• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈ ಹೊತ್ತಿಗೆ: ಕಪ್ಪಣ್ಣ ಅಂಗಳದಲ್ಲಿ ಇಡೀ ದಿನ ಸಾಹಿತ್ಯ ಸಂಭ್ರಮ

|

ಬೆಂಗಳೂರು, ಫೆಬ್ರವರಿ 27: ಸಾಹಿತ್ಯಾಸಕ್ತರ ವೇದಿಕೆಯಾದ 'ಈ ಹೊತ್ತಿಗೆ' ಸಂಸ್ಥೆಯು 01 ಮಾರ್ಚ್ 2020ರಂದು, ಬೆಂಗಳೂರಿನ 'ಕಪ್ಪಣ್ಣ ಅಂಗಳದಲ್ಲಿ', ತನ್ನ 'ಹೊನಲು - 7' ಕಾರ್ಯಕ್ರಮದಲ್ಲಿ ಈ ಬಾರಿ 'ಸಮಕಾಲೀನತೆ' ವಿಷಯಾಧಾರಿತ ಮೂರು ಗೋಷ್ಠಿಗಳನ್ನು ಹಮ್ಮಿಕೊಂಡಿದೆ.

2020ನೇ ಸಾಲಿನ ಈ ಹೊತ್ತಿಗೆ ಕಥಾ ಪ್ರಶಸ್ತಿ ಮತ್ತು ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಇತ್ತೀಚಿಗೆ ತಮ್ಮ ಆತ್ಮಚರಿತ್ರೆ, 'ಕುದಿ ಎಸರು' ಕೃತಿಗೆ ಕೇಂದ್ರ ಸಾಹಿತ್ಯ ಕಾಡೆಮಿ ಪ್ರಶಸ್ತಿ ಪಡೆದಿರುವ ಪ್ರಖ್ಯಾತ ಹಿರಿಯ ಹೋರಾಟಗಾರ್ತಿ, ಪತ್ರಕರ್ತೆ ಡಾ. ವಿಜಯಮ್ಮ ಅವರಿಗೆ ಸನ್ಮಾನವನ್ನು ಹಮ್ಮಿಕೊಂಡಿದೆ. ನಾಡಿನ ಖ್ಯಾತ ಕಥೆಗಾರ ನಾಗರಾಜ್ ವಸ್ತಾರೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮಗಳು ಈ ಕೆಳಗಿನಂತಿವೆ.

ಬೆಳಿಗ್ಗೆ 10 ಗಂಟೆಗೆ

ಹೊನಲು - 7ರ ಉದ್ಘಾಟನೆ : ಶ್ರೀ. ನಾಗರಾಜ್ ವಸ್ತಾರೆ ಅವರಿಂದ

ಪ್ರಸ್ತಾವನೆ: ಜಯಲಕ್ಷ್ಮಿ ಪಾಟೀಲ್ ನಿರೂಪಣೆ: ಪುಷ್ಪ ರಘುರಾಮ್

ಗೋಷ್ಠಿ 1) ಕತೆ ಕವಿತೆಗಳೆಂದರೆ ಅಷ್ಟೇ ಸಾಕೆ? ಸಾಹಿತ್ಯದ ಇತರ ಪ್ರಕಾರಗಳು ತಲೆ ಎತ್ತುವ ಬಗೆ

ಗೋಷ್ಠಿಯಯಲ್ಲಿ ಮಾತನಾಡುವವರು: ಡಾ. ವಿಕ್ರಮ್ ವಿಸಾಜಿ, ಶ್ರೀಮತಿ. ವಿದ್ಯಾರಶ್ಮಿ ಪಲ್ಲತ್ತಡ್ಕ, ಟಿ ಎಸ್ ಗೊರವರ ಮತ್ತು ವಿಕಾಸ್ ನೇಗಿಲೋಣಿ

ಸ್ಪಂದನೆ: ಪ್ರವೀಣಕುಮಾರ್ ಜಿ ಮತ್ತು ಶ್ರೀಮತಿ. ಮೇಘನಾ ಸುಧೀಂದ್ರ

ನಿರ್ವಾಹಕರು: ಆನಂದ ಕುಂಚನೂರು

*

ಗೋಷ್ಠಿ 2: ಪ್ರಸ್ತುತ ಸಮಾಜೋರಾಜಕೀಯ ಪಲ್ಲಟಗಳು ಮತ್ತು ಸಮಕಾಲೀನ ಸಾಹಿತ್ಯ

ಗೋಷ್ಠಿಯಲ್ಲಿ ಮಾತನಾಡುವವರು: ಶ್ರೀಮತಿ. ಪಿ. ಕುಸುಮ ಆಯರಹಳ್ಳಿ, ರಾಜೇಂದ್ರ ಪ್ರಸಾದ್ ಮತ್ತು ರಾಧಾಕೃಷ್ಣ ಹೊಳ್ಳ

