• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈ ಹೊತ್ತಿಗೆ ಕಥಾ ಪ್ರಶಸ್ತಿ: ಅಪ್ರಕಟಿತ ಕಥಾ ಸಂಕಲನಕ್ಕೆ ಆಹ್ವಾನ

|

ಬೆಂಗಳೂರು, ನವೆಂಬರ್ 28: ಬೆಂಗಳೂರಿನ ಈ ಹೊತ್ತಿಗೆ ಸಂಸ್ಥೆಯು, 'ಈ ಹೊತ್ತಿಗೆ ಕಥಾ ಪ್ರಶಸ್ತಿ'ಗಾಗಿ ಕನ್ನಡದ ಅಪ್ರಕಟಿತ ಕಥಾ ಸಂಕಲನಗಳನ್ನು ಆಹ್ವಾನಿಸಿದೆ. ಜೊತೆಗೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ.

ಸಾಹಿತ್ಯ ಅಧ್ಯಯನಕ್ಕೊಂದು ಹೊಸ ರೂಪು ಕೊಟ್ಟ 'ಈ ಹೊತ್ತಿಗೆ'ಯು ಈ ವರ್ಷವೂ ಏರ್ಪಡಿಸಿರುವ ಕಥಾ ಸ್ಪರ್ಧೆಯ ವಿವರ ಇಲ್ಲಿದೆ.

ಈ ಹೊತ್ತಿಗೆ ಕಥಾಸ್ಪರ್ಧೆ: 'ಗಾಂಧಿ ಪ್ರಸಂಗ', 'ನೆಲಸಂಪಿಗೆ' ಪ್ರಥಮ

ಅಪ್ರಕಟಿತ ಕಥಾ ಸಂಕಲನಕ್ಕಾಗಿ 10,000 (ಹತ್ತು ಸಾವಿರ) ರೂಪಾಯಿ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ.

ನಿಯಮಗಳು :

1. ಅಪ್ರಕಟಿತ ಸಂಕಲನದಲ್ಲಿರುವ ಕಥೆಗಳು ಸ್ವತಂತ್ರವಾಗಿರಬೇಕು. ಸಂಕಲನದಲ್ಲಿ ಕಡ್ಡಾಯವಾಗಿ ಅನುವಾದಿತ ಕಥೆಗಳಿರಕೂಡದು.

2. ಸಂಕಲನವು 8ರಿಂದ 10 ಕಥೆಗಳನ್ನು ಒಳಗೊಂಡಿರಬೇಕು.

3. ಡಿಟಿಪಿ ಮಾಡಿಸಿ, ಬೈಂಡ್ ಮಾಡಿಸಿದ ಅಪ್ರಕಟಿತ ಸಂಕಲನದ ಮೂರು ಪ್ರತಿಗಳನ್ನು ಈ ಹೊತ್ತಿಗೆಯ ಅಂಚೆ ವಿಳಾಸಕ್ಕೆ ಕಳುಹಿಸಿಕೊಡಬೇಕು.

4. ಕಥೆಗಾರರು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ಸಂಕಲನದ ಹೆಸರು, ಸಂಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಬರೆದಿರಬೇಕು. ಯಾವುದೇ ಕಥೆಯ ಪುಟಗಳಲ್ಲಿ ಕಥೆಗಾರರ ಹೆಸರು ಇರಕೂಡದು.

5. ಪ್ರಶಸ್ತಿ ಘೋಷಣೆಯಾದ 30 ದಿನಗಳಲ್ಲಿ ಪ್ರಶಸ್ತಿ ಪಡೆದ ಸಂಕಲನವು ಮುದ್ರಣಗೊಳ್ಳಬೇಕು. ಕೃತಿ ಮುದ್ರಣಗೊಂಡರೆ ಮಾತ್ರ ಘೋಷಿತ ಬಹುಮಾನದ ಮೊತ್ತ ಹಾಗು ಪ್ರಶಸ್ತಿ ಫಲಕವು ಈ ಹೊತ್ತಿಗೆಯ ಹೊನಲು ಸಮಾರಂಭದಲ್ಲಿ ಸಲ್ಲುತ್ತದೆ.

6. ಪ್ರಶಸ್ತಿ ಪಡೆದ ಕೃತಿಯನ್ನು ಮುದ್ರಿಸುವಾಗ ಮುಖಪುಟ ಹಾಗು ಪುಸ್ತಕದ ಒಳ ಪುಟದಲ್ಲಿ 'ಈ ಹೊತ್ತಿಗೆ ಕಥಾ ಪ್ರಶಸ್ತಿ ವಿಜೇತ ಕೃತಿ' ಎಂದು ಮುದ್ರಿಸಿರಬೇಕು.

