಂಎ ಹಗರಣ ಸೂತ್ರಧಾರ ಮನ್ಸೂರ್ ಖಾನ್ 'ಇಸ್ಲಾಮಿಕ್ ಬ್ಯಾಂಕಿಂಗ್' ನಲ್ಲಿ ಹೂಡಿದ್ದ 10 ಕೋಟಿ ಹಣವನ್ನು ಇಡಿ ವಶಪಡಿಸಿಕೊಂಡಿದೆ.

ಮನ್ಸೂರ್ ಖಾನ್ ಹತ್ತು ಕೋಟಿ ಹಣವನ್ನು ಇಸ್ಲಾಮಿಕ್ ಬ್ಯಾಂಕಿಂಗ್ ಅಥವಾ 'ಹಲಾಲ್ ಹೂಡಿಕೆ' ವಿಧಾನಲ್ಲಿ ಹೂಡಿಕೆ ಮಾಡಿದ್ದ. ಈ ಹಣವನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿ ಇಡಿ ವಶಪಡಿಸಿಕೊಂಡಿದೆ.

ಐಎಂಎ ಹಗರಣ; ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ಐಎಂಎ ಹಗರಣ; ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್

ಇಸ್ಲಾಂ ನಲ್ಲಿ ಬಡ್ಡಿ ಹಣ ಪಡೆಯುವುದು ನಿಷಿದ್ಧವಾಗಿರುವ ಕಾರಣ ಈ ರೀತಿಯ ಹಲಾಲ್ ಬ್ಯಾಂಕಿಂಗ್ ಅಥವಾ ಇಸ್ಲಾಮಿಕ್ ಬ್ಯಾಂಕಿಂಗ್‌ ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಧರ್ಮಿಷ್ಠನಾಗಿದ್ದ ಐಎಂಎ ಮಾಲೀಕ ಮನ್ಸೂರ್ ಖಾನ್ ಇದರಲ್ಲಿಯೇ ಹೂಡಿಕೆ ಮಾಡಿದ್ದ.

ED Attached 10 Crore Money Invested In Halal Banking By IMA Owner

ಸಾವಿರಾರು ಹೂಡಿಕೆದಾರರಿಂದ ಐಎಂಎ ಮಾಲೀಕ ಮನ್ಸೂರ್ ಖಾನ್ ಕೋಟ್ಯಂತರ ಹಣ ವಸೂಲಿ ಮಾಡಿದ್ದ. ಅಧಿಕ ಲಾಭ ಪಡೆಯುವ ಆಸೆಯಿಂದ ಕೋಟ್ಯಂತರ ಹಣ ಹೂಡಿದ್ದರು.

ಐಎಂಎ ಹಗರಣ: 25 ಕೆಜಿ ಚಿನ್ನ, 13 ಕೋಟಿ ಲಂಚ ಪಡೆದಿದ್ದ ಐಪಿಎಸ್ ಅಧಿಕಾರಿಐಎಂಎ ಹಗರಣ: 25 ಕೆಜಿ ಚಿನ್ನ, 13 ಕೋಟಿ ಲಂಚ ಪಡೆದಿದ್ದ ಐಪಿಎಸ್ ಅಧಿಕಾರಿ

ಪ್ರಸ್ತುತ ಮನ್ಸೂರ್ ಖಾನ್ ಜೈಲಿನಲ್ಲಿದ್ದು, ಐಎಂಎ ಹಗರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ. ಹಲವು ಐಎಎಸ್, ಐಪಿಎಸ್ ಅಧಿಕಾರಿಗಳು ಜೊತೆಗೆ ಶಾಸಕರುಗಳ ಹೆಸರುಗಳು ಈ ಹಗರಣದಲ್ಲಿ ಕೇಳಿಬಂದಿವೆ.

English summary
ED attached 10 crore money invested in Islamic banking or Halal investment by IMA owner Mansoor Khan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X