ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಭ್ಯರ್ಥಿಗಳಿಗೆ ಖರ್ಚಿನ ವಿವರ ನೀಡುವಂತೆ ಚುನಾವಣಾ ಆಯೋಗ ಸೂಚನೆ

By Nayana
|
Google Oneindia Kannada News

ಬೆಂಗಳೂರು, ಮೇ 19: ರಾಜ್ಯ ವಿಧಾನಸಭಾ ಚುನಾವಣೆ ಮುಗಿದಿದೆ ಇದರ ಬೆನ್ನಲ್ಲೇ ಚುನಾವಣಾ ಆಯೋಗ ಖರ್ಚಿನ ವಿವರ ನೀಡುವಂತೆ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.

ಚುನಾವಣೆ ವೇಳೆ ತಾವು ಮಾಡಿರುವ ಖರ್ಚಿನ ಮಾಹಿತಿ ನೀಡುವಂತೆ ಬೆಂಗಳೂರಿನ 26 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ 400ಕ್ಕೂ ಹೆಚ್ಚಿನನ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಗರಿಷ್ಠ ತಲಾ 28 ಲಕ್ಷ ರೂ. ಖರ್ಚು ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿತ್ತು.

ವಿಶ್ವಾಸಮತ ಯಾಚನೆ ಪ್ರಕ್ರಿಯೆ ಸದನದಲ್ಲಿ ಏನೆಲ್ಲ ನಡೆಯಲಿದೆ? ವಿಶ್ವಾಸಮತ ಯಾಚನೆ ಪ್ರಕ್ರಿಯೆ ಸದನದಲ್ಲಿ ಏನೆಲ್ಲ ನಡೆಯಲಿದೆ?

ಇದೀಗ ಚುನಾವಣೆ ಪೂರ್ಣಗೊಂಡಿದ್ದು, ಬಿಬಿಎಂಪಿ ಹಣಕಾಸು ವಿಭಾಗದ ಅಧಿಕಾರಿಗಳು, ಚುನಾವಣೆಯಲ್ಲಿ ಮಾಡಿದ ಖರ್ಚಿನ ಕುರಿತು ದಾಖಲೆ ಸಲ್ಲಿಸುವಂತೆ ಪ್ರತಿ ಅಭ್ಯರ್ಥಿಗಳಿಗೆ ತಿಳಿಸಿದ್ದಾರೆ.

EC asks expenditure details from 400 candidates

ಅಭ್ಯರ್ಥಿಗಳ ಖರ್ಚಿನ ಮೇಲೆ ನಿಗಾವಹಿಸಲು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು, ಅದರ ವಿವರವನ್ನು ಆಯೋಗಕ್ಕೆ ಸಲ್ಲಿಸುವಂತೆ ತಿಳಿಸಲಾಗಿತ್ತು. ಅದರಂತೆ ಎಲ್ಲ ಅಭ್ಯರ್ಥಿಗಳು ಬ್ಯಾಂಕ್ ಖಾತೆ ವಿವರ ಸಲ್ಲಿಸಿದ್ದರು. ಈ ಖರ್ಚಿಋನ ಮೇಲೆ ನಿಗಾವಹಿಸಲು ತೆರಿಗೆ ಇಲಾಖೆ ಅಧಿಕಾರಿಗಳನ್ನು ಖರ್ಚು-ವೆಚ್ಚ ಅಶಿಕಾರಿಯನ್ನಾಗಿ ನೇಮಿಸಿದ್ದರು. ಅವರು ಈಗಾಗಲೇ ಖರ್ಚು ಕುರಿತಂತೆ ಮಾಹಿತಿ ಸಂಗ್ರಹಿಸಿದ್ದಾರೆ.

ಕರ್ನಾಟಕ ವಿಶ್ವಾಸಮತ LIVE: ವಿಧಾನಸೌಧದ ಮೇಲೆ ಎಲ್ಲರ ಕಣ್ಣುಕರ್ನಾಟಕ ವಿಶ್ವಾಸಮತ LIVE: ವಿಧಾನಸೌಧದ ಮೇಲೆ ಎಲ್ಲರ ಕಣ್ಣು

ತಿಂಗಳಲ್ಲಿ ವರದಿ ಸಲ್ಲಿಕೆ: ಚುನಾವಣೆಯಲ್ಲಿನ ಖರ್ಚು ಕುರಿತಂತೆ ಅಭ್ಯರ್ಥಿಗಳಿಂದ ದಾಖಲೆ ಸ್ವೀಕರಿಸಿ ಅದನ್ನು ಪರಿಶೀಲಿಸಲು 23 ದಿನಗಳ ಕಾಲ ಅವಕಾಶವಿದೆ. ಅದರ ಜತೆಗೆ ಖರ್ಚಿನ ವರದಿ ಸಿದ್ಧಪಡಿಸಿ ಆಯೋಗಕ್ಕೆ ಕಳುಹಿಸಲು ಒಟ್ಟಾರೆ ಒಂದು ತಿಂಗಳಾಗಲಿದೆ.

ಚುನಾವಣಾ ವೆಚ್ಚ ಕುರಿತಂತೆ ಚುನಾವಣಾ ಪೂರ್ವದಲ್ಲಿಯೇ ಆಯೋಗ ದರ ನಿಗದಿ ಮಾಡಿದೆ. ಅದರಂತೆ ಕರಪತ್ರ ಮುದ್ರಣ, ಶಾಮಿಯಾನ ಹಾಕಿಸುವುದು, ಟಿಶರ್ಟ್ ಮಮೇ ಅಭ್ಯರ್ಥಿ ಮತ್ತು ಪಕ್ಷದ ಚಿಹ್ನೆ ಮುದ್ರಿಸುವುದು, ಕಾರ್ಯಕರ್ತರಿಗೆ ಊಟದ ವ್ಯವಸ್ಥೆ, ಸಮಾವೇಶಕ್ಕೆ ಸಭಾಂಗಣ ಹೀಗೆ ಪ್ರತಿಯೊಂದಕ್ಕೂ ದರ ನಿಗದಿ ಮಾಡಿತ್ತು. ಅದನ್ನಾಧರಿಸಿ, ಅಭ್ಯರ್ಥಿಗಳು ನೀಡುವ ದಾಖಲೆಯಂತೆ ಖರ್ಚನ್ನು ತಾಳೆ ಹಾಕಲಾಗುತ್ತದೆ.

English summary
Election commission has asked expenditure details from more than 400 candidates who were contested in 26 assembly constituencies in BBMP jurisdiction. The commission was directed Rs.28 lakhs expenditure limit for the candidate in each constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X