ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಪ್ರತಿ ಕೇಂದ್ರದಲ್ಲಿ 200 ಮಂದಿಗೆ ಕೊರೊನಾ ಲಸಿಕೆ

|
Google Oneindia Kannada News

ಬೆಂಗಳೂರು,ಮಾರ್ಚ್ 1: ಬೆಂಗಳೂರಿನ ಪ್ರತಿ ಕೊರೊನಾ ಲಸಿಕಾ ಕೇಂದ್ರದಲ್ಲಿ 200 ಮಂದಿಗೆ ಕೊರೊನಾ ಲಸಿಕೆ ಹಾಕಲಾಗುತ್ತದೆ.45 ವರ್ಷದಿಂದ 59 ವರ್ಷದೊಳಗಿನ ದೀರ್ಘಕಾಲೀನ ಅನಾರೋಗ್ಯ ಪೀಡಿತರಿಗೆ ಲಸಿಕೆ ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.

Recommended Video

COVID-19 ವ್ಯಾಕ್ಸಿನ್‌ ಪಡೆದುಕೊಂಡ ಪ್ರಧಾನಿ ಮೋದಿ | Oneindia Kannada

ಮಾ.1 ರ ಸೋಮವಾರ ಬೆಳಗ್ಗೆ 9 ರಿಂದ ಕೇಂದ್ರ ಸರ್ಕಾರದ ಕೋವಿಡ್ ಪೋರ್ಟಲ್‌ನಲ್ಲಿ ಹಿರಿಯ ನಾಗರಿಕರು ಹಾಗೂ ಅನಾರೋಗ್ಯ ಪೀಡಿತರು ಲಸಿಕೆ ನೋಂದಣಿಮಾಡಿಕೊಳ್ಳಬಹುದಾಗಿದೆ.

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದ ಪ್ರಧಾನಿ ಮೋದಿದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದ ಪ್ರಧಾನಿ ಮೋದಿ

Co-WIN app ಅಥವಾ cowin.gov.in ವೆಬ್‌ಸೈಟ್‌ಗೆ ಹೋಗಿ

  • ಅಲ್ಲಿ ನಿಮ್ಮ ಮೊಬೈಲ್ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಿಸಬೇಕು
  • ನಿಮಗೆ ಬರುವ ಒಟಿಪಿಯನ್ನು ನೊಂದಾಯಿಸಿದ ಬಳಿಕ ನಿಮ್ಮ ಖಾತೆ ತೆರೆಯಲಿದೆ
  • ಇಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರ ಖಾತೆಯನ್ನೂ ತೆರೆಯಬಹುದು
  • ಇದಾದ ಬಳಿಕ ನಿಗದಿತ ದಿನಾಂಕದಂದು ಲಸಿಕೆ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಿರಿ.
  • ಒಬ್ಬರಿಗೆ ಲಸಿಕೆ ನೀಡಲು 30 ನಿಮಿಷ ಬೇಕು. ಹೀಗಾಗಿ ಪ್ರತಿ ಸೆಷನ್ನಲ್ಲಿ 100 ಜನರಿಗೆ ಮಾತ್ರವೇ ಕೊರೊನಾ ಲಸಿಕೆ ನೀಡಲಾಗುತ್ತದೆ.

ಲಸಿಕೆ ನೋಂದಣಿ ಹೇಗೆ?

ಲಸಿಕೆ ನೋಂದಣಿ ಹೇಗೆ?

ಲಸಿಕೆ ಪಡೆಯುವವರಿಗೆ ಲಸಿಕಾ ಕೇಂದ್ರ ಮತ್ತು ದಿನಾಂಕ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದ್ದು,ಮೊಬೈಲ್ ಸಂಖ್ಯೆ ಹಾಗೂ ದೃಢೀಕರಣ ದಾಖಲಾತಿ ಸಂಖ್ಯೆ ನಮೂದು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಲಸಿಕೆ ನೀಡುವ ಕೇಂದ್ರಗಳು

ಲಸಿಕೆ ನೀಡುವ ಕೇಂದ್ರಗಳು

ಸರ್ಕಾರಿ ಆಸ್ಪತ್ರೆಗಳಾದ ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆ,ಜಯನಗರ ಜನರಲ್ ಆಸ್ಪತ್ರೆ ಹಾಗೂ ಸಿವಿ ರಾಮನ್ ಜನರಲ್ ಆಸ್ಪತ್ರೆ, ಸರ್ಕಾರಿ ವೈದ್ಯಕೀಯ ಕಾಲೇಜುಗಳಾದ ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು, ಖಾಸಗಿ ವೈದ್ಯಕೀಯ ಕಾಲೇಜುಗಳಾದ ಸಪ್ತಗಿರಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಗೂ ಎಂಎಸ್ ರಾಮಯ್ಯ ವೈದ್ಯಕೀಯ ಕಾಲೇಜು.

