ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತದಲ್ಲಿ ವರ್ಷಕ್ಕೆ 18ಲಕ್ಷ ಮೆಟ್ರಿಕ್ ಟನ್ ಇ-ತ್ಯಾಜ್ಯ ಮರು ಬಳಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 02: ಒಂದು ವರ್ಷಕ್ಕೆ ಭಾರತದಲ್ಲಿ ಉತ್ಪಾದನೆಯಾಗುವ 18ಲಕ್ಷ ಮೆಟ್ರಿಕ್ ಟನ್ ನಷ್ಟು ಇ-ತ್ಯಾಜ್ಯ ವನ್ನು ಮರುಬಳಕೆ ಮಾಡಲಾಗುತ್ತಿದೆ.

ವರ್ಷಕ್ಕೆ 18 ಲಕ್ಷ ಟನ್ ಉತ್ಪಾದನೆಯಾಗುತ್ತಿದ್ದರೂ ಕೂಡ ಕೇವಲ 2 ಲಕ್ಷ ಟನ್ ತ್ಯಾಜ್ಯ ಮಾತ್ರ ಅಧಿಕೃತ ಘಟಕಗಳಿಗೆ ಹೋಗುತ್ತಿವೆ. ಹಾಗೆಂದ ಮಾತ್ರಕ್ಕೆ ಇನ್ನುಳಿದ ತ್ಯಾಜ್ಯಗಳು ಹಾಗೆಯೇ ವೇಸ್ಟ್ ಆಗುತ್ತಿದೆ ಎಂದು ಅರ್ಥವಲ್ಲ ಅವುಗಳು ಅನಧಿಕೃತ ಘಟಕಗಳಿಗೆ ರವಾನೆಯಾಗುತ್ತಿದೆ.

ಬೆಳ್ಳಂದೂರಿನಲ್ಲಿ ತ್ಯಾಜ್ಯ ವಿಲೇವಾರಿ ಆಶ್ವಾಸನೆ: ಪ್ರತಿಭಟನೆ ಕೈಬಿಟ್ಟ ಸ್ಥಳೀಯರು ಬೆಳ್ಳಂದೂರಿನಲ್ಲಿ ತ್ಯಾಜ್ಯ ವಿಲೇವಾರಿ ಆಶ್ವಾಸನೆ: ಪ್ರತಿಭಟನೆ ಕೈಬಿಟ್ಟ ಸ್ಥಳೀಯರು

ಇಂತಹ ಅನಧಿಕೃತ ವ್ಯವಹಾರವನ್ನು ತಡೆಯಲು 118 ರಿಸೈಕ್ಲರ್ಸ್ ಸೇರಿ ಆಲ್ ಇಂಡಿಯಾ ಇ-ವೇಸ್ಟ್ ರಿಸೈಕ್ಲರ್ಸ್ ಅಸೋಸಿಯೇಷನ್ ನಿರ್ಮಾಣ ಮಾಡಿದೆ. ದೇಶದಲ್ಲಿ 18ಲಕ್ಷ ಮೆಟ್ರಿಕ್ ಟನ್ ವಾರ್ಷಿಕವಾಗಿ ತಯಾರಾಗುತ್ತದೆ. ಬೆಂಗಳೂರಿನಲ್ಲಿ ಸುಮಾರು 1 ಲಕ್ಷ ಮೆಟ್ರಿಕ್ ಟನ್ ಅಷ್ಟು ಇ-ತ್ಯಾಜ್ಯ ಉತ್ಪಾದನೆಯಾಗುತ್ತದೆ.

E-waste industry comes together to streamline recycling process

ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಪುಣೆಯಿಂದ ಅತಿ ಹೆಚ್ಚು ಇ-ತ್ಯಾಜ್ಯ ಉತ್ಪಾದನೆಯಾಗುತ್ತದೆ. ಲ್ಯಾಪ್ ಟಾಪ್, ಕಾರಿನಲ್ಲಿರುವ ಏರ್ ಕಂಟೀಷನರ್ಸ್ ನಿಂದ ಶೇ.26ರಷ್ಟು ಇ-ತ್ಯಾಜ್ಯ ಉತ್ಪಾದನೆಯಾಗುತ್ತದೆ. ಅಷ್ಟೇ ಅಲ್ಲದೆ ವೈಟ್ ಗೂಡ್ಸ್ ಎಂದು ಕರೆಸಿಕೊಳ್ಳುವ ಟಿವಿ, ಫ್ಯಾನ್ಸ್, ಲೈಟ್ ಗಳಿಂದ 100ರಿಂದ 150 ಕೆಜಿಗಳಷ್ಟು ಇ-ತ್ಯಾಜ್ಯ ಉತ್ಪಾದನೆಯಾಗಲಿದೆ.

2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ | ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಸಿ ತ್ಯಾಜ್ಯ ಹಾಗೂ ಒಣ ತ್ಯಾಜ್ಯ ನಿರ್ವಹಣಾ ಘಟಕಗಳು ಇರುವ ಹಾಗೆಯೇ ಇ-ತ್ಯಾಜ್ಯ ಘಟಕಗಳು ಅನೇಕ ನಗರಗಳಲ್ಲಿ ಸ್ಥಾಪನೆಯಾಗಿದೆ. ಕೆಲವೊಂದು ಕಡೆಗಳಲ್ಲಿ ಜನರು ಎಲೆಕ್ಟ್ರಾನಿಕ್ ವಸ್ತುಗಳನ್ನು ಉಚಿತವಾಗಿ ನೀಡುತ್ತಾರೆ. ಈ ಎಲೆಕ್ಟ್ರಾನಿಕ್ ಉಪಕರಣಗಳಿಂದ ಚಿನ್ನ, ಬೆಳ್ಳಿ ಹಾಗೂ ಕಾಪರ್ ವಸ್ತುಗಳು ಬಳಕೆಗೆ ಸಿಗುತ್ತವೆ.

ಈಗಾಗಲೇ ಅದಿರಿನ ಕೊರತೆಯಿದೆ. ಈ ಎಲೆಕ್ಟ್ರಾನಿಕ್ ಉಪಕರಣಗಳು ಬೇಡಿಕೆಯನ್ನು ನೀಗಿಸಲಿದೆ. ಹಾಗಾಗಿಯೇ ಈ ಉಪಕರಣಗಳ ಬೆಲೆಯು ಗಗನಕ್ಕೇರುತ್ತಿದೆ.

English summary
Of an estimated 18 lakh metric tonnes of electronic waste that India generates per annum, less than 2 lakh tonnes reach licensed recyclers. The rest is either reaching the unorganised sector, or ending up in landfills.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X