ಸ್ಪಂದನೆ: ಸುಶೃತ ದೊಡ್ಡೇರಿ ಮತ್ತು ಮಧುಸೂದನ್ ವೈ ಎನ್

ನಿರ್ವಾಹಕರು: ಶ್ರೀಮತಿ. ಗೀತಾ ಬಿ.ಯೂ

*

ಗೋಷ್ಠಿ 3: ಡಯಸ್ಪೋರಾದ ಹಿನ್ನೆಲೆಯಲ್ಲಿ ಸಮಕಾಲೀನ ಸಾಹಿತ್ಯ

ಗೋಷ್ಠಿಯಲ್ಲಿ ಮಾತನಾಡುವವರು: ಸುರೇಶ್ ನಾಗಲಮಡಿಕೆ, ಶ್ರೀಮತಿ. ಟೀನಾ ಶಶಿಕಾಂತ್ , ರಾಜಕುಮಾರ ಮಡಿವಾಳರ್

ಸ್ಪಂದನೆ: ಶ್ರೀಮತಿ. ಶಮ್ಮಿ ಸಂಜೀವ್ ಮತ್ತು ಕಾರ್ತಿಕ್ ಆರ್

ನಿರ್ವಾಹಕರು: ಶ್ರೀಮತಿ. ಇಂದಿರಾ ಜಂಬಲದಿನ್ನಿ

*

ಸಂಗೀತ: ಹಾಡುವವರು: ಅನಿಲ್ ಕುಲಕರ್ಣಿ ಮತ್ತು ಶ್ರೀಮತಿ. ಎಸ್. ಎಂ ಸರಸ್ವತಿ

*

ಸನ್ಮಾನ ಸಮಾರಂಭ: ನಾಡಿನ ಖ್ಯಾತ ಪತ್ರಕತ್ರರು, ಹೋರಾಟಗಾರರು ಮತ್ತು ತಮ್ಮ ಆತ್ಮಚರಿತ್ರೆ 'ಕುದಿ ಎಸರು' ಕೃತಿಗೆ 2019ರ ಸಾಲಿನ ಕೆಂದ್ರ ಅಕಾಡೆಮಿ ಪ್ರಶಸ್ತಿ ಭಾಜನರೂ ಆದ ಡಾ. ವಿಜಯಾ ಅವರಿಗೆ.

ಮುಖ್ಯ ಅತಿಥಿಗಳು: ಡಾ. ಹೆಚ್. ಎಸ್ ರಾಘವೇಂದ್ರ ರಾವ್ ಮತ್ತು ಡಾ. ಲತಾ ಗುತ್ತಿ

*

ಮುಸ್ತಫಾ ಕೆ. ಎಚ್ ಅವರ 'ಹರಾಂನ ಕತೆಗಳು' ಕಥಾ ಸಂಕಲನಕ್ಕೆ 2020ರ ಸಾಲಿನ ಈ ಹೊತ್ತಿಗೆ ಕಥಾ ಪ್ರಶಸ್ತಿ ಪ್ರದಾನ ಮತ್ತು ಈ ಹೊತ್ತಿಗೆ ಕಥಾ ಸ್ಪರ್ಧೆಯ ವಿಜೇತರಾದ ಗೋವಿಂದರಾಜು ಎಂ ಕಲ್ಲೂರು, ಕಪಿಲ ಎಂ. ಹುಮನಾಬಾದೆ, ದಾದಾಪೀರ್ ಜೈಮನ್, ಬಸನಗೌಡ ಪಾಟೀಲ್ ಮತ್ತು ವಿಶ್ವನಾಥ್ ಎನ್ ಅವರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಣೆ.

ದಿನಾಂಕ: 01 ಮಾರ್ಚ್ 2020, ಭಾನುವಾರ

ಸಮಯ: ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಆರರವರೆಗೆ

ಸ್ಥಳ: ಕಪ್ಪಣ್ಣ ಅಂಗಳ, 148/1, 32ನೇ ಎ ಮುಖ್ಯ ರಸ್ತೆ, ಜಿಪಿ ನಗರ, ಮೊದಲ ಹಂತ, ಬೆಂಗಳೂರು.

English summary
E Hottige Honalu 7: Felicitation to Senior journalist Dr Vijaya, three literature seminar will be held at Kappanna Angala, JP Nagar, Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X