ಕಾಲೇಜಿನ ವಿದ್ಯಾರ್ಥಿಗಳಿಗಾಗಿ (ವಯೋಮಿತಿ - ಗರಿಷ್ಠ 25 ವರ್ಷ)

1. ಮೊದಲನೆಯ ಬಹುಮಾನ : ₹ 5000

2. ಎರಡನೆಯ ಬಹುಮಾನ : ₹ 3000

3. ಮೂರನೆಯ ಬಹುಮಾನ : ₹ 2000

'ಮುಕ್ಕು ಚಿಕ್ಕಿಯ ಕಾಳು' ಕಾದಂಬರಿ ಬಗ್ಗೆ ಜಯಲಕ್ಷ್ಮಿ ಪಾಟೀಲ್ ಸಂದರ್ಶನ

ನಿಯಮಗಳು :

1. ಸ್ವತಂತ್ರವಾಗಿದ್ದು ಅಪ್ರಕಟಿತ ಕಥೆಯಾಗಿರಬೇಕು. ( ಬ್ಲಾಗ್/ವೆಬ್ ಸೈಟ್/ ಫೇಸ್ ಬುಕ್ ಮುಂತಾದ ಯಾವುದೇ ತಾಣಗಳಲ್ಲಿಯೂ ಪ್ರಕಟವಾಗಿರಬಾರದು)

2. ಪದಮಿತಿ ಗರಿಷ್ಠ 1500 ಪದಗಳು ಮಾತ್ರ.

3. ಇ-ಮೇಲ್ ಮುಖಾಂತರ ಕಳುಹಿಸುವವರು ಯೂನಿಕೋಡ್ ತಂತ್ರಾಂಶವನ್ನು ಬಳಸಬೇಕು.

4. ಹಸ್ತಪ್ರತಿ ಕಳುಹಿಸುವವರು ಪುಟದ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ , ಚಿತ್ತುಗಳಿಲ್ಲದಂತೆ ಬರೆದು ಕಳುಹಿಸಬೇಕು.

5. ಕಥೆಗಾರರು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ಸಂಪೂರ್ಣ ವಿಳಾಸ, ಸಂಪರ್ಕ ಸಂಖ್ಯೆಯನ್ನು ಬರೆದಿರಬೇಕು. 6. ಕಥೆಯ ಪುಟಗಳಲ್ಲಿ ಕಥೆಗಾರರ ಹೆಸರು ಇರಕೂಡದು.

7. ವಿದ್ಯಾರ್ಥಿಗಳು ತಮ್ಮ ಕಾಲೇಜಿನ ವ್ಯಾಸಂಗ ದೃಢೀಕರಣ ಪತ್ರ ಹಾಗು ವಯಸ್ಸಿನ ದೃಢೀಕರಣ ಪತ್ರವನ್ನು ಕಥೆಯೊಂದಿಗೆ ಕಳುಹಿಸುವುದು ಕಡ್ಡಾಯ.

ಅತ್ಯಾಚಾರದ ವಿರುದ್ಧ 'ಜನದನಿ': ಜಯಲಕ್ಷ್ಮೀ ಪಾಟೀಲರೊಂದಿಗೆ ಸಂದರ್ಶನ

ನಿಮ್ಮ ಅಪ್ರಕಟಿತ ಕಥಾ ಸಂಕಲನ ಹಾಗು ಕಥೆ ನಮಗೆ ತಲುಪಲು ಕೊನೆಯ ದಿನಾಂಕ :20 ಡಿಸೆಂಬರ್ 2018

ಪ್ರಪಂಚದಾದ್ಯಂತ ಇರುವ ಕನ್ನಡ ಲೇಖಕರೆಲ್ಲರೂ ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.

'ಈ ಹೊತ್ತಿಗೆ'ಯ ತೀರ್ಮಾನವೇ ಅಂತಿಮ.

2019ರ ಫೆಬ್ರುವರಿಯಲ್ಲಿ ನಡೆಯುವ ಈ ಹೊತ್ತಿಗೆಯ 'ಹೊನಲು' ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿಯನ್ನು ನೀಡಲಾಗುವುದು.

ಹಸ್ತಪ್ರತಿ ಕಳುಹಿಸುವವರಿಗಾಗಿ ವಿಳಾಸ :

ಈ ಹೊತ್ತಿಗೆ, #65 , ಮುಗುಳ್ನಗೆ, 3ನೇಯ ಅಡ್ಡರಸ್ತೆ ,

ಪಿ.ಎನ್.ಬಿ. ನಗರ, ದೊಡ್ಡಕಲ್ಲಸಂದ್ರ, ಕೋಣನಕುಂಟೆ,

ಬೆಂಗಳೂರು - 560062

ಕಥೆಯ ಸಾಫ್ಟ್ ಕಾಪಿ ಕಳುಹಿಸುವ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಇ-ಮೇಲ್ ವಿಳಾಸ :

ehottige.ks@gmail.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
E Hottige, an organisation of writers invites collection of unpublished stories for 'E Hottige Katha Award'. And it also organises a Story writting competition to College students. Last dates to send stories is December 20th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more