ಖಾಸಗಿ ಆಸ್ಪತ್ರೆಗಳಾದ ವಿಕ್ರಂ ಆಸ್ಪತ್ರೆ,ಮಣಿಪಾಲ್,ರಾಘವೇಂದ್ರ ಪೀಪಲ್ ಟ್ರೀ,ಯಶವಂತಪುರದ ಕೊಲಂಬಿಯಾ ಏಷ್ಯಾ,ಶೇಷಾದ್ರಿಪುರಂನ ಅಪೊಲೊ, ವೈಟ್‌ಫೀಲ್ಡ್‌ನ ಕೊಲಂಬಿಯಾ ಏಷ್ಯಾ,ಹೆಬ್ಬಾಳದ ಕೊಲಂಬಿಯಾ ಏಷ್ಯಾ,ಬನ್ನೇರುಘಟ್ಟ ರಸ್ತೆಯ ಅಪೊಲೊ,ಫೋರ್ಟಿಸ್,ಹೆಬ್ಬಾಳದ ಆಸ್ಟರ್ ಸಿಎಂಐ ಆಸ್ಪತ್ರೆ,ಜಯನಗರದ ಅಪೊಲೊ,ದಯಾನಂದ ಸಾಗರ್,ಮಲ್ಲಿಗೆ ಹಾಗೂ ಸುರಕ್ಷಾ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತದೆ

ಎಲ್ಲಿ ನೋಂದಣಿ ಮಾಡಿದರೆ ಲಸಿಕೆ ಉಚಿತ

ಎಲ್ಲಿ ನೋಂದಣಿ ಮಾಡಿದರೆ ಲಸಿಕೆ ಉಚಿತ

ಬಿಬಿಎಂಪಿ ವ್ಯಾಪ್ತಿಯ ಮೂರು ಸರ್ಕಾರಿ ಆಸ್ಪತ್ರೆ ಹಾಗೂ ಎರಡು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ನೋಂದಣಿ ಮಾಡಿಕೊಂಡವರಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತದೆ.ಉಳಿದಂತೆ 17 ಖಾಸಗಿ ಆಸ್ಪತ್ರೆ ಹಾಗೂ ಎರಡು ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಲಸಿಕೆ ಪಡೆಯಲು 250ರೂ. ಶುಲ್ಕ ನಿಗದಿಪಡಿಸಲಾಗಿದೆ.

ಲಸಿಕೆ ನೀಡುವ ಕೇಂದ್ರಗಳ ಸಂಖ್ಯೆ ಹೆಚ್ಚಳ

ಲಸಿಕೆ ನೀಡುವ ಕೇಂದ್ರಗಳ ಸಂಖ್ಯೆ ಹೆಚ್ಚಳ

ರಾಜ್ಯ ಸರ್ಕಾರ ಸದ್ಯ ನಗರದ 24 ಕೇಂದ್ರಗಳಲ್ಲಿ ಲಸಿಕೆ ನೀಡುವುದಕ್ಕೆ ಅವಕಾಶ ನೀಡಿದ್ದು,ಒಂದೆರೆಡು ದಿನದಲ್ಲಿ ಲಸಿಕೆ ನೀಡುವ ಕೇಂದ್ರಗಳ ಸಂಖ್ಯೆ ಹೆಚ್ಚಿಸಿ ಬಿಬಿಎಂಪಿಯ ಎಲ್ಲಾ 141 ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುವುದಕ್ಕೆ ಅವಕಾಶ ನೀಡಲಿದೆ.

ಲಸಿಕೆ ನೀಡುವ ದಿನಗಳ ಪಟ್ಟಿ

ಲಸಿಕೆ ನೀಡುವ ದಿನಗಳ ಪಟ್ಟಿ

ಸರ್ಕಾರಿ ಲಸಿಕಾ ಕೇಂದ್ರದಲ್ಲಿ ಸೋಮವಾರ,ಬುಧವಾರ,ಶುಕ್ರವಾರ ಹಾಗೂ ಶನಿವಾರ ಸೇರಿದಂತೆ ನಾಲ್ಕು ದಿನ,ಖಾಸಗಿ ಲಸಿಕಾ ಕೇಂದ್ರದಲ್ಲಿ ವಾರದ ಏಳು ದಿನವೂ ಮಧ್ಯಾಹ್ನ 12 ರಿಂದ ಸಂಜೆ 5ರವರೆಗೆ ಲಸಿಕೆ ನೀಡಲಾಗುತ್ತದೆ.

English summary
About 200 people are vaccinated in each center in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X