ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋದಲ್ಲಿ ಹೊಸ ಪರಿಸರ ನೀತಿ, ಪ್ಲಾಸ್ಟಿಕ್‌, ನೀರಿನ ಬಳಕೆಗೆ ಕಡಿವಾಣ

|
Google Oneindia Kannada News

ಬೆಂಗಳೂರು, ಏ.22: ನಮ್ಮ ಮೆಟ್ರೋದಲ್ಲಿ ಹೊಸ ಪರಿಸರ ನೀತಿಯನ್ನು ಅನುಸರಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ಕಡಿವಾಣ ಬೀಳಲಿದ್ದು, ನೀರಿನ ಮಿತವಾದ ಬಳಕೆ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈಗ ಎರಡನೇ ಹಂತದ ಮೆಟ್ರೋ ಕಾಮಗಾರಿ ನಡೆಯುತ್ತಿದೆ ಈ ಸಂದರ್ಭದಲ್ಲಿ ಕಾಮಗಾರಿ ವೇಳೆ ಕಟ್ಟಡ ತ್ಯಾಜ್ಯವನ್ನು ಕೆರೆಯ ಬಳಿ ಹಾಕುತ್ತಿರುವುದಕ್ಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣಗಳು ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣಗಳು

ಈ ಮಾರ್ಗ ನಿರ್ಮಾಣದ ಪ್ರದೇಶಗಳಲ್ಲಿ ಕಟ್ಟಡ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಸಾಧ್ಯವಿದ್ದರೆ ತ್ಯಾಜ್ಯವನ್ನು ಮರುಬಳಕೆ ಮಾಡಬೇಕು. ನಿರ್ಮಾಣದ ಸ್ಥಳದಲ್ಲಿ ಮಣ್ಣಿನ ಫಲವತ್ತತೆಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ನಿಲ್ದಾಣದಲ್ಲಿ ಉಂಟಾಗುವ ಕಸ ಹಾಗೂ ಕಾಮಗಾರಿ ವೇಳೆ ಉಂಟಾಗುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.

Eco friendly measurements in Namma metro soon

ಅಷ್ಟೇ ಅಲ್ಲದೆ ಕಚೇರಿಗಳಲ್ಲಿ ಮರದ ತ್ಯಾಜ್ಯ, ಕಾಗದವನ್ನು ಮರುಬಳಕೆ ಮಾಡುವ ಕ್ರಮಗಳನ್ನು ಜಾರಿ ಮಾಡಬೇಕು ಎಂದು ತಿಳಿಸಲಾಗಿದೆ. ನೀರನ್ನು ಸಂಸ್ಕರಣೆ ಮಾಡಿ ಮರುಬಳಕೆ ಮಾಡುವ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಈ ನೀತಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್ ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್

ಮೆಟ್ರೋ ನಿಲ್ದಾಣಗಳಲ್ಲಿ ಅಗತ್ಯವಿದ್ದರೆ ಎಸ್‌ಟಿಪಿ ನಿರ್ಮಿಸಿ ಆ ನೀರನ್ನು ಶುಚಿಗೊಳಿಸಿ ಹಾಗೂ ಉದ್ಯಾನಕ್ಕೆ ಬಳಸಲಾಗುವುದು. ಪ್ರತಿ ನಿಲ್ದಾಣ ಹಾಗೂ ಡಿಪೊದಲ್ಲಿ ನೀರಿನ ಬಳಕೆಯ ಪ್ರಮಾಣವನ್ನು ಲೆಕ್ಕ ಇಡಲಾಗುವುದು ಎಂದು ಹೇಳಲಾಗಿದೆ.

English summary
Bmrcl is going to take some step towards Eco friendly metro. Limited usage of water and avoiding plastic is going to their motto.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X