ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿವಿ ಪರೀಕ್ಷಾ ಸಾಮಗ್ರಿ ಖರೀದಿಗೆ ಚುನಾವಣಾ ಆಯೋಗ ಒಪ್ಪಿಗೆ

By Nayana
|
Google Oneindia Kannada News

ಬೆಂಗಳೂರು, ಮೇ 09: ಇದೇ ತಿಂಗಳು ಮೇ 18ರಿಂದ ನಡೆಯುವ ಬೆಂಗಳೂರು ವಿವಿಯ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳ ಸಿದ್ಧತೆಗೆ ಚುನಾವಣಾ ಆಯೋಗ ಒಪ್ಪಿಗೆ ನೀಡಿದೆ.

ಬೆಂಗಳೂರು ವಿವಿಯಲ್ಲಿ ಮೇ 18ರಿಂದ ಆರಂಭವಾಗಿ ಜೂನ್-ಜುಲೈವರೆಗೆ ಹಂತ ಹಂತವಾಗಿ ಯುಜಿ, ಪಿಜಿ, ಎಂಜಿನಿಯರಿಂಗ್, ಕಾನೂನು ಮತ್ತಿತರ ಪದವಿ ಪರೀಕ್ಷೆಗಳು ಆರಂಭವಾಗಬೇಕಿದ್ದವು. ಆದರೆ ಪರೀಕ್ಷೆಗೆ ಬೇಕಾದ ಸಮಾಗ್ರಿಗಳನ್ನು ಖರೀದಿಸಲು ಟೆಂಡರ್ ಕರೆಯಲು ಚುನಾವಣಾ ನೀತಿ ಸಂಹಿತೆ ಅಡ್ಡಿ ಬಂದಿತ್ತು.

EC gives nod BU for exam process

ಪ್ರಥಮ ಪಿಯು ಪ್ರವೇಶಕ್ಕೆ ಅರ್ಜಿ ವಿತರಣೆ ಆರಂಭ: ಮೇ.14ರವರೆಗೆ ವಿತರಣೆಪ್ರಥಮ ಪಿಯು ಪ್ರವೇಶಕ್ಕೆ ಅರ್ಜಿ ವಿತರಣೆ ಆರಂಭ: ಮೇ.14ರವರೆಗೆ ವಿತರಣೆ

ಈ ಬಗ್ಗೆ ಬೆಂಗಳೂರು ವಿವಿಯು ಆಯೋಗಕ್ಕೆ ಪತ್ರ ಬರೆದು ಸಾಮಗ್ರಿಗಳ ಖರೀದಿಗೆ ಟೆಂಡರ್ ಗೆ ಅನುಮತಿ ನೀಡಬೇಕೆಂದು ಕೋರಿತ್ತು. ಆದರೆ ಪತ್ರ ಬರೆದು 20 ದಿನಗಳಾದರೂ ಅನುಮತಿ ಸಿಕ್ಕಿರಲಿಲ್ಲ.ಪರೀಕ್ಷಾ ಸಾಮಗ್ರಿಗಳ ಟೆಂಡರ್ ಕರೆಯುವ ಬದಲು, ಕಳೆದ ಬಾರಿ ಯಾರು ಕಡಿಮೆ ಮೊತ್ತಸ ಬಿಡ್ ಕರೆದಿದ್ದಾರೋ ಅವರಿಗೆ ಈ ಬಾರಿಯೂ ನೀಡಿ ಬೇಕಾದ ಸಾಮಗ್ರಿಗಳನ್ನು ತರಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಹೀಗಾಗಿ ನಿಗದಿತ ಸಮಯದಲ್ಲೇ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ನಡೆಸಲು ಈಗಾಗಲೇ ಸಿದ್ಧತೆ ನಡೆಯುತ್ತಿದೆ.

English summary
Election commission has given clearance to purchase materials for examination process of Bangalore university.The varsity will conduct examinations for various degree courses from May 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X